ಎಂಬೆಡ್ ಮಾಡುವಿಕೆಯನ್ನು ನಿರ್ಬಂಧಿಸಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ಕಂಟೆಂಟ್ ಮ್ಯಾನೇಜರ್ ಬಳಕೆದಾರರು YouTube ವೀಡಿಯೊಗಳನ್ನು ಎಂಬೆಡ್ ಮಾಡುವ ಮೂಲಕ, ಅವುಗಳನ್ನು ತಮ್ಮ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಿಗೆ ಡೀಫಾಲ್ಟ್ ಆಗಿ ಸೇರಿಸಬಹುದು. ಯಾವ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳನ್ನು ನಿರ್ಬಂಧಿಸಬೇಕು ಅಥವಾ ಅನುಮತಿಸಬೇಕು ಎಂಬುದನ್ನು ನಿರ್ದಿಷ್ಟಪಡಿಸುವ ಮೂಲಕ ನಿಮ್ಮ ವೀಡಿಯೊಗಳು ಎಲ್ಲಿ ಎಂಬೆಡ್ ಆಗುತ್ತವೆ ಎಂಬುದನ್ನು ನೀವು ನಿಯಂತ್ರಿಸಬಹುದು. ನಿಮ್ಮ ಮಾಲೀಕತ್ವದ ವೀಡಿಯೊಗಳಿಗೆ (ಪರವಾನಗಿ ಪಡೆದ ಕಂಟೆಂಟ್) ಮತ್ತು ನೀವು ಕ್ಲೈಮ್ ಮಾಡಿದ ವೀಡಿಯೊಗಳಿಗೆ (ಬಳಕೆದಾರರು ಅಪ್‌ಲೋಡ್ ಮಾಡಿದ ಕಂಟೆಂಟ್) ಈ ನಿಯಮಗಳನ್ನು ಅನ್ವಯಿಸಬಹುದು.

ಗಮನಿಸಿ: ಎಂಬೆಡ್ ಮಾಡುವಿಕೆ ನಿರ್ಬಂಧನೆಗಳನ್ನು iOS ಆ್ಯಪ್‌ಗಳಿಗೆ ಅನ್ವಯಿಸಲು ಸಾಧ್ಯವಿಲ್ಲ.

ವೆಬ್‌ಸೈಟ್‌ಗಳಲ್ಲಿ ಎಂಬೆಡ್ ಮಾಡುವುದನ್ನು ನಿರ್ಬಂಧಿಸಿ

  1. Studio ಕಂಟೆಂಟ್ ಮ್ಯಾನೇಜರ್ಗೆ ಸೈನ್‌ ಇನ್‌ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಸೆಟ್ಟಿಂಗ್‌ಗಳು ಆಯ್ಕೆಮಾಡಿ.
  3. ಅವಲೋಕನ ವಿಭಾಗದಲ್ಲಿ, ಡೊಮೇನ್‌ಗಳಲ್ಲಿ ಎಂಬೆಡ್ ಮಾಡುವುದನ್ನು ನಿರ್ಬಂಧಿಸಿ ಎಂಬಲ್ಲಿಗೆ ಸ್ಕ್ರಾಲ್ ಮಾಡಿ.
  4. ಬಳಕೆದಾರರು ಅಪ್‌ಲೋಡ್ ಮಾಡಿದ ಕಂಟೆಂಟ್ ಮತ್ತು ನಿಮ್ಮ ಸ್ವತ್ತುಗಳಲ್ಲಿ ಒಂದರ ವಿರುದ್ಧವಾಗಿ ಕ್ಲೈಮ್ ಮಾಡಿದ ಬಳಕೆದಾರರು ಅಪ್‌ಲೋಡ್ ಮಾಡಿದ ವೀಡಿಯೊಗಳನ್ನು ಎಂಬೆಡ್ ಮಾಡುವ ವೆಬ್‌ಸೈಟ್‌ಗಳಿಗೆ ನೀವು ಅನ್ವಯಿಸಲು ಬಯಸುವ ನಿಯಮವನ್ನು ಆಯ್ಕೆಮಾಡಿ:
    • ಎಲ್ಲಾ ಡೊಮೇನ್‌ಗಳಲ್ಲಿ ಅನುಮತಿಸಿ (ಡೀಫಾಲ್ಟ್ ಆಯ್ಕೆ): ಯಾವುದೇ ವೆಬ್‌ಸೈಟ್‌ನಲ್ಲಿ ಎಂಬೆಡ್ ಮಾಡಲು ನಿರ್ಬಂಧನೆಗಳಿಲ್ಲ.
    • ನಿರ್ದಿಷ್ಟ ಡೊಮೇನ್‌ಗಳಲ್ಲಿ ಅನುಮತಿಸಿ: ನೀವು ಡೊಮೇನ್‌ಗಳು ಪಠ್ಯದ ಬಾಕ್ಸ್‌ನಲ್ಲಿ ನಮೂದಿಸುವ ನಿರ್ದಿಷ್ಟ ವೆಬ್‌ಸೈಟ್‌ಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ವೆಬ್‌ಸೈಟ್‌ಗಳಲ್ಲಿ ಎಂಬೆಡ್ ಮಾಡುವುದನ್ನು ನಿರ್ಬಂಧಿಸಿ.
    • ನಿರ್ದಿಷ್ಟ ಡೊಮೇನ್‌ಗಳಲ್ಲಿ ನಿರ್ಬಂಧಿಸಿ: ನೀವು ಡೊಮೇನ್‌ಗಳು ಪಠ್ಯದ ಬಾಕ್ಸ್‌ನಲ್ಲಿ ನಮೂದಿಸುವ ನಿರ್ದಿಷ್ಟ ವೆಬ್‌ಸೈಟ್‌ಗಳಲ್ಲಿ ವೀಡಿಯೊಗಳನ್ನು ಎಂಬೆಡ್ ಮಾಡಲು ಬಳಕೆದಾರರನ್ನು ಅನುಮತಿಸಬೇಡಿ.
    • ಎಲ್ಲಾ ಡೊಮೇನ್‌ಗಳಲ್ಲಿ ನಿರ್ಬಂಧಿಸಿ: ಯಾವುದೇ ವೆಬ್‌ಸೈಟ್‌ನಲ್ಲಿ ಯಾವುದೇ ವೀಡಿಯೊಗಳನ್ನು ಎಂಬೆಡ್ ಮಾಡುವ ಕಾರ್ಯಗಳಿಗೆ ಅವಕಾಶ ನೀಡಬೇಡಿ.
  5. ಡೊಮೇನ್‌ಗಳು ಪಠ್ಯದ ಬಾಕ್ಸ್‌ನಲ್ಲಿ URL ಗಳನ್ನು ನಮೂದಿಸಿ (ಪ್ರತಿ ಸಾಲಿಗೆ ಒಂದು ಡೊಮೇನ್ URL).
  6. ಪರವಾನಗಿ ಪಡೆದ ಕಂಟೆಂಟ್ ಕ್ಲಿಕ್ ಮಾಡಿ ಮತ್ತು ನಿಮ್ಮ ಚಾನಲ್‌ಗಳಲ್ಲಿನ ವೀಡಿಯೊಗಳನ್ನು ಎಂಬೆಡ್ ಮಾಡುವಂತಹ ವೆಬ್‌ಸೈಟ್‌ಗಳಿಗೆ ನೀವು ಅನ್ವಯಿಸಲು ಬಯಸುವ ನಿಯಮವನ್ನು ಆಯ್ಕೆಮಾಡಿ.
  7. ಡೊಮೇನ್‌ಗಳು ಪಠ್ಯದ ಬಾಕ್ಸ್‌ನಲ್ಲಿ URL ಗಳನ್ನು ನಮೂದಿಸಿ (ಪ್ರತಿ ಸಾಲಿಗೆ ಒಂದು ಡೊಮೇನ್ URL).
  8. ಉಳಿಸಿ ಕ್ಲಿಕ್ ಮಾಡಿ.

ಆ್ಯಪ್‌ಗಳಲ್ಲಿ ಎಂಬೆಡ್ ಮಾಡುವುದನ್ನು ನಿರ್ಬಂಧಿಸಿ

  1. Studio ಕಂಟೆಂಟ್ ನಿರ್ವಾಹಕಗೆ ಸೈನ್ ಇನ್ ಆಗಿ.
  2. ಎಡಭಾಗದ ಮೆನುವಿನಲ್ಲಿ, ಸೆಟ್ಟಿಂಗ್‌ಗಳು  ಆಯ್ಕೆಮಾಡಿ.
  3. ಅವಲೋಕನ ವಿಭಾಗದಲ್ಲಿ, ಆ್ಯಪ್‌ಗಳಲ್ಲಿ ಎಂಬೆಡ್ ಮಾಡುವುದನ್ನು ನಿರ್ಬಂಧಿಸಿ ಎಂಬಲ್ಲಿಗೆ ಸ್ಕ್ರಾಲ್ ಮಾಡಿ.
  4. ಬಳಕೆದಾರರು ಅಪ್‌ಲೋಡ್ ಮಾಡಿದ ಕಂಟೆಂಟ್ ಮತ್ತು ನಿಮ್ಮ ಸ್ವತ್ತುಗಳಲ್ಲಿ ಒಂದರ ವಿರುದ್ಧವಾಗಿ ಕ್ಲೈಮ್ ಮಾಡಿದ ಬಳಕೆದಾರರು ಅಪ್‌ಲೋಡ್ ಮಾಡಿದ ವೀಡಿಯೊಗಳನ್ನು ಎಂಬೆಡ್ ಮಾಡುವ ಆ್ಯಪ್‌ಗಳಿಗೆ ನೀವು ಅನ್ವಯಿಸಲು ಬಯಸುವ ನಿಯಮವನ್ನು ಆಯ್ಕೆಮಾಡಿ:
    • ಎಲ್ಲಾ ಆ್ಯಪ್‌ಗಳಲ್ಲಿ ಅನುಮತಿಸಿ (ಡೀಫಾಲ್ಟ್ ಆಯ್ಕೆ): ಯಾವುದೇ ಆ್ಯಪ್‌ಗಳಲ್ಲಿ ಎಂಬೆಡ್ ಮಾಡಲು ನಿರ್ಬಂಧನೆಗಳಿಲ್ಲ.
    • ID ಆಧರಿಸಿ ಆ್ಯಪ್‌ಗಳಲ್ಲಿ ಅನುಮತಿಸಿ: ಆ್ಯಪ್ ID ಗಳು ಪಠ್ಯದ ಬಾಕ್ಸ್‌ನಲ್ಲಿ ನೀವು ನಮೂದಿಸುವ ನಿರ್ದಿಷ್ಟ ಆ್ಯಪ್‌ಗಳನ್ನು ಹೊರತುಪಡಿಸಿ, ಉಳಿದ ಪ್ರತಿಯೊಂದು ಆ್ಯಪ್‌ಗಳಲ್ಲಿ ಎಂಬೆಡ್ ಮಾಡುವುದನ್ನು ನಿರ್ಬಂಧಿಸಿ.
    • ID ಆಧರಿಸಿ ಆ್ಯಪ್‌ಗಳಲ್ಲಿ ನಿರ್ಬಂಧಿಸಿ: ಆ್ಯಪ್ ID ಗಳು ಪಠ್ಯದ ಬಾಕ್ಸ್‌ನಲ್ಲಿ ನೀವು ನಮೂದಿಸುವ ನಿರ್ದಿಷ್ಟ ಆ್ಯಪ್‌ಗಳಲ್ಲಿ ವೀಡಿಯೊಗಳನ್ನು ಎಂಬೆಡ್ ಮಾಡಲು ಬಳಕೆದಾರರನ್ನು ಅನುಮತಿಸಬೇಡಿ
    • ಎಲ್ಲಾ ಆ್ಯಪ್‌ಗಳಲ್ಲಿ ನಿರ್ಬಂಧಿಸಿ: ಯಾವುದೇ ಆ್ಯಪ್‌ನಲ್ಲಿ ಯಾವುದೇ ವೀಡಿಯೊಗಳನ್ನು ಎಂಬೆಡ್ ಮಾಡುವ ಕಾರ್ಯಗಳಿಗೆ ಅವಕಾಶ ನೀಡಬೇಡಿ.
  5. ಆ್ಯಪ್ ID ಗಳು ಪಠ್ಯದ ಬಾಕ್ಸ್‌ನಲ್ಲಿ URL ಗಳನ್ನು ನಮೂದಿಸಿ (ಪ್ರತಿ ಸಾಲಿಗೆ ಒಂದು ಆ್ಯಪ್ ID).
  6. ಪರವಾನಗಿ ಪಡೆದ ಕಂಟೆಂಟ್ ಕ್ಲಿಕ್ ಮಾಡಿ ಮತ್ತು ನಿಮ್ಮ ಚಾನಲ್‌ಗಳಲ್ಲಿನ ವೀಡಿಯೊಗಳನ್ನು ಎಂಬೆಡ್ ಮಾಡುವಂತಹ ಆ್ಯಪ್‌ಗಳಿಗೆ ನೀವು ಅನ್ವಯಿಸಲು ಬಯಸುವ ನಿಯಮವನ್ನು ಆಯ್ಕೆಮಾಡಿ.
  7. ಆ್ಯಪ್ ID ಗಳು ಪಠ್ಯದ ಬಾಕ್ಸ್‌ನಲ್ಲಿ URL ಗಳನ್ನು ನಮೂದಿಸಿ (ಪ್ರತಿ ಸಾಲಿಗೆ ಒಂದು ಆ್ಯಪ್ ID URL).
  8. ಉಳಿಸಿ ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3338566308609573530
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false