ವೀಡಿಯೊ ರೆಸಲ್ಯೂಷನ್ ಮತ್ತು ದೃಶ್ಯಾನುಪಾತಗಳು

ಪ್ಲ್ಯಾಟ್‌ಫಾರ್ಮ್ ಮತ್ತು ವೀಡಿಯೊ ಫಾರ್ಮ್ಯಾಟ್ ಅನ್ನು ಆಧರಿಸಿ, YouTube ವಿಭಿನ್ನ ದೃಶ್ಯಾನುಪಾತಗಳನ್ನು ಹೊಂದಿರುವ ವೀಡಿಯೊಗಳನ್ನು ಪ್ರದರ್ಶಿಸುತ್ತದೆ. YouTube ವೀಡಿಯೊ ಪ್ಲೇಯರ್ ಸ್ವಯಂಚಾಲಿತವಾಗಿ, ಪ್ರತಿಯೊಂದು ಪ್ರತ್ಯೇಕ ವೀಡಿಯೊದ ಗಾತ್ರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ.

ನಿಮ್ಮ ವೀಡಿಯೊವನ್ನು ಹೇಗೆ ಪ್ರದರ್ಶಿಸಲಾಗುತ್ತದೆ

ಕಂಪ್ಯೂಟರ್‌ನಲ್ಲಿ YouTube ಗಾಗಿ ಪ್ರಮಾಣಿತ ದೃಶ್ಯಾನುಪಾತವು 16:9 ಆಗಿದೆ. ನಿಮ್ಮ ವೀಡಿಯೊ, ವಿಭಿನ್ನ ದೃಶ್ಯಾನುಪಾತವನ್ನು ಹೊಂದಿದ್ದರೆ, ನಿಮ್ಮ ವೀಡಿಯೊ ಹಾಗೂ ವೀಕ್ಷಕರ ಸಾಧನಕ್ಕೆ ಹೊಂದಾಣಿಕೆಯಾಗುವಂತೆ, ಪ್ಲೇಯರ್ ಸ್ವಯಂಚಾಲಿತವಾಗಿ ಸೂಕ್ತ ಗಾತ್ರಕ್ಕೆ ಬದಲಾಗುತ್ತದೆ.

ಕಂಪ್ಯೂಟರ್ ಬ್ರೌಸರ್‌ಗಳಲ್ಲಿ ವರ್ಟಿಕಲ್ ವೀಡಿಯೊಗಳಿಗಾಗಿ 9:16 ದೃಶ್ಯಾನುಪಾತಗಳ ಹಾಗೆ, ಕೆಲವು ವೀಡಿಯೊ ಮತ್ತು ಸಾಧನದ ದೃಶ್ಯಾನುಪಾತಗಳಿಗಾಗಿ, ಉತ್ತಮ ವೀಕ್ಷಣೆಗಾಗಿ YouTube ಇನ್ನಷ್ಟು ಪ್ಯಾಡಿಂಗ್ ಅನ್ನು ಸೇರಿಸಬಹುದು. ಡೀಫಾಲ್ಟ್ ಆಗಿ ಪ್ಯಾಡಿಂಗ್ ಬಿಳಿ ಬಣ್ಣದಲ್ಲಿರುತ್ತದೆ ಮತ್ತು ಡಾರ್ಕ್ ಥೀಮ್ ಅನ್ನು ಆನ್ ಮಾಡಿದಾಗ, ಕಡು ಬೂದು ಬಣ್ಣದಲ್ಲಿರುತ್ತದೆ.

ಉತ್ತಮ ಫಲಿತಾಂಶಗಳಿಗಾಗಿ, ನಿಮ್ಮ ವೀಡಿಯೊದಲ್ಲಿ ನೇರವಾಗಿ ಪ್ಯಾಡಿಂಗ್ ಅಥವಾ ಕಪ್ಪು ಪಟ್ಟಿಗಳನ್ನು ಸೇರಿಸುವುದನ್ನು ತಪ್ಪಿಸಿ. ನಿಮ್ಮ ವೀಡಿಯೊದ ಗಾತ್ರ ಮತ್ತು ವೀಕ್ಷಕರ ಸಾಧನಕ್ಕೆ ತಕ್ಕಂತೆ ಪ್ಲೇಯರ್ ಅನ್ನು ಡೈನಾಮಿಕ್ ಆಗಿ ಬದಲಾಯಿಸುವ YouTube ಸಾಮರ್ಥ್ಯಕ್ಕೆ ಪ್ಯಾಡಿಂಗ್ ಅಡಚಣೆ ಉಂಟುಮಾಡುತ್ತದೆ.

ಶಿಫಾರಸು ಮಾಡಲಾದ ರೆಸಲ್ಯೂಷನ್ ಮತ್ತು ದೃಶ್ಯಾನುಪಾತಗಳು

ಡೀಫಾಲ್ಟ್ 16:9 ದೃಶ್ಯಾನುಪಾತಕ್ಕಾಗಿ, ಈ ರೆಸಲ್ಯೂಷನ್‌ಗಳಲ್ಲಿ ಎನ್‌ಕೋಡ್ ಮಾಡಿ:

  • 4320p (8k): 7680x4320
  • 2160p (4K): 3840x2160
  • 1440p (2k): 2560x1440
  • 1080p (HD): 1920x1080
  • 720p (HD): 1280x720
  • 480p (SD): 854x480
  • 360p (SD): 640x360
  • 240p (SD): 426x240
ಗಮನಿಸಿ: 2022 ರಲ್ಲಿ, 4K ಹಾಗೂ 8K ನಡುವಿನ ರೆಸಲ್ಯೂಷನ್‌ಗಳ ಪ್ಲೇಬ್ಯಾಕ್‌ಗಾಗಿ ಬೆಂಬಲವನ್ನು ತೆಗೆದುಹಾಕಲು ನಾವು ಪ್ರಾರಂಭಿಸಿದೆವು. ಉದಾಹರಣೆಗೆ, ನಾವು ಇನ್ನು ಮುಂದೆ 5K ಯಲ್ಲಿ ಪ್ಲೇಬ್ಯಾಕ್ ಅನ್ನು ಬೆಂಬಲಿಸದಿರಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2992308206324117846
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false