ನಿಮ್ಮದೇ ವೀಡಿಯೊ ಶೀರ್ಷಿಕೆಗಳು ಮತ್ತು ವಿವರಣೆಗಳನ್ನು ಅನುವಾದಿಸಿ

ನಿಮ್ಮ ವೀಡಿಯೊಗಳಿಗೆ ಅನುವಾದಿತ ವೀಡಿಯೊ ಶೀರ್ಷಿಕೆಗಳು ಮತ್ತು ವಿವರಣೆಗಳನ್ನು ನೀವು ಸೇರಿಸಬಹುದು, ಇದರಿಂದ ನಿಮ್ಮ ಅಭಿಮಾನಿಗಳು ತಮ್ಮದೇ ಭಾಷೆಯಲ್ಲಿ ನಿಮ್ಮ ವೀಡಿಯೊಗಳನ್ನು ಕಂಡುಕೊಳ್ಳಬಹುದು. ನಿಮ್ಮ ವೀಡಿಯೊಗಳನ್ನು ಅನುವಾದಿಸುವುದರಿಂದ ನಿಮ್ಮ ತಾಯ್ನಾಡಿನ/ಪ್ರದೇಶದ ಹೊರಗಿನ ವೀಕ್ಷಕರಿಗೆ ಅವುಗಳನ್ನು ಹೆಚ್ಚು ಆ್ಯಕ್ಸೆಸ್ ಮಾಡುವಂತೆ ಮಾಡುತ್ತದೆ ಮತ್ತು ಜಾಗತಿಕ ಪ್ರೇಕ್ಷಕರನ್ನು ನಿರ್ಮಿಸಲು ನಿಮಗೆ ಸಹಾಯ ಮಾಡುತ್ತದೆ.

ನಿಮ್ಮ ವೀಡಿಯೊದ ಶೀರ್ಷಿಕೆ ಮತ್ತು ವಿವರಣೆಯನ್ನು ಸರಿಯಾದ ಬಳಕೆದಾರರಿಗೆ ಸರಿಯಾದ ಭಾಷೆಯಲ್ಲಿ ತೋರಿಸಲು ಕೆಳಗಿನ ಪರಿಕರಗಳನ್ನು ಬಳಸಿ. ಕ್ಲೈಮ್ ಮಾಡಲಾದ ಕಂಟೆಂಟ್ ಅನ್ನು ನಿರ್ವಹಿಸಲು ನೀವು YouTube ನ ಕಂಟೆಂಟ್ ಮ್ಯಾನೇಜರ್ ಅನ್ನು ಬಳಸಿದರೆ, ವೀಡಿಯೊ ಶೀರ್ಷಿಕೆಗಳು ಮತ್ತು ವಿವರಣೆಗಳನ್ನು ಭಾಷಾಂತರಿಸಲು ನೀವು CSV ಫೈಲ್ ಅನ್ನು ಅಪ್‌ಲೋಡ್ ಮಾಡಬಹುದು.

ಶೀರ್ಷಿಕೆಗಳು ಮತ್ತು ವಿವರಣೆಗಳನ್ನು ಅನುವಾದಿಸಿ

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಬದಿಯ ಮೆನುವಿನಿಂದ, ಉಪಶೀರ್ಷಿಕೆಗಳು ಎಂಬುದನ್ನು ಆಯ್ಕೆಮಾಡಿ.
  3. ವೀಡಿಯೊವನ್ನು ಆಯ್ಕೆಮಾಡಿ.
  4. ನೀವು ವೀಡಿಯೊಗಾಗಿ ಭಾಷೆಯನ್ನು ಆಯ್ಕೆಮಾಡಿರದಿದ್ದರೆ, ಭಾಷೆಯನ್ನು ಆಯ್ಕೆಮಾಡಲು ಮತ್ತು ಖಚಿತಪಡಿಸಲು ನಿಮ್ಮನ್ನು ಕೇಳಲಾಗುತ್ತದೆ.
  5. ಭಾಷೆಯನ್ನು ಸೇರಿಸಿ ಎಂಬುದನ್ನು ಆಯ್ಕೆಮಾಡಿ ಮತ್ತು ನೀವು ಅನುವಾದಿಸಲು ಬಯಸುವ ಭಾಷೆಯನ್ನು ಆಯ್ಕೆಮಾಡಿ.
  6. “ಶೀರ್ಷಿಕೆ ಮತ್ತು ವಿವರಣೆ” ಅಡಿಯಲ್ಲಿ, ಸೇರಿಸಿ ಎಂಬುದನ್ನು ಆಯ್ಕೆಮಾಡಿ.
  7. ಅನುವಾದಿತ ಶೀರ್ಷಿಕೆ ಮತ್ತು ವಿವರಣೆಯನ್ನು ನಮೂದಿಸಿ ಹಾಗೂ ಪ್ರಕಟಿಸಿ ಎಂಬುದನ್ನು ಆಯ್ಕೆಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12148602319446529176
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false