ನಿಮ್ಮ YouTube ಚಾನಲ್ ಅನ್ನು ಅಳಿಸುವುದು ಅಥವಾ ಮರೆಮಾಡುವುದು

ನೀವು ನಿಮ್ಮ ಚಾನಲ್‌ನಲ್ಲಿ ಇರುವ ಕಂಟೆಂಟ್ ಅನ್ನು ತಾತ್ಕಾಲಿಕವಾಗಿ ಮರೆಮಾಡಲು ಅಥವಾ ನಿಮ್ಮ ಚಾನಲ್ ಅನ್ನು ಶಾಶ್ವತವಾಗಿ ಅಳಿಸಲು ಆಯ್ಕೆ ಮಾಡಿಕೊಳ್ಳಬಹುದು.

How to hide or delete your YouTube channel

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ನಿಮ್ಮ ಚಾನಲ್ ಅನ್ನು ತಾತ್ಕಾಲಿಕವಾಗಿ ಮರೆಮಾಡಿ 

ನೀವು YouTube ಚಾನಲ್‌ನಿಂದ ಕಂಟೆಂಟ್ ಅನ್ನು ಮರೆಮಾಡಬಹುದು ಮತ್ತು ಅದನ್ನು ನಂತರದಲ್ಲಿ ಮರು-ಸಕ್ರಿಯಗೊಳಿಸಲು ಆರಿಸಿಕೊಳ್ಳಬಹುದು. ನಿಮ್ಮ ಚಾನಲ್ ಅನ್ನು ಮರೆಮಾಡಿದರೆ, ಚಾನಲ್ ಹೆಸರು, ವೀಡಿಯೊಗಳು, ಲೈಕ್‌ಗಳು, ಸಬ್‌ಸ್ಕ್ರಿಪ್ಶನ್‌ಗಳು ಹಾಗೂ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯನ್ನು ಖಾಸಗಿಯಾಗಿ ಇರಿಸಲಾಗುತ್ತದೆ.

ನಿಮ್ಮ ಚಾನಲ್ ಅಥವಾ ನಿಮ್ಮ ಚಾನಲ್‌ನ ಕಂಟೆಂಟ್ ಅನ್ನು ಮರೆಮಾಡಿ:

  1. YouTube Studio ಗೆ ಸೈನ್-ಇನ್ ಮಾಡಿ.
  2. ನಿಮ್ಮ ಎಡಬದಿಯ ಸೈಡ್‌ಬಾರ್‌ನಿಂದ, ಸೆಟ್ಟಿಂಗ್‌ಗಳು ಆಯ್ಕೆ ಮಾಡಿ.
  3. ಚಾನಲ್ ನಂತರ ಸುಧಾರಿತ ಸೆಟ್ಟಿಂಗ್‌ಗಳು ಅನ್ನು ಆಯ್ಕೆಮಾಡಿ.
  4. ಕೆಳಭಾಗದಲ್ಲಿ, YouTube ಕಂಟೆಂಟ್ ತೆಗದುಹಾಕಿ ಎಂಬುದನ್ನು ಆಯ್ಕೆಮಾಡಿ. ಗಮನಿಸಿ: ಈ ಲಿಂಕ್ ನಿಮ್ಮನ್ನು ನೀವು ಚಾನಲ್ ಅನ್ನು ಅಳಿಸಬಹುದಾದ ಅಥವಾ ಮರೆಮಾಡಬಹುದಾದ ಪುಟಕ್ಕೆ ಕರೆದೊಯ್ಯುತ್ತದೆ. ನಿಮ್ಮ ಸೈನ್-ಇನ್ ವಿವರಗಳನ್ನು ನಮೂದಿಸಲು ನಿಮ್ಮನ್ನು ಕೇಳಬಹುದು.
  5. ನಾನು ನನ್ನ ಕಂಟೆಂಟ್ ಮರೆಮಾಡಲು ಬಯಸುತ್ತೇನೆ ಅನ್ನು ಆಯ್ಕೆಮಾಡಿ.
  6. ನಿಮ್ಮ ಚಾನಲ್‌ನಲ್ಲಿ ಯಾವುದನ್ನು ಮರೆಮಾಡಲಾಗುತ್ತದೆ ಎಂಬುದನ್ನು ದೃಢೀಕರಿಸಲು ಬಾಕ್ಸ್‌ಗಳನ್ನು ಆಯ್ಕೆಮಾಡಿ.
  7. ನನ್ನ ಚಾನಲ್ ಮರೆಮಾಡಿ ಅನ್ನು ಆಯ್ಕೆಮಾಡಿ.

ಒಂದು ವೇಳೆ ನಿಮ್ಮ ಕಂಟೆಂಟ್ ಅನ್ನು ಬೇರೆಯವರು ವೀಕ್ಷಿಸುವಂತೆ ಮಾಡಲು ಅಥವಾ ನೀವು ಅಪ್‌ಲೋಡ್ ಮಾಡಲು, ಪ್ರತಿಕ್ರಿಯೆ ನೀಡಲು ಅಥವಾ ಪ್ಲೇಪಟ್ಟಿಗಳನ್ನು ಬಳಸಲು ಬಯಸಿದರೆ, ನೀವು ಚಾನಲ್ ಪುನಃ-ಸಕ್ರಿಯಗೊಳಿಸಬಹುದು.

ಶಾಶ್ವತವಾಗಿ ನಿಮ್ಮ ಚಾನಲ್ ಅನ್ನು ಅಳಿಸಿರಿ

ನಿಮ್ಮ YouTube ಚಾನಲ್ ಮುಚ್ಚುವುದರಿಂದ ವೀಡಿಯೋಗಳು, ಪ್ರತಿಕ್ರಿಯೆಗಳು ಸಂದೇಶಗಳು, ಪ್ಲೇಪಟ್ಟಿಗಳು ಮತ್ತು ಇತಿಹಾಸಗಳು ಸೇರಿದಂತೆ ನಿಮ್ಮ ಕಂಟೆಂಟ್ ಅನ್ನು ಶಾಶ್ವತವಾಗಿ ಅಳಿಸಲಾಗುತ್ತದೆ. ಮೊಬೈಲ್ ಸಾಧನಗಳಲ್ಲಿ ಚಾನಲ್ ಅಳಿಸಲು ಪ್ರಸ್ತುತ ನಿಮಗೆ ಸಾಧ್ಯವಿಲ್ಲ ಎಂಬುದನ್ನು ಗಮನಿಸಿ.

ನೀವು ನಿಮ್ಮ ಚಾನಲ್ ಅನ್ನು ಶಾಶ್ವತವಾಗಿ ಅಳಿಸಲು ಆಯ್ಕೆ ಮಾಡಿಕೊಂಡರೆ, ನಿಮ್ಮ ಖಾತೆಯ ರಿಕವರಿ ಮಾಡಲು ಬಹಳಷ್ಟು ಕಷ್ಟಪಡಬೇಕಾಗಬಹುದು.

ನಿಮ್ಮ YouTube ಚಾನಲ್ ಅಳಿಸಿ:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಬದಿಯ ಸೈಡ್‌ಬಾರ್‌ನಿಂದ, ಸೆಟ್ಟಿಂಗ್‌ಗಳು ಆಯ್ಕೆ ಮಾಡಿ.
  3. ಚಾನಲ್ ನಂತರ ಸುಧಾರಿತ ಸೆಟ್ಟಿಂಗ್‌ಗಳು ಅನ್ನು ಆಯ್ಕೆಮಾಡಿ.
  4. ಕೆಳಭಾಗದಲ್ಲಿ, YouTube ಕಂಟೆಂಟ್ ತೆಗೆದುಹಾಕಿ ಅನ್ನು ಆಯ್ಕೆಮಾಡಿ. ಒಂದು ವೇಳೆ ನಿಮ್ಮ ಸೈನ್-ಇನ್ ವಿವರಗಳನ್ನು ನಮೂದಿಸಲು ಕೇಳಿದರೆ
  5. ನಾನು ನನ್ನ ವಿಷಯವನ್ನು ಶಾಶ್ವತವಾಗಿ ಅಳಿಸಲು ಬಯಸುತ್ತೇನೆ ಅನ್ನು ಆಯ್ಕೆಮಾಡಿ.
  6. ನಿಮ್ಮ ಚಾನಲ್ ಅನ್ನು ಅಳಿಸಲು ನೀವು ಬಯಸುತ್ತೀರಿ ಎಂಬುದನ್ನು ದೃಢೀಕರಿಸಲು ಬಾಕ್ಸ್‌ಗಳನ್ನು ಆಯ್ಕೆಮಾಡಿ.
  7. ನನ್ನ ಕಂಟೆಂಟ್ ಅಳಿಸು ಅನ್ನು ಆಯ್ಕೆಮಾಡಿ.

ಶಾಶ್ವತವಾಗಿ ನಿಮ್ಮ ಚಾನಲ್ ಅನ್ನು ಅಳಿಸಲು ಸ್ವಲ್ಪ ಸಮಯ ಬೇಕಾಗಬಹುದು. ಅಲ್ಪಾವಧಿಯಲ್ಲಿ, ಸೈಟ್‌ನಲ್ಲಿ ನಿಮ್ಮ ವೀಡಿಯೊಗಳ ಥಂಬ್‌ನೇಲ್‌ಗಳನ್ನು ವೀಕ್ಷಿಸುವುದನ್ನು ನೀವು ಮುಂದುವರಿಸಬಹುದು.

ಗಮನಿಸಿ: ಈ ಹಂತಗಳು ನಿಮ್ಮ YouTube ಚಾನಲ್ ಅಳಿಸುತ್ತವೆ ಆದರೆ ನೀವು ಸೈನ್-ಇನ್ ಮಾಡಲು ಬಳಸುವ Google ಖಾತೆಯನ್ನು ಅಲ್ಲ. ನಿಮ್ಮ ಸಂಪೂರ್ಣ Google ಖಾತೆ ಅಳಿಸುವುದು ಹೇಗೆಂದು ತಿಳಿಯಿರಿ.

ಚಾನಲ್ ಅಳಿಸಿದ ನಂತರ, ನಿಮ್ಮ ಚಾನಲ್ URL ಮತ್ತು ಚಾನಲ್ ಹೆಸರು YouTube Analytics ನಲ್ಲಿ ಇನ್ನು ಮುಂದೆ ಗೋಚರಿಸುವುದಿಲ್ಲ ಅಥವಾ ಅವುಗಳನ್ನು ಹುಡುಕಲು ಸಾಧ್ಯವಿಲ್ಲ. ವೀಕ್ಷಣೆ ಸಮಯದಂತಹ ಚಾನಲ್‌ಗೆ ಸಂಬಂಧಿಸಿದ ಡೇಟಾ ಇನ್ನೂ ಸಹ ಅಗ್ರಿಗೇಟ್ ವರದಿಗಳ ಭಾಗವಾಗಿರುತ್ತದೆ, ಆದರೆ ಅದನ್ನು ಅಳಿಸಲಾದ ಚಾನಲ್‌ಗೆ ಅಟ್ರಿಬ್ಯೂಟ್ ಮಾಡಲಾಗುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8986536837907415003
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false