ಥರ್ಡ್ ಪಾರ್ಟಿ ಆ್ಯಪ್ ಅಪ್‌ಲೋಡ್‌ ಸಮಸ್ಯೆಗಳನ್ನು ಸರಿಪಡಿಸಿ

YouTube, YouTube Data API ಸೇವೆ v2 ನಿಂದ YouTube Data API ಸೇವೆ v3 ಗೆ ಅಪ್‌ಗ್ರೇಡ್ ಆಗಿದೆ. ಥರ್ಡ್-ಪಾರ್ಟಿ ಆ್ಯಪ್‌ಗಳನ್ನು ಆನ್ ಮಾಡಲು ಮತ್ತು ಅವುಗಳನ್ನು YouTube ನೊಂದಿಗೆ ಏಕೀಕರಿಸಲು ಈ API ಇದು ಹೊಸ ತಂತ್ರಜ್ಞಾನವಾಗಿದೆ. ನಮ್ಮ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಸಾಕಷ್ಟು ಸಮಯ ನೀಡುವುದಕ್ಕಾಗಿ ಥರ್ಡ್ ಪಾರ್ಟಿ ಆ್ಯಪ್ ಡೆವೆಲಪರ್‌ಗಳಿಗೆ 2014 ರಲ್ಲಿ ಈ ಬದಲಾವಣೆಯ ಕುರಿತು ಮಾಹಿತಿ ನೀಡಲಾಗಿದೆ. ಆನಂತರದಿಂದ ನಾವು ಬೆಂಬಲಿಸುವ ಹೊಸ ತಂತ್ರಜ್ಞಾನಕ್ಕೆ ವರ್ಗಾಯಿಸಲು ನಾವು ಅವರಿಗೆ ಸಹಾಯ ಮಾಡಿದ್ದೇವೆ.

ಹೆಚ್ಚಿನ ಥರ್ಡ್ ಪಾರ್ಟಿ ಆ್ಯಪ್‌ಗಳು ಈಗಾಗಲೇ YouTube Data API ಸೇವೆ v3 ಅನ್ನು ಬಳಸುತ್ತಿವೆ, ಆದ್ದರಿಂದ YouTube ಗೆ ಅಪ್‌ಲೋಡ್ ಮಾಡಲು, ಅಪ್‌ಗ್ರೇಡ್ ಮಾಡಲಾದ ಈ ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬುದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಹೊಸ YouTube Data API ಸೇವೆ v3 ತಂತ್ರಜ್ಞಾನಕ್ಕೆ ಅಪ್‌ಡೇಟ್ ಆಗಿರದ ಥರ್ಡ್ ಪಾರ್ಟಿ ಆ್ಯಪ್‌ಗಳು, YouTube ಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡುವಾಗ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಆ್ಯಪ್‌ಗಳ ಮೂಲಕ YouTube ಗೆ ಅಪ್‌ಲೋಡ್ ಮಾಡಲು ನಿಮಗೆ ಸಾಧ್ಯವಿಲ್ಲ. 

ಗಮನಿಸಿ: ಥರ್ಡ್ ಪಾರ್ಟಿ ಆ್ಯಪ್‌ಗಳಿಗೆ ಅನುಮತಿಗಳನ್ನು ಒದಗಿಸುವಾಗ ಮತ್ತೊಮ್ಮೆ ದೃಢೀಕರಿಸಲು ನಿಮ್ಮನ್ನು ಕೇಳಬಹುದು.

ಅಪ್‌ಲೋಡ್‌ ಸಮಸ್ಯೆಗಳನ್ನು ಟ್ರಬಲ್‌ಶೂಟ್ ಮಾಡಿ

ನೀವು ಥರ್ಡ್ ಪಾರ್ಟಿ ಆ್ಯಪ್‌ಗೆ ಸೈನ್ ಇನ್ ಮಾಡಲು ಪ್ರಯತ್ನಿಸುವಾಗ “ಬಳಕೆದಾರರ ಹೆಸರು/ಪಾಸ್‌ವರ್ಡ್ ಸಂಯೋಜನೆ ವಿಫಲವಾಗಿದೆ" ಸಂದೇಶವನ್ನು ನೀವು ಸ್ವೀಕರಿಸಿದರೆ, ನಿಮ್ಮ ವೀಡಿಯೊವನ್ನು ಅಪ್‌ಲೋಡ್ ಮಾಡಲು ಈ ಹಂತಗಳನ್ನು ಬಳಸಿ:

  1. ಥರ್ಡ್ ಪಾರ್ಟಿ ಆ್ಯಪ್‌ನಿಂದ ವೀಡಿಯೊವನ್ನು ರಫ್ತು ಮಾಡಿ.
  2. YouTube ವೆಬ್‌ಸೈಟ್ ಅಥವಾ YouTube ಮೊಬೈಲ್ ಆ್ಯಪ್‌ ಬಳಸಿಕೊಂಡು ವೀಡಿಯೊವನ್ನು ಅಪ್‌ಲೋಡ್ ಮಾಡಿ. 
ನೀವು ಥರ್ಡ್ ಪಾರ್ಟಿ ಆ್ಯಪ್ ಅನ್ನು ಅಪ್‌ಡೇಟ್ ಮಾಡಲು ಸಹ ಪ್ರಯತ್ನಿಸಬಹುದು. ಡೆವಲಪರ್, YouTube Data API ಸೇವೆ v3 ಯನ್ನು ಬಳಸುವ ಆ್ಯಪ್‌ನ ಅಪ್‌ಗ್ರೇಡ್ ಮಾಡಲಾದ ಆವೃತ್ತಿಯನ್ನು ಒದಗಿಸಿದರೆ, ಅಪ್‌ಡೇಟ್ ಮಾಡುವುದರಿಂದ ಸಹಾಯವಾಗಬಹುದು. ಆ್ಯಪ್ ಅನ್ನು ಅಪ್‌ಡೇಟ್ ಮಾಡುವುದರಿಂದ ಏನೂ ಉಪಯೋಗವಾಗದಿದ್ದರೆ, ನಿಮ್ಮ ಥರ್ಡ್ ಪಾರ್ಟಿ ಆ್ಯಪ್ ಡೆವಲಪರ್ ಅವರನ್ನು ನೀವು ಸಂಪರ್ಕಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17683391104921381408
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false