360-ಡಿಗ್ರಿ ಮತ್ತು VR ವೀಡಿಯೊಗಳಲ್ಲಿ ಪ್ರಾದೇಶಿಕ ಆಡಿಯೊವನ್ನು ಬಳಸಿ

YouTube ಪ್ರಾದೇಶಿಕ ಆಡಿಯೊದ ಮೂಲಕ ನೀವು ವೀಡಿಯೊದ ಧ್ವನಿಯನ್ನು ಎಲ್ಲಾ ದಿಕ್ಕುಗಳಲ್ಲಿ ಅನುಭವಿಸಬಹುದು.

ಪ್ರಾದೇಶಿಕ ಆಡಿಯೊದೊಂದಿಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ

  1. ಪ್ರಾದೇಶಿಕ ಆಡಿಯೊದೊಂದಿಗೆ 360° ಅಥವಾ VR ವೀಡಿಯೊವನ್ನು ರಚಿಸಿ. 

    ಪ್ರಾದೇಶಿಕ ಆಡಿಯೊದ ಅವಶ್ಯಕತೆಗಳು

    1. 360 ಮೋನೋ ವೀಡಿಯೊವನ್ನು DNxHR ನಲ್ಲಿ ರೆಂಡರ್ ಮಾಡಿ. ಅಗತ್ಯವಿದ್ದರೆ FFMPEG ಬಳಸಿ ಎನ್‌ಕೋಡ್ ಮಾಡಿ.
    2. ನಿಮ್ಮ ಮೋನೋ 360 ವೀಡಿಯೊವನ್ನು ನಿಮ್ಮ DAW ದ ಒಳಗೆ ನಿಮ್ಮ ಸ್ಪ್ಯಾಶಿಯಲ್ ವರ್ಕ್‌ಸ್ಟೇಷನ್‌ಗೆ ತನ್ನಿ. 
    3. ನಿಮ್ಮ ಪರಿವರ್ತಿತ DAW ಪ್ರಾಜೆಕ್ಟ್ ಅನ್ನು ತೆರೆಯಿರಿ ಅಥವಾ ನಿಮ್ಮ ಟ್ರ್ಯಾಕ್‌ಗಳನ್ನು ಪ್ರತ್ಯೇಕವಾಗಿ DAW ಗೆ ತನ್ನಿ.
    4. ನೀವು ಸ್ಪೇಸ್‌ನಲ್ಲಿ ಇರಿಸಲು ಬಯಸುವ ಟ್ರ್ಯಾಕ್‌ಗಳಿಗೆ ಸ್ಪಾಶಿಯಲೈಸರ್ ಅನ್ನು ಅನ್ವಯಿಸಿ. ನೀವು ಹೆಡ್‌ಲಾಕ್ ಆಗಿರುವ ಟ್ರ್ಯಾಕ್‌ಗಳನ್ನು (ಸಾಮಾನ್ಯವಾಗಿ ಸ್ಟೀರಿಯೋದಲ್ಲಿ) ಸಹ ಬಳಸಬಹುದು. 
    5. ಟ್ರ್ಯಾಕ್‌ಗಳನ್ನು ಸ್ಪೇಸ್‌ನಲ್ಲಿ ಸ್ಥಾನ ನಿಯೋಜನೆ ಮಾಡಲು ನಿಮ್ಮ ಸ್ಪ್ಯಾಶಿಯಲೈಸರ್ ಅನ್ನು ಬಳಸಿ.
    6. ಹೆಡ್‌ಲಾಕ್ ಮಾಡಲಾದ ಟ್ರ್ಯಾಕ್‌ಗಳಿಗಾಗಿ, ಮೊದಲ ಚಾನಲ್‌ನ ಔಟ್‌ಪುಟ್‌ಗಳನ್ನು ಆ್ಯಂಬಿಸೋನಿಕ್ ಮಿಕ್ಸ್‌ಗೆ ರೂಟ್ ಮಾಡಿ.
    7. ಆಡಿಯೋವನ್ನು WAV ಆಗಿ ರಫ್ತು ಮಾಡಿ. 
    8. ವೀಡಿಯೊದೊಂದಿಗೆ ಆಡಿಯೋವನ್ನು ಎನ್‌ಕೋಡರ್‌ಗೆ ತನ್ನಿ. 
    9. YouTube ಪ್ರಾದೇಶಿಕ ಆಡಿಯೊಗಾಗಿ ರಫ್ತು ಮಾಡುವಿಕೆ ಸೆಟ್ಟಿಂಗ್ ಅನ್ನು ಆಯ್ಕೆ ಮಾಡಿ.
  2. ವೀಡಿಯೊದಲ್ಲಿನ ಮೆಟಾಡೇಟಾ ಪರಿಕರದ ಇತ್ತೀಚಿನ ಆವೃತ್ತಿಯನ್ನು ರನ್ ಮಾಡಿ.
  3. ವೀಡಿಯೊವನ್ನು YouTube ಗೆ ಅಪ್‌ಲೋಡ್ ಮಾಡಿ.​

180 ಅಥವಾ 360-ಡಿಗ್ರಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯಿರಿ.

VR ವೀಡಿಯೊಗಳಲ್ಲಿ ಪ್ರಾದೇಶಿಕ ಆಡಿಯೊವನ್ನು ಪ್ರಿವ್ಯೂ ಮಾಡಿ

ನಿಮ್ಮ VR ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೊದಲು ಅವುಗಳ ಪ್ರಾದೇಶಿಕ ಆಡಿಯೊವನ್ನು ಪ್ರಿವ್ಯೂ ಮಾಡಲು, ರೆಸೊನೆನ್ಸ್ ಆಡಿಯೋ ಮಾನಿಟರ್ VST ಪ್ಲಗ್‌ಇನ್.ns ಅನ್ನು ನೀವು ಬಳಸಬಹುದು.

ಬೆಂಬಲಿತ ಪ್ರಾದೇಶಿಕ ಆಡಿಯೊ ಫಾರ್ಮ್ಯಾಟ್‌ಗಳು

YouTube ಎರಡು ವಿಭಿನ್ನ ಪ್ರಾದೇಶಿಕ ಆಡಿಯೊ ಫಾರ್ಮ್ಯಾಟ್‌ಗಳನ್ನು ಬೆಂಬಲಿಸುತ್ತದೆ:

  • ಫರ್ಸ್ಟ್ ಆರ್ಡರ್ ಆ್ಯಂಬಿಸೋನಿಕ್ಸ್
  • ಹೆಡ್-ಲಾಕ್ಡ್ ಸ್ಟೀರಿಯೋದೊಂದಿಗೆ ಫರ್ಸ್ಟ್ ಆರ್ಡರ್ ಆ್ಯಂಬಿಸೋನಿಕ್ಸ್

ನಿಮ್ಮ ವೀಡಿಯೊಗಳಲ್ಲಿ ಹೆಡ್-ಲಾಕ್ಡ್ ಸ್ಟೀರಿಯೋ ಆಡಿಯೋವನ್ನು ಸಹ ನೀವು ಸೇರಿಸಬಹುದು, ವೀಕ್ಷಕರು ತಮ್ಮ ತಲೆಯನ್ನು ಸರಿಸಿದಾಗ ಇದು ಬದಲಾಗುವುದಿಲ್ಲ.

ತಾಂತ್ರಿಕ ಆವಶ್ಯಕತೆಗಳು

ಬೆಂಬಲಿತ ಲೇಔಟ್‌ಗಳು ಹಾಗೂ ಆರ್ಡರಿಂಗ್‌ಗಳ ಕುರಿತು ತಿಳಿಯಲು, ನೀವು ಸಂಪೂರ್ಣ YouTube ಪ್ರಾದೇಶಿಕ ಆಡಿಯೊ ವಿವರಣೆಯನ್ನು ಬಳಸಬಹುದು. ಪ್ರಾದೇಶಿಕ ಆಡಿಯೊವನ್ನು ಬಳಸುವಾಗ ನೀವು ಈ ಕನಿಷ್ಠ ಅವಶ್ಯಕತೆಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಿ.

ಪ್ರಾದೇಶಿಕ ಆಡಿಯೊಗಾಗಿ ಕನಿಷ್ಠ ಅವಶ್ಯಕತೆಗಳು

  1. ಮೆಟಾಡೇಟಾವನ್ನು ನಿಮ್ಮ ಫೈಲ್‌ನಲ್ಲಿ ಸೇರಿಸಬೇಕು.
  2. ಕೇವಲ ಒಂದು ಆಡಿಯೋ ಟ್ರ್ಯಾಕ್ ಅನ್ನು ಬಳಸಲಾಗುತ್ತದೆ.
    • ಒಂದೇ ಫೈಲ್‌ನಲ್ಲಿ ಸ್ಪ್ಯಾಶಿಯಲ್ ಮತ್ತು ಸ್ಟೀರಿಯೋ/ಮೋನೋ ಆಡಿಯೋವನ್ನು ಹೊಂದಿರುವಂತಹ ಟ್ರ್ಯಾಕ್‌ಗಳ ಹಾಗೆ, ಅನೇಕ ಆಡಿಯೋ ಟ್ರ್ಯಾಕ್‌ಗಳಿಗೆ ಬೆಂಬಲವಿಲ್ಲ
  3. ಪ್ರಾದೇಶಿಕ ಆಡಿಯೋ ಆ್ಯಂಬಿಸೋನಿಕ್ಸ್ (AmbiX) ಫಾರ್ಮ್ಯಾಟ್ ಅನ್ನು ಬಳಸುತ್ತದೆ:
    • ACN ಚಾನಲ್ ಆರ್ಡರಿಂಗ್
    • SN3D ನಾರ್ಮಲೈಸೇಶನ್
  4. ಬೆಂಬಲಿತ ಫರ್ಸ್ಟ್ ಆರ್ಡರ್ ಆ್ಯಂಬಿಸೋನಿಕ್ಸ್ (FOA) ಫಾರ್ಮ್ಯಾಟ್‌ಗಳು:
    • ಅಪ್‌ಲೋಡ್ ಮಾಡಲಾದ ನಿಮ್ಮ ಫೈಲ್‌ನಲ್ಲಿ 4-ಚಾನಲ್ ಆಡಿಯೋ ಟ್ರ್ಯಾಕ್ ಆಗಿ W, Y, Z, X, ನಮೂನೆ ದರ: 48 kHz
    • MOV ಕಂಟೈನರ್‌ನಲ್ಲಿ PCM ಎನ್‌ಕೋಡ್ ಮಾಡಲಾದ ಆಡಿಯೋ:
    • MP4/MOV ಕಂಟೈನರ್‌ನಲ್ಲಿ AAC ಎನ್‌ಕೋಡ್ ಮಾಡಲಾದ ಆಡಿಯೋ:
      • ಕನಿಷ್ಠ ಬಿಟ್ ಪ್ರಮಾಣ: 256 kbps
    • MP4 ಕಂಟೈನರ್‌ನಲ್ಲಿ OPUS ಎನ್‌ಕೋಡ್ ಮಾಡಲಾದ ಆಡಿಯೋ:
      • ಚಾನಲ್ ನಕ್ಷೆ ಫ್ಯಾಮಿಲಿ: 2
      • ಕನಿಷ್ಠ ಬಿಟ್ ಪ್ರಮಾಣ 512 kbps
  5. ಹೆಡ್-ಲಾಕ್ಡ್ ಸ್ಟೀರಿಯೊ ಫಾರ್ಮ್ಯಾಟ್‌ನೊಂದಿಗೆ ಬೆಂಬಲಿತ ಫರ್ಸ್ಟ್ ಆರ್ಡರ್ ಆ್ಯಂಬಿಸೋನಿಕ್ಸ್ (FOA) ಫಾರ್ಮ್ಯಾಟ್:
    • ಅಪ್‌ಲೋಡ್ ಮಾಡಲಾದ ನಿಮ್ಮ ಫೈಲ್‌ನಲ್ಲಿ 6-ಚಾನಲ್ ಆಡಿಯೋ ಟ್ರ್ಯಾಕ್ ಆಗಿ W, Y, Z, X, L, R, ನಮೂನೆ ದರ: 48 kHz
    • MOV ಕಂಟೈನರ್‌ನಲ್ಲಿ PCM ಎನ್‌ಕೋಡ್ ಮಾಡಲಾದ ಆಡಿಯೊ:
      • ನಮೂನೆ ದರ: 48 kHz
    • MP4 ಕಂಟೈನರ್‌ನಲ್ಲಿ OPUS ಎನ್‌ಕೋಡ್ ಮಾಡಲಾದ ಆಡಿಯೋ:
      • ಕನಿಷ್ಠ ಬಿಟ್ ಪ್ರಮಾಣ 768 kbps
      • ಚಾನಲ್ ನಕ್ಷೆ ಫ್ಯಾಮಿಲಿ: 2

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9182618895677947809
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false