ನಿಮ್ಮ YouTube ಚಾನಲ್‌ನ URL ಗಳನ್ನು ಅರ್ಥಮಾಡಿಕೊಳ್ಳಿ

ನಿಮ್ಮ ಪ್ರೇಕ್ಷಕರನ್ನು ನಿಮ್ಮ ಚಾನಲ್‌ನ ಹೋಮ್ ಪೇಜ್‌ಗೆ ನಿರ್ದೇಶಿಸುವ, ಒಂದಕ್ಕಿಂತ ಹೆಚ್ಚು URL ಗಳನ್ನು ನಿಮ್ಮ ಚಾನಲ್ ಹೊಂದಿರಬಹುದು. ಈ URL ಗಳು ಒಂದಕ್ಕೊಂದು ಭಿನ್ನವಾಗಿ ಕಾಣಿಸಬಹುದು, ಆದರೆ ಪ್ರತಿ URL ನಿಮ್ಮ ಪ್ರೇಕ್ಷಕರನ್ನು ಒಂದೇ ಸ್ಥಳಕ್ಕೆ - ನಿಮ್ಮ ಚಾನಲ್‌ಗೆ ಕೊಂಡೊಯ್ಯುತ್ತದೆ. ಹ್ಯಾಂಡಲ್ URL ಗಳು, ಕಸ್ಟಮ್ URL ಗಳು ಮತ್ತು ಲೆಗಸಿ ಬಳಕೆದಾರರ ಹೆಸರು URL ಗಳು, ವೈಯಕ್ತೀಕರಿಸಿದ URL ಗಳ ವಿಧಗಳಾಗಿವೆ. ನೀವು youtube.com/handle ನಲ್ಲಿ ನಿಮ್ಮ ಚಾನಲ್‌ಗೆ ಸಂಬಂಧಿಸಿದ ಎಲ್ಲಾ URL ಗಳನ್ನು ವೀಕ್ಷಿಸಬಹುದು.

ಚಾನಲ್ URL (ID-ಆಧಾರಿತ)

ಉದಾಹರಣೆ: youtube.com/channel/UCUZHFZ9jIKrLroW8LcyJEQQ

ಈ ಉದಾಹರಣೆಯು YouTube ಚಾನಲ್‌ಗಳು ಬಳಸುವ ಪ್ರಮಾಣಿತ URL ಆಗಿದೆ. ಇದು URL ನ ಕೊನೆಯಲ್ಲಿರುವ ಸಂಖ್ಯೆಗಳು ಮತ್ತು ಅಕ್ಷರಗಳಾಗಿರುವ ನಿಮ್ಮ ಅನನ್ಯ ಚಾನಲ್ ಐಡಿಯನ್ನು ಒಳಗೊಂಡಿದೆ.

ನಿಮ್ಮ ಹ್ಯಾಂಡಲ್ URL ಅನ್ನು ಹುಡುಕಿ

ನಿಮ್ಮ ಚಾನಲ್‌ನ ಹ್ಯಾಂಡಲ್ URL ಅನ್ನು ಹುಡುಕಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಕಸ್ಟಮೈಸ್ ಮಾಡುವಿಕೆ ನಂತರ ಪ್ರಾಥಮಿಕ ಮಾಹಿತಿ ಎಂಬುದನ್ನು ಆಯ್ಕೆ ಮಾಡಿ.
  3. ಹ್ಯಾಂಡಲ್ ಎಂಬುದರ ಅಡಿಯಲ್ಲಿ, ನಿಮ್ಮ ಹ್ಯಾಂಡಲ್ URL ಅನ್ನು ನೀವು ವೀಕ್ಷಿಸಬಹುದು.

ಹ್ಯಾಂಡಲ್ URL

ಉದಾಹರಣೆ: youtube.com/@youtubecreators

ಒಬ್ಬ ಚಾನಲ್ ಮಾಲೀಕರಾಗಿ ನಿಮ್ಮ ಹ್ಯಾಂಡಲ್ ಅನ್ನು ನೀವು ಆಯ್ಕೆ ಮಾಡಿದಾಗ ಅಥವಾ ಬದಲಾಯಿಸಿದಾಗ ಹ್ಯಾಂಡಲ್ URL ಅನ್ನು ಸ್ವಯಂಚಾಲಿತವಾಗಿ ರಚಿಸಲಾಗುತ್ತದೆ. URL ನ ಕೊನೆಯ ಭಾಗವು “@” ಸಂಕೇತದೊಂದಿಗೆ ಆರಂಭವಾಗುತ್ತದೆ ಮತ್ತು ನೀವು ಆಯ್ಕೆ ಮಾಡಿದ ಹ್ಯಾಂಡಲ್ ಅನ್ನು ಹೊಂದಿರುತ್ತದೆ. ನೀವು ಈಗಾಗಲೇ ಹೊಂದಿರುವ ಯಾವುದೇ ಕಸ್ಟಮ್ URL ಗಳು ಈಗಲೂ ಕೆಲಸ ಮಾಡುತ್ತವೆ.

ನಿಮ್ಮ ಹ್ಯಾಂಡಲ್ ಅನ್ನು ವೀಕ್ಷಿಸುವುದು ಅಥವಾ ಬದಲಾಯಿಸುವುದರ ಕುರಿತು ಇನ್ನಷ್ಟು ತಿಳಿಯಿರಿ.

ಕಸ್ಟಮ್ URL

ಉದಾಹರಣೆ: youtube.com/c/YouTubeCreators

ಹೊಸ ಕಸ್ಟಮ್ URL ಗಳನ್ನು ಇನ್ನು ಮುಂದೆ ಸೆಟ್ ಅಪ್ ಮಾಡಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ. ನೀವು ಈಗಾಗಲೇ ಹೊಂದಿರುವ ಯಾವುದೇ ಕಸ್ಟಮ್ URL ಗಳು ಈಗಲೂ ಕೆಲಸ ಮಾಡುತ್ತವೆ. ಎಲ್ಲಾ ಲೆಗಸಿ URL ಗಳು ನಿಮ್ಮ ಹ್ಯಾಂಡಲ್ ಅನ್ನು ಆಧರಿಸಿರುವ ನಿಮ್ಮ ಹೊಸ ಚಾನಲ್ URL ಗೆ ಬಳಕೆದಾರರನ್ನು ಮರುನಿರ್ದೇಶಿಸುತ್ತವೆ. 

ಲೆಗಸಿ ಬಳಕೆದಾರರ ಹೆಸರು URL

ಉದಾಹರಣೆ: youtube.com/user/YouTube

ನಿಮ್ಮ ಚಾನಲ್ ಅನ್ನು ಯಾವಾಗ ರಚಿಸಲಾಗಿದೆ ಎಂಬುದನ್ನು ಆಧರಿಸಿ, ಅದು ಬಳಕೆದಾರರ ಹೆಸರನ್ನು ಹೊಂದಿರಬಹುದು. ಇಂದು ಚಾನಲ್‌ಗಳಿಗೆ ಬಳಕೆದಾರರ ಹೆಸರಿನ ಅಗತ್ಯವಿಲ್ಲ, ಆದರೆ ವೀಕ್ಷಕರನ್ನು ನಿಮ್ಮ ಚಾನಲ್‌ಗೆ ಮರುನಿರ್ದೇಶಿಸುವುದಕ್ಕಾಗಿ ನೀವು ಈಗಲೂ ಈ URL ಅನ್ನು ಬಳಸಬಹುದು. ನಿಮ್ಮ ಬಳಕೆದಾರರ ಹೆಸರನ್ನು ನೀವು ಆಯ್ಕೆ ಮಾಡಿದ ಬಳಿಕ ನಿಮ್ಮ ಚಾನಲ್‌ನ ಹೆಸರು ಬದಲಾಗಿದ್ದರೂ ಸಹ, ಅದನ್ನು ಒಳಗೊಂಡಿರುತ್ತದೆ. ಅಸ್ತಿತ್ವದಲ್ಲಿರುವ ಬಳಕೆದಾರರ ಹೆಸರುಗಳನ್ನು ಬದಲಿಸಲು ಸಾಧ್ಯವಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13470868469447841502
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false