ನಿಮ್ಮ ಕಲಾವಿದರ ಅವತಾರ್ ಅನ್ನು ಸೆಟ್ ಮಾಡಿ

ಒಬ್ಬ ಕಲಾವಿದರಾಗಿ, ನಿಮ್ಮ ಒಡೆತನ ಮತ್ತು ನಿರ್ವಹಣೆಗೆ ಒಳಪಟ್ಟ ಚಾನಲ್ ಅಥವಾ VEVO ಚಾನಲ್ ಸೇರಿದಂತೆ ನೀವು YouTube ನಲ್ಲಿ ಅನೇಕ ಚಾನಲ್‌ಗಳನ್ನು ಹೊಂದಿರಬಹುದು. ಕಲಾವಿದರಿಗೆ ಸಮಂಜಸವಾದ ಬ್ರ್ಯಾಂಡಿಂಗ್ ಅನ್ನು ಒದಗಿಸಲು, ನಿಮ್ಮ ಅಧಿಕೃತ ಚಾನಲ್ ಅವತಾರ್‌ಗೆ ನೀವು ಅಪ್‌ಲೋಡ್ ಮಾಡುವ ಚಿತ್ರವು ನಿಮ್ಮ ಇತರ YouTube ಚಾನಲ್‌ಗಳು ಹಾಗೂ ಪ್ರೊಫೈಲ್‌ಗಳ ಅವತಾರ್ ಕೂಡಾ ಆಗಿರುತ್ತದೆ.

ನಿಮ್ಮ ಅವತಾರ್ ಆಗಿ ಯಾವುದು ಕಾಣಿಸಿಕೊಳ್ಳುತ್ತದೆ

ನಿಮ್ಮ ಅಧಿಕೃತ ಚಾನಲ್ ಅವತಾರ್, ನಿಮ್ಮ ಇತರ YouTube ಚಾನಲ್‌ಗಳು ಹಾಗೂ ಪ್ರೊಫೈಲ್‌ಗಳ ಅವತಾರ್ ಕೂಡಾ ಆಗಿರುತ್ತದೆ. ನಿಮ್ಮ ಅಧಿಕೃತ ಚಾನಲ್ ಎಂದು ನೀವು ಯಾವುದನ್ನು ಸೆಟ್ ಮಾಡಿದ್ದೀರಿ ಎಂಬುದು ನೀವು ಯಾವ ಪ್ರಕಾರಗಳ ಚಾನಲ್‌ಗಳನ್ನು ಹೊಂದಿದ್ದೀರಿ ಎಂಬುದನ್ನು ಅವಲಂಬಿಸಿರುತ್ತದೆ:

  • ಒಡೆತನ ಮತ್ತು ನಿರ್ವಹಣೆಗೆ ಒಳಪಟ್ಟ ಚಾನಲ್: ನಿಮ್ಮ ಡೀಫಾಲ್ಟ್ ಅಧಿಕೃತ ಚಾನಲ್. ನಿಮ್ಮ ಎಲ್ಲಾ ಸಂಬಂಧಿತ ಚಾನಲ್‌ಗಳಲ್ಲಿ ಈ ಅವತಾರ್ ಕಾಣಿಸಿಕೊಳ್ಳುತ್ತದೆ.
  • VEVO ಚಾನಲ್: ಒಡೆತನ ಮತ್ತು ನಿರ್ವಹಣೆಗೆ ಒಳಪಟ್ಟ ಚಾನಲ್ ಅನ್ನು ನೀವು ಹೊಂದಿರದಿದ್ದರೆ, ನಿಮ್ಮ VEVO ಚಾನಲ್‌ನ ಚಿತ್ರವು ನಿಮ್ಮ ಡೀಫಾಲ್ಟ್ ಅವತಾರ್ ಆಗಿರುತ್ತದೆ. ನಿಮ್ಮ ಎಲ್ಲಾ ಸಂಬಂಧಿತ ಚಾನಲ್‌ಗಳಲ್ಲಿ ಈ ಅವತಾರ್ ಕಾಣಿಸಿಕೊಳ್ಳುತ್ತದೆ.
ಗಮನಿಸಿ: ಒಡೆತನ ಮತ್ತು ನಿರ್ವಹಣೆಗೆ ಒಳಪಟ್ಟ ಚಾನಲ್ ಅಥವಾ VEVO ಚಾನಲ್ ಅನ್ನು ನೀವು ಹೊಂದಿರದಿದ್ದರೆ, ನಿಮಗಾಗಿ ಸ್ವಯಂಚಾಲಿತವಾಗಿ ಆರಿಸಲಾದ ಅವತಾರ್ ನಿಮ್ಮ ಚಿತ್ರವಾಗಿ ಉಳಿದುಕೊಳ್ಳುತ್ತದೆ.

ನಿಮ್ಮ ಅವತಾರ್ ಅನ್ನು ಅಪ್‌ಡೇಟ್ ಮಾಡಿ

ನೀವು ಪ್ರಾರಂಭಿಸುವ ಮೊದಲು: ನಿಮ್ಮ ಒಡೆತನ ಮತ್ತು ನಿರ್ವಹಣೆಗೆ ಒಳಪಟ್ಟ ಚಾನಲ್‌ನ ಚಾನಲ್ ಚಿತ್ರವು ನಿಮ್ಮ ಡೀಫಾಲ್ಟ್ ಅವತಾರ್ ಆಗಿರುತ್ತದೆ. ಚಾನಲ್‌ಗಳಾದ್ಯಂತ ನಿಮ್ಮ ಅವತಾರ್ ಅನ್ನು ಬದಲಾಯಿಸಲು ನೀವು ಅಧಿಕೃತ ಕಲಾವಿದರ ಚಾನಲ್ ಅನ್ನು ಹೊಂದಿರಬೇಕಾಗುತ್ತದೆ. ನೀವು ಅಧಿಕೃತ ಕಲಾವಿದರ ಚಾನಲ್ ಅನ್ನು ಹೊಂದಿಲ್ಲ ಎಂದಾದರೆ, ನಿಮ್ಮ ಲೇಬಲ್ ಅಥವಾ ವಿತರಕರನ್ನು ಸಂಪರ್ಕಿಸಿ.

ನಿಮ್ಮ OAC ಸಕ್ರಿಯವಾದಾಗ, ನಿಮ್ಮ ಕಲಾವಿದರ ಚಿತ್ರವನ್ನು ಅಪ್‌ಡೇಟ್ ಮಾಡಲು ಈ ಹಂತಗಳನ್ನು ಅನುಸರಿಸಿ:

  1. YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಚಾನಲ್‌ನ ಐಕಾನ್ ಅನ್ನು ಬದಲಾಯಿಸಲು ಈ ಹಂತಗಳನ್ನು ಅನುಸರಿಸಿ. ಚಿತ್ರಗಳು 1:1 ದೃಶ್ಯಾನುಪಾತ ಮತ್ತು 800 x 800px ರೆಸಲ್ಯೂಷನ್ ಅನ್ನು ಹೊಂದಿರುವ JPG, GIF, ಅಥವಾ PNG ಫಾರ್ಮ್ಯಾಟ್‌ನಲ್ಲಿರಬೇಕು.

ಚಾನಲ್‍ಗಳಾದ್ಯಂತ ನಿಮ್ಮ ಅವತಾರ್‌ನ ಅಪ್‌ಡೇಟ್ ಅನ್ನು ಪ್ರಕ್ರಿಯೆಗೊಳಿಸಲು 24 ಗಂಟೆಗಳಿಗಿಂತ ಹೆಚ್ಚು ಸಮಾಯಾವಕಾಶ ಬೇಕಾಗಬಹುದು.

ನಿಮ್ಮ ಚಾನಲ್ ಬ್ಯಾನರ್ ಕುರಿತು ಪ್ರಶ್ನೆಗಳಿವೆಯಾ? YouTube Music ಮತ್ತು TV ಯಲ್ಲಿ YouTube ನಲ್ಲಿನ ನಿಮ್ಮ ಅಧಿಕೃತ ಕಲಾವಿದರ ಚಾನೆಲ್ ಬ್ಯಾನರ್ ಅನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5453598142013483997
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false