ನಿಮ್ಮ Premium ಸದಸ್ಯತ್ವವನ್ನು ರದ್ದುಪಡಿಸಿ

YouTube Premium ಹಾಗೂ YouTube Music Premium ಸಬ್‌ಸ್ಕ್ರೈಬರ್‌ಗಳು ತಮ್ಮ ಪಾವತಿಸಿದ ಸದಸ್ಯತ್ವದ ಯಾವುದೇ ಸಮಯದಲ್ಲಿ ರದ್ದುಗೊಳಿಸಬಹುದು, ವಿರಾಮಗೊಳಿಸಬಹುದು ಅಥವಾ ಪುನರಾರಂಭಿಸಬಹುದು. ನೀವು ವಾರ್ಷಿಕ ಪ್ಲಾನ್ ಅಥವಾ ಕುಟುಂಬ ಯೋಜನೆಗೂ ಬದಲಾಯಿಸಿಕೊಳ್ಳಬಹುದು.

ನಿಮ್ಮ ಪಾವತಿಸಿದ ಸದಸ್ಯತ್ವವನ್ನು ವೀಕ್ಷಿಸಲು ಹಾಗೂ ನಿರ್ವಹಿಸಲು ಕೆಳಗೆ ಬಟನ್ ಅನ್ನು ಒತ್ತಿ. ನಂತರ, ನಿಮ್ಮ YouTube Premium ಅಥವಾ YouTube Music Premium ಸದಸ್ಯತ್ವವನ್ನು ರದ್ದುಗೊಳಿಸಲು ಈ ಲೇಖನದಲ್ಲಿರುವ ಹಂತಗಳನ್ನು ಅನುಸರಿಸಿ.

ನಿಮ್ಮ iPhone ಅಥವಾ iPad ಮೂಲಕ ನೀವು ಖರೀದಿ ಮಾಡಿದ್ದರೆ, ಅಥವಾ Apple ಮೂಲಕ YouTube ಪಾವತಿಸಿದ ಸದಸ್ಯತ್ವಕ್ಕೆ ಸೈನ್ ಅಪ್ ಮಾಡಿದ್ದರೆ, ಮರುಪಾವತಿಯನ್ನು ವಿನಂತಿಸಲು, ನೀವು Apple ಬೆಂಬಲವನ್ನು ಸಂಪರ್ಕಿಸಬೇಕಾಗುತ್ತದೆ. Apple ನ ಮರುಪಾವತಿ ನೀತಿಯು ಅನ್ವಯಿಸುತ್ತದೆ.

ಟ್ರಯಲ್‌ನ ಸಂದರ್ಭದಲ್ಲಿ ನಿಮ್ಮ ಸದಸ್ಯತ್ವವನ್ನು ನೀವು ರದ್ದುಗೊಳಿಸಬಹುದು. ನೀವು ರದ್ದುಗೊಳಿಸಲು ಆಯ್ಕೆ ಮಾಡಿದರೆ, ಟ್ರಯಲ್ ಮುಗಿದಾಗ ನಿಮ್ಮ ಟ್ರಯಲ್ ಸದಸ್ಯತ್ವವು ಪಾವತಿ ಸಬ್‌ಸ್ಕ್ರಿಪ್ಶನ್‌ಗೆ ಪರಿವರ್ತನೆಯಾಗುವುದಿಲ್ಲ. ಟ್ರಯಲ್ ಅವಧಿ ಮುಕ್ತಾಯವಾಗುವವರೆಗೆ ನೀವು ಆ್ಯಕ್ಸೆಸ್ ಹೊಂದಿರುತ್ತೀರಿ.

ನಿಮ್ಮ ಪಾವತಿಸಿದ ಸದಸ್ಯತ್ವವನ್ನು ರದ್ದುಗೊಳಿಸಿ.

  1. youtube.com/paid_memberships ಗೆ ಹೋಗಿ.
  2. ಸದಸ್ಯತ್ವವನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.​
  3. ನಿಷ್ಕ್ರಿಯಗೊಳಿಸಿ ಎಂಬುದನ್ನು ಕ್ಲಿಕ್ ಮಾಡಿ.
  4. ರದ್ದುಗೊಳಿಸಲು, ಮುಂದುವರಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. ರದ್ದುಗೊಳಿಸುತ್ತಿರುವುದಕ್ಕಾಗಿ ಕಾರಣವನ್ನು ಆಯ್ಕೆ ಮಾಡಿ ಮತ್ತು ನಂತರ ಮುಂದೆ ಎಂಬುದನ್ನು ಕ್ಲಿಕ್ ಮಾಡಿ.
  6. ಹೌದು, ರದ್ದುಗೊಳಿಸಿ ಎಂಬುದನ್ನು ಕ್ಲಿಕ್ ಮಾಡಿ.

ಈಗ ರದ್ದುಗೊಳಿಸಿ

ರದ್ದುಗೊಳಿಸುವಾಗ ಸಮಸ್ಯೆ ಎದುರಾಗುತ್ತಿದೆಯೇ?

ಈ ಕೆಳಗಿನವುಗಳಲ್ಲಿ ಯಾವುದಾದರೂ ನಿಮಗೆ ಅನ್ವಯಿಸುತ್ತದೆಯೇ ಎಂದು ನೋಡಿ:
  1. Apple ನಿಮಗೆ ಬಿಲ್ ಮಾಡುತ್ತಿದೆ. ನೀವು YouTube iOS ಆ್ಯಪ್‌ನಿಂದ ಸೇರಿಕೊಂಡಿದ್ದರೆ, ನಿಮ್ಮ Apple ಖಾತೆಯಿಂದ ನೀವು ನಿಮ್ಮ ಪಾವತಿಸಿದ ಸದಸ್ಯತ್ವವನ್ನು ರದ್ದುಗೊಳಿಸಬಹುದು.
  2. Google Play ನಿಮಗೆ ಬಿಲ್ ಮಾಡುತ್ತಿದೆ. ನಿಮ್ಮ YouTube ಪಾವತಿಸಿದ ಸದಸ್ಯತ್ವಕ್ಕೆ ನೀವು Google Play ಸಬ್‌ಸ್ಕ್ರಿಪ್ಶನ್ ಮೂಲಕ ಆ್ಯಕ್ಸೆಸ್ ಹೊಂದಿರುವಿರಾದರೆ, ನಿಮ್ಮGoogle Play ಖಾತೆಯ ಸೆಟ್ಟಿಂಗ್‌ಗಳಲ್ಲಿ ನೀವು ರದ್ದುಗೊಳಿಸಬಹುದು.
  3. ನೀವು ಈಗಾಗಲೇ ರದ್ದುಗೊಳಿಸಿದ್ದೀರಿ. youtube.com/paid_memberships ನಲ್ಲಿ ನಿಮ್ಮ ಖಾತೆಯ ಪಾವತಿಸಿದ ಸದಸ್ಯತ್ವ ವಿಭಾಗವನ್ನು ಚೆಕ್ ಮಾಡುವ ಮೂಲಕ ನೀವು ಖಚಿತಪಡಿಸಬಹುದು.
ಟಿಪ್ಪಣಿಗಳು:

ನೀವು YouTube ಪಾವತಿಸಿದ ಸದಸ್ಯರಾದಾಗ, ನೀವು ರದ್ದುಗೊಳಿಸುವವರೆಗೆ ಪ್ರತಿ ಹೊಸ ಬಿಲ್ಲಿಂಗ್ ಸೈಕಲ್‌ನ ಪ್ರಾರಂಭದಲ್ಲಿ ನಿಮಗೆ ಸದಸ್ಯತ್ವದ ದರವನ್ನು ಸ್ವಯಂಚಾಲಿತವಾಗಿ ವಿಧಿಸಲಾಗುತ್ತದೆ.
 

ನಿಮ್ಮ ಸದಸ್ಯತ್ವವನ್ನು ನೀವು ರದ್ದುಗೊಳಿಸಿದಾಗ, ನೀವು ಮತ್ತೊಮ್ಮೆ ಸಬ್‌ಸ್ಕ್ರೈಬ್ ಮಾಡದ ಹೊರತು ನಿಮಗೆ ಶುಲ್ಕ ವಿಧಿಸಲಾಗುವುದಿಲ್ಲ. ನಿಮ್ಮ YouTube ಪಾವತಿಸಿದ ಸದಸ್ಯತ್ವದ ಪ್ರಯೋಜನಗಳು ಬಿಲ್ಲಿಂಗ್ ಅವಧಿಯ ಮುಕ್ತಾಯದವರೆಗೆ ಮುಂದುವರಿಯುತ್ತವೆ.

Google Play Store ಮರುಪಾವತಿಗಳು

Pixel Pass ಸಬ್‌ಸ್ಕ್ರಿಪ್ಶನ್‌ನ ಮೂಲಕ ನೀವು YouTube Premium ಅನ್ನು ಸ್ವೀಕರಿಸಿದ್ದರೆ, ನಿಮ್ಮ ಖಾತೆಯನ್ನು ಹೇಗೆ ನಿರ್ವಹಿಸಬೇಕು ಎಂಬ ಕುರಿತು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಿ.
2022 ರಲ್ಲಿ, Android ಮೂಲಕ ಹೊಸ YouTube Premium ಹಾಗೂ Music Premium ಸಬ್‌ಸ್ಕ್ರೈಬರ್‌ಗಳಿಗೆ Google Play ಮೂಲಕ ಬಿಲ್ ಮಾಡಲಾಗುತ್ತದೆ. ಈ ಬದಲಾವಣೆಯು ಪ್ರಸ್ತುತ ಸಬ್‌ಸ್ಕ್ರೈಬರ್‌ಗಳ ಮೇಲೆ ಪ್ರಭಾವ ಬೀರುವುದಿಲ್ಲ. ಇತ್ತೀಚಿನ ಶುಲ್ಕಗಳನ್ನು ನೋಡಲು ಹಾಗೂ ನಿಮಗೆ ಹೇಗೆ ಬಿಲ್ ಮಾಡಲಾಗುತ್ತದೆ ಎಂದು ತಿಳಿಯಲು pay.google.com ಗೆ ಭೇಟಿ ನೀಡಬಹುದು. Google Play ಖರೀದಿಗಾಗಿ ಮರುಪಾವತಿಯನ್ನು ವಿನಂತಿಸಲು, ಇಲ್ಲಿ ಸ್ಥೂಲವಾಗಿ ವಿವರಿಸಲಾಗಿದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5536052226259855016
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false