ಅಸೆಟ್‌ಗಳಿಗಾಗಿ ಉತ್ತಮ ಅಭ್ಯಾಸಗಳು

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ಕೆಳಗೆ, ನಿಮ್ಮ ಅಸೆಟ್‌ಗಳನ್ನು ರಚಿಸಲು ಮತ್ತು ನಿರ್ವಹಿಸಲು ಉತ್ತಮ ಅಭ್ಯಾಸಗಳ ಕುರಿತು ನೀವು ತಿಳಿದುಕೊಳ್ಳಬಹುದು:

ಸಕ್ರಿಯ ಉಲ್ಲೇಖಗಳು

ಬಳಕೆದಾರರು ರಚಿಸಿದ ಕಂಟೆಂಟ್ ಅನ್ನು ಹೊಂದಾಣಿಕೆ ಮಾಡಲು ಮತ್ತು ಹಕ್ಕು ಸ್ಥಾಪನೆ ಮಾಡಲು ನೀವು Content ID ಅನ್ನು ಬಳಸಲು ಯೋಜಿಸುತ್ತಿದ್ದರೆ, ನಿಮ್ಮ ಉಲ್ಲೇಖಗಳು ಸಕ್ರಿಯವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಉಲ್ಲೇಖಗಳ ಸ್ಥಿತಿಯನ್ನು ಪರಿಶೀಲಿಸಲು:

  1. Studio ಕಂಟೆಂಟ್ ನಿರ್ವಾಹಕಕ್ಕೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಅಸೆಟ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  3. ಫಿಲ್ಟರ್ ಬಾರ್ ಅನ್ನು ಕ್ಲಿಕ್ ಮಾಡಿ ಮತ್ತು ಒಂದು ಫಿಲ್ಟರ್ ಅನ್ನು ಆರಿಸಿ:
    • ಸಕ್ರಿಯ ಉಲ್ಲೇಖಗಳಿಲ್ಲದ ಅಸೆಟ್‌ಗಳನ್ನು ಹುಡುಕಲು, ಸಕ್ರಿಯ ಉಲ್ಲೇಖಗಳು > ಇಲ್ಲ > ಅನ್ವಯಿಸಿ ಎಂಬುದನ್ನು ಆಯ್ಕೆ ಮಾಡಿ.
    • ನಿಷ್ಕ್ರಿಯ ಉಲ್ಲೇಖಗಳಿರುವ ಅಸೆಟ್‌ಗಳನ್ನು ಹುಡುಕಲು, ನಿಷ್ಕ್ರಿಯ ಉಲ್ಲೇಖಗಳು > ಹೌದು > ಅನ್ವಯಿಸಿ ಎಂಬುದನ್ನು ಆಯ್ಕೆ ಮಾಡಿ.

ನಿಷ್ಕ್ರಿಯ ಉಲ್ಲೇಖವಿರುವ ಅಸೆಟ್ ಕಂಡುಬಂದಾಗ, ಅಸೆಟ್, ಕಂಟೆಂಟ್ ID ಹೊಂದಾಣಿಕೆಗಳನ್ನು ಮಾಡುವುದನ್ನು ಮುಂದುವರಿಸಲು ಸಾಧ್ಯವಾಗುವ ಹಾಗೆ ಅದನ್ನು ಮರುಸಕ್ರಿಯಗೊಳಿಸುವುದನ್ನು ಪರಿಗಣಿಸಿ. 

Content ID ದುರುಪಯೋಗದ ಕುರಿತಾದ ಆತಂಕಗಳ ಕಾರಣ ನಿಷ್ಕ್ರಿಯವಾಗಿರುವ ಯಾವುದೇ ಉಲ್ಲೇಖಗಳನ್ನು ಆಕಸ್ಮಿಕವಾಗಿ ಸಕ್ರಿಯಗೊಳಿಸದಿರುವ ಹಾಗೆ ಎಚ್ಚರವಹಿಸಿ.

ಉಲ್ಲೇಖಗಳ ಮರುಸಕ್ರಿಯಗೊಳಿಸುವಿಕೆಯು, ಕಂಟೆಂಟ್ ID ಯ ಸಂಪೂರ್ಣ ಲಾಭ ಪಡೆದುಕೊಳ್ಳಲು ನಿಮಗೆ ಸಹಾಯವಾಗುತ್ತದೆ. ಉಲ್ಲೇಖವು ಸಕ್ರಿಯವಾಗಿದ್ದರೆ ಮಾತ್ರ, ಕಂಟೆಂಟ್ ID ಒಂದು ಉಲ್ಲೇಖಕ್ಕಾಗಿ ಸ್ವಯಂಚಾಲಿತ ಹಕ್ಕು ಸ್ಥಾಪನೆಗಳನ್ನು ಮಾಡುತ್ತದೆ.

ಯಾವುದೇ ಉಲ್ಲೇಖಗಳಿಲ್ಲದ ಅಸೆಟ್ ಅನ್ನು ನೀವು ನೋಡಿದಾಗ, ಉಲ್ಲೇಖವನ್ನು ರಚಿಸುವುದನ್ನು ಪರಿಗಣಿಸಿ.

ಉಲ್ಲೇಖಗಳ ಕುರಿತು ಇನ್ನಷ್ಟು ತಿಳಿಯಿರಿ.

ನಿಖರವಾದ ಮೆಟಾಡೇಟಾ

ನಿಮ್ಮ ಅಸೆಟ್‌ಗಳ ವರದಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಮೆಟಾಡೇಟಾವನ್ನು ಪರಿಶೀಲಿಸಿ. ನಿಮ್ಮನ್ನೇ ಕೇಳಿಕೊಳ್ಳಿ:

  • ಅದು ಅನಿರೀಕ್ಷಿತ ಕ್ಯಾರೆಕ್ಟರ್‌ಗಳು ಅಥವಾ ಸ್ಪೇಸಿಂಗ್ ಅನ್ನು ಹೊಂದಿದೆಯೇ?
  • ಈ ಮೆಟಾಡೇಟಾವು ನನ್ನ ತಂಡಕ್ಕಾಗಿ ಸುಲಭವಾಗಿ ವರದಿ ಮಾಡುವುದನ್ನು ಸಾಧ್ಯಗೊಳಿಸುತ್ತದೆಯೇ?
  • ನೀವು ಸಂಗೀತ ಲೇಬಲ್ ಆಗಿದ್ದರೆ, ISRC ಫೀಲ್ಡ್‌ನಲ್ಲಿ ಡೇಟಾವನ್ನು ಹೊಂದಿರುವಿರಾ?

ಆಗ ನೀವು ಪ್ರತ್ಯೇಕ ಅಸೆಟ್‌ಗಳನ್ನು ಎಡಿಟ್ ಮಾಡಬಹುದು ಅಥವಾ .csv ಫೈಲ್ ಟೆಂಪ್ಲೇಟ್‌ನೊಂದಿಗೆ ಅಸೆಟ್ ಮೆಟಾಡೇಟಾಗೆ ಬಲ್ಕ್ ಎಡಿಟ್ ಮಾಡಬಹುದು.

ಅಸೆಟ್ ಮೆಟಾಡೇಟಾದ ಆವೃತ್ತಿಗಳನ್ನು ಹೋಲಿಸುವ ಕುರಿತು ಇನ್ನಷ್ಟು ತಿಳಿಯಿರಿ.

ಲೇಬಲ್ ಮಾಡಲಾದ ಅಸೆಟ್‌ಗಳು

ನಿರ್ದಿಷ್ಟ ಆಲ್ಬಮ್, ಟಿವಿ ಕಾರ್ಯಕ್ರಮ ಇತ್ಯಾದಿಗಳಿಗಾಗಿ ಅಸೆಟ್‌ಗಳನ್ನು ಪ್ರತ್ಯೇಕಿಸಲು ಬಯಸುವ ಪಾಲುದಾರರಿಗಾಗಿ, ಅಸೆಟ್ ಲೇಬಲ್‌ಗಳನ್ನು ಬಳಸುವುದು ಪ್ರಯೋಜಕಾರಿಯಾಗಿರುತ್ತದೆ. ಈ ಕಸ್ಟಮ್ ವರ್ಗಗಳು ನಿಮ್ಮ ಅಸೆಟ್ ಲೈಬ್ರರಿಯನ್ನು ವ್ಯವಸ್ಥಿತಗೊಳಿಸುವುದನ್ನು ಸುಲಭಗೊಳಿಸುತ್ತವೆ.

ನೀವು ಅಸೆಟ್ ಲೇಬಲ್‌ಗಳನ್ನು ರಚಿಸಿದ ಮತ್ತು ಅನ್ವಯಿಸಿದ ಬಳಿಕ, ಸುಲಭವಾಗಿ ಫಿಲ್ಟರ್ ಮಾಡಲು, ಬಹುಸಂಖ್ಯೆಯ ಅಪ್‌ಡೇಟ್ ಮಾಡಲು ಮತ್ತು ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲು ಅಸೆಟ್‌ಗಳನ್ನು ಒಟ್ಟಿಗೆ ಗುಂಪುಗೂಡಿಸಲಾಗುತ್ತದೆ.

ಉದಾಹರಣೆಗೆ, Studio ಕಂಟೆಂಟ್ ನಿರ್ವಾಹಕದ ಅಸೆಟ್‌ಗಳ ಪುಟದಲ್ಲಿ ನೀವು ಫಿಲ್ಟರ್ ಬಾರ್ ಅನ್ನು ಬಳಸಬಹುದು ಮತ್ತು ಅಸೆಟ್ ಲೇಬಲ್ ಎಂಬುದನ್ನು ಆಯ್ಕೆ ಮಾಡಬಹುದು. ನಂತರ ನೀವು ಅಸೆಟ್‌ಗಳ ಗುಂಪನ್ನು ಸುಲಭವಾಗಿ ಗುರುತಿಸಬಹುದು ಮತ್ತು ಹೊಂದಿಕೆ ನೀತಿಯನ್ನು ಅಪ್‌ಡೇಟ್ ಮಾಡುವ ಹಾಗೆ ಬಲ್ಕ್ ಎಡಿಟ್ ಮಾಡಬಹುದು.

ಅಸೆಟ್ ಲೇಬಲ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

ಮಾಲೀಕತ್ವವನ್ನು ಸರಿಪಡಿಸಿ

Studio ಕಂಟೆಂಟ್ ನಿರ್ವಾಹಕದಲ್ಲಿ ಅಸೆಟ್ ಮಾಲೀಕತ್ವದ ಸಂಘರ್ಷಗಳನ್ನು ಗುರುತಿಸಲು ಮೂರು ಸ್ಥಳಗಳಿವೆ:

  1. ಡ್ಯಾಶ್‌ಬೋರ್ಡ್ ಪುಟದಲ್ಲಿ ಸಮಸ್ಯೆಗಳು ಕಾರ್ಡ್‌ನಲ್ಲಿ ಮಾಲೀಕತ್ವದ ಸಂಘರ್ಷಗಳು ಎಂಬುದನ್ನು ಕ್ಲಿಕ್ ಮಾಡಿ.
  2. ಸಮಸ್ಯೆಗಳು ಪುಟದಲ್ಲಿ, ಸಮಸ್ಯೆಯ ಪ್ರಕಾರ > ಮಾಲೀಕತ್ವದ ಸಂಘರ್ಷ ಎಂಬುದರ ಅನುಸಾರ ಫಿಲ್ಟರ್ ಮಾಡಿ.
  3. ವರದಿಗಳ ಪುಟದಲ್ಲಿ, ಅಸೆಟ್‌ಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಅಸೆಟ್ ಸಂಘರ್ಷದ ವರದಿಯನ್ನು ಡೌನ್‌ಲೋಡ್ ಮಾಡಿ.
ನೀವು ಹೊಸ ಪ್ರಾಂತ್ಯಗಳಲ್ಲಿ ಕಂಟೆಂಟ್‌ನ ಪರವಾನಗಿ ನೀಡಿದಂತಹ ಸಂದರ್ಭಗಳಲ್ಲಿ ಮಾಲೀಕತ್ವದ ಮಾಹಿತಿ ಬದಲಾದಾಗ, ಮಾಲೀಕತ್ವದ ಮಾಹಿತಿಯನ್ನು ಅಪ್‌ಡೇಟ್ ಮಾಡಿ.

ಅಸೆಟ್ ಮಾಲೀಕತ್ವದ ಸಂಘರ್ಷಗಳನ್ನು ಬಗೆಹರಿಸುವ ಕುರಿತು ಇನ್ನಷ್ಟು ತಿಳಿಯಿರಿ.

ನೀತಿಗಳನ್ನು ಸ್ಪಷ್ಟಗೊಳಿಸಿ

ನೀತಿಗಳ ಪುಟದಲ್ಲಿ, ನೀತಿಗಳು ತಮ್ಮ ಶೀರ್ಷಿಕೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೆಲವು ನೀತಿಗಳನ್ನು ಪರಿಶೀಲಿಸಿ.

ಉದಾಹರಣೆಗೆ, “ಪ್ರಪಂಚದಾದ್ಯಂತ ಮಾನಿಟೈಸ್ ಮಾಡಿ” ಎಂಬ ಶೀರ್ಷಿಕೆಯುಳ್ಳ ನೀತಿಯನ್ನು ನೀವು ಹೊಂದಿದ್ದರೆ, ಅದು ನಿಜವಾಗಿಯೂ ಪ್ರಪಂಚದಾದ್ಯಂತ ಮಾನಿಟೈಸ್ ಮಾಡುವ ನಿಯಮಗಳನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. 

ಜೊತೆಗೆ, ನಿಮ್ಮ ಕಸ್ಟಮ್ ನೀತಿಗಳು, ನೀವು ಪ್ರತ್ಯೇಕ ಹಕ್ಕುಗಳನ್ನು ಹೊಂದಿರುವಂತಹ ಕಂಟೆಂಟ್‌ಗೆ ಮಾತ್ರ ಹೊಂದಾಣಿಕೆಯಾಗುವ ನಿಖರವಾದ ಪ್ಯಾರಾಮೀಟರ್‌ಗಳನ್ನು ಹೊಂದಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. 

ನೀತಿಗಳ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4257486741299989190
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false