YouTube ಪಾರ್ಟ್‌ನರ್ ಮ್ಯಾನೇಜರ್‌ನ ಅವಲೋಕನ

ನಿಮ್ಮ YouTube ಚಾನಲ್‌ನಿಂದ ಅತಿಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ನಿಮಗೆ ಸಹಾಯ ಮಾಡಲು YouTube ಪಾರ್ಟ್‌ನರ್ ಮ್ಯಾನೇಜರ್ ತಂಡವು ಅಸ್ತಿತ್ವದಲ್ಲಿದೆ. ನಮ್ಮ ಆಹ್ವಾನ-ಮಾತ್ರ ಪ್ರೋಗ್ರಾಂ ರಚನೆಕಾರರಿಗೆ ಹಲವು ರೀತಿಯಲ್ಲಿ ಬೆಂಬಲಿಸುತ್ತದೆ. ಬೆಳವಣಿಗೆಯ ತಂತ್ರಗಳನ್ನು ಕಲಿಯಲು, ಇತರ ರಚನೆಕಾರರೊಂದಿಗೆ ಸಂವಹನ ನಡೆಸಲು ಅಥವಾ YouTube ಕುರಿತು ಜ್ಞಾನವಿರುವ ಯಾರೊಂದಿಗಾದರೂ ಮಾತನಾಡಲು ಬಯಸುವ ರಚನೆಕಾರರು ಪ್ರಯೋಜನ ಪಡೆಯಬಹುದು.

ಪಾಲುದಾರ ವ್ಯವಸ್ಥಾಪಕರು ಎಂದರೇನು?

ಪಾಲುದಾರ ವ್ಯವಸ್ಥಾಪಕರರ ಕೆಲಸವು ರಚನೆಕಾರರು ತಮ್ಮ ಸಾಮರ್ಥ್ಯವನ್ನು ಅನ್‍ಲಾಕ್ ಮಾಡಲು ಸಹಾಯ ಮಾಡುವುದು. ಪಾಲುದಾರ ವ್ಯವಸ್ಥಾಪಕರನ್ನು ನಿಮ್ಮ ಸ್ವಂತ ವೈಯಕ್ತಿಕ YouTube ಪರಿಣಿತರಂತೆ ನೀವು ಆಲೋಚಿಸಬಹುದು.

ಪಾಲುದಾರ ವ್ಯವಸ್ಥಾಪಕರು YouTube ನಲ್ಲಿ ನಿಮಗೆ ಹೇಗೆ ಸಹಾಯ ಮಾಡಬಹುದು ಎಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ:

  • ಪರಸ್ಪರ ಬೆಂಬಲ: ಪಾಲುದಾರ ವ್ಯವಸ್ಥಾಪಕರು ನಿಯಮಿತವಾಗಿ ನಿಮ್ಮೊಂದಿಗೆ ಪರಸ್ಪರ ಭೇಟಿಯಾಗುತ್ತಾರೆ. ವೈಯಕ್ತಿಕ ಚಾನಲ್ ಗುರಿಗಳನ್ನು ಹೊಂದಿಸುವುದು, ಚಾನಲ್ ಆಪ್ಟಿಮೈಸೇಶನ್ ತಂತ್ರಗಳು ಮತ್ತು ಯಶಸ್ವಿ YouTube ಚಾನಲ್ ಅನ್ನು ಚಾಲನೆ ಮಾಡುವ ಕುರಿತು ನೀವು ಹೊಂದಿರುವ ಯಾವುದೇ ಇತರ ಸಮಸ್ಯೆಗಳನ್ನು ನೀವು ಚರ್ಚಿಸಬಹುದು.
  • ರಚನೆಕಾರರ ಈವೆಂಟ್‌ಗಳು ಮತ್ತು ಕಾರ್ಯಾಗಾರಗಳಿಗೆ ವಿಶೇಷ ಆಹ್ವಾನ: ಪಾಲುದಾರ ವ್ಯವಸ್ಥಾಪಕರೊಂದಿಗೆ, YouTube ಪ್ರಾಯೋಜಿತ ಈವೆಂಟ್‌ಗಳು ಮತ್ತು ಶೈಕ್ಷಣಿಕ ಕಾರ್ಯಾಗಾರಗಳಲ್ಲಿ ಸಮಾನ ಮನಸ್ಕರೊಂದಿಗೆ ಕನೆಕ್ಟ್ ಆಗಲು ನೀವು ಆಹ್ವಾನಗಳನ್ನು ಪಡೆಯಬಹುದು.
  • ಹೊಸ ರಚನೆಕಾರರ ಕಾರ್ಯಕ್ರಮಗಳು ಮತ್ತು ಕೊಡುಗೆಗಳ ಕಡೆಗೆ ಮೊದಲ ನೋಟ: ಹೊಸ YouTube ಫೀಚರ್‌ಗಳಿಗೆ ಆ್ಯಕ್ಸೆಸ್ ಅಥವಾ ಪ್ರಾಯೋಗಿಕ ಪೈಲಟ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯಂತಹ ಹೊಸ ಸೃಜನಶೀಲ ಕಾರ್ಯಕ್ರಮಗಳ ಕುರಿತು ತಿಳಿದುಕೊಳ್ಳಲು ಮೊದಲಿಗರಾಗಿರಿ.

ನಮ್ಮ ಪಾಲುದಾರ ವ್ಯವಸ್ಥಾಪಕರ ಪ್ರೋಗ್ರಾಂ ಒಂದು ವಿಶೇಷವಾದ, ಸೀಮಿತ ಸಮಯದ ಪ್ರಯೋಜನವಾಗಿದೆ. ನಮ್ಮ ಅರ್ಹತಾ ಮಾನದಂಡಗಳಿಗೆ ಹೊಂದಿಕೆಯಾಗುವ ಚಾನಲ್‌ಗಳಿಗೆ, ನಾವು ಅದನ್ನು 6 ತಿಂಗಳ ಅವಧಿಗೆ ಒದಗಿಸುತ್ತೇವೆ. ಚಾನಲ್ ಗಾತ್ರ, ಚಾನಲ್ ಚಟುವಟಿಕೆ ಮತ್ತು YouTube ಸಮುದಾಯ ಮಾರ್ಗಸೂಚಿಗಳಅನುಸರಣೆಯ ಆಧಾರದ ಮೇಲೆ ನಾವು ಪಾಲುದಾರರ ಅರ್ಹತೆಯನ್ನು ಮೌಲ್ಯಮಾಪನ ಮಾಡುತ್ತೇವೆ. ಇನ್ನಷ್ಟು ತಿಳಿಯಿರಿ

YouTube ರಚನೆಕಾರರ ವೆಬ್‍ಸೈಟ್‍ನಲ್ಲಿ, ಪಾಲುದಾರ ನಿರ್ವಾಹಕರನ್ನು ಹೊಂದಿರುವ ಅನುಕೂಲಗಳ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಬಹುದು.

YouTube ಪಾಲುದಾರಿಕೆಗಳ ತಂಡದ FAQ ಗಳು

ಪಾಲುದಾರ ವ್ಯವಸ್ಥಾಪಕರನ್ನು ಯಾರು ಪಡೆಯಬಹುದು?
ನಮ್ಮ ಪಾಲುದಾರ ವ್ಯವಸ್ಥಾಪಕರ ಪ್ರೋಗ್ರಾಂ ಪ್ರಸ್ತುತ ಆಹ್ವಾನಿತರಿಗೆ ಮಾತ್ರ ಇದೆ.
ನಾವು ಸಾಮಾನ್ಯವಾಗಿ ಚಾನಲ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತೇವೆ, ಅವು:
  • ಪಾಲುದಾರ ವ್ಯವಸ್ಥಾಪಕರು ಲಭ್ಯವಿರುವ ದೇಶಗಳು ಮತ್ತು ಪ್ರದೇಶಗಳಲ್ಲಿ ನೆಲೆಸಿರುವವರು
  • YouTube ಪಾಲುದಾರ ಕಾರ್ಯಕ್ರಮದಲ್ಲಿರುವವರು
  • ಬೆಳವಣಿಗೆಯ ಸಾಮರ್ಥ್ಯ ಹೊಂದಿರುವವರು
  • ಯಾವುದೇ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳನ್ನು ಹೊಂದಿಲ್ಲದವರು
  • ಒಂದಕ್ಕಿಂತ ಹೆಚ್ಚು, ಬಗೆಹರಿಯದ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಹೊಂದಿರದವರು
  • ನಮ್ಮ ಜಾಹೀರಾತುದಾರ-ಸ್ನೇಹಿ ಮಾರ್ಗಸೂಚಿಗಳನ್ನು ಅನುಸರಿಸುವವರು
ಪಾಲುದಾರ ವ್ಯವಸ್ಥಾಪಕ ಕಾರ್ಯಕ್ರಮಕ್ಕೆ ಯಾವ ದೇಶಗಳು ಮತ್ತು ಪ್ರದೇಶಗಳು ಅರ್ಹವಾಗಿವೆ?
ನೀವು ಈ ಕೆಳಗಿನ ದೇಶಗಳು ಅಥವಾ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ ಪಾಲುದಾರ ವ್ಯವಸ್ಥಾಪಕರಿಗೆ ನೀವು ಅರ್ಹರಾಗಬಹುದು:
  • ಅರ್ಜೆಂಟಿನಾ
  • ಆಸ್ಟ್ರೇಲಿಯಾ
  • ಆಸ್ಟ್ರಿಯಾ
  • ಬಹರೈನ್
  • ಬೆಲಾರಸ್
  • ಬೆಲ್ಜಿಯಂ
  • ಬ್ರೆಜಿಲ್
  • ಕೆನಡಾ
  • ಚೀನಾ
  • ಡೆನ್ಮಾರ್ಕ್
  • ಈಜಿಪ್ಟ್
  • ಫಿನ್‌ಲ್ಯಾಂಡ್
  • ಫ್ರಾನ್ಸ್
  • ಜರ್ಮನಿ
  • ಹಾಂಗ್‌ಕಾಂಗ್
  • ಐಸ್‌ಲ್ಯಾಂಡ್
  • ಭಾರತ
  • ಇಂಡೋನೇಷ್ಯಾ
  • ಇರಾನ್
  • ಇರಾಕ್
  • ಐರ್‌ಲ್ಯಾಂಡ್
  • ಇಟಲಿ
  • ಜಪಾನ್
  • ಜೋರ್ಡಾನ್
  • ಕಝಖಸ್ತಾನ್
  • ಕೊರಿಯಾ
  • ಕುವೈತ್
  • ಲೆಬೆನಾನ್
  • ಮೆಕ್ಸಿಕೊ
  • ಮೊರಾಕ್ಕೋ
  • ನ್ಯೂಜಿಲ್ಯಾಂಡ್
  • ನಾರ್ವೆ
  • ಓಮನ್
  • ಫಿಲಿಫೈನ್ಸ್
  • ಪೋಲ್ಯಾಂಡ್
  • ಪೋರ್ಚುಗಲ್
  • ರಷ್ಯಾ
  • ಸೌದಿ ಅರೇಬಿಯಾ
  • ಸ್ಪೇನ್
  • ಸ್ವೀಡನ್
  • ಸ್ವಿಟ್ಜರ್‌ಲ್ಯಾಂಡ್
  • ಥೈವಾನ್
  • ಥಾಯ್ಲೆಂಡ್
  • ದಿ ನೆದರ್‌ಲ್ಯಾಂಡ್ಸ್
  • ತುರ್ಕಿಯೆ
  • ಉಕ್ರೇನ್
  • ಯುನೈಟೆಡ್ ಅರಬ್ ಎಮಿರೇಟ್ಸ್
  • ಯುನೈಟೆಡ್ ಕಿಂಗ್‌ಡಮ್
  • ಯುನೈಟೆಡ್ ಸ್ಟೇಟ್ಸ್
  • ವಿಯೆಟ್ನಾಂ
  • ಯೆಮನ್‌
ಪಾಲುದಾರ ವ್ಯವಸ್ಥಾಪಕರಿಗಾಗಿ ಏನಾದರೂ ವೆಚ್ಚವಾಗುತ್ತದೆಯೇ?
ಇಲ್ಲ, ಪಾಲುದಾರ ವ್ಯವಸ್ಥಾಪಕರನ್ನು ಹೊಂದಿರುವುದರಿಂದ ನಿಮಗೆ ಏನೂ ವೆಚ್ಚವಾಗುವುದಿಲ್ಲ.
ನಾನು MCN (ಮಲ್ಟಿ-ಚಾನೆಲ್ ನೆಟ್‌ವರ್ಕ್) ನೊಂದಿಗೆ ಅಫಿಲಿಯೇಟ್ ಆಗಿದ್ದೇನೆ, ನಾನು ಈಗಲೂ ಸೈನ್ ಅಪ್ ಮಾಡಬಹುದೇ?
ಹೌದು, MCN ಜೊತೆ ಅಫಿಲಿಯೇಟ್ ಆಗಿರುವ ರಚನೆಕಾರರೂ ಸಹ ಪಾಲುದಾರ ವ್ಯವಸ್ಥಾಪಕರನ್ನು ನಿಯೋಜಿಸಬಹುದು.
ನಾನು ಅರ್ಹತೆ ಹೊಂದಿಲ್ಲ ಎಂಬುದನ್ನು ಕಂಡುಕೊಂಡಿದ್ದೇನೆ. ನಾನೇನು ಮಾಡಬೇಕು?
ನಿಮ್ಮ ಚಾನಲ್ ಅನ್ನು ಅಭಿವೃದ್ಧಿಪಡಿಸುವುದಕ್ಕಾಗಿ ನೀವು ಬಳಸಬಹುದಾದ ಇನ್ನೂ ಅನೇಕ ಸಂಪನ್ಮೂಲಗಳಿವೆ: ಕಾರ್ಯಾಗಾರಗಳು, YouTube ಪಾಪ್-ಅಪ್ ಸ್ಪೇಸ್‍ಗಳು, ಮತ್ತು ಇನ್ನಷ್ಟು! ನಿಮಗಾಗಿ ಏನೆಲ್ಲಾ ಲಭ್ಯವಿವೆ ಎಂಬುದನ್ನು ನೋಡಲು ಸೃಜನಶೀಲತೆಯ ಕಣಜ ಅನ್ನು ಎಕ್ಸ್‌ಪ್ಲೋರ್ ಮಾಡಲು ಖಚಿತವಾಗಿರಿ.
ನಾನು ಸ್ವೀಕರಿಸುತ್ತಿರುವ ಇಮೇಲ್‌ಗಳು ನಿಜವಾಗಿಯೂ YouTube ನಿಂದ ಬಂದಿವೆ ಎಂದು ಹೇಗೆ ತಿಳಿಯುವುದು?
ನಿಮ್ಮ ಚಾನಲ್‌ನ ಕುರಿತು ನಿಮ್ಮನ್ನು ಸಂಪರ್ಕಿಸುವ ಬಹಳಷ್ಟು ಜನರು ನಿಮ್ಮನ್ನು ತಲುಪಬಹುದು ಎಂದು ನಮಗೆ ತಿಳಿದಿದೆ. ಇಮೇಲ್ ನಿಜವಾಗಿಯೂ YouTube ತಂಡದಿಂದಲೇ ಬಂದಿದೆಯೇ ಎಂಬುದನ್ನು ಪರಿಶೀಲಿಸಲು ನೀವು ಹೀಗೆ ಮಾಡಬಹುದು:
  • ಇಮೇಲ್ ಡೊಮೇನ್ ಪರಿಶೀಲಿಸಿ: ಇಮೇಲ್ @google.com, @youtube.com, ಅಥವಾ @partnerships.withyoutube.com ವಿಳಾಸದಿಂದ ಬಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. YouTube ಅಥವಾ Google ನಿಂದ ಬಂದಿದೆ ಎಂಬುದಾಗಿ ಪ್ರತಿಪಾದಿಸುವ, ಇತರ ಯಾವುದೇ ಡೊಮೇನ್‌ಗಳಿಂದ ಬರುವ ಇಮೇಲ್‌ಗಳು ನಕಲಿಯಾಗಿರುವ ಸಾಧ್ಯತೆಯಿದೆ.
  • ಲಿಂಕ್‌ಗಳನ್ನು ಪರಿಶೀಲಿಸಿ: ಇಮೇಲ್‌ಗಳಲ್ಲಿ ಒಳಗೊಂಡಿರುವ ಲಿಂಕ್‌ಗಳು ಅಥವಾ ಫಾರ್ಮ್‌ಗಳ URL, youtube.com, withgoogle.com, withyoutube.com, youtube.secure.force.com, ಅಥವಾ youtube.force.com ಎಂಬುದಾಗಿ ಕೊನೆಗೂಳ್ಳುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9645146444406183388
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false