ಆಯ್ದ ದೇಶಗಳು ಮತ್ತು ಪ್ರದೇಶಗಳಲ್ಲಿ ಮೊಬೈಲ್‌ನಲ್ಲಿ ಆಫ್‌ಲೈನ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಿ

ಆಯ್ದ ಪ್ರದೇಶಗಳಲ್ಲಿ, ಆಫ್‌ಲೈನ್‌ನಲ್ಲಿ ಪ್ಲೇ ಮಾಡಲು ನೀವು YouTube ಮೊಬೈಲ್ ಆ್ಯಪ್‌ನಿಂದ ಕೆಲವು ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು.

ಈ ಲೇಖನದಲ್ಲಿ ವಿವರಿಸಲಾದ ಫೀಚರ್‌ಗಳು, ಈ ಕೆಳಗೆ ಪಟ್ಟಿ ಮಾಡಲಾದ ಸ್ಥಳಗಳಲ್ಲಿ ಲಭ್ಯವಿವೆ. YouTube Premium ನಿಮ್ಮ ಸ್ಥಳದಲ್ಲಿ ಲಭ್ಯವಿದ್ದರೆ, YouTube Premium ನ ಸದಸ್ಯರಾಗುವ ಮೂಲಕ ನಿಮ್ಮ ಮೊಬೈಲ್ ಸಾಧನದಲ್ಲಿ ಡೌನ್‌ಲೋಡ್ ಮಾಡಿದ ವೀಡಿಯೊಗಳನ್ನು ನೀವು ವೀಕ್ಷಿಸಬಹುದು. ನೀವು YouTube Premium ಸದಸ್ಯರಾಗಿದ್ದರೆ, ನಿಮ್ಮ ಡೌನ್‌ಲೋಡ್ ಸೆಟ್ಟಿಂಗ್‌ಗಳನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ವೀಡಿಯೊಗಳನ್ನು ಡೌನ್‌ಲೋಡ್ ಮಾಡುವ ಸೌಲಭ್ಯ ಲಭ್ಯವಿರುವ ಸ್ಥಳಗಳು

ಕೆಳಗಿನ ಪ್ರದೇಶಗಳಲ್ಲಿ YouTube ಲಭ್ಯವಿಲ್ಲದಿರಬಹುದು ಮತ್ತು ಹಾಗಾಗಿ ಈ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸದೇ ಇರಬಹುದು. YouTube ನ ಸ್ಥಳೀಯ ಆವೃತ್ತಿಯನ್ನು ಹೆಚ್ಚಿನ ದೇಶಗಳಿಗೆ/ಪ್ರದೇಶಗಳಿಗೆ ತರಲು ಹಾಗೂ ಇನ್ನಷ್ಟು ಪ್ರದೇಶಗಳನ್ನು ಸೇರಿಸಲು ನಾವು ಕೆಲಸ ಮಾಡುತ್ತಿದ್ದೇವೆ.

  • ಅಫಘಾನಿಸ್ತಾನ
  • ಅಲ್ಜೀರಿಯಾ
  • ಅಂಗೋಲ
  • ಅಂಟಾರ್ಟಿಕಾ
  • ಅರ್ಮೇನಿಯಾ
  • ಅಜರ್‌ಬೈಜಾನ್
  • ಬಹರೈನ್
  • ಬಾಂಗ್ಲಾದೇಶ
  • ಬೆನಿನ್
  • ಭೂತಾನ್
  • ಬೊಟ್ಸ್‌ವಾನಾ
  • ಬೋವೆಟ್ ದ್ವೀಪ
  • ಬ್ರಿಟಿಷ್ ಹಿಂದೂ ಮಹಾಸಾಗರ ಪ್ರದೇಶ
  • ಬ್ರೂನೈ
  • ಬುರ್ಕಿನಾ ಫಾಸೊ
  • ಬುರುಂಡಿ
  • ಕೋಟ್ ಡಿ’ವಾರ್
  • ಕಾಂಬೋಡಿಯಾ
  • ಕ್ಯಾಮರೂನ್
  • ಕೇಪ್ ವೆರ್ಡ್
  • ಮಧ್ಯ ಆಫ್ರಿಕಾ ಗಣರಾಜ್ಯ
  • ಚಾಡ್
  • ಕೊಮೊರೋಸ್
  • ಕುಕ್ ದ್ವೀಪಗಳು
  • ಕಾಂಗೊ ಪ್ರಜಾಸತ್ತೀಯ ಗಣರಾಜ್ಯ
  • ಡಿಬೌಟಿ
  • ಈಜಿಪ್ಟ್
  • ಈಕ್ವಟೋರಿಯಲ್ ಗಿನೀ
  • ಎರಿಟ್ರಿಯಾ
  • ಎಸ್ವಾಟಿನಿ
  • ಇಥಿಯೋಪಿಯಾ
  • ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ
  • ಫಿಜಿ
  • ಫ್ರೆಂಚ್ ಗಯಾನಾ
  • ಫ್ರೆಂಚ್ ಪೊಲಿನೇಶಿಯಾ
  • ಗಬಾನ್‌
  • ಜಾರ್ಜಿಯಾ
  • ಘಾನಾ
  • ಗ್ರೆನಾಡಾ
  • ಗುವಾಮ್
  • ಗಿನೀ
  • ಗಿನೀ-ಬಿಸಾವ್
  • ಭಾರತ
  • ಇಂಡೋನೇಷ್ಯಾ
  • ಇರಾನ್
  • ಇರಾಕ್
  • ಇಸ್ರೇಲ್
  • ಜೋರ್ಡಾನ್
  • ಕೀನ್ಯಾ
  • ಕಿರಿಬಾಟಿ
  • ಕುವೈತ್
  • ಕಿರ್ಗಿಸ್ತಾನ್
  • ಲಾವೊಸ್
  • ಲೆಬೆನಾನ್
  • ಲೆಸೋಥೋ
  • ಲೈಬೀರಿಯಾ
  • ಲಿಬಿಯಾ
  • ಮಖೌ
  • ಮಡಗಾಸ್ಕರ್
  • ಮಲಾವಿ
  • ಮಲೇಶಿಯಾ
  • ಮಾಲ್ಡೀವ್ಸ್
  • ಮಾಲಿ
  • ಮಾರ್ಷಲ್ ದ್ವೀಪಗಳು
  • ಮೌರಿಟೇನಿಯಾ
  • ಮಾರಿಶಸ್
  • ಮಯೋಟ್
  • ಮಾಲ್ಡೋವಾ
  • ಮಂಗೋಲಿಯಾ
  • ಮೊರಾಕ್ಕೋ
  • ಮೊಜಾಂಬಿಕ್
  • ಮ್ಯಾನ್ಮಾರ್ (ಬರ್ಮಾ)
  • ನಮೀಬಿಯಾ
  • ನೌರು
  • ನೇಪಾಳ
  • ನ್ಯೂ ಕ್ಯಾಲೆಡೋನಿಯ
  • ನೈಜರ್
  • ನೈಜೀರಿಯಾ
  • ಉತ್ತರ ಮರಿಯಾನ ದ್ವೀಪಗಳು
  • ಓಮನ್
  • ಪಾಕಿಸ್ತಾನ
  • ಪಲಾವ್
  • ಪ್ಯಾಲಸ್ಟೈನ್
  • ಪಪುವಾ ನ್ಯೂಗಿನಿಯಾ
  • ಫಿಲಿಪೀನ್ಸ್
  • ಕತಾರ್
  • ಕಾಂಗೊದ ಗಣರಾಜ್ಯ
  • ರಿಯೂನಿಯನ್
  • ರುವಾಂಡಾ
  • ಸೌ ಟೋಮೆ ಮತ್ತು ಪ್ರಿನ್ಸಿಪೆ
  • ಸೇಂಟ್ ಹೆಲೀನಾ
  • ಸೇಂಟ್ ಪಿಯರ್ ಮತ್ತು ಮಿಕಲಾನ್
  • ಸಮೋವಾ
  • ಸೌದಿ ಅರೇಬಿಯಾ
  • ಸೆನೆಗಲ್
  • ಸೇಶೆಲ್ಸ್
  • ಸಿಯೆರಾ ಲಿಯೋನ್
  • ಸ್ಲೋವಾಕಿಯಾ
  • ಸೊಲೊಮನ್ ದ್ವೀಪಗಳು
  • ಸೊಮಾಲಿಯಾ
  • ದಕ್ಷಿಣ ಆಫ್ರಿಕಾ
  • ದಕ್ಷಿಣ ಸೂಡಾನ್
  • ಶ್ರೀಲಂಕಾ
  • ಸೂಡಾನ್
  • ಸ್ವ್ಯಾಲ್ಬಾರ್ಡ್ ಮತ್ತು ಜಾನ್ ಮೆಯನ್
  • ತಜಕಿಸ್ತಾನ್
  • ತಾಂಜಾನಿಯಾ
  • ಥಾಯ್ಲೆಂಡ್
  • ದಿ ಗ್ಯಾಂಬಿಯಾ
  • ಟಿಮೋರ್-ಲೆಸ್ಟೆ
  • ಟೋಗೊ
  • ಟೋಂಗಾ
  • ಟ್ಯುನೀಸಿಯಾ
  • ತುರ್ಕಿಯೆ
  • ತುರ್ಕ್‌ಮೇನಿಸ್ತಾನ್
  • ಟುವಾಲು
  • ಉಗಾಂಡಾ
  • ಯುನೈಟೆಡ್ ಅರಬ್ ಎಮಿರೇಟ್ಸ್
  • ಉಜ್ಬೇಕಿಸ್ತಾನ್
  • ವನುವಾಟು
  • ವಿಯೆಟ್ನಾಂ
  • ಪಶ್ಚಿಮ ಸಹಾರಾ
  • ಯೆಮನ್‌
  • ಜಾಂಬಿಯಾ
  • ಜಿಂಬಾಬ್ವೆ

ವೀಡಿಯೊಗಳನ್ನು ಆಫ್‌ಲೈನ್‌ನಲ್ಲಿ ವೀಕ್ಷಿಸಲು ಡೌನ್‌ಲೋಡ್ ಮಾಡಿ

ನೀವು ಮೇಲೆ ಪಟ್ಟಿ ಮಾಡಲಾದ ದೇಶ/ಪ್ರದೇಶಗಳಲ್ಲಿನ ಒಂದರಲ್ಲಿ ವಾಸಿಸುತ್ತಿದ್ದರೆ, ಆಫ್‌ಲೈನ್ ವೀಕ್ಷಣೆಗಾಗಿ ನೀವು YouTube ಮೊಬೈಲ್ ಆ್ಯಪ್‌ನಿಂದ ಕೆಲವು ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು. ಈ ವೀಡಿಯೊಗಳು 48 ಗಂಟೆಗಳವರೆಗೆ ಲಭ್ಯವಿರುತ್ತವೆ. ಅದರ ನಂತರ, ನೀವು ಪ್ರತಿ 48 ಗಂಟೆಗಳಿಗೊಮ್ಮೆ ನಿಮ್ಮ ಸಾಧನವನ್ನು ಮೊಬೈಲ್ ಅಥವಾ ವೈ-ಫೈ ನೆಟ್‌ವರ್ಕ್‌ಗೆ ಮರುಕನೆಕ್ಟ್ ಮಾಡುವ ಅಗತ್ಯವಿದೆ. ಮರುಕನೆಕ್ಟ್ ಮಾಡುವುದರಿಂದ ವೀಡಿಯೊದಲ್ಲಿನ ಬದಲಾವಣೆಗಳು ಅಥವಾ ಅದರ ಲಭ್ಯತೆಯನ್ನು ಪರಿಶೀಲಿಸಲು ಆ್ಯಪ್‌ಗೆ ಅನುಮತಿಸುತ್ತದೆ.

  1. ವೀಡಿಯೊ ವೀಕ್ಷಣಾ ಪುಟಕ್ಕೆ ಹೋಗಿ.
  2. ವೀಡಿಯೊದ ಕೆಳಭಾಗದಲ್ಲಿ, ಡೌನ್‌ಲೋಡ್ ಮಾಡಿ ಅನ್ನು ಟ್ಯಾಪ್ ಮಾಡಿ ಅಥವಾ ಇನ್ನಷ್ಟು ನಂತರ ಡೌನ್‌ಲೋಡ್ ಅನ್ನು ಟ್ಯಾಪ್ ಮಾಡಿ.
  3. ವೀಡಿಯೊವನ್ನು ಡೌನ್‌ಲೋಡ್ ಮಾಡಿದ ನಂತರ, ಡೌನ್‌ಲೋಡ್ ಮಾಡಲಾಗಿದೆ ಎಂಬುದು ವೀಡಿಯೊದ ಕೆಳಗೆ ನೀಲಿ ಬಣ್ಣಕ್ಕೆ ತಿರುಗುತ್ತದೆ.

ನೀವು ವೀಡಿಯೊ ಅಥವಾ ಪ್ಲೇಪಟ್ಟಿ‌ಯನ್ನು ಡೌನ್‌ಲೋಡ್ ಮಾಡುತ್ತಿರುವಾಗ ನಿಮ್ಮ ಸಾಧನವು ಕನೆಕ್ಟಿವಿಟಿಯನ್ನು ಕಳೆದುಕೊಂಡರೆ, ನೀವು ಇಂಟರ್ನೆಟ್‌ಗೆ ಮರುಕನೆಕ್ಟ್ ಮಾಡಿದಾಗ ನಿಮ್ಮ ಪ್ರಗತಿಯು ಸ್ವಯಂಚಾಲಿತವಾಗಿ ಪುನರಾರಂಭವಾಗುತ್ತದೆ.

ಗಮನಿಸಿ: ಕೆಲವು ದೇಶಗಳಲ್ಲಿ/ಪ್ರದೇಶಗಳಲ್ಲಿ, ಇಂಟರ್ನೆಟ್‌ ಕನೆಕ್ಷನ್‌ ಅಗತ್ಯವಿಲ್ಲದೇ ಸಂಗೀತವಲ್ಲದ ಕಂಟೆಂಟ್ ಅನ್ನು 29 ದಿನಗಳವರೆಗೆ ಪ್ಲೇ ಮಾಡಬಹುದು. ಪ್ರತಿ 29 ದಿನಗಳ ನಂತರ ಒಮ್ಮೆಯಾದರೂ ನೀವು ಇಂಟರ್ನೆಟ್‌ಗೆ ಮರುಕನೆಕ್ಟ್ ಮಾಡಬೇಕಾಗುತ್ತದೆ.

YouTube ಆಫ್‌ಲೈನ್ ವೀಡಿಯೊಗಳ ಕುರಿತು ಇನ್ನಷ್ಟು ತಿಳಿಯಿರಿ.

ಡೌನ್‌ಲೋಡ್ ಮಾಡಿದ ವೀಡಿಯೊಗಳನ್ನು ವೀಕ್ಷಿಸಿ ಮತ್ತು ತೆಗೆದುಹಾಕಿ

ಪ್ರತ್ಯೇಕ ವೀಡಿಯೊಗಳನ್ನು ತೆಗೆದುಹಾಕಿ

ಡೌನ್‌ಲೋಡ್ ಮಾಡಲಾದ ವೀಡಿಯೊಗಳು ಅಥವಾ ಪ್ಲೇಪಟ್ಟಿಗಳನ್ನು ವೀಕ್ಷಿಸಲು, YouTube ಮೊಬೈಲ್ ಆ್ಯಪ್ ನಲ್ಲಿ ಲೈಬ್ರರಿ ಟ್ಯಾಬ್ ಅಡಿಯಲ್ಲಿ ಡೌನ್‌ಲೋಡ್‌ಗಳು  ಅನ್ನು ಕ್ಲಿಕ್ ಮಾಡಿ.

ನೀವು ಡೌನ್‌ಲೋಡ್ ಮಾಡಿದ ವೀಡಿಯೊಗಳನ್ನು ನೀವು ಎರಡು ವಿಧಗಳಲ್ಲಿ ತೆಗೆದುಹಾಕಬಹುದು:

  1. ನೀವು ತೆಗೆದುಹಾಕಲು ಬಯಸುವ ವೀಡಿಯೊದ ಕೆಳಗೆ ಡೌನ್‌ಲೋಡ್ ಮಾಡಲಾಗಿದೆ  ಅನ್ನು ಕ್ಲಿಕ್ ಮಾಡಿ.
  2. ಅಳಿಸಿ ಅನ್ನು ಆಯ್ಕೆಮಾಡಿ.

ಅಥವಾ

  1. YouTube ಮೊಬೈಲ್ ಆ್ಯಪ್‌ನಲ್ಲಿ ಲೈಬ್ರರಿ ಟ್ಯಾಬ್‌ಗೆ ಹೋಗಿ. 
  2. ಡೌನ್‌ಲೋಡ್‌ಗಳು ಅನ್ನು ಟ್ಯಾಪ್ ಮಾಡಿ. 
  3. ನೀವು ತೆಗೆದುಹಾಕಲು ಬಯಸುವ ವೀಡಿಯೊದ ಮುಂದೆ ಇರುವ ಇನ್ನಷ್ಟು  ಅನ್ನು ಟ್ಯಾಪ್ ಮಾಡಿ.
  4. ಡೌನ್‌ಲೋಡ್‌ಗಳಿಂದ ಅಳಿಸಿ ಎಂಬುದನ್ನು ಆಯ್ಕೆಮಾಡಿ.

ಡೌನ್‌ಲೋಡ್ ಮಾಡಿದ ಎಲ್ಲಾ ವೀಡಿಯೊಗಳನ್ನು ತೆಗೆದುಹಾಕಿ

ಕೆಳಗಿನ ಹಂತಗಳನ್ನು ಅನುಸರಿಸಿ ನೀವು ಡೌನ್‌ಲೋಡ್ ಮಾಡಿದ ವೀಡಿಯೊಗಳನ್ನು ನೀವು ವೀಕ್ಷಿಸಬಹುದು ಮತ್ತು ಅಳಿಸಬಹುದು:

  1. ನಿಮ್ಮ ಪ್ರೊಫೈಲ್ ಚಿತ್ರ  ನಂತರ ಸೆಟ್ಟಿಂಗ್‌ಗಳು   ಎಂಬುದನ್ನು ಟ್ಯಾಪ್ ಮಾಡಿ.
  2. ಸೆಟ್ಟಿಂಗ್‌ಗಳು ನಲ್ಲಿ, ಹಿನ್ನೆಲೆ ಮತ್ತು ಡೌನ್‌ಲೋಡ್‌ಗಳು ನಂತರ ಎಲ್ಲಾ ಡೌನ್‌ಲೋಡ್‌ಗಳನ್ನು ಅಳಿಸಿ ಅನ್ನು ಟ್ಯಾಪ್ ಮಾಡಿ.
  3. "ಎಲ್ಲಾ ಡೌನ್‌ಲೋಡ್ ಮಾಡಿದ ವೀಡಿಯೊಗಳು ಮತ್ತು ಪ್ಲೇಪಟ್ಟಿಗಳನ್ನು ಅಳಿಸಬೇಕೆ?" ಎಂಬ ಡೈಲಾಗ್‌ನ ಕೆಳಗೆ ಕಾಣಿಸುವ ಅಳಿಸಿ ಅನ್ನು ಟ್ಯಾಪ್ ಮಾಡಿ

ಡೌನ್‌ಲೋಡ್ ಸೆಟ್ಟಿಂಗ್‌ಗಳನ್ನು ಅಪ್‌ಡೇಟ್ ಮಾಡಿ

ಡೀಫಾಲ್ಟ್ ಆಗಿ, ವೈ-ಫೈ ಮತ್ತು ಮೊಬೈಲ್ ಡೇಟಾ ಎರಡರಲ್ಲೂ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲಾಗುತ್ತದೆ. ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ವೀಡಿಯೊಗಳು ಅಥವಾ ಪ್ಲೇಪಟ್ಟಿಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸಲು, ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ  ನಂತರ ಸೆಟ್ಟಿಂಗ್‌ಗಳು   ನಂತರ ಬ್ಯಾಕ್‌ಗ್ರೌಂಡ್‌ಗಳು ಮತ್ತು ಡೌನ್‌ಲೋಡ್‌ಗಳು ಮತ್ತು ವೈ-ಫೈ ಮೂಲಕ ಮಾತ್ರ ಡೌನ್‌ಲೋಡ್ ಮಾಡಿ ಅನ್ನು ಆಫ್‌ ಮಾಡಿ.

ಸೆಟ್ಟಿಂಗ್‌ಗಳು  ನಂತರ ಹಿನ್ನೆಲೆ ಮತ್ತು ಡೌನ್‌ಲೋಡ್‌ಗಳು ನಂತರ ಡೌನ್‌ಲೋಡ್ ಗುಣಮಟ್ಟ ಎಂಬಲ್ಲಿಗೆ ಹೋಗುವ ಮೂಲಕ ನಿಮ್ಮ ಡೌನ್‌ಲೋಡ್‌ಗಳ ಡೀಫಾಲ್ಟ್ ಗುಣಮಟ್ಟವನ್ನು ಸೆಟ್ ಮಾಡಿ. ಉತ್ತಮ ಗುಣಮಟ್ಟದ ವೀಡಿಯೊಗಳು ಹೆಚ್ಚಿನ ಡೇಟಾವನ್ನು ಬಳಸಿಕೊಳ್ಳಬಹುದು, ಡೌನ್‌ಲೋಡ್‌ಗಳು ವಿಭಾಗದಲ್ಲಿ ತೋರಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಮತ್ತು ನಿಮ್ಮ ಸಾಧನದಲ್ಲಿ ಹೆಚ್ಚಿನ ಸ್ಥಳವನ್ನು ತೆಗೆದುಕೊಳ್ಳಬಹುದು.

ಡೌನ್‌ಲೋಡ್ ಮಾಡಬಹುದಾದ ಕಂಟೆಂಟ್‌ಗಾಗಿ ನಿಮ್ಮ ಸಾಧನದಲ್ಲಿ ನೀವು ಎಷ್ಟು ಸ್ಥಾಳಾವಕಾಶವನ್ನು ಉಳಿಸಿದ್ದೀರಿ ಎಂಬುದನ್ನು ವೀಕ್ಷಿಸಲು, ಆ್ಯಪ್‌ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರ   ನಂತರ ಸೆಟ್ಟಿಂಗ್‌ಗಳು  ನಂತರಹಿನ್ನೆಲೆ ಮತ್ತು ಡೌನ್‌ಲೋಡ್‌ಗಳು ಅನ್ನು ಟ್ಯಾಪ್ ಮಾಡಿ. ನಿಮ್ಮ ಸಾಧನದಲ್ಲಿ ನೀವು 5% ಕ್ಕಿಂತ ಕಡಿಮೆ ಸಂಗ್ರಹಣೆ ಸ್ಥಳವನ್ನು ಹೊಂದಿದ್ದರೆ, ನೀವು ಹೆಚ್ಚಿನ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚುವರಿ ಸ್ಥಳಾವಕಾಶವನ್ನು ಪಡೆಯಲು, ಅಸ್ತಿತ್ವದಲ್ಲಿರುವ ಡೌನ್‌ಲೋಡ್‌ಗಳು ಅಥವಾ ನಿಮ್ಮ ಸಾಧನದಲ್ಲಿ ಸಂಗ್ರಹವಾಗಿರುವ ಇತರ ಕಂಟೆಂಟ್ ಅನ್ನು ತೆಗೆದುಹಾಕಲು ಪ್ರಯತ್ನಿಸಿ.

ಆಫ್‌ಲೈನ್ ಲಭ್ಯತೆ

ಕೆಲವು ವೀಡಿಯೊಗಳು ಆಫ್‌ಲೈನ್ ಪ್ಲೇಬ್ಯಾಕ್‌ಗೆ ಲಭ್ಯವಿಲ್ಲ. ಹೆಚ್ಚಿನ ದೇಶಗಳಲ್ಲಿ/ಪ್ರದೇಶಗಳಲ್ಲಿ, ಆಫ್‌ಲೈನ್ ಪ್ಲೇಬ್ಯಾಕ್‌ಗಾಗಿ ವೀಡಿಯೊ ಲಭ್ಯವಿಲ್ಲದಿದ್ದರೆ, ಡೌನ್‌ಲೋಡ್ ಮಾಡುವ ಫೀಚರ್ ಸಹ ಲಭ್ಯವಿರುವುದಿಲ್ಲ.

ಗಮನಿಸಿ:
  • ಭಾರತದಲ್ಲಿ, 29 ಅಕ್ಟೋಬರ್ 2020 ರಿಂದ, T-ಸರಣಿ ಸಂಗೀತವನ್ನು ಡೌನ್‌ಲೋಡ್ ಮಾಡಲು ಬಳಕೆದಾರರಿಗೆ YouTube Premium ಸಬ್‌ಸ್ಕ್ರಿಪ್ಶನ್‌ನ ಅಗತ್ಯವಿದೆ.
  • ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲಿ, YouTube ನಲ್ಲಿನ ವೀಡಿಯೊಗಳು (ಶೋಗಳು ಮತ್ತು ಚಲನಚಿತ್ರಗಳನ್ನು ಖರೀದಿಗಾಗಿ ಸೇರಿಸಿರುವುದಿfಲ) ಡೌನ್‌ಲೋಡ್‌ಗೆ ಲಭ್ಯವಿರುತ್ತವೆ. ಆದರೆ, ಮುಂದುವರೆಯಲು ಕೆಲವರಿಗೆ YouTube Premium ಸದಸ್ಯತ್ವದ ಅಗತ್ಯವಿರುತ್ತದೆ.
    • ಈ ವೀಡಿಯೊಗಳಿಗಾಗಿ, ನೀವು ಇನ್ನೂ ಸದಸ್ಯರಾಗಿಲ್ಲದಿದ್ದರೆ, ಡೌನ್‌ಲೋಡ್ ಮಾಡಿ  ಅನ್ನು ಟ್ಯಾಪ್ ಮಾಡಿದಾಗ YouTube Premium ಗೆ ಸೈನ್ ಅಪ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. YouTube Premium ಸದಸ್ಯರಾಗಿ, ನೀವು ವೀಡಿಯೊವನ್ನು ಡೌನ್‌ಲೋಡ್ ಮಾಡಬಹುದು.

ಡೌನ್‌ಲೋಡ್ ಮಾಡಿರುವ ವೀಡಿಯೊಗಳನ್ನು 48 ಗಂಟೆಗಳವರೆಗೆ ಆಫ್‌ಲೈನ್‌ನಲ್ಲಿ ಪ್ಲೇ ಮಾಡಬಹುದು. ಅದರ ನಂತರ, ನೀವು ಪ್ರತಿ 48 ಗಂಟೆಗಳಿಗೊಮ್ಮೆ ನಿಮ್ಮ ಸಾಧನವನ್ನು ಮೊಬೈಲ್ ಅಥವಾ ವೈ-ಫೈ ನೆಟ್‌ವರ್ಕ್‌ಗೆ ಮರುಕನೆಕ್ಟ್ ಮಾಡುವ ಅಗತ್ಯವಿದೆ. ಮರುಕನೆಕ್ಟ್ ಮಾಡುವುದರಿಂದ ವೀಡಿಯೊದಲ್ಲಿನ ಬದಲಾವಣೆಗಳು ಅಥವಾ ಅದರ ಲಭ್ಯತೆಯನ್ನು ಪರಿಶೀಲಿಸಲು ಆ್ಯಪ್‌ಗೆ ಅನುಮತಿಸುತ್ತದೆ. ಆಫ್‌ಲೈನ್ ಪ್ಲೇಬ್ಯಾಕ್‌ಗಾಗಿ ವೀಡಿಯೊ ಇನ್ನು ಮುಂದೆ ಲಭ್ಯವಿಲ್ಲದಿದ್ದರೆ, ಮುಂದಿನ ಸಿಂಕ್ ಸಮಯದಲ್ಲಿ ನಿಮ್ಮ ಸಾಧನದಿಂದ ಅದನ್ನು ತೆಗೆದುಹಾಕಲಾಗುತ್ತದೆ.

ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ನೀವು ಸೈನ್ ಇನ್ ಆಗಿರಬೇಕು. ಡೌನ್‌ಲೋಡ್‌ಗಳಿಗೆ ಸೇರಿಸಲಾದ ವೀಡಿಯೊಗಳು ಅಥವಾ ಪ್ಲೇಪಟ್ಟಿಗಳನ್ನು ಒಂದೇ ಖಾತೆಯೊಂದಿಗೆ ಸೈನ್ ಇನ್ ಮಾಡಿದಾಗ ಪ್ಲೇ ಮಾಡಬಹುದು. ನಿಮ್ಮ ಸಾಧನವು ಮೊಬೈಲ್ ಅಥವಾ ವೈ-ಫೈ ನೆಟ್‌ವರ್ಕ್‌ಗೆ ಕನೆಕ್ಟ್ ಆದಾಗ ಮಾತ್ರ ಕಾಮೆಂಟ್ ಮಾಡುವುದು ಮತ್ತು ಇಷ್ಟಪಡುವಂತಹ ಕೆಲವು ಫೀಚರ್‌ಗಳು ಲಭ್ಯವಿರುತ್ತವೆ.

ಶಿಫಾರಸು ಮಾಡಲಾದ ಡೌನ್‌ಲೋಡ್‌ಗಳು

ನೀವು ಈಗಾಗಲೇ ಡೌನ್‌ಲೋಡ್ ಮಾಡಿರುವ ಯಾವುದೇ ವೀಡಿಯೊಗಳ ಕೆಳಗೆ ಡೌನ್‌ಲೋಡ್‌ಗಳ ಪುಟದಲ್ಲಿ ಶಿಫಾರಸು ಮಾಡಲಾದ ಕಂಟೆಂಟ್‌ನ ಪಟ್ಟಿ ಇರುತ್ತದೆ. ನಾವು ಹೊಸ ಡೌನ್‌ಲೋಡ್ ಶಿಫಾರಸುಗಳನ್ನು ಹೊಂದಿರುವಾಗ ನಿಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿ ಪಾಪ್-ಅಪ್ ಆಗುವ ಪ್ಯಾನಲ್ ಕೂಡ ಇರಬಹುದು.

ಶಿಫಾರಸು ಮಾಡಿದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು, ಡೌನ್‌ಲೋಡ್ ಮಾಡಿ  ಅನ್ನು ಟ್ಯಾಪ್ ಮಾಡಿ.

ಶಿಫಾರಸು ಮಾಡಲಾದ ಡೌನ್‌ಲೋಡ್‌ಗಳನ್ನು ನಿಮ್ಮ ಸಾಧನದಲ್ಲಿ ಸ್ವಯಂಚಾಲಿತವಾಗಿ ಉಳಿಸಲಾಗುವುದಿಲ್ಲ ಅಥವಾ ಅವುಗಳನ್ನು ಉಳಿಸಲು ನೀವು ಡೌನ್‌ಲೋಡ್ ಮಾಡಿ ಅನ್ನು ಟ್ಯಾಪ್ ಮಾಡದ ಹೊರತು ನಿಮ್ಮ ಯಾವುದೇ ಸಂಗ್ರಹಣೆಯನ್ನು ಬಳಸುವುದಿಲ್ಲ. ನೀವು ಆಫ್‌ಲೈನ್‌ನಲ್ಲಿರುವಾಗ ಡೌನ್‌ಲೋಡ್ ಮಾಡಿ ಅನ್ನು ಟ್ಯಾಪ್ ಮಾಡಿದರೆ, ಮುಂದಿನ ಬಾರಿ ನೀವು ಡೌನ್‌ಲೋಡ್‌ಗಳಿಗೆ ಅನುಮೋದಿಸಲಾದ ನೆಟ್‌ವರ್ಕ್‌ಗೆ ಕನೆಕ್ಟ್ ಆದಾಗ ವೀಡಿಯೊವನ್ನು ಡೌನ್‌ಲೋಡ್ ಮಾಡಲಾಗುತ್ತದೆ.

ನೀವು ಡೌನ್‌ಲೋಡ್ ಶಿಫಾರಸುಗಳನ್ನು ಪಡೆಯುವುದರಿಂದ ಹೊರಗುಳಿಯಲು ಬಯಸಿದರೆ:

  1. ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ  .
  2. ಸೆಟ್ಟಿಂಗ್‌ಗಳು  ನಂತರ ಹಿನ್ನೆಲೆ ಮತ್ತು ಡೌನ್‌ಲೋಡ್‌ಗಳು. ಅನ್ನು ಟ್ಯಾಪ್ ಮಾಡಿ
  3. ಡೌನ್‌ಲೋಡ್‌ಗಳನ್ನು ಶಿಫಾರಸು ಮಾಡಿ ಅನ್ನು ಆಫ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Android iPhone ಮತ್ತು iPad
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
208438705409695717
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false