YouTube ಚಾನಲ್‌ಗಳನ್ನು ನಿರ್ವಹಿಸಿ

ನಿಮ್ಮ YouTube ಚಾನಲ್‌ನಲ್ಲಿ "ಬ್ರಾಂಡ್ ಖಾತೆ"ಯ ಕುರಿತ ಹೊಸ ಪ್ರಸ್ತಾಪಗಳನ್ನು ನೀವು ನೋಡಬಹುದು ಅಥವಾ ನಿಮ್ಮ ಅಕೌಂಟ್ ಸ್ವಿಚರ್‌ನಲ್ಲಿ ಹೊಸ ಖಾತೆಯನ್ನು ನೋಡಬಹುದು. ಇತ್ತೀಚಿನ YouTube ಅಪ್‌ಡೇಟ್ ಸಮಯದಲ್ಲಿ ನಿಮ್ಮ ಚಾನಲ್ ಬ್ರ್ಯಾಂಡ್ ಖಾತೆಗೆ ಕನೆಕ್ಟ್ ಆಗಿರುವುದೇ ಇದಕ್ಕೆ ಕಾರಣವಾಗಿದೆ. ಬ್ರ್ಯಾಂಡ್ ಖಾತೆಗಳಿಗೆ ಡೇಟಾ ರವಾನೆ ಮಾಡಲಾದ ಚಾನಲ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

ನಿಮ್ಮ YouTube ಚಾನಲ್‌ಗಳನ್ನು ನೀವು ಅಥವಾ ಹಲವು ಜನರಿಂದ ನಿರ್ವಹಿಸುವಂತೆ ನೀವು ಸೆಟಪ್ ಮಾಡಬಹುದು. YouTube ಚಾನಲ್‌ಗಾಗಿ ನೀವು ಈ ಕೆಳಗಿನ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು:

  • ಅದನ್ನು ನಿಮ್ಮ ವೈಯಕ್ತಿಕ Google ಖಾತೆಗೆ ಕನೆಕ್ಟ್ ಮಾಡಿ: ಚಾನಲ್ ನಿಮ್ಮ Google ಖಾತೆಯ ಹೆಸರು ಮತ್ತು ಫೋಟೋವನ್ನು ಬಳಸುತ್ತದೆ.
  • ಅದನ್ನು ಬ್ರ್ಯಾಂಡ್ ಖಾತೆಯ ಜೊತೆಗೆ ಕನೆಕ್ಟ್ ಮಾಡಿ: ನಿಮ್ಮ Google ಖಾತೆಯಲ್ಲಿ ನೀವು ಬಳಸಿರುವ ಹೆಸರಿನ ಬದಲಿಗೆ YouTube ಚಾನಲ್ ಬೇರೆ ಹೆಸರನ್ನು ಬಳಸಬಹುದು.

ನಿಮ್ಮ ಚಾನಲ್ ಅನ್ನು ಬ್ರ್ಯಾಂಡ್ ಖಾತೆಗೆ ಅಥವಾ ನಿಮ್ಮ ವೈಯಕ್ತಿಕ Google ಖಾತೆಗೆ ಲಿಂಕ್ ಮಾಡಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಲಿಂಕ್ ಮಾಡುವಿಕೆಯು ನಿಮ್ಮ ಚಾನಲ್ ಗುರುತನ್ನು ವ್ಯಾಲಿಡೇಟ್ ಮಾಡಲು ಸಹಾಯ ಮಾಡಬಹುದು.

ನಿಮ್ಮ Google ಖಾತೆಯನ್ನು ಬಳಸಿ

Google ಖಾತೆಯು ಒಬ್ಬ ವ್ಯಕ್ತಿಗೆ ಮಾತ್ರ ಸಂಬಂಧಿಸಿರುತ್ತದೆ, ಹಾಗಾಗಿ ಕನೆಕ್ಟ್ ಆಗಿರುವ YouTube ಚಾನಲ್ ಸೇರಿದಂತೆ ಎಲ್ಲಾ Google ಸೇವೆಗಳಾದ್ಯಂತ ಇದು ಒಂದೇ ಹೆಸರು ಮತ್ತು ಗುರುತನ್ನು ಬಳಸುತ್ತದೆ.

connect google account to your YouTube channel

ನಿಮ್ಮ Google ಖಾತೆಗೆ ನಿಮ್ಮ YouTube ಚಾನಲ್ ಅನ್ನು ನೀವು ಕನೆಕ್ಟ್ ಮಾಡಿದರೆ:

  • ಚಾನಲ್ ಅನ್ನು ಯಾರು ನಿರ್ವಹಿಸಬಹುದು: ನೀವು ಮಾತ್ರ YouTube ಚಾನಲ್ ಅನ್ನು ಆ್ಯಕ್ಸೆಸ್ ಮಾಡಬಹುದು ಮತ್ತು ಅದಕ್ಕಾಗಿ ನಿಮ್ಮ Google ಖಾತೆಯನ್ನು ನೀವು ಬಳಸಬೇಕಾಗುತ್ತದೆ.
  • ಯಾವ ಹೆಸರು ಮತ್ತು ಫೋಟೋ ತೋರಿಸುತ್ತದೆ: YouTube ಚಾನಲ್ ನಿಮ್ಮ Google ಖಾತೆಯಲ್ಲಿ (ಮತ್ತು ನಿಮ್ಮ ಇತರ Google ಸೇವೆಗಳು, ಉದಾಹರಣೆಗೆ Gmail ಅಥವಾ Google Docs) ಇರುವಂತೆಯೇ ಅದೇ ಹೆಸರು ಮತ್ತು ಫೋಟೋವನ್ನು ಬಳಸುತ್ತದೆ.

ಬ್ರ್ಯಾಂಡ್ ಖಾತೆಯನ್ನು ಬಳಸಿ

ಬ್ರ್ಯಾಂಡ್ ಖಾತೆಗೆ ಕನೆಕ್ಟ್ ಆಗಿರುವ YouTube ಚಾನಲ್ ಅನ್ನು ಹಲವು ಖಾತೆಗಳ ಜೊತೆಗೆ ಹಂಚಿಕೊಳ್ಳಬಹುದು.

ನಿಮ್ಮ YouTube ಚಾನಲ್ ಅನ್ನು ನೀವು ಬ್ರ್ಯಾಂಡ್ ಖಾತೆಗೆ ಕನೆಕ್ಟ್ ಮಾಡಿದರೆ:

  • ಚಾನೆಲ್ ಅನ್ನು ಯಾರು ನಿರ್ವಹಿಸಬಹುದು ಮತ್ತು ಮಾಲೀಕತ್ವವನ್ನು ಹೊಂದಬಹುದು: ಹಲವು Google ಖಾತೆಗಳು ಬ್ರ್ಯಾಂಡ್ ಖಾತೆಯನ್ನು ನಿರ್ವಹಿಸಬಹುದು ಮತ್ತು ಹೊಂದಬಹುದು ಮತ್ತು ಆ ನಿರ್ವಾಹಕರು ಮತ್ತು ಮಾಲೀಕರು ಬ್ರ್ಯಾಂಡ್ ಖಾತೆಯ ಜೊತೆಗೆ ಕನೆಕ್ಟ್ ಆಗಿರುವ YouTube ಚಾನಲ್ ಅನ್ನು ಸಹ ಆ್ಯಕ್ಸೆಸ್ ಮಾಡಬಹುದು. ನೀವು ಇತರ ಮಾಲೀಕರನ್ನು ಚಾನಲ್‌ಗೆ ಸೇರಿಸಿದರೆ, ಅವರು ಚಾನಲ್ ಅನ್ನು ಅಳಿಸುವುದು ಮತ್ತು ಇತರ ಮಾಲೀಕರನ್ನು ತೆಗೆದುಹಾಕುವುದು ಸೇರಿದಂತೆ ಸಂಪೂರ್ಣ ಕ್ರಮಗಳನ್ನು ತೆಗೆದುಕೊಳ್ಳಬಹುದು.
  • ಯಾವ ಹೆಸರು ಮತ್ತು ಫೋಟೋವನ್ನು ತೋರಿಸುತ್ತದೆ: YouTube ಚಾನಲ್ ನಿಮ್ಮ Google ಖಾತೆ ಮತ್ತು ಯಾವುದೇ ನಿರ್ವಾಹಕ Google ಖಾತೆಗಳಲ್ಲಿ ಬಳಸಿರುವ ಹೆಸರನ್ನು ಹೊರತುಪಡಿಸಿ ಬೇರೆ ಹೆಸರು ಮತ್ತು ಫೋಟೋವನ್ನು ಬಳಸಬಹುದು.

ನಿಮ್ಮ Google ಖಾತೆಯಿಂದ ನಿರ್ವಹಿಸಲಾದ ಬ್ರ್ಯಾಂಡ್ ಖಾತೆಗಳನ್ನು ಬಳಸಿ

YouTube ಚಾನಲ್‌ಗಳಿಗೆ ಸಂಪರ್ಕಗೊಂಡಿರುವ ಹಲವು ಬ್ರ್ಯಾಂಡ್ ಖಾತೆಗಳನ್ನು ನಿರ್ವಹಿಸಲು ನೀವು ಒಂದೇ Google ಖಾತೆಯನ್ನು ಬಳಸಬಹುದು.

ನಿಮ್ಮ Google ಖಾತೆಯಿಂದ ಮಾತ್ರ ನಿರ್ವಹಿಸಲ್ಪಡುವ ಬ್ರ್ಯಾಂಡ್ ಖಾತೆಗೆ ನಿಮ್ಮ YouTube ಚಾನಲ್ ಅನ್ನು ನೀವು ಕನೆಕ್ಟ್ ಮಾಡಿದರೆ:

  • ಚಾನಲ್ ಅನ್ನು ಯಾರು ನಿರ್ವಹಿಸಬಹುದು: ನೀವು ಬ್ರ್ಯಾಂಡ್ ಖಾತೆಗಳಿಗೆ ಕನೆಕ್ಟ್ ಆಗಿರುವ ಹಲವು YouTube ಚಾನಲ್‌ಗಳನ್ನು ಹೊಂದಿದ್ದರೆ, ಸೈನ್ ಔಟ್ ಮಾಡದೆಯೇ ನೀವು ಎಲ್ಲವನ್ನೂ ಒಂದೇ Google ಖಾತೆಯ ಮೂಲಕ ನಿರ್ವಹಿಸಬಹುದು. ನೀವು ನಿರ್ವಹಿಸುತ್ತಿರುವ ಚಾನಲ್‌ಗಳ ನಡುವೆ ಬದಲಾಯಿಸುವುದು ಹೇಗೆ ಎಂದು ತಿಳಿಯಿರಿ.
  • ಯಾವ ಹೆಸರು ಮತ್ತು ಫೋಟೋವನ್ನು ತೋರಿಸುತ್ತದೆ: YouTube ಚಾನಲ್ ನಿಮ್ಮ Google ಖಾತೆ ಮತ್ತು ಅದರ ಮೂಲಕ ನಿರ್ವಹಿಸುತ್ತಿರುವ ಯಾವುದೇ ಬ್ರ್ಯಾಂಡ್ ಖಾತೆಗಳಲ್ಲಿ ಬಳಸಿರುವ ಹೆಸರನ್ನು ಹೊರತುಪಡಿಸಿ ಬೇರೆ ಹೆಸರು ಮತ್ತು ಫೋಟೋವನ್ನು ಬಳಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10060145545108457625
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false