ಕೂಪನ್ ಕೋಡನ್ನು ಪಡೆದುಕೊಳ್ಳಿ.

YouTube ಕೂಪನ್ ಕೋಡ್ ಒಂದು ಖಾತ್ರಿ, ಇದನ್ನು ನೀವು ಚಲನಚಿತ್ರಗಳು ಅಥವಾ ಧಾರಾವಾಹಿಗಳನ್ನು ಖರೀದಿಸಲು ಅಥವಾ ಬಾಡಿಗೆಗೆ ಪಡೆಯಲು ಉಪಯೋಗಿಸಬಹುದು. ಕೂಪನ್ ಕೋಡ್ಗಳನ್ನ ಅದಕ್ಕೆ ಸೂಚಿಸಲಾದ ಉದ್ದೇಶಕ್ಕೆ ಮಾತ್ರ ಪಡೆಯಬಹುದು. ಉದಾಹರಣೆಗೆ, ನೀವು ಕೂಪನ್ ಕೋಡನ್ನು ಚಲನಚಿತ್ರವನ್ನು ಬಾಡಿಗೆಗೆ ಸೂಚಿಸಲಾದರೆ, ನೀವು ಅದನ್ನು ಧಾರಾವಾಹಿ ಖರೀದಿಸಲು ಉಪಯೋಗ ಮಾಡ್ಕೊಕ್ಕೆ ಆಗಲ್ಲ.

ನೀವು ನಿಮ್ಮ ಕೂಪನ್ ಕೋಡನ್ನು ನಿಮ್ಮ ಕಂಪ್ಯೂಟರ್ ಅಥವಾ ನಿಮ್ಮ ಮೊಬೈಲಿನಲ್ಲಿ ಉಪಯೋಗಿಸಬಹುದು.

ಕಂಪ್ಯೂಟರ್ನಲ್ಲಿ ಕೂಪನ್ ಕೋಡನ್ನು ಬಿಡಿಸಿಕೊಳ್ಳಲು.

  1. ಚಲನಚಿತ್ರಗಳು ಮತ್ತು ಶೋಗಳ ಪುಟಕ್ಕೆ ಭೇಟಿ ನೀಡಿ ಅಥವಾ ನೀವು ಖರೀದಿಸಲು ಅಥವಾ ಬಾಡಿಗೆಗೆ ಪಡೆಯಲು ಬಯಸುವ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮಕ್ಕಾಗಿ YouTube ನಲ್ಲಿ ಹುಡುಕಿ.
  2. ಖರೀದಿ ಅಥವಾ ಬಾಡಿಗೆ ಬೆಲೆಯನ್ನು ಡಿಸ್‌ಪ್ಲೇ ಮಾಡುವ ಬಟನ್ ಅನ್ನು ಕ್ಲಿಕ್ ಮಾಡಿ.
  3. ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದ ಪೋಸ್ಟರ್ ಅಡಿಯಲ್ಲಿ ಪ್ರಚಾರ ಕೋಡ್ ಅನ್ನು ನಮೂದಿಸಿ ಆಯ್ಕೆಮಾಡಿ ಮತ್ತು ನೀವು ಸ್ವೀಕರಿಸಿದ ಕೋಡ್ ಅನ್ನು ಟೈಪ್ ಮಾಡಿ.
  4. ಖರೀದಿ ಅಥವಾ ಬಾಡಿಗೆಗೆ ಆಯ್ಕೆಯಲ್ಲಿ ನಿಮಗೆ ಇಷ್ಟವಾದ ಆಯ್ಕೆಯನ್ನು ಉಪಯೋಗಿಸಿ.
  5. ರಿಯಾಯಿತಿ ಮೊತ್ತವನ್ನು ಅವಲಂಬಿಸಿ ನಿಮ್ಮ ಚಲನಚಿತ್ರ ಬಾಡಿಗೆ ಅಥವಾ ಖರೀದಿ ಬೆಲೆಯನ್ನು ಅಪ್‌ಡೇಟ್ ಮಾಡಿದ ಬೆಲೆಯೊಂದಿಗೆ ಡಿಸ್‌ಪ್ಲೇ ಮಾಡಲಾಗುತ್ತದೆ. ಆದರೆ, ನಿಮ್ಮ ಯಾವುದೇ ವೆಚ್ಚವಿಲ್ಲದ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮವನ್ನು ರಿಡೀಮ್ ಮಾಡಲು ನೀವು ಮಾನ್ಯವಾದ ಪಾವತಿ ವಿಧಾನವನ್ನು ಆಯ್ಕೆಮಾಡಬೇಕು. ನಿಮ್ಮ ಆದ್ಯತೆಗೆ ತಕ್ಕಂತ ಪಾವತಿ ವಿಧಾನವನ್ನು ಆಯ್ಕೆಮಾಡಿ ಮತ್ತು ಖರೀದಿಸಿ ಟ್ಯಾಪ್ ಮಾಡಿ.

ನಿಮ್ಮ YouTube ಕೂಪನ್ ಕೋಡ್ ಅನ್ನು ರಿಡೀಮ್ ಮಾಡುವಾಗ ನಿಮಗೆ ಸಮಸ್ಯೆಗಳು ಎದುರಾದರೆ, ಸಹಾಯಕ್ಕಾಗಿ ಕೆಳಗಿನ ಸಲಹೆಗಳನ್ನು ಬಳಸಿ ನೋಡಿ ಅಥವಾ ನಮ್ಮನ್ನು ಸಂಪರ್ಕಿಸಿ.

ಕೂಪನ್ ಕೋಡ್‌ಗಳಿಗೆ ಸಾಮಾನ್ಯ ಟ್ರಬಲ್‌ಶೂಟಿಂಗ್ ಸಲಹೆಗಳು:

  • ನೀವು ಸರಿಯಾದ ಕ್ಷೇತ್ರದಲ್ಲಿ ನಿಮ್ಮ ಕೂಪನ್ ಕೋಡನ್ನು ನಮೂದಿಸಿದಿರ ಎಂದು ಪರಿಶೀಲಿಸಿ. YouTube ಕೂಪನ್ ಕೋಡ್‌ಗಳು 'Google Play ಗಿಫ್ಟ್ ಕಾರ್ಡ್ ರಿಡೀಮ್ ಮಾಡಿ ಅಥವಾ ಪ್ರೋಮೋ ಕೋಡ್' ಫೀಲ್ಡ್‌ನಲ್ಲಿ ಕಾರ್ಯನಿರ್ವಹಿಸುವುದಿಲ್ಲ.
  • ನೀವು ಕೋಡ್ ಸರಿಯಾಗಿ ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಿ. ಕೋಡ್‌ನಲ್ಲಿ ಅಪ್ಪರ್ ಕೇಸ್ ಅಥವಾ ಲೋವರ್ ಕೇಸ್ ಕುರಿತು ಗಮನ ನೀಡಿ.
  • ಕೂಪನ್ ಕೋಡ್ ಅನ್ನು ಅದರ ಉದ್ದೇಶಿತ ಗುರಿಗೆ ಬಳಸುತ್ತಿರಿ ಎಂದು ಖಚಿತಪಡಿಸಿ. ಉದಾಹರಣೆಗೆ, ನೀವು ಯಾವುದೇ ವೆಚ್ಚವಿಲ್ಲದೆ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದ ಬಾಡಿಗೆಗಾಗಿ ಕೂಪನ್ ಕೋಡ್ ಅನ್ನು ಸ್ವೀಕರಿಸಿದರೆ, ಇನ್ನೊಂದು ಪ್ರಕಾರದ ಕಂಟೆಂಟ್ ಅನ್ನು ಖರೀದಿಸಲು ನಿಮಗೆ ಕೋಡ್ ಅನ್ನು ಬಳಸಲಾಗುವುದಿಲ್ಲ.
  • ನಿಮ್ಮ ಕೂಪನ್ ಕೋಡ್ ಇನ್ನು ಮಾನ್ಯವಾಗಿದೆ ಎಂಬುದನ್ನು ದೃಢೀಕರಿಸಿ:
    • ಕೂಪನ್ ಕೋಡಿನ ಮುಕ್ತಾಯ ತಾರೀಕು ಪರಿಶೀಲಿಸಿ: ಕೆಲವು ಕೋಡುಗಳನ್ನು ನಿಗ್ದೈಪಾದಿಸಿದ ದಿನಾಂಕದ ಮುನ್ನ ಉಪಯೋಗಿಸಬೇಕು. 'ಓನ್ಲಿ ಫಾರ್ ಅ ಲಿಮಿಟೆಡ್ ಟೈಮ್' ಎಂಬ ಕೋಡ್ ನಿಮಗೆ ಸಿಕ್ಕಿದರೆ, ಅದರ ಮುಕ್ತಾಯ ದಿನಾಂಕ ಕೂಪನ್ ಕೋಡಿನಲ್ಲಿ ನೋಡಬಹುದು ಅಥವಾ ನಿಮಗೆ ಬಂದ ಇಮೇಲ್ ನಲ್ಲಿ ಸಿಗುತ್ತೆ.
    • ಕೂಪನ್ ಕೋಡ್ ಅನ್ನು ಈಗಾಗಲೇ ಬಳಸಲಾಗಿದೆಯೇ ಎಂದು ಪರಿಶೀಲಿಸಿ. ಕೋಡ್ ಅನ್ನು ಒಮ್ಮೆ ಬಳಸಿದ ನಂತರ, ಇನ್ನೊಂದು ಯಾವುದೇ ವೆಚ್ಚವಿಲ್ಲದ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮವನ್ನು ಪಡೆಯಲು ನಿಮಗೆ ಅದೇ ಕೋಡ್ ಅನ್ನು ಬಳಸಲಾಗುವುದಿಲ್ಲ.
  • ನಿಮ್ಮ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದ ರಿಯಾಯಿತಿಗೊಳಿಸಿದ ಖರೀದಿ ಅಥವಾ ಬಾಡಿಗೆಯನ್ನು ಪೂರ್ಣಗೊಳಿಸಲು ಖರೀದಿಸಿ ಕ್ಲಿಕ್ ಮಾಡುವ ಮೊದಲು ನೀವು ಮಾನ್ಯವಾದ ಪಾವತಿಯ ವಿಧಾನವನ್ನು ಆಯ್ಕೆಮಾಡಿದ್ದೀರಿ ಎಂಬುದನ್ನು ಪರಿಶೀಲಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16935958616344898503
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false