Facebook ಮತ್ತು Twitter ನಲ್ಲಿ ತಪ್ಪಾದ ವೀಡಿಯೊ ಮೆಟಾಡೇಟಾವನ್ನು ಸರಿಪಡಿಸಿ

ನೀವು YouTube URL ಅನ್ನು Facebook ಅಥವಾ Twitter ಗೆ ಅಂಟಿಸಿದಾಗ ವೀಡಿಯೊ ಶೀರ್ಷಿಕೆ, ವಿವರಣೆ ಅಥವಾ ಥಂಬ್‌ನೇಲ್ ತಪ್ಪಾಗಿರುವ ಅಥವಾ ಹಳೆಯದಾಗಿರುವ ಸಾಧ್ಯತೆಯಿದೆ.

ಶೀರ್ಷಿಕೆ ಅಥವಾ ವಿವರಣೆಯನ್ನು ಕೂಡಲೇ ಅಪ್‍ಡೇಟ್ ಮಾಡಿ

Facebook

ನಿಮ್ಮ Facebook ವೀಡಿಯೊವನ್ನು ಇತರರು ಹಂಚಿಕೊಳ್ಳಬಹುದು ಮತ್ತು ಅದು ತಪ್ಪಾದ ಶೀರ್ಷಿಕೆ ಅಥವಾ ವಿವರಣೆಯನ್ನು ಹೊಂದಿದೆ ಎಂದು ನೀವು ಗಮನಿಸಬಹುದು. ವೀಡಿಯೊ URL ಅನ್ನು Facebook ಡೀಬಗ್ ಪರಿಕರದಲ್ಲಿ ನಮೂದಿಸಿ ಇದು ಕೂಡಲೇ ಕ್ಯಾಷ್ ಮಾಡಲಾದ ಶೀರ್ಷಿಕೆ ಮತ್ತು ವಿವರಣೆಯನ್ನು ಅಪ್‍ಡೇಟ್ ಮಾಡುತ್ತದೆ.

ನೀವು ಇತರ ಸಮಸ್ಯೆಗಳನ್ನು ಎದುರಿಸಿದರೆ, ಸಮಸ್ಯೆಯನ್ನು Facebook ಗೆ ವರದಿ ಮಾಡುವುದನ್ನು ಪರಿಗಣಿಸಿ..

Twitter

ನಿಮ್ಮ Twitter ವೀಡಿಯೊವನ್ನು ಇತರರು ಹಂಚಿಕೊಳ್ಳಬಹುದು ಮತ್ತು ಅದು ತಪ್ಪಾದ ಶೀರ್ಷಿಕೆ ಅಥವಾ ವಿವರಣೆಯನ್ನು ಹೊಂದಿದೆ ಎಂದು ನೀವು ಗಮನಿಸಬಹುದು. ವೀಡಿಯೊ URL ಅನ್ನು ಕಾರ್ಡ್ ವ್ಯಾಲಿಡೇಟರ್ ನಮೂದಿಸಿ ಇದು ಕೂಡಲೇ ಕ್ಯಾಷ್ ಮಾಡಲಾದ ಶೀರ್ಷಿಕೆ ಮತ್ತು ವಿವರಣೆಯನ್ನು ಅಪ್‍ಡೇಟ್ ಮಾಡುತ್ತದೆ.

ಈ ಸಮಸ್ಯೆಯನ್ನು ತಪ್ಪಿಸಿ

ಬೇರೊಂದು ವೆಬ್‌ಸೈಟ್ ಅಥವಾ ಆ್ಯಪ್‍ನಲ್ಲಿ ವೀಡಿಯೊ URL ಅನ್ನು ಹಾಕುವ ಮೊದಲು, ನಿಮ್ಮ ವೀಡಿಯೊವನ್ನು ಪ್ರಕ್ರಿಯೆಗೊಳಿಸಲಾಗಿದೆ, ಸಾರ್ವಜನಿಕವಾಗಿದೆ ಮತ್ತು ವೀಡಿಯೊ ಮೆಟಾಡೇಟಾವನ್ನು YouTube ನಲ್ಲಿ ಸೆಟ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನೀವು ಲಿಂಕ್ ಅನ್ನು ಅಂಟಿಸಿದ ಕೂಡಲೇ ಕ್ಯಾಷ್‍ನಲ್ಲಿ ವೀಡಿಯೊ ಮಾಹಿತಿಯನ್ನು ಸೇರಿಸಲಾಗುತ್ತದೆ. YouTube ನಲ್ಲಿ ಮೆಟಾಡೇಟಾವನ್ನು ಬದಲಾಯಿಸಿದರೂ, ಕ್ಯಾಶ್ ಅಪ್‌ಡೇಟ್‌ಗಳ ಮೊದಲು ಆ URL ಅನ್ನು ಅಂಟಿಸುವವರು ಹಳೆಯ ಮಾಹಿತಿಯನ್ನು ಪಡೆಯುತ್ತಾರೆ.

ಇನ್ನಷ್ಟು ತಿಳಿಯಿರಿ

ವೀಡಿಯೊ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲು ಪೋಸ್ಟ್‌ಗೆ YouTube ವೀಡಿಯೊವನ್ನು ಸೇರಿಸಿದಾಗ ಈ ಸಮಸ್ಯೆ ಸಂಭವಿಸುತ್ತದೆ. ವೀಡಿಯೊ ಖಾಸಗಿಯಾಗಿರುವಾಗಲೂ ಇದು ಸಂಭವಿಸಬಹುದು. ನಿಮ್ಮ ಥಂಬ್‌ನೇಲ್ ಅಥವಾ ಮೆಟಾಡೇಟಾವನ್ನು ಅಪ್‍ಟೇಟ್ ಮಾಡುವ ಮೊದಲು ನೀವು ಪೋಸ್ಟ್ ಅನ್ನು ಹಂಚಿಕೊಂಡಿರಬಹುದು.

ಕೆಲವೊಮ್ಮೆ, ವೀಡಿಯೊ ಪ್ರಕ್ರಿಯೆ ಮುಗಿದ ನಂತರ ಮತ್ತು ಸಾರ್ವಜನಿಕವಾದ ನಂತರವೂ ಅದು ಹಳೆಯ ಶೀರ್ಷಿಕೆ, ವಿವರಣೆ ಅಥವಾ ಥಂಬ್‌ನೇಲ್ ಅನ್ನು ಹೊಂದಿರಬಹುದು. ಒಮ್ಮೆ Facebook ಅಥವಾ Twitter ತನ್ನ ಕ್ಯಾಷ್ ಅನ್ನು ಅಪ್‍ಡೇಟ್ ಮಾಡಿದರೆ, ಈ ಸಮಸ್ಯೆ ಅಂತಿಮವಾಗಿ ಸ್ವತಃ ಬಗೆಹರಿಯುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11059337283083220341
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false