ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಪ್ಲೇಪಟ್ಟಿಗಳು ಮತ್ತು ವೀಡಿಯೊಗಳನ್ನು ಹುಡುಕಿ

ಹ್ಯಾಶ್‌ಟ್ಯಾಗ್‌ಗಳೆಂದರೆ ಮೊದಲಿಗೆ # ಚಿಹ್ನೆಯನ್ನು ಹೊಂದಿರುವ ಕೀವರ್ಡ್‌ಗಳು. YouTube ಹಾಗೂ YouTube Music ನಲ್ಲಿ ಒಂದೇ ಹ್ಯಾಶ್‌ಟ್ಯಾಗ್ ಅನ್ನು ಬಳಸುವ ಇತರ ವೀಡಿಯೊಗಳು ಅಥವಾ ಪ್ಲೇಪಟ್ಟಿಗಳೊಂದಿಗೆ ನಿಮ್ಮ ಕಂಟೆಂಟ್ ಅನ್ನು ಸುಲಭವಾಗಿ ಕನೆಕ್ಟ್ ಮಾಡಲು ಹ್ಯಾಶ್‌ಟ್ಯಾಗ್‌ಗಳು ಅವಕಾಶ ನೀಡುತ್ತವೆ. ವೀಕ್ಷಕರು ಮತ್ತು ಕೇಳುಗರು, ಹುಡುಕಾಟದ ಮೂಲಕ ಸಂಬಂಧಿತ ಕಂಟೆಂಟ್ ಅನ್ನು ಕಂಡುಕೊಳ್ಳಲು ಸಹ ಹ್ಯಾಶ್‌ಟ್ಯಾಗ್‌ಗಳು ಅವಕಾಶ ನೀಡುತ್ತವೆ.

ನಿಮ್ಮ YouTube ವೀಡಿಯೊಗಳು ಅಥವಾ YouTube Music ಪ್ಲೇಪಟ್ಟಿಗೆ ಹ್ಯಾಶ್‌ಟ್ಯಾಗ್‌ಗಳನ್ನು ಸೇರಿಸಿ

ನೀವು ವೀಡಿಯೊವನ್ನು ಅಪ್‌ಲೋಡ್ ಮಾಡುವಾಗ ಅಥವಾ YouTube ನಲ್ಲಿ Short ಅನ್ನು ರೆಕಾರ್ಡ್ ಮಾಡುವಾಗ, ಅಥವಾ ನೀವು YouTube Music ನಲ್ಲಿ ಪ್ಲೇಪಟ್ಟಿಯನ್ನು ರಚಿಸುವಾಗ ಶೀರ್ಷಿಕೆ ಮತ್ತು ವಿವರಣೆಯಲ್ಲಿ ನೀವು ಹ್ಯಾಶ್‌ಟ್ಯಾಗ್‌ಗಳನ್ನು ಸೇರಿಸಬಹುದು.

YouTube ನಲ್ಲಿ ನಿಮ್ಮ ವೀಡಿಯೊದಲ್ಲಿ ಹ್ಯಾಶ್‌ಟ್ಯಾಗ್ ಅನ್ನು ಸೇರಿಸಲು:

  1. ಶೀರ್ಷಿಕೆ ಅಥವಾ ವಿವರಣೆಯಲ್ಲಿ # ಸಂಕೇತವನ್ನು ನಮೂದಿಸಿ ನಂತರ ನಿಮ್ಮ ವೀಡಿಯೊದೊಂದಿಗೆ ಸಂಬಂಧಿಸಲು ಬಯಸುವ ವಿಷಯ ಅಥವಾ ಕೀವರ್ಡ್ ಅನ್ನು ನಮೂದಿಸಲು ಪ್ರಾರಂಭಿಸಿ. ಆಗ, ನಿಮ್ಮ ಇನ್‌ಪುಟ್ ಅನ್ನು ಆಧರಿಸಿ ನಮ್ಮ ಸಿಸ್ಟಮ್ ಜನಪ್ರಿಯ ಹ್ಯಾಶ್‌ಟ್ಯಾಗ್‌ಗಳ ಸಲಹೆ ನೀಡುತ್ತದೆ.
  2. ಒಂದೇ ಹ್ಯಾಶ್‌ಟ್ಯಾಗ್ ಅನ್ನು ಹೊಂದಿರುವ ಇತರ ವೀಡಿಯೊಗಳ ನಡುವೆ ನಿಮ್ಮ ವೀಡಿಯೊವನ್ನು ಪ್ರಚಾರ ಮಾಡಲು ಶಿಫಾರಸು ಮಾಡಲಾದ ಹ್ಯಾಶ್‌ಟ್ಯಾಗ್ ಅನ್ನು ಆಯ್ಕೆ ಮಾಡಿ ಅಥವಾ ನಿಮ್ಮ ಕಂಟೆಂಟ್‌ಗೆ ಸೂಕ್ತವಾದ ಹ್ಯಾಶ್‌ಟ್ಯಾಗ್ ಅನ್ನು ಕಂಡುಕೊಳ್ಳಲು, ನಿಮ್ಮದೇ ಹ್ಯಾಶ್‌ಟ್ಯಾಗ್ ಅನ್ನು ರಚಿಸಿ.

ವೀಡಿಯೊದ ವಿವರಣೆಯಲ್ಲಿ ನೀವು ಸೇರಿಸುವ ಎಲ್ಲಾ ಹ್ಯಾಶ್‌ಟ್ಯಾಗ್‌ಗಳಿಂದ, ಅತಿ ಹೆಚ್ಚು ಗಮನ ಸೆಳೆಯುವವು ಎಂದು ಪರಿಗಣಿಸಲಾಗುವ ಗರಿಷ್ಠ ಮೂರು ಹ್ಯಾಶ್‌ಟ್ಯಾಗ್‌ಗಳು ನಿಮ್ಮ ವೀಡಿಯೊ ಶೀರ್ಷಿಕೆಯ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತವೆ. ನಿಮ್ಮ ಹ್ಯಾಶ್‌ಟ್ಯಾಗ್‌ಗಳು ವೀಡಿಯೊ ವಿವರಣೆಯಲ್ಲಿ ಇನ್ನೂ ಕಾಣಿಸಿಕೊಳ್ಳುತ್ತವೆ ಮತ್ತು ನಿಮ್ಮ ವೀಡಿಯೊಗಳು ಹುಡುಕಾಟ ಫಲಿತಾಂಶಗಳಲ್ಲಿ ಈಗಲೂ ಕಾಣಿಸಿಕೊಳ್ಳಬಲ್ಲವು. ಶೀರ್ಷಿಕೆ ಮತ್ತು ವಿವರಣೆಯಲ್ಲಿರುವ ಹ್ಯಾಶ್‌ಟ್ಯಾಗ್‌ಗಳು, ಆ ಹ್ಯಾಶ್‌ಟ್ಯಾಗ್ ಅನ್ನು ಹಂಚಿಕೊಳ್ಳುವ ಇತರ ವೀಡಿಯೊಗಳನ್ನು ಪ್ರಸ್ತುತಪಡಿಸುವ ಫಲಿತಾಂಶಗಳ ಪುಟಕ್ಕೆ ಲಿಂಕ್ ಮಾಡುತ್ತವೆ.

YouTube Music ನಲ್ಲಿ ನಿಮ್ಮ ಪ್ಲೇಪಟ್ಟಿಯಲ್ಲಿ ಹ್ಯಾಶ್‌ಟ್ಯಾಗ್ ಅನ್ನು ಸೇರಿಸಲು:

  1. ಲೈಬ್ರರಿ ನಂತರ ಪ್ಲೇಪಟ್ಟಿಗಳು ಎಂಬುದನ್ನು ಆಯ್ಕೆ ಮಾಡಿ.
  2. ನೀವು ರಚಿಸಿದ, ಮತ್ತು ಎಡಿಟ್ ಮಾಡಲು ಬಯಸುವ ಪ್ಲೇಪಟ್ಟಿಯನ್ನು ಹುಡುಕಿ.
  3. ನಿಮ್ಮ ಪ್ಲೇಪಟ್ಟಿಯ ಶೀರ್ಷಿಕೆಯನ್ನು ಬದಲಾಯಿಸಲು ಅಥವಾ ವಿವರಣೆಯನ್ನು ಸೇರಿಸಲು, ಇನ್ನಷ್ಟು ''ನಂತರ ಎಡಿಟ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.
  4. ಪ್ಲೇಪಟ್ಟಿಯ ಶೀರ್ಷಿಕೆ ಅಥವಾ ವಿವರಣೆಯಲ್ಲಿ # ಸಂಕೇತವನ್ನು ನಮೂದಿಸಿ.

ಪ್ಲೇಪಟ್ಟಿಯ ಶೀರ್ಷಿಕೆ ಅಥವಾ ವಿವರಣೆಯಲ್ಲಿ ಸೇವ್ ಮಾಡಿದಾಗ, ಹ್ಯಾಶ್‌ಟ್ಯಾಗ್‌ಗಳು, ಕ್ಲಿಕ್ ಮಾಡಬಹುದಾದ ಲಿಂಕ್‌ಗಳ ಹಾಗೆ ಕೆಲಸ ಮಾಡುತ್ತವೆ. ಶೀರ್ಷಿಕೆ ಮತ್ತು ವಿವರಣೆಯಲ್ಲಿರುವ ಹ್ಯಾಶ್‌ಟ್ಯಾಗ್‌ಗಳು, ಆ ಹ್ಯಾಶ್‌ಟ್ಯಾಗ್ ಅನ್ನು ಹಂಚಿಕೊಳ್ಳುವ ಇತರ ವೀಡಿಯೊಗಳು ಮತ್ತು ಪ್ಲೇಪಟ್ಟಿಗಳನ್ನು ಪ್ರಸ್ತುತಪಡಿಸುವ ಫಲಿತಾಂಶಗಳ ಪುಟಕ್ಕೆ ಲಿಂಕ್ ಮಾಡುತ್ತವೆ.

ಶಿಫಾರಸು ಮಾಡಲಾದ ಹ್ಯಾಶ್‌ಟ್ಯಾಗ್‌ಗಳು:

ನೀವು Short ಗೆ ಪಠ್ಯವನ್ನು ಸೇರಿಸಿದಾಗ ಮತ್ತು ಹ್ಯಾಶ್‌ಟ್ಯಾಗ್ ಸೇರಿಸಲು ಪ್ರಾರಂಭಿಸಿದಾಗ, ಈ ಕಂಟೆಂಟ್‌ಗೆ ಸಂಬಂಧಿತ ಹ್ಯಾಶ್‌ಟ್ಯಾಗ್‌ಗಳನ್ನು ಅನ್ವಯಿಸುವುದಕ್ಕೆ ನಿಮಗೆ ಸಹಾಯ ಮಾಡುವ ಸಲಹೆಗಳು ನಿಮಗೆ ಕಾಣಿಸುತ್ತವೆ. ಹಿಂದಿನ ವಿಷಯ ಅಪ್‌ಲೋಡ್‌ಗಳ ಸಲಹೆಗಳು ಮತ್ತು ಕೆಲವು ದೇಶಗಳಲ್ಲಿ ಯಾವುದೇ ನಮೂದಿಸಿದ ಪಠ್ಯದಂತಹ ವಿವಿಧ ಸಂಕೇತಗಳ ಆಧಾರದ ಮೇಲೆ ಈ ಹ್ಯಾಶ್‌ಟ್ಯಾಗ್‌ಗಳನ್ನು ಶಿಫಾರಸು ಮಾಡಲಾಗುತ್ತದೆ.

ಈ ಹಿಂದೆ ಬಳಸಲಾದ ಹ್ಯಾಶ್‌ಟ್ಯಾಗ್ ಸಲಹೆಗಳನ್ನು ನೀವು ಮೊದಲು ಬಳಸಿದ್ದೀರಿ ಎಂದು ತೋರಿಸುವುದಕ್ಕಾಗಿ, ಅವುಗಳ ಪಕ್ಕದಲ್ಲಿ ಗಡಿಯಾರದ ಐಕಾನ್ ಇರುತ್ತದೆ.

ಹ್ಯಾಶ್‌ಟ್ಯಾಗ್ ಬಳಕೆಯ ನೀತಿಗಳು

YouTube ಗೆ ಅಪ್‌ಲೋಡ್ ಮಾಡಲಾದ ವೀಡಿಯೊಗಳ ಹಾಗೆಯೇ, ಹ್ಯಾಶ್‌ಟ್ಯಾಗ್‌ಗಳು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಪೂರೈಸಬೇಕು. ನಮ್ಮ ನೀತಿಗಳನ್ನು ಉಲ್ಲಂಘಿಸುವ ಹ್ಯಾಶ್‌ಟ್ಯಾಗ್‌ಗಳು ನಿಮ್ಮ ಕಂಟೆಂಟ್‌ನ ಕೆಳಗೆ ಕಾಣಿಸಿಕೊಳ್ಳುವುದಿಲ್ಲ ಮತ್ತು ಇವುಗಳನ್ನು ತೆಗೆದುಹಾಕಬಹುದಾಗಿದೆ. ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವಾಗ ಈ ನೀತಿಗಳನ್ನು ಅನುಸರಿಸಲು ಮರೆಯದಿರಿ:

  • ಸ್ಪೇಸ್‌ಗಳು ಇರಬಾರದು: ಹ್ಯಾಶ್‌ಟ್ಯಾಗ್‌ಗಳಲ್ಲಿ ಯಾವುದೇ ಸ್ಪೇಸ್‌ಗಳು ಇರಬಾರದು. ನಿಮ್ಮ ಹ್ಯಾಶ್‌ಟ್ಯಾಗ್‌ಗಳಲ್ಲಿ ಎರಡು ಪದಗಳಿದ್ದರೆ ನೀವು ಅವುಗಳನ್ನು ಜೊತೆಗೂಡಿಸಬಹುದು (#TwoWords, #twowords).
  • ಅತಿಯಾಗಿ ಟ್ಯಾಗ್ ಮಾಡುವುದು: ಒಂದೇ ವೀಡಿಯೊ ಅಥವಾ ಪ್ಲೇಪಟ್ಟಿಯಲ್ಲಿ ತೀರಾ ಹೆಚ್ಚು ಟ್ಯಾಗ್‌ಗಳನ್ನು ಸೇರಿಸಬೇಡಿ. ನೀವು ಎಷ್ಟು ಹೆಚ್ಚು ಟ್ಯಾಗ್‌ಗಳನ್ನು ಸೇರಿಸುತ್ತೀರೋ, ಹುಡುಕಾಟ ನಡೆಸುತ್ತಿರುವ ವೀಕ್ಷಕರು ಅಥವಾ ಕೇಳುಗರಿಗೆ ಅವು ಅಷ್ಟು ಕಡಿಮೆ ಪ್ರಸ್ತುತವಾಗುತ್ತವೆ. ಒಂದು ವೀಡಿಯೊ ಅಥವಾ ಪ್ಲೇಪಟ್ಟಿಯಲ್ಲಿ 60 ಕ್ಕಿಂತ ಹೆಚ್ಚು ಹ್ಯಾಶ್‌ಟ್ಯಾಗ್‌ಗಳಿದ್ದರೆ, ಆ ಕಂಟೆಂಟ್‌ನಲ್ಲಿ ಪ್ರತಿ ಹ್ಯಾಶ್‌ಟ್ಯಾಗ್ ಅನ್ನು ನಾವು ನಿರ್ಲಕ್ಷಿಸುತ್ತೇವೆ. ಅತಿಯಾಗಿ ಟ್ಯಾಗ್ ಮಾಡುವಿಕೆಯು, ನಿಮ್ಮ ಅಪ್‌ಲೋಡ್‌ಗಳು ಅಥವಾ ಹುಡುಕಾಟದಿಂದ ನಿಮ್ಮ ವೀಡಿಯೊವನ್ನು ತೆಗೆದುಹಾಕಲು ಕಾರಣವಾಗಬಹುದು.
  • ದಾರಿ ತಪ್ಪಿಸುವ ಕಂಟೆಂಟ್: ವೀಡಿಯೊ ಅಥವಾ ಪ್ಲೇಪಟ್ಟಿಗೆ ನೇರವಾಗಿ ಸಂಬಂಧಿಸಿರದ ಹ್ಯಾಶ್‌ಟ್ಯಾಗ್‌ಗಳನ್ನು ಸೇರಿಸಬೇಡಿ. ತಪ್ಪು ದಾರಿಗೆಳೆಯುವ ಅಥವಾ ಸಂಬಂಧವಿಲ್ಲದ ಹ್ಯಾಶ್‌ಟ್ಯಾಗ್‌ಗಳು, ನಿಮ್ಮ ವೀಡಿಯೊ ಅಥವಾ ಪ್ಲೇಪಟ್ಟಿಯ ತೆಗೆದುಹಾಕುವಿಕೆಗೆ ಕಾರಣವಾಗಬಹುದು. ನಮ್ಮ ದಾರಿ ತಪ್ಪಿಸುವ ಮೆಟಾಡೇಟಾ ಕುರಿತಾದ ನೀತಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
  • ಕಿರುಕುಳ: ಒಬ್ಬ ವ್ಯಕ್ತಿ ಅಥವಾ ಸಮೂಹಕ್ಕೆ ಕಿರುಕುಳ ನೀಡುವ, ಅವಮಾನ ಮಾಡುವ, ಭಯಪಡಿಸುವ, ಬಹಿರಂಗಪಡಿಸುವ ಅಥವಾ ಬೆದರಿಸುವ ಉದ್ದೇಶದೊಂದಿಗೆ ಹ್ಯಾಶ್‌ಟ್ಯಾಗ್ ಅನ್ನು ಸೇರಿಸಬೇಡಿ. ಈ ನೀತಿಯ ಉಲ್ಲಂಘನೆಯು ನಿಮ್ಮ ವೀಡಿಯೊ ಅಥವಾ ಪ್ಲೇಪಟ್ಟಿಯ ತೆಗೆದುಹಾಕುವಿಕೆಗೆ ಕಾರಣವಾಗಬಹುದು. ನಮ್ಮ ಕಿರುಕುಳ ಮತ್ತು ಸೈಬರ್ ನಿಂದನೆ ನೀತಿಗಳ ಕುರಿತು ಇನ್ನಷ್ಟು ತಿಳಿಯಿರಿ.
  • ದ್ವೇಷಪೂರಿತ ಮಾತು: ವ್ಯಕ್ತಿಗಳು ಅಥವಾ ಗುಂಪುಗಳ ವಿರುದ್ಧ ಹಿಂಸೆ ಅಥವಾ ದ್ವೇಷವನ್ನು ಪ್ರಚಾರ ಮಾಡುವ ಯಾವುದೇ ಹ್ಯಾಶ್‌ಟ್ಯಾಗ್‌ಗಳನ್ನು ಸೇರಿಸಬೇಡಿ. ಜನಾಂಗೀಯ, ಲೈಂಗಿಕ ಅಥವಾ ಇತರ ನಿಂದೆಗಳನ್ನು ಒಳಗೊಂಡಿರುವ ಹ್ಯಾಶ್‌ಟ್ಯಾಗ್‌ಗಳನ್ನು ಸೇರಿಸಬೇಡಿ. ಈ ನೀತಿಯ ಉಲ್ಲಂಘನೆಯು ನಿಮ್ಮ ವೀಡಿಯೊ ಅಥವಾ ಪ್ಲೇಪಟ್ಟಿಯ ತೆಗೆದುಹಾಕುವಿಕೆಗೆ ಕಾರಣವಾಗಬಹುದು. ನಮ್ಮ ದ್ವೇಷಪೂರಿತ ಮಾತು ನೀತಿಯ ಕುರಿತು ಇನ್ನಷ್ಟು ತಿಳಿಯಿರಿ.
  • ಲೈಂಗಿಕ ಕಂಟೆಂಟ್: ಲೈಂಗಿಕ ಅಥವಾ ಅಶ್ಲೀಲ ಹ್ಯಾಶ್‌ಟ್ಯಾಗ್‌ಗಳ ಸೇರಿಸುವಿಕೆಯು ನಿಮ್ಮ ವೀಡಿಯೊ ಅಥವಾ ಪ್ಲೇಪಟ್ಟಿಯ ತೆಗೆದುಹಾಕುವಿಕೆಗೆ ಕಾರಣವಾಗಬಹುದು. ಒಂದು ವೇಳೆ ವೀಡಿಯೊ ಲೈಂಗಿಕವಾಗಿ ಪ್ರಚೋದಿಸುವ ಉದ್ದೇಶವನ್ನು ಹೊಂದಿದ್ದರೆ, ಅದು YouTube ನಲ್ಲಿ ಸ್ವೀಕಾರಾರ್ಹವಾಗುವ ಸಾಧ್ಯತೆ ಕಡಿಮೆಯಾಗಿರುತ್ತದೆ. ನಮ್ಮ ಲೈಂಗಿಕ ಕಂಟೆಂಟ್ ನೀತಿಯ ಕುರಿತು ಇನ್ನಷ್ಟು ತಿಳಿಯಿರಿ.
  • ಅಸಭ್ಯ ಭಾಷೆ: ನಿಮ್ಮ ಹ್ಯಾಶ್‌ಟ್ಯಾಗ್‌ಗಳಲ್ಲಿ ಬೈಗುಳ ಅಥವಾ ಆಕ್ಷೇಪಾರ್ಹ ಪದಗಳ ಬಳಕೆಯು, ನಿಮ್ಮ ವೀಡಿಯೊ ಅಥವಾ ಪ್ಲೇಪಟ್ಟಿಯ ಮೇಲೆ ವಯಸ್ಸಿನ ನಿರ್ಬಂಧ ವಿಧಿಸಲು ಅಥವಾ ಅದನ್ನು ತೆಗೆದುಹಾಕಲು ಕಾರಣವಾಗಬಹುದು.
  • ಹ್ಯಾಶ್‌ಟ್ಯಾಗ್-ಅಲ್ಲದವುಗಳು: ಹ್ಯಾಶ್‌ಟ್ಯಾಗ್‌ಗಳನ್ನು ಸೇರಿಸಲು ಅನುಮತಿಯಿದ್ದರೂ, ವಿವರಣೆಯಲ್ಲಿ ಸಾಮಾನ್ಯ ವಿವರಣಾತ್ಮಕ ಟ್ಯಾಗ್‌ಗಳು ಅಥವಾ ಪುನರಾವರ್ತಿತ ವಾಕ್ಯಗಳನ್ನು ಸೇರಿಸಲು ಅನುಮತಿಯಿಲ್ಲ. ನೀವು ಈ ನೀತಿಯನ್ನು ಉಲ್ಲಂಘಿಸಿದರೆ, ನಿಮ್ಮ ವೀಡಿಯೊ ಅಥವಾ ಪ್ಲೇಪಟ್ಟಿಯನ್ನು ತೆಗೆದುಹಾಕಬಹುದು ಅಥವಾ ಅದಕ್ಕೆ ದಂಡ ವಿಧಿಸಬಹುದು. ನಮ್ಮ ದಾರಿ ತಪ್ಪಿಸುವ ಮೆಟಾಡೇಟಾ ಕುರಿತಾದ ನೀತಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
644768806767899605
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false