180- ಅಥವಾ 360-ಡಿಗ್ರಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ

ಕಂಪ್ಯೂಟರ್‌ಗಳಲ್ಲಿ Chrome, Firefox, MS Edge, ಹಾಗೂ Opera ಬ್ರೌಸರ್‌ಗಳಲ್ಲಿ 180° ಅಥವಾ 360° ಸ್ಪೆರಿಕಲ್ ವೀಡಿಯೊಗಳನ್ನು ಅಪ್‌ಲೋಡ್ ಮತ್ತು ಪ್ಲೇಬ್ಯಾಕ್ ಮಾಡುವುದನ್ನು YouTube ಬೆಂಬಲಿಸುತ್ತದೆ.

ಹೆಚ್ಚಿನ VR ಹೆಡ್‌ಸೆಟ್‌ಗಳಲ್ಲಿ ಲಭ್ಯವಿರುವ YouTube ಆ್ಯಪ್ ಅಥವಾ YouTube VR ಆ್ಯಪ್‌ನಲ್ಲಿ ಸಹ ನೀವು 180° ಹಾಗೂ 360° ವೀಡಿಯೊಗಳನ್ನು ವೀಕ್ಷಿಸಬಹುದು. ತಲ್ಲೀನಗೊಳಿಸುವ ಅನುಭವಕ್ಕಾಗಿ, VR ಹೆಡ್‌ಸೆಟ್ ಬಳಸಿ ವೀಕ್ಷಿಸುವ ಕುರಿತು ಇನ್ನಷ್ಟು ತಿಳಿಯಿರಿ.

360-ಡಿಗ್ರಿ ಮತ್ತು 180-ಡಿಗ್ರಿ ವೀಡಿಯೊಗಳನ್ನು ರಚಿಸುವ ಕುರಿತು ಇನ್ನಷ್ಟು ತಿಳಿಯಿರಿ.

180° ಅಥವಾ  360° ವೀಡಿಯೊಗಳನ್ನು ವೀಕ್ಷಿಸಲು ನೀವು Chrome, Opera, Firefox, ಅಥವಾ MS Edge ನ ಇತ್ತೀಚಿನ ಆವೃತ್ತಿಯನ್ನು ಹೊಂದಿರಬೇಕಾಗುತ್ತದೆ. ಮೊಬೈಲ್ ಸಾಧನಗಳಲ್ಲಿ, YouTube ಆ್ಯಪ್‌ನ ಇತ್ತೀಚಿನ ಆವೃತ್ತಿಯನ್ನು ಬಳಸಿ.
ಹಂತ 1: ವೀಡಿಯೊವನ್ನು ರಚಿಸಿ
  1. ಕ್ಯಾಮರಾದೊಂದಿಗೆ ಬರುವ ಸ್ಟಿಚಿಂಗ್ ಸಾಫ್ಟ್‌ವೇರ್ ಅಥವಾ ಪ್ರತ್ಯೇಕ 180° ಅಥವಾ 360° ಸ್ಟಿಚಿಂಗ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು, ಫೈಲ್ ಅನ್ನು ಸ್ಟಿಚ್ ಮಾಡಿ.
  2. ಸರಣಿಯ ಸೆಟ್ಟಿಂಗ್‌ಗಳು VR ನಲ್ಲಿ ಇವೆ ಮತ್ತು ನಿಮ್ಮ ಮೂಲದ ದೃಶ್ಯಾವಳಿಗೆ ಹೊಂದಿಕೆಯಾಗುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಡಿಟಿಂಗ್ ಸಾಫ್ಟ್‌ವೇರ್ ಅನ್ನು ಬಳಸಿ.

ಕೆಲವು ಸಲಹೆಗಳು:

ಹಂತ 2: ಅಪ್‌ಲೋಡ್‌ಗಾಗಿ ಸಿದ್ಧಪಡಿಸಿ

180° ಅಥವಾ 360°  ವೀಡಿಯೊ ಫೈಲ್ ಅನ್ನು ಅಪ್‌ಲೋಡ್ ಮಾಡುವುದಕ್ಕಾಗಿ ನೀವು Adobe Premiere (2019 ಅಥವಾ ನಂತರದ ಆವೃತ್ತಿ) ಬಳಸಿಕೊಂಡು ಫೈಲ್ ಅನ್ನು ಮಾರ್ಪಡಿಸಬೇಕಾಗುತ್ತದೆ ಅಥವಾ ಅಪ್‌ಲೋಡ್ ಮಾಡುವ ಮೊದಲು ಸ್ಕ್ರಿಪ್ಟ್ ಮಾಡಬೇಕಾಗುತ್ತದೆ. 360° ಅಥವಾ 180° ಅಪ್‌ಲೋಡ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.

ಹಂತ 3: ಫೈಲ್ ಅನ್ನು ಅಪ್‌ಲೋಡ್ ಮಾಡಿ

ಪ್ರಕಟಿಸುವ ಮೊದಲು, ಫೈಲ್‌ನಲ್ಲಿ 360° ಪ್ಲೇಬ್ಯಾಕ್ ಅನ್ನು ಸಕ್ರಿಯಗೊಳಿಸಲಾಗಿದೆ ಎಂಬುದನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ವೀಡಿಯೊವನ್ನು ವೀಕ್ಷಿಸುವ ಮೂಲಕ ಖಚಿತಪಡಿಸಿಕೊಳ್ಳಿ. 360° ಪ್ಲೇಬ್ಯಾಕ್ ಲಭ್ಯವಾಗಲು ಒಂದು ಗಂಟೆಯಷ್ಟು ಸಮಯ ಬೇಕಾಗಬಹುದು.

360° ವೀಡಿಯೊಗಳಲ್ಲಿ, ಮೇಲೆ ಎಡಬದಿಯಲ್ಲಿ ಪ್ಯಾನ್ ಬಟನ್ ಇರುತ್ತದೆ ಮತ್ತು WASD ಕೀಗಳನ್ನು ಬಳಸಿ ಇವುಗಳನ್ನು ತಿರುಗಿಸಬಹುದು, ಆದ್ದರಿಂದ ನಿಮ್ಮ ವೀಡಿಯೊ 360° ಯಲ್ಲಿ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ವೀಡಿಯೊದಲ್ಲಿ ಈ ಫೀಚರ್‌ಗಳಿವೆಯೇ ಎಂದು ನೋಡಿ. ಸ್ಪೇಸ್‌ನಲ್ಲಿ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡುವ ಮೂಲಕ ನೀವು ವೀಡಿಯೊದಲ್ಲಿ ಸ್ವೈಪ್ ಸಹ ಮಾಡಬಹುದು.

ನಿಜ ಜೀವನದಂತೆಯೇ, ವೀಕ್ಷಕರು ನಿಮ್ಮ ವೀಡಿಯೊದ ಧ್ವನಿಯನ್ನು ಎಲ್ಲಾ ದಿಕ್ಕುಗಳಲ್ಲೂ ಅನುಭವಿಸಲು ಸಾಧ್ಯವಾಗುವಂತೆ ಪ್ರಾದೇಶಿಕ ಆಡಿಯೋವನ್ನು ಬಳಸುವುದು ಹೇಗೆ ಎಂದು ತಿಳಿದುಕೊಳ್ಳಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5505441613628357965
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false