ವೀಡಿಯೊಗಳನ್ನು ಆಟೋಪ್ಲೇ ಮಾಡಿ

YouTube ನಲ್ಲಿ ಆಟೋಪ್ಲೇ ಫೀಚರ್, ಮುಂದೆ ಏನನ್ನು ವೀಕ್ಷಿಸಬೇಕು ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಆಟೋಪ್ಲೇ ಆನ್ ಆಗಿದ್ದಾಗ, ಒಂದು ವೀಡಿಯೊ ಮುಗಿದಾಗ, ಮತ್ತೊಂದು ಸಂಬಂಧಿತ ವೀಡಿಯೊ ಸ್ವಯಂಚಾಲಿತವಾಗಿ ಪ್ಲೇ ಆಗುತ್ತದೆ.

How to Autoplay Videos on YouTube

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ನೆನಪಿನಲ್ಲಿಡಿ:

  • YouTube ನಲ್ಲಿನ 13–17 ವರ್ಷದ ಬಳಕೆದಾರರಿಗಾಗಿ, ಆಟೋಪ್ಲೇ ಅನ್ನು ಡೀಫಾಲ್ಟ್ ಆಗಿ ಆಫ್ ಮಾಡಲಾಗಿರುತ್ತದೆ. ನಿಮಗೆ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ, ಆಟೋಪ್ಲೇ ಅನ್ನು ಡೀಫಾಲ್ಟ್ ಆಗಿ ಆನ್ ಮಾಡಲಾಗುತ್ತದೆ.
  • ನೀವು ಮೇಲ್ವಿಚಾರಣೆ ಮಾಡಲಾದ ಖಾತೆಯನ್ನು ಬಳಸುತ್ತಿದ್ದರೆ, ನಿಮ್ಮ ಪೋಷಕರು ನಿಮಗಾಗಿ ಆಟೋಪ್ಲೇ ಅನ್ನು ಆಫ್ ಮಾಡಿದ್ದರೆ, ಆಟೋಪ್ಲೇ ಅನ್ನು ಆನ್/ಆಫ್ ಮಾಡುವ ಆಯ್ಕೆ ನಿಮಗಿಲ್ಲದೇ ಇರಬಹುದು. ಮೇಲ್ವಿಚಾರಣೆ ಮಾಡಲಾದ ಖಾತೆಗಳಿಗಾಗಿ ಪೋಷಕರ ನಿಯಂತ್ರಣಗಳ ಕುರಿತು ಇನ್ನಷ್ಟು ತಿಳಿಯಿರಿ.
  • ನೀವು ವಿವಿಧ ಸಾಧನಗಳಿಗಾಗಿ ವಿವಿಧ ಆಟೋಪ್ಲೇ ಸೆಟ್ಟಿಂಗ್‌ಗಳನ್ನು ಹೊಂದಿರಬಹುದು. ಉದಾಹರಣೆಗೆ, ನಿಮ್ಮ ಮೊಬೈಲ್ ಸಾಧನದಲ್ಲಿರುವ YouTube ಆ್ಯಪ್‌ನಲ್ಲಿ ನೀವು ಆಟೋಪ್ಲೇ ಅನ್ನು "ಆನ್" ಎಂದು ಸೆಟ್ ಮಾಡಬಹುದು, ಆದರೆ ನಿಮ್ಮ ಕಂಪ್ಯೂಟರ್‌ನಲ್ಲಿ YouTube ವೀಕ್ಷಿಸುವಾಗ ಅದನ್ನು "ಆಫ್" ಎಂದು ಸೆಟ್ ಮಾಡಬಹುದು.
  • ನೀವು ಮೊಬೈಲ್ ನೆಟ್‌ವರ್ಕ್‌ಗೆ ಕನೆಕ್ಟ್ ಆಗಿರುವಾಗ, 30 ನಿಮಿಷಗಳ ಕಾಲ ನಿಷ್ಕ್ರಿಯರಾಗಿದ್ದರೆ, ಆಟೋಪ್ಲೇ ಸ್ವಯಂಚಾಲಿತವಾಗಿ ಸ್ಥಗಿತವಾಗುತ್ತದೆ. ನೀವು ವೈ-ಫೈ ನೆಟ್‌ವರ್ಕ್‌ನಲ್ಲಿದ್ದರೆ, 4 ಗಂಟೆಗಳ ನಂತರ ಆಟೋಪ್ಲೇ ಸ್ವಯಂಚಾಲಿತವಾಗಿ ಸ್ಥಗಿತವಾಗುತ್ತದೆ.

ನಿಮ್ಮ ಮೊಬೈಲ್ ಸಾಧನ ಅಥವಾ ಟ್ಯಾಬ್ಲೆಟ್‌ನಲ್ಲಿ ಆಟೋಪ್ಲೇ ಮಾಡಿ

ವೀಡಿಯೊ ಕೊನೆಯಲ್ಲಿ, ಮುಂದೆ ಏನು ಪ್ಲೇ ಆಗಲಿದೆ ಎಂಬುದನ್ನು ವೀಡಿಯೊ ಪ್ಲೇಯರ್ ತೋರಿಸುತ್ತದೆ. ನೀವು ವೀಡಿಯೊ ಪ್ಲೇಯರ್‌ನಿಂದಾಚೆಗೆ ಸ್ಕ್ರಾಲ್ ಮಾಡಿದರೆ ಅಥವಾ ಕಾಮೆಂಟ್ ಅಥವಾ ಹುಡುಕಾಟದ ಹಾಗೆ ಏನನ್ನಾದರೂ ಟೈಪ್ ಮಾಡಿದರೆ, ಮುಂದಿನ ವೀಡಿಯೊ ಸ್ವಯಂಚಾಲಿತವಾಗಿ ಪ್ಲೇ ಆಗುವುದಿಲ್ಲ.

ವೀಡಿಯೊದಲ್ಲಿ ಆಟೋಪ್ಲೇಯನ್ನು ಆನ್ ಅಥವಾ ಆಫ್ ಮಾಡಿ

  1. ಯಾವುದೇ ವೀಡಿಯೊದ ವೀಕ್ಷಣೆ ಸ್ಕ್ರೀನ್‌ಗೆ ಹೋಗಿ.
  2. ವೀಡಿಯೊ ಪ್ಲೇಯರ್‌ನ ಮೇಲ್ಭಾಗದಲ್ಲಿ, ಆಟೋಪ್ಲೇಯನ್ನು ಆನ್ ಅಥವಾ ಆಫ್ ಎಂದು ಸೆಟ್ ಮಾಡಲು, ಆಟೋಪ್ಲೇ ಸ್ವಿಚ್ ಅನ್ನು ಟ್ಯಾಪ್ ಮಾಡಿ.

 ನಿಮ್ಮ ಸೆಟ್ಟಿಂಗ್‌ಗಳಲ್ಲಿ ಆಟೋಪ್ಲೇಯನ್ನು ಆನ್ ಅಥವಾ ಆಫ್ ಮಾಡಿ

  1. ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
  2. ಸೆಟ್ಟಿಂಗ್‌ಗಳು ಎಂಬುದನ್ನು ಟ್ಯಾಪ್ ಮಾಡಿ.
  3. ಆಟೋಪ್ಲೇ ಎಂಬುದನ್ನು ಟ್ಯಾಪ್ ಮಾಡಿ.
  4. ಆಟೋಪ್ಲೇಯನ್ನು ಆನ್ ಅಥವಾ ಆಫ್‌ಗೆ ಸ್ವಿಚ್ ಮಾಡಿ.
ಸಲಹೆ: ಆಟೋಪ್ಲೇ ಆನ್ ಆಗಿದ್ದು, ಮುಂದಿನ ವೀಡಿಯೊ ಪ್ಲೇ ಆಗುವುದನ್ನು ನಿಲ್ಲಿಸಲು ಬಯಸುತ್ತೀರಿ ಎಂದಾದರೆ, ವೀಡಿಯೊದ ಕೊನೆಯಲ್ಲಿ ರದ್ದುಗೊಳಿಸಿ ಟ್ಯಾಪ್ ಮಾಡಿ.

ನಿಮ್ಮ ಕಂಪ್ಯೂಟರ್‌ನಲ್ಲಿ ಆಟೋಪ್ಲೇ ಮಾಡಿ

ವೀಡಿಯೊ ಕೊನೆಯಲ್ಲಿ, ಮುಂದೆ ಏನು ಪ್ಲೇ ಆಗಲಿದೆ ಎಂಬುದನ್ನು ವೀಡಿಯೊ ಪ್ಲೇಯರ್ ತೋರಿಸುತ್ತದೆ. ನೀವು ವೀಡಿಯೊ ಪ್ಲೇಯರ್‌ನಿಂದಾಚೆಗೆ ಸ್ಕ್ರಾಲ್ ಮಾಡಿದರೆ ಅಥವಾ ಕಾಮೆಂಟ್ ಅಥವಾ ಹುಡುಕಾಟದ ಹಾಗೆ ಏನನ್ನಾದರೂ ಟೈಪ್ ಮಾಡಿದರೆ, ಮುಂದಿನ ವೀಡಿಯೊ ಸ್ವಯಂಚಾಲಿತವಾಗಿ ಪ್ಲೇ ಆಗುವುದಿಲ್ಲ.

ಆಟೋಪ್ಲೇ ಅನ್ನು ಆನ್ ಅಥವಾ ಆಫ್ ಮಾಡಿ

  1. ಯಾವುದೇ ವೀಡಿಯೊದ ವೀಕ್ಷಣೆ ಸ್ಕ್ರೀನ್‌ಗೆ ಹೋಗಿ.
  2. ವೀಡಿಯೊ ಪ್ಲೇಯರ್‌ನ ಕೆಳಭಾಗದಲ್ಲಿ, ಆಟೋಪ್ಲೇ ಅನ್ನು ಆನ್ ಅಥವಾ ಆಫ್ ಮಾಡಲು ಆಟೋಪ್ಲೇ ಸ್ವಿಚ್ ಅನ್ನು ಕ್ಲಿಕ್ ಮಾಡಿ.
ಸಲಹೆ: ಆಟೋಪ್ಲೇ ಆನ್ ಆಗಿದ್ದು, ಮುಂದಿನ ವೀಡಿಯೊ ಪ್ಲೇ ಆಗುವುದನ್ನು ನಿಲ್ಲಿಸಲು ಬಯಸುತ್ತೀರಿ ಎಂದಾದರೆ, ವೀಡಿಯೊದ ಕೊನೆಯಲ್ಲಿ ರದ್ದುಗೊಳಿಸಿ ಟ್ಯಾಪ್ ಮಾಡಿ.

ನಿಮ್ಮ ಸ್ಮಾರ್ಟ್ ಟಿವಿ ಅಥವಾ ಗೇಮ್ ಕನ್ಸೋಲ್‌ನಲ್ಲಿ ಆಟೋಪ್ಲೇ ಮಾಡಿ

ನಿಮ್ಮ ಟಿವಿಯಲ್ಲಿನ YouTube ಆ್ಯಪ್‌ನಲ್ಲಿ ಆಟೋಪ್ಲೇ ಮಾಡಿ

ನಿಮ್ಮ ಟಿವಿಯಲ್ಲಿನ YouTube ಆ್ಯಪ್‌ನಲ್ಲಿ ಆಟೋಪ್ಲೇ ಸೆಟ್ಟಿಂಗ್‌ಗಳನ್ನು ಬದಲಾಯಿಸಲು:

  1. ನಿಮ್ಮ ಟಿವಿಯಲ್ಲಿ YouTube ಆ್ಯಪ್ ಅನ್ನು ತೆರೆಯಿರಿ.
  2. ಸೆಟ್ಟಿಂಗ್‌ಗಳು ಎಂಬಲ್ಲಿಗೆ ಹೋಗಿ.
  3. ಆಟೋಪ್ಲೇ ಎಂಬಲ್ಲಿಗೆ ಸ್ಕ್ರಾಲ್ ಮಾಡಿ.
  4. ಆಟೋಪ್ಲೇ ಅನ್ನು ಆನ್ ಅಥವಾಆಫ್ ಮಾಡಲು ಆಯ್ಕೆಗಳನ್ನು ಆರಿಸಿ.

ನಿಮ್ಮ ಟಿವಿಗೆ ಬಿತ್ತರಿಸುವಾಗ ಆಟೋಪ್ಲೇ ಮಾಡಿ

ನಿಮ್ಮ ಟಿವಿಯನ್ನು ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ಗೆ ಕನೆಕ್ಟ್ ಮಾಡಿದ್ದೀರಿ ಎಂದಾದರೆ, ಆಟೋಪ್ಲೇ ಮಾಡಲು ನಿಮ್ಮ ಸಾಧನವನ್ನು ನೀವು ಬಳಸಬಹುದು.

  1. ನಿಮ್ಮ ಮೊಬೈಲ್ ಸಾಧನವನ್ನು ನಿಮ್ಮ ಟಿವಿ ಸಾಧನಕ್ಕೆ ಕನೆಕ್ಟ್ ಮಾಡಿ ಮತ್ತು ಪ್ಲೇ ಮಾಡಬೇಕಾದ ವೀಡಿಯೊವನ್ನು ಆಯ್ಕೆಮಾಡಿ.
  2. ನಿಮ್ಮ ಸರದಿಯನ್ನು ವಿಸ್ತರಿಸಲು ಮತ್ತು ನಿಮ್ಮ ಅಟೋಪ್ಲೇ ಸೆಟ್ಟಿಂಗ್‌ಗಳನ್ನು ವೀಕ್ಷಿಸಲು, ಸ್ಕ್ರೀನ್‌ನ ಕೆಳಭಾಗದಲ್ಲಿರುವ ಕಂಟ್ರೋಲ್ ಬಾರ್ ಅನ್ನು ಟ್ಯಾಪ್ ಮಾಡಿ.
  3. ಆಟೋಪ್ಲೇ ಆಫ್ ಮಾಡಲು ಸ್ವಿಚ್ ಬಳಸಿ.

Autoplay switch will appear under the selected video

ನಿಮ್ಮ Google Assistant ಸ್ಮಾರ್ಟ್ ಡಿಸ್‌ಪ್ಲೇಗಳಲ್ಲಿ ಆಟೋಪ್ಲೇ ಮಾಡಿ

ಆಟೋಪ್ಲೇ ಅನ್ನು ಆನ್ ಅಥವಾ ಆಫ್ ಮಾಡಿ

ನೀವು ಸ್ಮಾರ್ಟ್ ಡಿಸ್‌ಪ್ಲೇಯಲ್ಲಿ YouTube ಅನ್ನು ಬಳಸುತ್ತಿದ್ದರೆ ಮತ್ತು ಆಟೋಪ್ಲೇ ಅನ್ನು ಆನ್ ಅಥವಾ ಆಫ್ ಮಾಡಲು ಬಯಸುತ್ತಿದ್ದರೆ:

  1. ನಿಮ್ಮ ಮೊಬೈಲ್ ಸಾಧನದಲ್ಲಿ Home ಆ್ಯಪ್ ಅನ್ನು ತೆರೆಯಿರಿ.
  2. ನೀವು ಮಾರ್ಪಡಿಸಲು ಬಯಸುವ ಸ್ಮಾರ್ಟ್ ಡಿಸ್‌ಪ್ಲೇಯನ್ನು ಟ್ಯಾಪ್ ಮಾಡಿ.
  3. ಸೆಟ್ಟಿಂಗ್‌ಗಳು ಟ್ಯಾಪ್ ಮಾಡಿ.
  4. ನೋಟಿಫಿಕೇಶನ್‌ಗಳು ಮತ್ತು ಡಿಜಿಟಲ್ ಯೋಗಕ್ಷೇಮ ಟ್ಯಾಪ್ ಮಾಡಿ.
  5. YouTube ಸೆಟ್ಟಿಂಗ್‍ಗಳು ಟ್ಯಾಪ್ ಮಾಡಿ.
  6. ನಿಮ್ಮ ಸ್ಮಾರ್ಟ್ ಡಿಸ್‌ಪ್ಲೇಗಾಗಿ ನೀವು ಆಟೋಪ್ಲೇ ಅನ್ನು ಎರಡು ವಿಧಗಳಲ್ಲಿ ನಿಯಂತ್ರಿಸಬಹುದು:
    • ನಿಮ್ಮ ಧ್ವನಿಯು ಹೊಂದಾಣಿಕೆಯಾಗಿದ್ದರೆ, ಆಟೋಪ್ಲೇ ಅನ್ನು ನಿಮಗಾಗಿ ಆನ್ ಅಥವಾ ಆಫ್ ಮಾಡಬಹುದು, ಮತ್ತು
    • ಆಟೋಪ್ಲೇ ಅನ್ನು ಇತರ ಎಲ್ಲಾ ಬಳಕೆದಾರರಿಗಾಗಿ ಆನ್ ಅಥವಾ ಆಫ್ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6830996732737898528
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false