ಲೈವ್ 360 ಡಿಗ್ರಿ ವೀಡಿಯೊಗಳಿಗಾಗಿ ಎನ್‌ಕೋಡರ್ ಸೆಟ್ಟಿಂಗ್‌ಗಳು

360 ಡಿಗ್ರಿ ವೀಡಿಯೊಗಳು, ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ಒದಗಿಸಲು ನಿಮಗೆ ಸಹಾಯ ಮಾಡುತ್ತವೆ. ನೀವು 360 ಡಿಗ್ರಿ ಲೈವ್ ಸ್ಟ್ರೀಮ್‌ಗಳನ್ನು ಬಳಸದಿದ್ದರೆ, ನಿಮ್ಮ ಸ್ಟ್ರೀಮ್‌ಗೆ ವಿಭಿನ್ನ ಸೆಟ್ಟಿಂಗ್‌ಗಳು ಬೇಕಾಗುತ್ತವೆ.

YouTube, ಸದ್ಯಕ್ಕೆ 360 ವೀಡಿಯೊಗಳಿಗೆ ಸಮ ಆಯತಾಕಾರದ ಪ್ರೊಜೆಕ್ಷನ್ ಅನ್ನು ಮಾತ್ರ ಬೆಂಬಲಿಸುತ್ತದೆ.

ನಿಮ್ಮ ಎನ್‌ಕೋಡರ್ ಅನ್ನು ಸೆಟ್ ಅಪ್ ಮಾಡಿ

ನೀವು 360 ಡಿಗ್ರಿ ವೀಡಿಯೊಗಳನ್ನು ಲೈವ್ ಸ್ಟ್ರೀಮ್ ಮಾಡಿದಾಗ, ನಿಮ್ಮ ಎನ್‌ಕೋಡಿಂಗ್ ಸ್ಪೆಸಿಫಿಕೇಶನ್‌ಗಳನ್ನು ಬದಲಾಯಿಸಬೇಕಾಗುತ್ತದೆ:

  1. YouTube Studio ದಿಂದ, ರಚಿಸಿ ನಂತರ ಲೈವ್‌ಗೆ ಹೋಗಿ ಎಂಬುದನ್ನು ಕ್ಲಿಕ್ ಮಾಡಿ.
  2. ಸ್ಟ್ರೀಮ್ ಮಾಡಿ ಎಂಬುದನ್ನು ಕ್ಲಿಕ್ ಮಾಡುವ ಮೂಲಕ ಈಗಲೇ ಸ್ಟ್ರೀಮ್ ಮಾಡಲು ಪ್ರಾರಂಭಿಸಿ. ಅಥವಾ ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡುವ ಮೂಲಕ, ನಿಗದಿತ ಲೈವ್ ಸ್ಟ್ರೀಮ್ ಅನ್ನು ಎಡಿಟ್ ಮಾಡಿ ಅಥವಾ ರಚಿಸಿ.
  3. 360° ವೀಡಿಯೊ ಎಂಬಲ್ಲಿ ಟಾಗಲ್ ಮಾಡಿ.
  4. ನಿಮ್ಮ ಎನ್‌ಕೋಡರ್ ಅನ್ನು ಸೆಟ್ ಅಪ್ ಮಾಡಿ:
    1. ನೀವು ಸ್ಟ್ರೀಮ್ ಮಾಡಬಹುದಾದ ಅತ್ಯಧಿಕ ಬೆಂಬಲಿತ ರೆಸಲ್ಯೂಷನ್ ಹಾಗೂ ಬಿಟ್ ಪ್ರಮಾಣವನ್ನು ಆಯ್ಕೆ ಮಾಡಿ.
    2. ಲೈವ್ 360 ಗಾಗಿ 2160p ಅಥವಾ 1440p ರೆಸಲ್ಯೂಷನ್‌ಗೆ ಆದ್ಯತೆ ನೀಡಲಾಗುತ್ತದೆ.
    3. ಅತ್ಯುತ್ತಮ ವೀಡಿಯೊ ಗುಣಮಟ್ಟಕ್ಕಾಗಿ 16:9 ದೃಶ್ಯಾನುಪಾತವನ್ನು ಆರಿಸಿ. ದೃಶ್ಯಾನುಪಾತಗಳ ಕುರಿತು ಇನ್ನಷ್ಟು ತಿಳಿಯಿರಿ.
  5. 360 ಡಿಗ್ರಿ-ಅಲ್ಲದ ಲೈವ್ ಸ್ಟ್ರೀಮ್‌ಗಳೊಂದಿಗೆ ಮಾಡುವ ಹಾಗೆ, ಸ್ಟ್ರೀಮ್ ಮಾಡಲು ಪ್ರಾರಂಭಿಸಿ.
ನಿಮ್ಮ ಕ್ಯಾಮರಾ, YouTube ಲೈವ್‌ನೊಂದಿಗೆ ನೇರ ಇಂಟಿಗ್ರೇಶನ್ ಅನ್ನು ಒದಗಿಸಿದರೆ, ನಿಮ್ಮ ಕ್ಯಾಮರಾ ತಯಾರಕರ ನಿರ್ದೇಶನಗಳನ್ನು ಅನುಸರಿಸಿ.

ಸಾರ್ವಜನಿಕ ಲೈವ್ ಸ್ಟ್ರೀಮ್ ಅನ್ನು ಪ್ರಾರಂಭಿಸುವ ಮೊದಲು, ನೀವು ವಿವಿಧ ಸೆಟ್ ಅಪ್‍ಗಳನ್ನು ಬಳಸಿ ನೋಡಲು ಸಾಧ್ಯವಾಗುವ ಹಾಗೆ ನಿಮ್ಮ 360 ಡಿಗ್ರಿ ಸ್ಟ್ರೀಮ್ ಅನ್ನು ಪರೀಕ್ಷಿಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ. ಪರೀಕ್ಷೆಗಳು, ನಿಮ್ಮ ಸಾರ್ವಜನಿಕ ಲೈವ್ ಸ್ಟ್ರೀಮ್‌ನಲ್ಲಿರುವುದಕ್ಕೆ ಸಮಾನವಾದ ಆಡಿಯೋ ಮತ್ತು ಚಲನೆಯನ್ನು ಒಳಗೊಂಡಿರಬೇಕು. ಈವೆಂಟ್‍ನ ಸಂದರ್ಭದಲ್ಲಿ, ಧ್ವನಿ ಮತ್ತು ವೀಡಿಯೊದ ಗುಣಮಟ್ಟದ ಮೇಲೆ ಗಮನವಿರಿಸಿ ಮತ್ತು ದೋಷ ಸಂದೇಶಗಳನ್ನು ಪರಿಶೀಲಿಸಿ.

ಬೆಂಬಲಿತ ಪ್ಲ್ಯಾಟ್‌ಫಾರ್ಮ್‌ಗಳು

ಕಂಪ್ಯೂಟರ್‌ಗಳಲ್ಲಿ Chrome, Firefox, MS Edge, ಮತ್ತು Opera ಬ್ರೌಸರ್‌ಗಳಲ್ಲಿ 360 ಡಿಗ್ರಿ ವೀಡಿಯೊಗಳ ಲೈವ್ ಸ್ಟ್ರೀಮಿಂಗ್ ಇಂಜೆಷನ್ ಮತ್ತು ಪ್ಲೇಬ್ಯಾಕ್ ಅನ್ನು YouTube ಬೆಂಬಲಿಸುತ್ತದೆ. 360 ಡಿಗ್ರಿ ಪ್ಲೇಬ್ಯಾಕ್ ಅನ್ನು YouTube ಆ್ಯಪ್‌ನಲ್ಲಿಯೂ ಬೆಂಬಲಿಸಲಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6978831938947647315
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false