ನಿಮ್ಮ ವೈಯಕ್ತಿಕ ಮಾಹಿತಿಯನ್ನು ಖಚಿತಪಡಿಸದಿರುವ ಕಾರಣ ಪಾವತಿಯನ್ನು ತಡೆಹಿಡಿಯಲಾಗಿದೆ

ನಾವು ಹಲವಾರು ಸಂದರ್ಭಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆಯುವುದಕ್ಕಾಗಿ ನಿಮ್ಮನ್ನು ಸಂಪರ್ಕಿಸಿರಬಹುದು. ನಿಮ್ಮ ಗುರುತನ್ನು ಖಚಿತಪಡಿಸುವ ನಿಟ್ಟಿನಲ್ಲಿ ಕೆಲವು ಮಾಹಿತಿಯನ್ನು ಸಲ್ಲಿಸುವ ಅಗತ್ಯವಿದೆ ಎಂಬುದಾಗಿ AdSense ಪಾವತಿಗಳ ತಂಡವು ನಿಮ್ಮನ್ನು ಕೇಳಿರುವುದು ಒಂದು ನಿದರ್ಶನವಾಗಿದೆ. ಇಂತಹ ಸಂದರ್ಭದಲ್ಲಿ, ನೀವು ಈ ಮಾಹಿತಿಯನ್ನು ಖಚಿತಪಡಿಸುವವರೆಗೆ ನಿಮ್ಮ AdSense ಖಾತೆಯ ಮೇಲೆ ತಾತ್ಕಾಲಿಕ ಪಾವತಿ ತಡೆಹಿಡಿಯುವಿಕೆ ಸ್ಥಿತಿಯನ್ನು ಹೇರಲಾಗುತ್ತದೆ.

ಇದರಿಂದ ನನಗೆ ಪರಿಣಾಮವಾಗಲಿದೆಯೇ ಎಂದು ತಿಳಿಯುವುದು ಹೇಗೆ?

ಈ ಪಾವತಿ ತಡೆಹಿಡಿಯುವಿಕೆಯಿಂದಾಗಿ ನಿಮ್ಮ ಮೇಲೆ ಪರಿಣಾಮ ಬೀರಿದ್ದರೆ:

  • ನಿಮ್ಮ AdSense ಖಾತೆಯ "ಪಾವತಿಗಳು > ಸೆಟ್ಟಿಂಗ್‌ಗಳು" ವಿಭಾಗದಲ್ಲಿ ನೀವು ತಿಳಿಸಿರುವ ಇಮೇಲ್ ವಿಳಾಸಕ್ಕೆ ನಾವು ಒಂದು ಇಮೇಲ್ ಸೂಚನೆಯನ್ನು ಕಳುಹಿಸುತ್ತೇವೆ. ಈ ಇಮೇಲ್ ಸೂಚನೆಯು ಪಾವತಿಗಳ ತಂಡದಿಂದ ಬಂದಿರುತ್ತದೆ ಮತ್ತು Google ಇಮೇಲ್ ಆಲಿಯಾಸ್‌ಗಳಿಂದ ಕಳುಹಿಸಲಾಗುತ್ತದೆ. ಈ ಇಮೇಲ್‌ನಲ್ಲಿ, ಕೆಲವು ವೈಯಕ್ತಿಕ ಮಾಹಿತಿಯನ್ನು ಒದಗಿಸುವಂತೆ ನಾವು ನಿಮ್ಮನ್ನು ಕೇಳುತ್ತೇವೆ.
  • ನಿಮ್ಮ AdSense ಖಾತೆಯಲ್ಲಿ ರೆಡ್ ಅಲರ್ಟ್ ನೋಟಿಫಿಕೇಶನ್ ಕಂಡುಬಂದರೆ, ಅದು ನಿಮ್ಮ ಖಾತೆಯ ಮೇಲೆ ಪಾವತಿ ತಡೆಹಿಡಿಯುವಿಕೆ ಸ್ಥಿತಿಯನ್ನು ಹೇರಲಾಗಿದೆ ಎಂದರ್ಥ.
  • ನಿಮ್ಮ "ವಹಿವಾಟುಗಳು" ಪುಟದಲ್ಲಿ, ನಿಮಗೆ ಹಣಪಾವತಿಸಲಾಗಿದೆ ಆದರೆ ನಿಮ್ಮ ಖಾತೆಯ ಮೇಲೆ ಪಾವತಿ ತಡೆಹಿಡಿಯುವಿಕೆ ಸ್ಥಿತಿಯನ್ನು ಹೇರಲಾಗಿದೆ ಎಂಬುದನ್ನು ನೀವು ನೋಡಬಹುದು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನನ್ನ ಮೇಲೆ ಪರಿಣಾಮ ಬೀರಿದರೆ ನಾನೇನು ಮಾಡಬೇಕು? ಪಾವತಿ ತಡೆಹಿಡಿಯುವಿಕೆ ಸ್ಥಿತಿಯಿಂದ ನಾನು ಹೊರಬರುವುದು ಹೇಗೆ?
Google ಇಮೇಲ್ ಆಲಿಯಾಸ್‌ಗಳ ಮೂಲಕ Google ಪಾವತಿಗಳು ತಂಡವು ಕಳುಹಿಸುವ ಇಮೇಲ್ ಸಂದೇಶವನ್ನು ನೀವು ಸ್ವೀಕರಿಸದಿದ್ದರೆ, ನೀವು ಏನೂ ಮಾಡಬೇಕಾಗಿಲ್ಲ. ನಿಮ್ಮ ಖಾತೆಯಲ್ಲಿ ಪಾವತಿ ತಡೆಹಿಡಿಯುವಿಕೆ ನೋಟಿಫಿಕೇಶನ್ ಕಂಡುಬಂದಿದ್ದು, Google ಪಾವತಿಗಳು ತಂಡದಿಂದ ಅದಕ್ಕೆ ಸಂಬಂಧಪಟ್ಟ ಯಾವುದೇ ಇಮೇಲ್ ಸೂಚನೆಗಳನ್ನು ನೀವು ಸ್ವೀಕರಿಸಿಲ್ಲದಿದ್ದರೆ, ನೋಟಿಫಿಕೇಶನ್‌ನಲ್ಲಿರುವ ಬಟನ್ ಅನ್ನು ಒತ್ತುವ ಮೂಲಕ ನಮ್ಮನ್ನು ಸಂಪರ್ಕಿಸಿ.

ಒಂದು ವೇಳೆ Google ಇಮೇಲ್ ಆಲಿಯಾಸ್‌ಗಳ ಮೂಲಕ Google ಪಾವತಿಗಳು ತಂಡವು ಕಳುಹಿಸುವ ಇಮೇಲ್ ಸೂಚನೆಯನ್ನು ನೀವು ಸ್ವೀಕರಿಸಿದ್ದು, ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸುವಂತೆ ಕೇಳಲಾಗಿದ್ದರೆ, ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಿ:

  1. ಇಮೇಲ್‌ಗೆ ನೇರವಾಗಿ ಪ್ರತ್ಯುತ್ತರಿಸಿ.
  2. ಎಲ್ಲಾ ಅಗತ್ಯ ಮಾಹಿತಿಯನ್ನು ಒದಗಿಸಿ ಅಥವಾ ಕೆಲವೊಮ್ಮೆ ನಿಮ್ಮ ದಾಖಲೆಗಳ ನಕಲು ಪ್ರತಿಗಳನ್ನು ಕೂಡ ಒದಗಿಸಬೇಕಾಗಬಹುದು.

ಅಗತ್ಯ ಮಾಹಿತಿಯ ಜೊತೆಗೆ 5 ವ್ಯವಹಾರದ ದಿನಗಳಲ್ಲಿ ಆ ಇಮೇಲ್‌ಗೆ ಪ್ರತ್ಯುತ್ತರಿಸಿ. ನೀವು ಈ ಮಾಹಿತಿಯನ್ನು ಒದಗಿಸುವವರೆಗೆ ಯಾವುದೇ ಪಾವತಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.

ನೀವು ನನ್ನ ಬಳಿ ಈ ಮಾಹಿತಿಯನ್ನು ಏಕೆ ಕೇಳುತ್ತಿದ್ದೀರಿ?
ಕೆಲವೊಮ್ಮೆ, AdSense ವಿತರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು Google ಬ್ಯಾಂಕ್ (ಅಥವಾ ಮಧ್ಯವರ್ತಿ ಬ್ಯಾಂಕ್) ವೈಯಕ್ತಿಕ ಮಾಹಿತಿಯನ್ನು ದೃಢೀಕರಿಸಬೇಕಾಗುತ್ತದೆ. ಪ್ರಕಾಶಕರಿಗೆ ಸಂಬಂಧಿಸಿದ ಮಾಹಿತಿಯನ್ನು ಅಂದರೆ, ಜನ್ಮ ದಿನಾಂಕ, ರಾಷ್ಟ್ರೀಯತೆ, ಇತ್ಯಾದಿ ಮಾಹಿತಿಯನ್ನು Google ಸಂಗ್ರಹಿಸುವುದಿಲ್ಲ. ಹೀಗಾಗಿ, ಬ್ಯಾಂಕ್ ಯಾವುದೇ ಪಾವತಿಯನ್ನು ಪ್ರಕ್ರಿಯೆಗೊಳಿಸುವ ಮೊದಲು ಈ ಮಾಹಿತಿಯನ್ನು ದೃಢೀಕರಿಸುವ ಅಗತ್ಯವಿದ್ದರೆ, ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.

ಈ ಪಾವತಿ ತಡೆಹಿಡಿಯುವಿಕೆಯಿಂದಾಗಿ ಎಲ್ಲಾ ಪ್ರಕಾಶಕರ ಮೇಲೂ ಪರಿಣಾಮ ಬೀರುವುದಿಲ್ಲ ಎಂಬುದನ್ನು ಗಮನದಲ್ಲಿಡಿ. ವಂಚನೆಯ ಪ್ರಮಾಣವು ಅಧಿಕವಾಗಿರುವ ದೇಶಗಳಲ್ಲಿ ಈ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.

ನೀವು ನನ್ನನ್ನು ಯಾವೆಲ್ಲಾ ಮಾಹಿತಿಯನ್ನು ಒದಗಿಸುವಂತೆ ಕೇಳುತ್ತಿದ್ದೀರಿ?
ಈ ಕೆಳಗಿನವುಗಳಲ್ಲಿ ಯಾವುದಾದರೂ ಅಥವಾ ಎಲ್ಲಾ ಮಾಹಿತಿಯನ್ನು ಖಚಿತಪಡಿಸುವಂತೆ ನಾವು ನಿಮ್ಮನ್ನು ಕೇಳಬಹುದು:
  • ನಿಮ್ಮ ಜನ್ಮ ದಿನಾಂಕ
  • ನೀವು ಜನಿಸಿದ ದೇಶ
  • ನಿಮ್ಮ ಖಾತೆಯಲ್ಲಿ ಪಟ್ಟಿ ಮಾಡಿರುವ ಹಣ ಪಡೆಯುವವರ ಪೂರ್ಣ ಹೆಸರು
  • ನಿಮ್ಮ ವಿಳಾಸ
  • ನಿಮ್ಮ ರಾಷ್ಟ್ರೀಯತೆ
  • ನಿಮ್ಮ ಪಾಸ್‌ಪೋರ್ಟ್ ಸಂಖ್ಯೆ
  • ನಿಮ್ಮ ರಾಷ್ಟ್ರೀಯ ಗುರುತಿನ ಸಂಖ್ಯೆ

ಈ ಕೆಳಗಿನವುಗಳಲ್ಲಿ ಯಾವುದಾದರೂ ಅಥವಾ ಎಲ್ಲಾ ದಾಖಲೆಗಳ ಪ್ರತಿಗಳನ್ನು ಒದಗಿಸುವಂತೆ ನಾವು ನಿಮ್ಮನ್ನು ಕೇಳಬಹುದು:

  • ನಿಮ್ಮ ಪಾಸ್‌ಪೋರ್ಟ್ ಅಥವಾ ಇತರ ಸರ್ಕಾರ ಒದಗಿಸಿರುವ ಐಡಿ
  • ವಿಳಾಸದ ಪುರಾವೆ (ಉದಾ, ಯುಟಿಲಿಟಿ ಬಿಲ್, ಬ್ಯಾಂಕ್ ಸ್ಟೇಟ್‌ಮೆಂಟ್)
ನಾನು ನನ್ನ ವೈಯಕ್ತಿಕ ಮಾಹಿತಿಯನ್ನು ಒದಗಿಸಿದ ನಂತರ ಏನಾಗುತ್ತದೆ?
ನೀವು ಅಗತ್ಯ ಮಾಹಿತಿಯನ್ನು ಒದಗಿಸಿ, ಆ ಮಾಹಿತಿಯನ್ನು ದೃಢೀಕರಿಸಿದ ಬಳಿಕ, ಮಾಹಿತಿಯನ್ನು ಕೇಳಿದ ಬ್ಯಾಂಕ್ ತನ್ನ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ ಮತ್ತು ನಿಮ್ಮ ಖಾತೆಯ ಮೇಲೆ ಹೇರಲಾಗಿರುವ ಪಾವತಿ ತಡೆಹಿಡಿಯುವಿಕೆ ಸ್ಥಿತಿಯನ್ನು ತೆಗೆದುಹಾಕುತ್ತದೆ.
ನನ್ನ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆಯೇ?
ದಯವಿಟ್ಟು ಗಮನಿಸಿ, ನೀವು ನಮಗೆ ಸಲ್ಲಿಸುವ ಮಾಹಿತಿಯನ್ನು ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಥರ್ಡ್ ಪಾರ್ಟಿ (ನಮ್ಮ ಬ್ಯಾಂಕ್ ಅಥವಾ ಮಧ್ಯವರ್ತಿ ಬ್ಯಾಂಕ್) ಜೊತೆಗೆ ಹಂಚಿಕೊಳ್ಳಬಹುದು. ಅಗತ್ಯ ಮಾಹಿತಿಯ ಸಮೇತವಾಗಿ ನಮ್ಮ ಇಮೇಲ್‌ಗೆ ಪ್ರತ್ಯುತ್ತರಿಸುವ ಮೂಲಕ, ಈ ಮಾಹಿತಿಯನ್ನು ಥರ್ಡ್ ಪಾರ್ಟಿ (ನಮ್ಮ ಬ್ಯಾಂಕ್ ಅಥವಾ ಮಧ್ಯವರ್ತಿ ಬ್ಯಾಂಕ್) ಜೊತೆಗೆ ಹಂಚಿಕೊಳ್ಳಬಹುದು ಎಂಬುದನ್ನು ನೀವು ಅಂಗೀಕರಿಸುತ್ತೀರಿ ಮತ್ತು ಸಮ್ಮತಿಸುತ್ತೀರಿ. ನಮ್ಮ ಗೌಪ್ಯತಾ ನೀತಿಗಳ ಕುರಿತು ಇನ್ನಷ್ಟು ತಿಳಿಯಲು ಬಯಸಿದರೆ, Google ಗೌಪ್ಯತಾ ನೀತಿಯನ್ನು ನೋಡಿ.
ನೆನಪಿಡಿ:
  • ನಮ್ಮ ಇಮೇಲ್ ಸೂಚನೆಗಳು ಯಾವಾಗಲೂ ಅಧಿಕೃತ Google ಇಮೇಲ್ ಆಲಿಯಾಸ್‌ಗಳಿಂದಲೇ ಬರುತ್ತವೆ. ಉದಾಹರಣೆಗೆ, account-compliance@google.com. paymentsgoogle@gmail.com ರೀತಿಯ ಇಮೇಲ್ ವಿಳಾಸಗಳ ಮೂಲಕ ನಾವು ಎಂದಿಗೂ ಇಮೇಲ್ ಸೂಚನೆಯನ್ನು ಕಳುಹಿಸುವುದಿಲ್ಲ.
  • ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನಾವು ಎಂದಿಗೂ ಕೇಳುವುದಿಲ್ಲ, ಆದ್ದರಿಂದ ಹೀಗೆ ಕೇಳಬಹುದಾದ ಯಾವುದೇ ವಂಚನಾತ್ಮಕ ಇಮೇಲ್‌ಗಳ ಬಗ್ಗೆ ಜಾಗರೂಕರಾಗಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13802209192559254640
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false