YouTube ಪ್ರಮಾಣೀಕೃತ ಪ್ರೋಗ್ರಾಂ ಅವಲೋಕನ

ಅಕ್ಟೋಬರ್ 2019 ರಿಂದ, YouTube ಪ್ರಮಾಣೀಕೃತ ಕೋರ್ಸ್‌ನ ಅರ್ಹತೆ ಬದಲಾಗಿದೆ. YouTube ಪಾಲುದಾರ ವ್ಯವಸ್ಥಾಪಕರು ಅಥವಾ ಕಂಟೆಂಟ್ ID ಗೆ ಆ್ಯಕ್ಸೆಸ್ ಇರುವ ರಚನೆಕಾರರು ಮತ್ತು ಪಾಲುದಾರರಿಗೆ ಮಾತ್ರ YouTube ಪ್ರಮಾಣೀಕೃತ ಕೋರ್ಸ್‌ಗಳು ತೆರೆದಿರುತ್ತವೆ. ನೀವು ಈ ಹಿಂದೆ YouTube ಪ್ರಮಾಣೀಕೃತ ಕೋರ್ಸ್ ಅನ್ನು ಪಾಸ್ ಮಾಡಿದ್ದು, ಈ ಅಗತ್ಯತೆಗಳನ್ನು ಪೂರೈಸದಿದ್ದರೆ, ನೀವು ಮರು ಪ್ರಮಾಣೀಕರಿಸಲು ಅರ್ಹರಾಗಿರುವುದಿಲ್ಲ.

YouTube ಪ್ರಮಾಣೀಕೃತ ಎಂಬುದು ಸುಧಾರಿತ YouTube ಸಿಸ್ಟಂಗಳು ಮತ್ತು ಪರಿಕರಗಳನ್ನು ಹೇಗೆ ಬಳಸುವುದು ಎಂಬುದನ್ನು ಅರ್ಹ ರಚನೆಕಾರರು ಮತ್ತು ಪಾಲುದಾರರಿಗೆ ಕಲಿಸುವ ಪ್ರೋಗ್ರಾಂ ಆಗಿದೆ. ಕೋರ್ಸ್‌ಗಳು ಹಕ್ಕುಗಳ ನಿರ್ವಹಣೆ ಮತ್ತು ಅತ್ಯಾಧುನಿಕ ವಿಶ್ಲೇಷಣೆಗಳಂತಹ ವಿಷಯಗಳನ್ನು ಒಳಗೊಂಡಿರುತ್ತವೆ. YouTube ಪ್ರಮಾಣೀಕೃತ ಕೋರ್ಸ್ ಅನ್ನು ತೆಗೆದುಕೊಳ್ಳುವುದು ಹೇಗೆ ಎಂದು ತಿಳಿಯಿರಿ.

ಗಮನಿಸಿ: YouTube ಯಾವುದೇ YouTube ಪ್ರಮಾಣೀಕೃತ ಕೋರ್ಸ್ ರಚನೆಕಾರರು ಅಥವಾ ಪಾಲುದಾರರಿಗೆ ಅನುಮೋದನೆ ನೀಡುವುದಿಲ್ಲ. YouTube ತಮ್ಮ ತಿಳುವಳಿಕೆ ಮತ್ತು ಸುಧಾರಿತ YouTube ಸಿಸ್ಟಮ್‌ಗಳು ಮತ್ತು ಪರಿಕರ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಭರವಸೆ ಅಥವಾ ಪ್ರಾತಿನಿಧ್ಯಗಳನ್ನು ನೀಡುವುದಿಲ್ಲ.

YouTube ಪ್ರಮಾಣೀಕೃತ ಬ್ಯಾಡ್ಜ್‌ಗೆ ಬದಲಾವಣೆಗಳು

YouTube ಪ್ರಮಾಣೀಕೃತ ಕೋರ್ಸ್ ಅನ್ನು ಪೂರ್ಣಗೊಳಿಸಿದ ವ್ಯಕ್ತಿಗಳು ಇನ್ನು ಮುಂದೆ YouTube ನಿಂದ ಬ್ಯಾಡ್ಜ್‌ಗಳನ್ನು ಸ್ವೀಕರಿಸುವುದಿಲ್ಲ. ಈಗಿರುವ ಬ್ಯಾಡ್ಜ್‌ಗಳು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ.

ಈ ಹಿಂದೆ ಒದಗಿಸಲಾದ YouTube ಪ್ರಮಾಣೀಕೃತ ಬ್ಯಾಡ್ಜ್‌ಗಳನ್ನು ಬಳಸಬಾರದು ಅಥವಾ ಪ್ರದರ್ಶಿಸಬಾರದು. ಹೆಚ್ಚಿನ ಮಾಹಿತಿಗೆ, YouTube ಪ್ರಮಾಣೀಕೃತ ಪ್ರೋಗ್ರಾಂ ಸೇವಾ ನಿಯಮಗಳು ಮತ್ತು YouTube ಪ್ರಮಾಣೀಕೃತ ನಡವಳಿಕೆಯ ಸಂಹಿತೆ ಅನ್ನು ನೋಡಿ.

YouTube ಪ್ರಮಾಣೀಕೃತ ಕೋರ್ಸ್‌ಗಳ ಕುರಿತು

YouTube ಪ್ರಮಾಣೀಕೃತವು ಈ ಮುಂದಿನ ವ್ಯಾಪಾರ-ಸಂಬಂಧಿತ ಹುದ್ದೆಗಳಿಗೆ ನಾಲ್ಕು ಅನನ್ಯ ಕೋರ್ಸ್‌ಗಳನ್ನು ಒದಗಿಸುತ್ತದೆ.

  ಕಂಟೆಂಟ್ ಮಾಲೀಕತ್ವ
ಕೋರ್ಸ್
ಸ್ವತ್ತು ಮಾನಿಟೈಸೇಶನ್ ಕೋರ್ಸ್ ಸಂಗೀತ ಕೋರ್ಸ್ ಸಂಗೀತ ಹಕ್ಕುಗಳ ನಿರ್ವಹಣೆ
ಚಾನಲ್ ನಿರ್ವಾಹಕರು ಶಿಫಾರಸು ಮಾಡಿರುವುದು      
ವ್ಯವಹಾರ ಕಾರ್ಯಾಚರಣೆಗಳು ಶಿಫಾರಸು ಮಾಡಿರುವುದು ಶಿಫಾರಸು ಮಾಡಿರುವುದು    
ಡಿಜಿಟಲ್ ಹಕ್ಕುಗಳ ವ್ಯವಸ್ಥಾಪಕರು ಮತ್ತು ಕಾನೂನು ಶಿಫಾರಸು ಮಾಡಿರುವುದು ಶಿಫಾರಸು ಮಾಡಿರುವುದು ಶಿಫಾರಸು ಮಾಡಿರುವುದು ಶಿಫಾರಸು ಮಾಡಿರುವುದು
ಕಲಾವಿದ ಚಾನಲ್ ನಿರ್ವಾಹಕರು ಮತ್ತು ಲೇಬಲ್ ಪ್ರತಿನಿಧಿಗಳು     ಶಿಫಾರಸು ಮಾಡಿರುವುದು ಶಿಫಾರಸು ಮಾಡಿರುವುದು
ಗಮನಿಸಿ: ಚಾನಲ್ ಬೆಳವಣಿಗೆಯು ಇನ್ನುಮುಂದೆ YouTube ಪ್ರಮಾಣೀಕೃತ ಕೋರ್ಸ್ ಆಗಿ ಲಭ್ಯವಿರುವುದಿಲ್ಲ.

ಕಂಟೆಂಟ್ ಮಾಲೀಕತ್ವ ಕೋರ್ಸ್

ಮಾನ್ಯತೆ ಪಡೆದ ಕೌಶಲ್ಯದೊಂದಿಗೆ CMS, ಕೃತಿಸ್ವಾಮ್ಯಗಳು, ಕ್ಲೈಮ್‍ಗಳು ಮತ್ತು ವಿಶ್ಲೇಷಣೆಗಳನ್ನು ಬಳಸಲು ಕಲಿಯಿರಿ.
  • ಪ್ರೇಕ್ಷಕರು: ಕಂಟೆಂಟ್ ಮ್ಯಾನೇಜರ್‌ಗಳು, ವ್ಯಾಪಾರ ಕಾರ್ಯಾಚರಣೆಗಳು
  • ಕವರ್ ಮಾಡಿದ ವಿಷಯಗಳು:
    • YouTube ನಲ್ಲಿ ಕೃತಿಸ್ವಾಮ್ಯ
    • CMS ನೊಂದಿಗೆ ವ್ಯಾಪಾರ ಕಾರ್ಯಾಚರಣೆಗಳು
    • ಕಂಟೆಂಟ್ ID ಮೂಲಕ ಹಕ್ಕುಗಳ ಜಾರಿಗೊಳಿಸುವಿಕೆ

ಸ್ವತ್ತು ಮಾನಿಟೈಸೇಶನ್ ಕೋರ್ಸ್

ಡಿಜಿಟಲ್ ಹಕ್ಕುಗಳು, ಸುಧಾರಿತ ವಿಶ್ಲೇಷಣೆಗಳು ಮತ್ತು ಸಂಕೀರ್ಣವಾದ ಕ್ಲೈಮ್ ಸನ್ನಿವೇಶಗಳ ಹೆಚ್ಚಿನ ಗ್ರಹಿಕೆಯೊಂದಿಗೆ, ನಿಮ್ಮ ಸ್ವತ್ತುಗಳ ಮಾನಿಟೈಸೇಶನ್ ಅನ್ನು ನೀವು ಅಳೆಯಬಹುದು ಮತ್ತು ಆಪ್ಟಿಮೈಜ್ ಮಾಡಬಹುದು.
  • ಪ್ರೇಕ್ಷಕರು: ಡಿಜಿಟಲ್ ಹಕ್ಕುಗಳ ನಿರ್ವಾಹಕರು & ಕಾನೂನು, ವ್ಯಾಪಾರ ಕಾರ್ಯಾಚರಣೆಗಳು
  • ಕವರ್ ಮಾಡಿದ ವಿಷಯಗಳು:
    • ಆದಾಯಕ್ಕಾಗಿ ಆಸ್ತಿ ಆಪ್ಟಿಮೈಸೇಶನ್
    • ಆದಾಯ ವಿಶ್ಲೇಷಣೆ ಮತ್ತು ವರದಿ ಮಾಡುವಿಕೆ

ಸಂಗೀತ ಕೋರ್ಸ್

ಕಲಾವಿದರ ಅಭಿಮಾನಿ ವರ್ಗವನ್ನು ಹೇಗೆ ಹೆಚ್ಚಿಸುವುದು ಮತ್ತು ಕಲಾವಿದರು ಮತ್ತು ಅವರ ತಂಡಗಳಿಗೆ ಸೂಕ್ತವಾದ ತಂತ್ರಗಳೊಂದಿಗೆ ಚಾನಲ್ ಕಾರ್ಯಕ್ಷಮತೆಯನ್ನು ಅಳತೆ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.
  • ಪ್ರೇಕ್ಷಕರು: ಡಿಜಿಟಲ್ ಹಕ್ಕುಗಳ ನಿರ್ವಾಹಕರು ಮತ್ತು ಕಾನೂನು, ಕಲಾವಿದ ಚಾನಲ್ ನಿರ್ವಾಹಕರು ಮತ್ತು ಲೇಬಲ್ ಪ್ರತಿನಿಧಿಗಳು
  • ಕವರ್ ಮಾಡಿದ ವಿಷಯಗಳು:
    • ಕಂಟೆಂಟ್ ಮತ್ತು ಚಾನಲ್ ತಂತ್ರಗಳು
    • ಪ್ರೊಮೋಷನ್‍ಗಳು ಮತ್ತು ತೊಡಗಿಸಿಕೊಳ್ಳುವಿಕೆ
    • Analytics
    • ಆದಾಯ
    • ಮೂಲ ಹಕ್ಕುಗಳ ನಿರ್ವಹಣೆ

ಸಂಗೀತ ಹಕ್ಕುಗಳ ನಿರ್ವಹಣೆ ಕೋರ್ಸ್

ಪ್ರಮಾಣದಲ್ಲಿ ಸಂಗೀತ ಹಕ್ಕುಗಳನ್ನು ನಿರ್ವಹಿಸಿ ಮತ್ತು ಸಂಗೀತ ಉದ್ಯಮದಲ್ಲಿ ಡಿಜಿಟಲ್ ಹಕ್ಕುಗಳ ನಿರ್ವಾಹಕರಿಗಾಗಿ ವಿನ್ಯಾಸ ಮಾಡಲಾದ ಪಾಠಗಳಿಂದ ಕ್ಯಾಟಲಾಗ್‍ನ ಗಳಿಸುವಿಕೆ ಸಾಂಭಾವ್ಯತೆಯನ್ನು ಗರಿಷ್ಠಗೊಳಿಸಿ.
  • ಪ್ರೇಕ್ಷಕರು: ಡಿಜಿಟಲ್ ಹಕ್ಕುಗಳ ನಿರ್ವಾಹಕರು ಮತ್ತು ಕಾನೂನು, ಕಲಾವಿದ ಚಾನಲ್ ನಿರ್ವಾಹಕರು ಮತ್ತು ಲೇಬಲ್ ಪ್ರತಿನಿಧಿಗಳು
  • ಕವರ್ ಮಾಡಿದ ವಿಷಯಗಳು:
    • YouTube ನಲ್ಲಿ ಸಂಗೀತ ಕೃತಿಸ್ವಾಮ್ಯ
    • ಆದಾಯಕ್ಕಾಗಿ ಆಸ್ತಿ ಆಪ್ಟಿಮೈಸೇಶನ್
    • ಕಂಟೆಂಟ್ ID ಕ್ಲೈಮ್‍ಗಳು ಮತ್ತು ನೀತಿಗಳು
    • ಕಂಟೆಂಟ್ ಡೆಲಿವರಿ ಮತ್ತು ವರದಿ ಮಾಡುವಿಕೆ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6059756323828527299
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false