ದೀರ್ಘ ವೀಡಿಯೊಗಳಲ್ಲಿ ಮಧ್ಯ-ರೋಲ್ ಆ್ಯಡ್ ವಿರಾಮಗಳನ್ನು ನಿರ್ವಹಿಸಿ

8 ನಿಮಿಷ ಅಥವಾ ಅದಕ್ಕಿಂತ ದೀರ್ಘವಾದ ವೀಡಿಯೊಗಳಲ್ಲಿ, ನೀವು ವೀಡಿಯೊದ ಮಧ್ಯಭಾಗ ಪ್ಲೇ ಆಗುವಾಗ ಸಹ ಆ್ಯಡ್‌ಗಳನ್ನು ("ಮಧ್ಯ-ರೋಲ್‌ಗಳು" ಎಂದು ಕರೆಯಲಾಗುತ್ತದೆ) ಆನ್ ಮಾಡಬಹುದು.

ಡೀಫಾಲ್ಟ್ ಆಗಿ, ವೀಕ್ಷಕರ ಅನುಭವ ಮತ್ತು ನಿಮಗಾಗಿ ಮಾನಿಟೈಸೇಶನ್ ಸಾಮರ್ಥ್ಯವನ್ನು ಸಮತೋಲನಗೊಳಿಸುವುದಕ್ಕಾಗಿ ನಿಮ್ಮ ವೀಡಿಯೊಗಳಲ್ಲಿ ಸ್ವಾಭಾವಿಕ ವಿರಾಮಗಳಲ್ಲಿ ಮಧ್ಯ-ರೋಲ್ ಆ್ಯಡ್‌ಗಳನ್ನು ಸ್ವಯಂಚಾಲಿತವಾಗಿ ಇರಿಸಲಾಗುತ್ತದೆ. ಹೊಸ ಅಪ್‌ಲೋಡ್‌ಗಳಿಗಾಗಿ, ಡೀಫಾಲ್ಟ್ ಆಗಿ ಮಧ್ಯ-ರೋಲ್ ಆ್ಯಡ್‌ಗಳನ್ನು ಆನ್ ಮಾಡಿರದಿದ್ದರೆ, ಪ್ರತ್ಯೇಕ ವೀಡಿಯೊಗಳಲ್ಲಿ ನೀವು ಅವುಗಳನ್ನು ಆನ್ ಮಾಡಬಹುದು.

ಸ್ವಯಂಚಾಲಿತವಾಗಿ ಸೇರಿಸಲಾದ ಮಧ್ಯ-ರೋಲ್ ಆ್ಯಡ್‌ಗಳನ್ನು ರಚಿಸಲು, ಪ್ರಿವ್ಯೂ ಮಾಡಲು ಮತ್ತು ಎಡಿಟ್ ಮಾಡಲು ಅಥವಾ ವೀಡಿಯೊಗಳಲ್ಲಿ ಹಸ್ತಚಾಲಿತವಾಗಿ ಆ್ಯಡ್ ವಿರಾಮಗಳನ್ನು ನಿಯೋಜಿಸಲು ಆ್ಯಡ್ ವಿರಾಮಗಳನ್ನು ಬಳಸಿ. ನಿಮ್ಮ ಚಾನಲ್-ಹಂತದ ಅಪ್‌ಲೋಡ್ ಡೀಫಾಲ್ಟ್ ಏನೇ ಇದ್ದರೂ ನೀವು ಈ ಟೂಲ್ ಅನ್ನು ಬಳಸಬಹುದು.

ಅರ್ಹವಾಗಿದ್ದರೆ, ನಿಮ್ಮ ಲೈವ್ ಸ್ಟ್ರೀಮ್‌ಗಳಿಗಾಗಿಯೂ ನೀವು ಮಧ್ಯ-ರೋಲ್ ಆ್ಯಡ್‌ಗಳನ್ನು ಟ್ರಿಗರ್ ಮಾಡಬಹುದು.

ದೀರ್ಘ ವೀಡಿಯೊಗಳಲ್ಲಿ ಮಧ್ಯ-ರೋಲ್ ಆ್ಯಡ್‌ಗಳನ್ನು ಬಳಸುವುದು

ವೀಕ್ಷಕರು ಬಳಸುವ ಸಾಧನದ ಪ್ರಕಾರವನ್ನು ಆಧರಿಸಿ, ಆ್ಯಡ್ ಅನುಭವದಲ್ಲಿ ಕೊಂಚ ವ್ಯತ್ಯಾಸವಿರಬಹುದು.

  • ಕಂಪ್ಯೂಟರ್‌ನಲ್ಲಿ: ಮಧ್ಯ-ರೋಲ್ ಆ್ಯಡ್‌ಗಿಂತ ಮೊದಲು 5-ಸೆಕೆಂಡ್ ಕೌಂಟ್‌ಡೌನ್ ಕಾಣಿಸಿಕೊಳ್ಳುತ್ತದೆ.
  • ಇತರ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ: ಆ್ಯಡ್ ಯಾವಾಗ ಕಾಣಿಸಿಕೊಳ್ಳಬಹುದು ಎಂಬುದನ್ನು ಸೂಚಿಸಲು ವೀಡಿಯೊ ಪ್ರಗತಿ ಪಟ್ಟಿಯಲ್ಲಿ ಹಳದಿ ಮಾರ್ಕರ್‌ಗಳು ಗೋಚರಿಸುತ್ತವೆ.
ಪದೇಪದೇ ಕೇಳಲಾಗುವ ಪ್ರಶ್ನೆಗಳು

ನಾನು ಮಧ್ಯ-ರೋಲ್ ಆ್ಯಡ್‌ಗಳನ್ನು ಬಳಸಬೇಕೇ ಎಂಬುದು ನನಗೆ ಹೇಗೆ ತಿಳಿಯುತ್ತದೆ?

ಮಧ್ಯ-ರೋಲ್ ಆ್ಯಡ್‌ಗಳಿಗಾಗಿ ಅತ್ಯುತ್ತಮ ನಿಯೋಜನೆಯನ್ನು YouTube ಸ್ವಯಂಚಾಲಿತವಾಗಿ ಕಂಡುಕೊಳ್ಳಬಹುದಾದರೂ, ಸೂಕ್ತವಲ್ಲದಿದ್ದರೆ ನೀವು ಮಧ್ಯ-ರೋಲ್‌ಗಳನ್ನು ಆಫ್ ಮಾಡಲು ಬಯಸಬಹುದು. ಉದಾಹರಣೆಗೆ, ಧ್ಯಾನದ ವೀಡಿಯೊಗಳು ಮಧ್ಯ-ರೋಲ್ ಆ್ಯಡ್‌ಗಳಿಗೆ ಸೂಕ್ತವಾಗಿರುವುದಿಲ್ಲ. ಅವುಗಳನ್ನು ಬಳಸಲು ನೀವು ಆಯ್ಕೆ ಮಾಡಿದರೆ, ವೀಕ್ಷಕರ ಅನುಭವಕ್ಕೆ ಅಡಚಣೆ ಉಂಟಾಗುವುದನ್ನು ತಪ್ಪಿಸಲು, ನಿಮ್ಮ ಕಂಟೆಂಟ್‌ನಲ್ಲಿ ಸ್ವಾಭಾವಿಕ ವಿರಾಮಗಳನ್ನು ಕಂಡುಕೊಳ್ಳುವುದಕ್ಕಾಗಿ ನಾವು ಸ್ವಯಂಚಾಲಿತವಾಗಿ ನಿಯೋಜಿಸಲಾದ ಮಧ್ಯ-ರೋಲ್ ಆ್ಯಡ್‌ಗಳನ್ನು ಶಿಫಾರಸು ಮಾಡುತ್ತೇವೆ.

ಸ್ವಯಂಚಾಲಿತವಾಗಿ ನಿಯೋಜಿಸಲಾದ ಮಧ್ಯ-ರೋಲ್ ಆ್ಯಡ್‌ಗಳು ಹೇಗೆ ಕೆಲಸ ಮಾಡುತ್ತವೆ?

ಸ್ವಯಂಚಾಲಿತವಾಗಿ ಸೇರಿಸಲಾದ ಮಧ್ಯ-ರೋಲ್ ಆ್ಯಡ್‌ಗಳು ವೀಕ್ಷಕರ ಅನುಭವ ಮತ್ತು ರಚನೆಕಾರರ ಆದಾಯದ ಸಾಮರ್ಥ್ಯವನ್ನು ಸಮತೋಲನಗೊಳಿಸುವ ಉದ್ದೇಶವನ್ನು ಹೊಂದಿರುತ್ತವೆ. YouTube ನ ಸುಧಾರಿತ ಮಷಿನ್ ಲರ್ನಿಂಗ್ ತಂತ್ರಜ್ಞಾನವು ದೊಡ್ಡ ಪ್ರಮಾಣದ ವೀಡಿಯೊಗಳನ್ನು ಗಮನಿಸುತ್ತದೆ ಮತ್ತು ಮಧ್ಯ-ರೋಲ್ ಆ್ಯಡ್‌ಗಳಿಗಾಗಿ ಅತ್ಯುತ್ತಮ ಸ್ಥಾನಗಳನ್ನು ಪತ್ತೆಹಚ್ಚಲು ಕಲಿಯುತ್ತದೆ. ಸ್ವಾಭಾವಿಕ ವಿಷುವಲ್ ಅಥವಾ ಆಡಿಯೋ ವಿರಾಮಗಳಂತಹ ಅಂಶಗಳನ್ನು ಮೌಲ್ಯಮಾಪನ ಮಾಡುವ ಮೂಲಕ ಇದನ್ನು ಮಾಡಲಾಗುತ್ತದೆ. ಸ್ವಯಂಚಾಲಿತವಾಗಿ ಸೇರಿಸಲಾದ ಮಧ್ಯ-ರೋಲ್ ಆ್ಯಡ್‌ಗಳು, ಹಸ್ತಚಾಲಿತವಾಗಿ ಸೇರಿಸಲಾದ ಮಧ್ಯ-ರೋಲ್ ಆ್ಯಡ್‌ಗಳಿಗಿಂತ, ಎರಡು ಪಟ್ಟು ಕಡಿಮೆ ಅಡಚಣೆಯನ್ನು ಉಂಟುಮಾಡುತ್ತವೆ ಎಂದು ಬಳಕೆದಾರರ ಅಧ್ಯಯನಗಳು ತೋರಿಸಿಕೊಟ್ಟಿವೆ.

ಮಧ್ಯ-ರೋಲ್ ಆ್ಯಡ್‌ಗಳು ವೀಕ್ಷಕರಿಗೆ ಕಿರಿಕಿರಿ ಉಂಟುಮಾಡುವುದಿಲ್ಲವೇ?

ಕೆಲವು ವೀಕ್ಷಕರಿಗೆ ಮಧ್ಯ-ರೋಲ್ ಆ್ಯಡ್‌ಗಳು ಕಿರಿಕಿರಿ ಅಥವಾ ಅಡಚಣೆ ಅನಿಸಬಹುದು. ಆದರೆ, ವೀಕ್ಷಕರ ಅನುಭವವನ್ನು ಸುಧಾರಿಸುವುದಕ್ಕಾಗಿ, ಕನಿಷ್ಠ ಅಡಚಣೆಗಾಗಿ ಅತ್ಯುತ್ತಮ ಸ್ಥಾನ ನಿಯೋಜನೆಯನ್ನು ಪತ್ತೆಹಚ್ಚಲು ನಾವು ಕಾಳಜಿವಹಿಸುತ್ತೇವೆ. ನಮ್ಮ ಪ್ಲ್ಯಾಟ್‌ಫಾರ್ಮ್‌ನ ವೀಕ್ಷಕರು, ಜಾಹೀರಾತುದಾರರು ಹಾಗೂ ರಚನೆಕಾರರ ಅಗತ್ಯಗಳ ಸಮತೋಲನ ಕಾಯ್ದುಕೊಳ್ಳುವುದು ನಮ್ಮ ಗುರಿಯಾಗಿದೆ.

ಸ್ವಯಂಚಾಲಿತವಾಗಿ ಸೇರಿಸಲಾದ ಮಧ್ಯ-ರೋಲ್ ಆ್ಯಡ್‌ಗಳನ್ನು ನಾನು ಈಗಲೂ ಹೊಂದಾಣಿಕೆ ಬದಲಾಯಿಸಬಹುದೇ?

ಹೌದು. ಸ್ವಯಂಚಾಲಿತವಾಗಿ ಸೇರಿಸಲಾದ ಮಧ್ಯ-ರೋಲ್ ಆ್ಯಡ್‌ಗಳನ್ನು ಆನ್ ಮಾಡಿದಾಗ, ನೀವು ಯಾವುದೇ ವೀಡಿಯೊದ ಮಾನಿಟೈಸೇಶನ್‌ಗೆ ಹೋಗಬಹುದು ಮತ್ತು ಆ್ಯಡ್ ವಿರಾಮ ಇರಿಸುವಿಕೆಗಳನ್ನು ಹಸ್ತಚಾಲಿತವಾಗಿ ಬದಲಾಯಿಸಬಹುದು.

YouTube Studio ದಲ್ಲಿ ಆ್ಯಡ್ ವಿರಾಮಗಳನ್ನು ನಿರ್ವಹಿಸುವುದು

ಮಧ್ಯ-ರೋಲ್ ಆ್ಯಡ್ ಸೇರಿಸುವಿಕೆಯು ವೀಕ್ಷಣೆಯ ಅನುಭವ ಹಾಗೂ ಆ್ಯಡ್ ಸರ್ವ ಮಾಡುವಿಕೆಯ ಸಾಧ್ಯತೆಯ ಮೇಲೆ ಪ್ರಭಾವ ಬೀರಬಹುದು. ವೀಡಿಯೊದಲ್ಲಿ, ಅಡಚಣೆ ಉಂಟುಮಾಡುವ ಸ್ಥಾನಗಳಲ್ಲಿ ಮಧ್ಯ-ರೋಲ್ ಆ್ಯಡ್‌ಗಳನ್ನು ಹಸ್ತಚಾಲಿತವಾಗಿ ನಿಯೋಜಿಸಿದರೆ, ನಮ್ಮ ಆ್ಯಡ್ ಸಿಸ್ಟಂ ಕಡಿಮೆ ಆ್ಯಡ್‌ಗಳನ್ನು ಸರ್ವ್ ಮಾಡಬಹುದು.

ಮಧ್ಯ-ರೋಲ್ ಆ್ಯಡ್‌ಗಳನ್ನು ನಿಯೋಜಿಸಲು 2 ವಿಧಾನಗಳಿವೆ:
  • ಸ್ವಯಂಚಾಲಿತ ಆ್ಯಡ್ ವಿರಾಮಗಳು: ನೀವು ಸ್ವಯಂಚಾಲಿತವಾಗಿ ಸೇರಿಸಲಾದ ಮಧ್ಯ-ರೋಲ್ ಆ್ಯಡ್‌ಗಳನ್ನು ಆನ್ ಮಾಡಬಹುದು, ಇದರರ್ಥ, ನಾವು ಅತ್ಯುತ್ತಮ ಆ್ಯಡ್ ನಿಯೋಜನೆ ಮತ್ತು ಫ್ರೀಕ್ವೆನ್ಸಿಯನ್ನು ಹುಡುಕುತ್ತೇವೆ ಮತ್ತು ಆ ಮೂಲಕ ವೀಕ್ಷಕರಿಗೆ ಹೆಚ್ಚು ಸಂತುಲಿತವಾದ ಅನುಭವವನ್ನು ರೂಪಿಸುತ್ತೇವೆ.
  • ಹಸ್ತಚಾಲಿತ ಆ್ಯಡ್ ವಿರಾಮಗಳು: ನೀವು ಹಸ್ತಚಾಲಿತವಾಗಿ ಆ್ಯಡ್ ವಿರಾಮಗಳನ್ನು ಇರಿಸುವ ಆಯ್ಕೆಯನ್ನು ಮಾಡಿದರೆ, ಅತ್ಯುತ್ತಮ ಫಲಿತಾಂಶಗಳಿಗಾಗಿ, ಅವುಗಳನ್ನು ಸ್ವಾಭಾವಿಕ ವಿರಾಮಗಳಲ್ಲಿ ಇರಿಸಲು ಪ್ರಯತ್ನಿಸಿ. ವಾಕ್ಯದ ಮಧ್ಯದಲ್ಲಿ ಅಥವಾ ಕ್ರಿಯೆಯ ಮಧ್ಯದಲ್ಲಿನ ಸ್ಥಾನಗಳಂತಹ, ಅಡಚಣೆ ಉಂಟುಮಾಡುವ ಸ್ಥಾನಗಳಲ್ಲಿ ಮಧ್ಯ-ರೋಲ್ ಆ್ಯಡ್‌ಗಳನ್ನು ಇರಿಸುವುದನ್ನು ತಪ್ಪಿಸಿ. ನೀವು ಸ್ವಾಭಾವಿಕ ಆ್ಯಡ್ ವಿರಾಮಗಳನ್ನು ಒಳಗೊಳ್ಳುವ ರೀತಿಯಲ್ಲಿ ನಿಮ್ಮ ಕಂಟೆಂಟ್ ಅನ್ನು ರಚಿಸಿದ್ದರೆ, ನೀವು ಬಯಸಿದಾಗ ಆ್ಯಡ್‌ಗಳು ಕಾಣಿಸಿಕೊಳ್ಳುವಂತೆ ಖಚಿತಪಡಿಸಿಕೊಳ್ಳಲು ನೀವು ಹಸ್ತಚಾಲಿತ ಆ್ಯಡ್ ವಿರಾಮಗಳನ್ನು ಬಳಸಬಹುದು.

ಸ್ವಯಂಚಾಲಿತ ಇರಿಸುವಿಕೆ

ನೀವು ಒಂದು ವೀಡಿಯೊಗಾಗಿ ಮಧ್ಯ-ರೋಲ್ ಆ್ಯಡ್‌ಗಳನ್ನು ಸ್ವಯಂಚಾಲಿತವಾಗಿ ಸೆಟ್ ಮಾಡಬಹುದು.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ಒಂದು ವೀಡಿಯೊವನ್ನು ಆರಿಸಿ, ನಂತರ ಮಾನಿಟೈಸೇಶನ್ ಎಂಬುದನ್ನು ಆಯ್ಕೆಮಾಡಿ.
  4. ನೀವು ಈಗಾಗಲೇ ಹಾಗೆ ಮಾಡಿರದಿದ್ದರೆ, ವೀಡಿಯೊಗಾಗಿ ಮಾನಿಟೈಸೇಶನ್ ಅನ್ನು ಆನ್ ಮಾಡಿ.
  5. "ವೀಡಿಯೊ ಪ್ಲೇ ಆಗುವಾಗ ಆ್ಯಡ್‌ಗಳನ್ನು ಇರಿಸಿ (ಮಧ್ಯ-ರೋಲ್)" ಎಂಬುದರ ಪಕ್ಕದಲ್ಲಿರುವ ಬಾಕ್ಸ್ ಅನ್ನು ಗುರುತು ಮಾಡಿ.

ಹಸ್ತಚಾಲಿತ ಇರಿಸುವಿಕೆ

ನೀವು ಮಧ್ಯ-ರೋಲ್ ಆ್ಯಡ್ ವಿರಾಮಗಳನ್ನು ಹಸ್ತಚಾಲಿತವಾಗಿ ಸೆಟ್ ಮಾಡಬಹುದು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ವೀಡಿಯೊ ಒಂದನ್ನು ಆರಿಸಿ, ನಂತರ ಮಾನಿಟೈಸೇಶನ್     ಎಂಬುದನ್ನು ಆಯ್ಕೆ ಮಾಡಿ
  4. ನೀವು ಈಗಾಗಲೇ ಹಾಗೆ ಮಾಡಿರದಿದ್ದರೆ, ವೀಡಿಯೊಗಾಗಿ ಮಾನಿಟೈಸೇಶನ್ ಅನ್ನು ಆನ್ ಮಾಡಿ.
  5. "ವೀಡಿಯೊ ಪ್ಲೇ ಆಗುವಾಗ ಆ್ಯಡ್‌ಗಳನ್ನು ಇರಿಸಿ (ಮಧ್ಯ-ರೋಲ್)" ಎಂಬುದರ ಪಕ್ಕದಲ್ಲಿರುವ ಬಾಕ್ಸ್ ಅನ್ನು ಗುರುತು ಮಾಡಿ.
  6. ಇರಿಸುವಿಕೆಯನ್ನು ಪರಿಶೀಲಿಸಿ ಎಂಬುದನ್ನು ಆಯ್ಕೆಮಾಡಿ.
    • ಆ್ಯಡ್ ವಿರಾಮವನ್ನು ಸೇರಿಸಿ:   ಆ್ಯಡ್ ವಿರಾಮ ಎಂಬುದನ್ನು ಕ್ಲಿಕ್ ಮಾಡಿ. ಆ್ಯಡ್‌ನ ಪ್ರಾರಂಭದ ಸಮಯವನ್ನು ನಮೂದಿಸಿ ಅಥವಾ ವರ್ಟಿಕಲ್ ಬಾರ್ ಅನ್ನು ಅಪೇಕ್ಷಿತ ಸಮಯದವರೆಗೆ ಡ್ರ್ಯಾಗ್ ಮಾಡಿ.
    • ಆ್ಯಡ್ ವಿರಾಮವನ್ನು ಅಳಿಸಿ: ಆ್ಯಡ್ ವಿರಾಮದ ಪಕ್ಕದಲ್ಲಿರುವ ಅಳಿಸಿ  ಎಂಬುದನ್ನು ಕ್ಲಿಕ್ ಮಾಡಿ.
  7. ಮೇಲಿನ ಬಲಭಾಗದಲ್ಲಿ, ಮುಂದುವರಿಸಿ ನಂತರ, ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಹೊಸ ವೀಡಿಯೊವನ್ನು ಅಪ್‌ಲೋಡ್ ಮಾಡುವಾಗ ಆ್ಯಡ್ ವಿರಾಮಗಳನ್ನು ಇರಿಸಿ

ನೀವು ಹೊಸ ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗ ನಿಮ್ಮ ಆ್ಯಡ್ ವಿರಾಮಗಳನ್ನು ನೀವು ಇರಿಸಬಹುದು: 

  1. YouTube Studio ಗೆ ಸೈನ್-ಇನ್ ಮಾಡಿ.
  2. 8 ನಿಮಿಷ ಅಥವಾ ಅದಕ್ಕಿಂತ ದೀರ್ಘವಾದ ವೀಡಿಯೊವನ್ನು ಅಪ್‌ಲೋಡ್ ಮಾಡಿ.
  3. “ಮಾನಿಟೈಸೇಶನ್” ಟ್ಯಾಬ್‌ನಲ್ಲಿ ಮಾನಿಟೈಸೇಶನ್ ಆನ್ ಮಾಡಿ.
  4. "ವೀಡಿಯೊ ಪ್ಲೇ ಆಗುವಾಗ ಆ್ಯಡ್‌ಗಳನ್ನು ಇರಿಸಿ (ಮಧ್ಯ-ರೋಲ್)" ಎಂಬುದರ ಪಕ್ಕದಲ್ಲಿರುವ ಬಾಕ್ಸ್ ಅನ್ನು ಗುರುತು ಮಾಡಿ.
  5. ನಿಮ್ಮ ವೀಡಿಯೊ ಪ್ರಕ್ರಿಯೆಗೊಳ್ಳುವುದು ಪೂರ್ಣಗೊಂಡ ನಂತರ, ಇರಿಸುವಿಕೆಯನ್ನು ಪರಿಶೀಲಿಸಿ ಎಂಬುದನ್ನು ಆಯ್ಕೆಮಾಡಿ.
    • ಆ್ಯಡ್ ವಿರಾಮವನ್ನು ಸೇರಿಸಿ:    ಆ್ಯಡ್ ವಿರಾಮ ಎಂಬುದನ್ನು ಕ್ಲಿಕ್ ಮಾಡಿ. ಆ್ಯಡ್‌ನ ಪ್ರಾರಂಭದ ಸಮಯವನ್ನು ನಮೂದಿಸಿ ಅಥವಾ ವರ್ಟಿಕಲ್ ಬಾರ್ ಅನ್ನು ಅಪೇಕ್ಷಿತ ಸಮಯದವರೆಗೆ ಡ್ರ್ಯಾಗ್ ಮಾಡಿ.
    • ಆ್ಯಡ್ ವಿರಾಮವನ್ನು ಅಳಿಸಿ: ಆ್ಯಡ್ ವಿರಾಮದ ಪಕ್ಕದಲ್ಲಿರುವ ಅಳಿಸಿ  ಎಂಬುದನ್ನು ಕ್ಲಿಕ್ ಮಾಡಿ.
  6. ಕೆಳಗಿನ ಬಲಭಾಗದಲ್ಲಿ, ಮುಂದಿನದು ಎಂಬುದನ್ನು ಆಯ್ಕೆಮಾಡಿ.
  7. ಅಪ್‌ಲೋಡ್ ಹರಿವನ್ನು ಪೂರ್ಣಗೊಳಿಸಿ.

ವೀಡಿಯೊ ಒಂದನ್ನು ಎಡಿಟ್ ಮಾಡುವಾಗ ಆ್ಯಡ್ ವಿರಾಮಗಳನ್ನು ಇರಿಸಿ

ನೀವು ವೀಡಿಯೊ ಒಂದನ್ನು ಎಡಿಟ್ ಮಾಡುವಾಗ, ನೀವು ಆ್ಯಡ್ ವಿರಾಮಗಳನ್ನು ಸಹ ಇರಿಸಬಹುದು: 

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊವನ್ನು ಕ್ಲಿಕ್ ಮಾಡಿ.
  4. ಎಡಭಾಗದ ಮೆನುವಿನಿಂದ ಎಡಿಟರ್ ಎಂಬುದನ್ನು ಕ್ಲಿಕ್ ಮಾಡಿ.
  5. Next to     ಆ್ಯಡ್ ವಿರಾಮಗಳ ಪಕ್ಕದಲ್ಲಿ, ಎಡಿಟ್ ಮಾಡಿ ಎಂಬುದನ್ನು ಆಯ್ಕೆಮಾಡಿ.
    • ಹಸ್ತಚಾಲಿತವಾಗಿ ಇರಿಸಲು:  ಆ್ಯಡ್ ವಿರಾಮ ಎಂಬುದನ್ನು ಕ್ಲಿಕ್ ಮಾಡಿ ಮತ್ತು ಆ್ಯಡ್‌ನ ಪ್ರಾರಂಭದ ಸಮಯವನ್ನು ನಮೂದಿಸಿ ಅಥವಾ ವರ್ಟಿಕಲ್ ಬಾರ್ ಅನ್ನು ಅಪೇಕ್ಷಿತ ಸಮಯದವರೆಗೆ ಡ್ರ್ಯಾಗ್ ಮಾಡಿ. 
    • ಸ್ವಯಂಚಾಲಿತವಾಗಿ ಇರಿಸಲು: ಸ್ವಯಂಚಾಲಿತವಾಗಿ ಇರಿಸಿ ಎಂಬುದನ್ನು ಕ್ಲಿಕ್ ಮಾಡಿ.
    • ಆ್ಯಡ್ ವಿರಾಮವನ್ನು ಅಳಿಸಿ: ಆ್ಯಡ್ ವಿರಾಮದ ಪಕ್ಕದಲ್ಲಿರುವ ಅಳಿಸಿ     ಎಂಬುದನ್ನು ಕ್ಲಿಕ್ ಮಾಡಿ.
  6. ಆ್ಯಡ್ ವಿರಾಮವನ್ನು ಅಳಿಸಲು, ಆ್ಯಡ್ ವಿರಾಮದ ಪಕ್ಕದಲ್ಲಿರುವ ಅಳಿಸಿ ಎಂಬುದನ್ನು ಕ್ಲಿಕ್ ಮಾಡಿ.
  7. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಮಧ್ಯ-ರೋಲ್ ಆ್ಯಡ್ ಇರಿಸುವಿಕೆಯನ್ನು ಪ್ರಿವ್ಯೂ ಮಾಡಿ ಮತ್ತು ಬದಲಾಯಿಸಿ

ನಿಮ್ಮ ಮಧ್ಯ-ರೋಲ್ ಆ್ಯಡ್ ವಿರಾಮಗಳ ಇರಿಸುವಿಕೆಯನ್ನು ನೀವು ಪ್ರಿವ್ಯೂ ಮಾಡಬಹುದು ಮತ್ತು ಅವುಗಳನ್ನು ಬದಲಾಯಿಸಬಹುದು.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ಒಂದು ವೀಡಿಯೊವನ್ನು ಆರಿಸಿ, ನಂತರ ಮಾನಿಟೈಸೇಶನ್ ಎಂಬುದನ್ನು ಆಯ್ಕೆಮಾಡಿ.
  4. "ವೀಡಿಯೊ ಪ್ಲೇ ಆಗುವಾಗ ಆ್ಯಡ್‌ಗಳನ್ನು ಇರಿಸಿ (ಮಧ್ಯ-ರೋಲ್)" ಕೆಳಗಿರುವ ಇರಿಸುವಿಕೆಯನ್ನು ಪರಿಶೀಲಿಸಿ ಎಂಬುದನ್ನು ಆಯ್ಕೆಮಾಡಿ.
  5. ವೀಡಿಯೊ ಪ್ಲೇಯರ್‌ನಲ್ಲಿ ಪ್ಲೇ ಮಾಡಿ  ಎಂಬುದನ್ನು ಆಯ್ಕೆ ಮಾಡಿ.
  6. ವೀಡಿಯೊದ ನಿರ್ದಿಷ್ಟ ಭಾಗವನ್ನು ತಲುಪಲು, ಕರ್ಸರ್ ಅನ್ನು ಡ್ರ್ಯಾಗ್ ಮಾಡಿ.

ಒಂದು ವೀಡಿಯೊಗಾಗಿ ಮಧ್ಯ-ರೋಲ್ ಆ್ಯಡ್ ವಿರಾಮಗಳನ್ನು ನಿರ್ವಹಿಸಿ

ನೀವು ಪ್ರತ್ಯೇಕ ವೀಡಿಯೊ ಒಂದಕ್ಕಾಗಿ ಮಧ್ಯ-ರೋಲ್ ಆ್ಯಡ್ ವಿರಾಮಗಳನ್ನು ಆನ್ ಅಥವಾ ಆಫ್ ಮಾಡಬಹುದು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ವೀಡಿಯೊಗಳು ಅನ್ನು ಆಯ್ಕೆ ಮಾಡಿ.
  3. ಒಂದು ವೀಡಿಯೊವನ್ನು ಆರಿಸಿ, ನಂತರ ಮಾನಿಟೈಸೇಶನ್ ಎಂಬುದನ್ನು ಆಯ್ಕೆಮಾಡಿ.
  4. ಮಧ್ಯ-ರೋಲ್ ಆ್ಯಡ್ ವಿರಾಮಗಳನ್ನು ಆನ್ ಅಥವಾ ಆಫ್ ಮಾಡಲು “ವೀಡಿಯೊ ಪ್ಲೇ ಆಗುವಾಗ ಆ್ಯಡ್‌ಗಳನ್ನು ಇರಿಸಿ (ಮಧ್ಯ-ರೋಲ್)” ಎಂಬುದರ ಪಕ್ಕದಲ್ಲಿರುವ ಬಾಕ್ಸ್ ಅನ್ನು ಗುರುತು ಮಾಡಿ. ಆನ್ ಮಾಡಿದಾಗ, ಮಧ್ಯ-ರೋಲ್‌ಗಳನ್ನು ಡೀಫಾಲ್ಟ್ ಆಗಿ ಸ್ವಯಂಚಾಲಿತವಾಗಿ ಇರಿಸಲಾಗುತ್ತದೆ.
  5. ಸೇವ್ ಮಾಡಿ ಎಂಬುದನ್ನು ಆಯ್ಕೆಮಾಡಿ.

ಅನೇಕ ವೀಡಿಯೊಗಳಿಗಾಗಿ ಮಧ್ಯ-ರೋಲ್ ಆ್ಯಡ್ ವಿರಾಮಗಳನ್ನು ನಿರ್ವಹಿಸಿ

ನೀವು ಅನೇಕ ವೀಡಿಯೊಗಳಿಗಾಗಿ ಮಧ್ಯ-ರೋಲ್ ಆ್ಯಡ್ ವಿರಾಮಗಳನ್ನು ಆನ್ ಅಥವಾ ಆಫ್ ಮಾಡಬಹುದು:
  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ಅನೇಕ ವೀಡಿಯೊಗಳನ್ನು ಆರಿಸಿ, ನಂತರ ಎಡಿಟ್ ಮೆನುವಿನಿಂದ “ಆ್ಯಡ್ ಸೆಟ್ಟಿಂಗ್‌ಗಳು” ಎಂಬುದನ್ನು ಆಯ್ಕೆ ಮಾಡಿ.
  4. ಮಧ್ಯ-ರೋಲ್ ಆ್ಯಡ್ ವಿರಾಮಗಳನ್ನು ಆನ್ ಅಥವಾ ಆಫ್ ಮಾಡಲು, “ವೀಡಿಯೊ ಪ್ಲೇ ಆಗುತ್ತಿರುವಾಗ ಆ್ಯಡ್‌ಗಳನ್ನು ಇರಿಸಿ (ಮಧ್ಯ-ರೋಲ್)” ಎಂಬುದನ್ನು ಗುರುತು ಮಾಡಿ. ಆನ್ ಆಗಿರುವಾಗ, ಮಧ್ಯ-ರೋಲ್ ಆ್ಯಡ್‌ಗಳನ್ನು ಡೀಫಾಲ್ಟ್ ಆಗಿ ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ.
  5. ನೀವು ಕೇವಲ ಆ್ಯಡ್ ವಿರಾಮಗಳಿಲ್ಲದ ವೀಡಿಯೊಗಳನ್ನು ಅಪ್‌ಡೇಟ್ ಮಾಡಲು ಬಯಸುತ್ತೀರಾ ಅಥವಾ ಅಸ್ತಿತ್ವದಲ್ಲಿರುವ ಯಾವುದೇ ಆ್ಯಡ್ ವಿರಾಮಗಳನ್ನು ಬದಲಾಯಿಸಲು ಬಯಸುತ್ತೀರಾ ಎಂಬುದನ್ನು ಆಯ್ಕೆಮಾಡಿ.
  6. ವೀಡಿಯೊಗಳನ್ನು ಅಪ್‌ಡೇಟ್ ಮಾಡಿ ಎಂಬುದನ್ನು ಆಯ್ಕೆಮಾಡಿ ಮತ್ತು ಈ ಬದಲಾವಣೆಯನ್ನು ಖಚಿತಪಡಿಸಲು, ಪ್ರದರ್ಶಿಸಲಾಗಿರುವ ಹಂತಗಳನ್ನು ಅನುಸರಿಸಿ.
  7. ವೀಡಿಯೊಗಳನ್ನು ಅಪ್‌ಡೇಟ್ ಮಾಡಿ ಎಂಬುದನ್ನು ಆಯ್ಕೆ ಮಾಡುವ ಮೂಲಕ ಈ ಬದಲಾವಣೆಯನ್ನು ಪೂರ್ಣಗೊಳಿಸಿ.

ಮಧ್ಯ-ರೋಲ್ ಆ್ಯಡ್ ವಿರಾಮಗಳಿಗಾಗಿ ಚಾನಲ್ ಅಪ್‌ಲೋಡ್ ಡೀಫಾಲ್ಟ್ ಅನ್ನು ಬದಲಾಯಿಸಿ

ಭವಿಷ್ಯದ ಅಪ್‌ಲೋಡ್‌ಗಳಲ್ಲಿ ಮಧ್ಯ-ರೋಲ್ ಆ್ಯಡ್ ವಿರಾಮಗಳನ್ನು ಪ್ರಸ್ತುತಪಡಿಸಲು ನಿಮ್ಮ ಚಾನಲ್‌ನ ಅಪ್‌ಲೋಡ್ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ನೀವು ಬದಲಾಯಿಸಬಹುದು. ನೀವು ಬಯಸಿದರೆ, ನೀವು ಈ ಸೆಟ್ಟಿಂಗ್ ಅನ್ನು ಆಫ್ ಸಹ ಮಾಡಬಹುದು:
  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆ ಮಾಡಿ.
  3. ಡೀಫಾಲ್ಟ್‌ಗಳನ್ನು ಅಪ್‌ಲೋಡ್ ಮಾಡಿ ನಂತರ ಮಾನಿಟೈಸೇಶನ್ ಎಂಬುದನ್ನು ಆಯ್ಕೆಮಾಡಿ.
  4. ಮಧ್ಯ-ರೋಲ್ ಆ್ಯಡ್ ವಿರಾಮಗಳನ್ನು ಆನ್ ಅಥವಾ ಆಫ್ ಮಾಡಲು “ವೀಡಿಯೊ ಪ್ಲೇ ಆಗುವಾಗ ಆ್ಯಡ್‌ಗಳನ್ನು ಇರಿಸಿ (ಮಧ್ಯ-ರೋಲ್)” ಎಂಬುದರ ಪಕ್ಕದಲ್ಲಿರುವ ಬಾಕ್ಸ್ ಅನ್ನು ಗುರುತು ಮಾಡಿ. ಆನ್ ಮಾಡಿದಾಗ, ಮಧ್ಯ-ರೋಲ್‌ಗಳನ್ನು ಡೀಫಾಲ್ಟ್ ಆಗಿ ಸ್ವಯಂಚಾಲಿತವಾಗಿ ಇರಿಸಲಾಗುತ್ತದೆ.
  5. ಸೇವ್ ಮಾಡಿ ಎಂಬುದನ್ನು ಆಯ್ಕೆಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2885615321259228551
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false