ವೀಡಿಯೊ ಮತ್ತು ಆಡಿಯೊ ಫಾರ್ಮ್ಯಾಟಿಂಗ್ ಸ್ಪೆಸಿಫಿಕೇಶನ್‌ಗಳು

ಈ ಫೀಚರ್‌ಗಳು ತಮ್ಮ ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ನಿರ್ವಹಿಸಲು YouTube ನ ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಲಭ್ಯವಿರುತ್ತವೆ.
ನೀವು YouTube ಗೆ ಡೆಲಿವರ್ ಮಾಡುವ ಎಲ್ಲಾ ವೀಡಿಯೊ ಮತ್ತು ಆಡಿಯೊ ಫೈಲ್‌ಗಳಿಗೆ ನೀವು ಹಕ್ಕುಸ್ವಾಮ್ಯ ಹೊಂದಿದವರಾಗಿರಬೇಕು ಅಥವಾ ಹಕ್ಕುಸ್ವಾಮ್ಯ ಮಾಲೀಕರ ಅಧಿಕೃತ ಪ್ರತಿನಿಧಿಯಾಗಿರಬೇಕು.

ವೀಡಿಯೊ ಫಾರ್ಮ್ಯಾಟಿಂಗ್ ಮಾರ್ಗಸೂಚಿಗಳು

YouTube ನಲ್ಲಿ ವೀಡಿಯೊಗಳನ್ನು ಪ್ಲೇ ಮಾಡಲು ಹೆಚ್ಚಿನ ಗುಣಮಟ್ಟವನ್ನು ನೀಡುವ ಫಾರ್ಮ್ಯಾಟಿಂಗ್ ಸ್ಪೆಸಿಫಿಕೇಶನ್‌ಗಳನ್ನು ಕೆಳಗಿನ ಮಾರ್ಗಸೂಚಿಗಳು ವಿವರಿಸುತ್ತವೆ. ನಿಮ್ಮ ವೀಡಿಯೊಗಳು ಹೆಚ್ಚಿನ ಗುಣಮಟ್ಟದಲ್ಲಿ (HQ) ಪ್ಲೇ ಆಗುವ ಸಾಧ್ಯತೆಯನ್ನು ಹೆಚ್ಚಿಸಲು ಸಾಧ್ಯವಾದಷ್ಟು ಮೂಲ, ಉತ್ತಮ ಗುಣಮಟ್ಟದ ಮೂಲ ಫಾರ್ಮ್ಯಾಟ್‌ಗೆ ಹತ್ತಿರವಿರುವ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಪಾಲುದಾರರಿಗೆ YouTube ಉತ್ತೇಜಿಸುತ್ತದೆ. ವೀಡಿಯೊಗಳ ಪ್ಲೇಬ್ಯಾಕ್ ಗುಣಮಟ್ಟವನ್ನು ಅತ್ಯುತ್ತಮವಾಗಿಸಲು YouTube ಯಾವಾಗಲೂ ಮರು-ಎನ್‌ಕೋಡ್ ಮಾಡುತ್ತದೆ ಎಂಬುದನ್ನು ಗಮನಿಸಿ.

  • ಫೈಲ್ ಫಾರ್ಮ್ಯಾಟ್: ನಿಮ್ಮ ಡಿಜಿಟಲ್ ಕಂಟೆಂಟ್ ಲೈಬ್ರರಿಯಲ್ಲಿ ನೀವು ಹೊಂದಿರುವ ಮೂಲ, 1080p HD ಪ್ರಸಾರ ಫಾರ್ಮ್ಯಾಟ್‌ಗೆ YouTube ಆದ್ಯತೆ ನೀಡುತ್ತದೆ, ಅದೇ ರೀತಿ DVD-ಅನುಸರಣೆಯ MPEG-2 ಪ್ರೋಗ್ರಾಂ ಸ್ಟ್ರೀಮ್‌ಗಳು .MPG ವಿಸ್ತರಣೆಯೊಂದಿಗೆ ಉಳಿಸಲಾಗುತ್ತದೆ. ನೀವು MPEG-2 ಫಾರ್ಮ್ಯಾಟ್‌ನಲ್ಲಿ ವೀಡಿಯೊಗಳನ್ನು ಸಲ್ಲಿಸಲು ಸಾಧ್ಯವಾಗದಿದ್ದರೆ, ಆದ್ಯತೆಯ ಫಾರ್ಮ್ಯಾಟ್ MPEG-4 ಆಗಿದೆ. ಕೆಳಗಿನ ಸ್ಪೆಸಿಫಿಕೇಶನ್‌ಗಳು MPEG-2 ಮತ್ತು MPEG-4 ವೀಡಿಯೊಗಳ ಅತ್ಯುತ್ತಮ ಪ್ಲೇಬ್ಯಾಕ್ ಅನ್ನು ಒದಗಿಸುತ್ತವೆ:

    • MPEG-2

      • ಆಡಿಯೋ ಕೋಡೆಕ್: MPEG Layer II ಅಥವಾ Dolby AC-3
      • ಆಡಿಯೋ ಬಿಟ್ ಪ್ರಮಾಣ: 128 kbps ಅಥವಾ ಉತ್ತಮವಾಗಿರುವಂತದ್ದು
    • MPEG-4

      • ವೀಡಿಯೊ ಕೋಡೆಕ್: H.264
      • ಆಡಿಯೋ ಕೋಡೆಕ್: AAC
      • ಆಡಿಯೋ ಬಿಟ್ ಪ್ರಮಾಣ: 128 kbps ಅಥವಾ ಉತ್ತಮವಾಗಿರುವಂತದ್ದು
  • ಕನಿಷ್ಠ ಆಡಿಯೋ-ವಿಶುವಲ್ ಅವಧಿ: 33 ಸೆಕೆಂಡುಗಳು (ವೀಡಿಯೊ ಚಾನಲ್‌ನಲ್ಲಿನ ಕಪ್ಪು ಮತ್ತು ಸ್ಥಿರ ಚಿತ್ರಗಳನ್ನು ಹೊರತುಪಡಿಸಿ ಆಡಿಯೊ ಚಾನಲ್‌ನಲ್ಲಿ ನಿಶ್ಯಬ್ದ ಮತ್ತು ಹಿನ್ನೆಲೆ ಗದ್ದಲವನ್ನು ಹೊರತುಪಡಿಸಿ)

  • ಫ್ರೇಮ್‌ರೇಟ್: ವೀಡಿಯೊಗಳನ್ನು ಮರುಮಾದರಿ ಮಾಡದೆಯೇ ಅವುಗಳ ಸ್ಥಳೀಯ ಫ್ರೇಮ್ ರೇಟ್‌ಗಳಲ್ಲಿರಬೇಕು. ಚಲನಚಿತ್ರ ಮೂಲಗಳಿಗಾಗಿ, 24 FPS ಅಥವಾ 25 FPS ನೊಂದಿಗೆ ಪ್ರೋಗ್ರೆಸ್ಸಿವ್ ಮಾಸ್ಟರ್ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಸಾಮಾನ್ಯವಾಗಿ, ಫ್ರೇಮ್ ರೇಟ್‌ಗಳನ್ನು ಸೆಕೆಂಡಿಗೆ 24, 25 ಅಥವಾ 30 ಫ್ರೇಮ್‌ಗಳಲ್ಲಿ ಸೆಟ್ ಮಾಡಲಾಗಿರುತ್ತದೆ. ದಯವಿಟ್ಟು ಮರುವಿನ್ಯಾಸಗೊಳಿಸುವ ತಂತ್ರಗಳನ್ನು ಬಳಸಬೇಡಿ ಏಕೆಂದರೆ ಅವು ಕಂಪಿಸುವ ಚಿತ್ರಗಳನ್ನು ಉಂಟುಮಾಡುತ್ತವೆ ಮತ್ತು ಆಗಾಗ್ಗೆ ವೀಡಿಯೊ ಗುಣಮಟ್ಟವನ್ನು ಕಡಿಮೆಗೊಳಿಸುತ್ತವೆ. ಅನಪೇಕ್ಷಿತ ತಂತ್ರಗಳ ಉದಾಹರಣೆಗಳಲ್ಲಿ ಟೆಲಿಸಿನ್ ಪುಲ್‌ಡೌನ್‌ನಂತಹ ಅಪ್‌ಸ್ಯಾಂಪ್ಲಿಂಗ್ ಮತ್ತು ವರ್ಗಾವಣೆ ಪ್ರಕ್ರಿಯೆಗಳು ಸೇರಿವೆ.

  • ದೃಶ್ಯಾನುಪಾತ: ವೀಡಿಯೊಗಳು ಅವುಗಳ ಸ್ಥಳೀಯ ದೃಶ್ಯಾನುಪಾತದಲ್ಲಿರಬೇಕು ಮತ್ತು ಅಪ್‌ಲೋಡ್ ಮಾಡಿದ ವೀಡಿಯೊಗಳು ಎಂದಿಗೂ ಲೆಟರ್‌ಬಾಕ್ಸಿಂಗ್ ಅಥವಾ ಪಿಲ್ಲರ್‌ಬಾಕ್ಸಿಂಗ್ ಬಾರ್‌ಗಳನ್ನು ಒಳಗೊಂಡಿರಬಾರದು. ವೀಡಿಯೊ ಅಥವಾ ಪ್ಲೇಯರ್‌ನ ಗಾತ್ರವನ್ನು ಲೆಕ್ಕಿಸದೆಯೇ, ಕ್ರಾಪಿಂಗ್ ಅಥವಾ ಸ್ಟ್ರೆಚ್ ಮಾಡದೆಯೇ ಸರಿಯಾಗಿ ಪ್ರದರ್ಶಿಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು YouTube ಪ್ಲೇಯರ್ ಸ್ವಯಂಚಾಲಿತವಾಗಿ ವೀಡಿಯೊಗಳನ್ನು ಫ್ರೇಮ್ ಮಾಡುತ್ತದೆ. ವಿಶುವಲ್‌ಗೆ ಸಂಬಂಧಿಸಿದ ಉದಾಹರಣೆಗಳಿಗಾಗಿ ಸುಧಾರಿತ ಎನ್‌ಕೋಡಿಂಗ್ ಅನ್ನು ನೋಡಿ.

    • ವೀಡಿಯೊದ ಸ್ಥಳೀಯ ದೃಶ್ಯಾನುಪಾತವು 1.77:1 ಆಗಿದ್ದರೆ ಮತ್ತು ಒಟ್ಟು ಫ್ರೇಮ್ ಗಾತ್ರವು 1.77:1 ದೃಶ್ಯಾನುಪಾತವನ್ನು ಹೊಂದಿದ್ದರೆ, ಚದರ ಪಿಕ್ಸೆಲ್‌ಗಳೊಂದಿಗೆ 16:9 ಮ್ಯಾಟಿಂಗ್ ಅನ್ನು ಬಳಸಿ ಮತ್ತು ಯಾವುದೇ ಬಾರ್ಡರ್‌ಗಳಿರಬಾರದು.
    • ವೀಡಿಯೊದ ಸ್ಥಳೀಯ ದೃಶ್ಯಾನುಪಾತವು 1.77:1 ಆಗಿದ್ದರೆ ಮತ್ತು ಒಟ್ಟು ಫ್ರೇಮ್ ಗಾತ್ರವು 1.77:1 ದೃಶ್ಯಾನುಪಾತವನ್ನು ಹೊಂದಿಲ್ಲದಿದ್ದರೆ, ಚದರ ಪಿಕ್ಸೆಲ್‌ಗಳೊಂದಿಗೆ 16:9 ಮ್ಯಾಟಿಂಗ್ ಅನ್ನು ಬಳಸಿ ಮತ್ತು ಕಾಲಾನಂತರದಲ್ಲಿ ಯಾವುದೇ ವ್ಯತ್ಯಾಸಗಳಿಲ್ಲದೆ ಸಿಂಗಲ್-ಕಲರ್ ಬಾರ್ಡರ್ ಅನ್ನು ಬಳಸಿ.
    • ವೀಡಿಯೊದ ಸ್ಥಳೀಯ ದೃಶ್ಯಾನುಪಾತವು 1.33:1 ಆಗಿದ್ದರೆ ಮತ್ತು ಒಟ್ಟು ಫ್ರೇಮ್ ಗಾತ್ರವು 1.33:1 ದೃಶ್ಯಾನುಪಾತವನ್ನು ಹೊಂದಿದ್ದರೆ, ಚದರ ಪಿಕ್ಸೆಲ್‌ಗಳೊಂದಿಗೆ 4:3 ಮ್ಯಾಟಿಂಗ್ ಅನ್ನು ಬಳಸಿ ಮತ್ತು ಯಾವುದೇ ಬಾರ್ಡರ್‌ಗಳಿರಬಾರದು.
    • ವೀಡಿಯೊದ ಸ್ಥಳೀಯ ದೃಶ್ಯಾನುಪಾತವು 1.33:1 ಆಗಿದ್ದರೆ ಮತ್ತು ಒಟ್ಟು ಫ್ರೇಮ್ ಗಾತ್ರವು 1.33:1 ದೃಶ್ಯಾನುಪಾತವನ್ನು ಹೊಂದಿಲ್ಲದಿದ್ದರೆ, ಚದರ ಪಿಕ್ಸೆಲ್‌ಗಳೊಂದಿಗೆ 4:3 ಮ್ಯಾಟಿಂಗ್ ಅನ್ನು ಬಳಸಿ ಮತ್ತು ಕಾಲಾನಂತರದಲ್ಲಿ ಯಾವುದೇ ವ್ಯತ್ಯಾಸಗಳಿಲ್ಲದೆ ಸಿಂಗಲ್-ಕಲರ್ ಬಾರ್ಡರ್ ಅನ್ನು ಬಳಸಿ.

    ರಂಗ-ಪ್ರದರ್ಶನದ ಬಿಡುಗಡೆಗಳು "ಪ್ಯಾನ್-ಅಂಡ್-ಸ್ಕ್ಯಾನ್" ಆವೃತ್ತಿ ಮತ್ತು ಮೂಲ 16:9 ಆವೃತ್ತಿಯನ್ನು ಹೊಂದಿದ್ದರೆ, ಎರಡೂ ಆವೃತ್ತಿಗಳನ್ನು ಪ್ರತ್ಯೇಕವಾಗಿ ಅಪ್‌ಲೋಡ್ ಮಾಡಿ.

  • ವೀಡಿಯೊ ರೆಸಲ್ಯೂಶನ್: YouTube ಹೈ-ಡೆಫಿನಿಷನ್ ವೀಡಿಯೊಗಳಿಗೆ ಆದ್ಯತೆ ನೀಡುತ್ತದೆ ಮತ್ತು ಸಾಮಾನ್ಯವಾಗಿ, ಎನ್‌ಕೋಡಿಂಗ್ ಮತ್ತು ಪ್ಲೇಬ್ಯಾಕ್ ಪ್ರಕ್ರಿಯೆಗಳಲ್ಲಿ ಗರಿಷ್ಠ ಮಟ್ಟದ ಹೊಂದಾಣಿಕೆಯನ್ನು ಒದಗಿಸಲು ಲಭ್ಯವಿರುವ ಹೆಚ್ಚಿನ ರೆಸಲ್ಯೂಶನ್‌ನಲ್ಲಿ ನೀವು ವೀಡಿಯೊಗಳನ್ನು ಒದಗಿಸಬೇಕು. ಮಾರಾಟ ಅಥವಾ ಬಾಡಿಗೆಗೆ ಉದ್ದೇಶಿಸಿರುವ ವೀಡಿಯೊಗಳಿಗಾಗಿ, ನೀವು 16:9 ದೃಶ್ಯಾನುಪಾತದಲ್ಲಿ ಕನಿಷ್ಟ 1920x1080 ರೆಸಲ್ಯೂಶನ್ ಅನ್ನು ಒದಗಿಸಬೇಕು. ಜಾಹೀರಾತುಗಳೊಂದಿಗೆ ಅಥವಾ ಜಾಹೀರಾತುಗಳಿಲ್ಲದ ಕಂಟೆಂಟ್‌ಗಾಗಿ, YouTube ಕನಿಷ್ಠ ರೆಸಲ್ಯೂಶನ್ ಅನ್ನು ಸೆಟ್ ಮಾಡುವುದಿಲ್ಲ ಆದರೆ 16:9 ದೃಶ್ಯಾನುಪಾತವನ್ನು ಹೊಂದಿರುವ ವೀಡಿಯೊಗಳಿಗೆ 1280x720 ರ ಕನಿಷ್ಠ ರೆಸಲ್ಯೂಶನ್ ಮತ್ತು 4:3 ದೃಶ್ಯಾನುಪಾತವನ್ನು ಹೊಂದಿರುವ ವೀಡಿಯೊಗಳಿಗೆ 640x480 ರ ಕನಿಷ್ಠ ರೆಸಲ್ಯೂಶನ್ ಅನ್ನು ಶಿಫಾರಸು ಮಾಡುತ್ತದೆ.

    ಈ ವೀಡಿಯೊಗಳು YouTube ನಲ್ಲಿ ಸಾರ್ವಜನಿಕವಾಗಿ ಗೋಚರಿಸದಿದ್ದರೆ ಮತ್ತು Content ID ರೆಫರೆನ್ಸ್‌ಗಾಗಿ ಮಾತ್ರ ಅಪ್‌ಲೋಡ್ ಮಾಡಿದರೆ, ನೀವು ಕಡಿಮೆ ಗುಣಮಟ್ಟದ ವೀಡಿಯೊಗಳನ್ನು ಒದಗಿಸುವುದನ್ನು ಪರಿಗಣಿಸಬಹುದು. ಈ ವೀಡಿಯೊಗಳು ವಿಶಿಷ್ಟವಾದ "ಒನ್ ಕ್ವಾರ್ಟರ್ " ರೆಸಲ್ಯೂಶನ್ ಆಗಿರಬಹುದು - ಅಂದರೆ 320x240. ಆದಾಗ್ಯೂ, ಪರಿಣಾಮಕಾರಿ ರೆಫರೆನ್ಸ್‌ಗಳನ್ನು ನೀಡಲು ವೀಡಿಯೊಗಳು 200 ಸಾಲುಗಳಿಗಿಂತ ಹೆಚ್ಚಿನದಾಗಿರಬೇಕು.

  • ವೀಡಿಯೊ ಬಿಟ್ ಪ್ರಮಾಣ: ಬಿಟ್ ಪ್ರಮಾಣ ಕೋಡೆಕ್ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ, ಯಾವುದೇ ಶಿಫಾರಸು ಮಾಡಲಾದ ಕನಿಷ್ಠ ಮೌಲ್ಯವಿಲ್ಲ. ಬಿಟ್ ಪ್ರಮಾಣಕ್ಕಿಂತ ಫ್ರೇಮ್ ರೇಟ್, ದೃಶ್ಯಾನುಪಾತ ಮತ್ತು ರೆಸಲ್ಯೂಶನ್‌ಗಾಗಿ ವೀಡಿಯೊಗಳನ್ನು ಆಪ್ಟಿಮೈಸ್ ಮಾಡಬೇಕು. ಮಾರಾಟ ಅಥವಾ ಬಾಡಿಗೆಗೆ ಉದ್ದೇಶಿಸಿರುವ ವೀಡಿಯೊಗಳಿಗೆ 50 ಅಥವಾ 80 Mbps ಬಿಟ್ ಪ್ರಮಾಣಗಳು ಸಾಮಾನ್ಯವಾಗಿವೆ.

ಆದ್ಯತೆಯ ಸ್ಪೆಸಿಫಿಕೇಶನ್‌ಗಳನ್ನು ಬಳಸಿಕೊಂಡು ನಿಮ್ಮ ವೀಡಿಯೊಗಳನ್ನು ಎನ್‌ಕೋಡ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಈಗಲೂ ಸಹ ನಿಮ್ಮ ವೀಡಿಯೊವನ್ನು .WMV, .AVI, .MOV ಮತ್ತು .FLV ಫಾರ್ಮ್ಯಾಟ್‌ಗಳಲ್ಲಿ ಸಲ್ಲಿಸಬಹುದು. ಈ ಸಂದರ್ಭದಲ್ಲಿ, ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ವೀಡಿಯೊವನ್ನು ಅಪ್‌ಲೋಡ್ ಮಾಡಲು ನಾವು ಶಿಫಾರಸು ಮಾಡುತ್ತೇವೆ. YouTube ಈಗಲೂ ನಿಮ್ಮ ವೀಡಿಯೊ ಕಂಟೆಂಟ್ ಅನ್ನು ಸ್ವೀಕರಿಸುತ್ತದೆ ಮತ್ತು ನಂತರ ಅಗತ್ಯವಿರುವಂತೆ ನಿಮ್ಮ ವೀಡಿಯೊ ಫೈಲ್‌ಗಳನ್ನು ಮರು-ಎನ್‌ಕೋಡ್ ಮಾಡುತ್ತದೆ. ಆದಾಗ್ಯೂ, ನಿಮ್ಮ ವೀಡಿಯೊಗಳ ಗುಣಮಟ್ಟವು ಅತ್ಯುತ್ತಮವಾಗಿಲ್ಲದಿರಬಹುದು ಮತ್ತು ನಿಮ್ಮ ವೀಡಿಯೊಗಳನ್ನು HQ ಎನ್‌ಕೋಡಿಂಗ್‌ಗೆ ಅನರ್ಹಗೊಳಿಸಬಹುದು. ಆದ್ಯತೆಯ ಸ್ಪೆಸಿಫಿಕೇಶನ್‌ಗಳನ್ನು ಬಳಸಿಕೊಂಡು ನಿಮ್ಮ ವೀಡಿಯೊಗಳನ್ನು ಎನ್‌ಕೋಡ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ, YouTube ನಲ್ಲಿ ಪ್ಲೇಬ್ಯಾಕ್ ಗುಣಮಟ್ಟದಿಂದ ನೀವು ತೃಪ್ತರಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಆನ್‌ಲೈನ್‌ನಲ್ಲಿ ಕೆಲವು ಪರೀಕ್ಷಾ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ನಾವು ಶಿಫಾರಸು ಮಾಡುತ್ತೇವೆ.

ಆಡಿಯೋ ಫೈಲ್ ಮಾರ್ಗಸೂಚಿಗಳು

ನೀವು YouTube ಗೆ ಒದಗಿಸುವ ಆಡಿಯೊ ಟ್ರ್ಯಾಕ್‌ಗಳಿಗೆ ಈ ಕೆಳಗಿನ ಮಾರ್ಗಸೂಚಿಗಳು ಅನ್ವಯಿಸುತ್ತವೆ. YouTube ನಲ್ಲಿ ಆಡಿಯೊವನ್ನು ಪ್ಲೇ ಮಾಡಲು ಮತ್ತು ಬಳಕೆದಾರ-ಅಪ್‌ಲೋಡ್ ಮಾಡಿದ ವೀಡಿಯೊಗಳ ಆಡಿಯೊ ಟ್ರ್ಯಾಕ್‌ಗಳಿಗೆ ನಿಮ್ಮ ಆಡಿಯೊ ಟ್ರ್ಯಾಕ್‌ಗಳನ್ನು ಹೊಂದಿಸಲು ಹೆಚ್ಚಿನ ಗುಣಮಟ್ಟವನ್ನು ನೀಡುವ ಫಾರ್ಮ್ಯಾಟಿಂಗ್ ಸ್ಪೆಸಿಫಿಕೇಶನ್‌ಗಳನ್ನು ಈ ಮಾರ್ಗಸೂಚಿಗಳು ವಿವರಿಸುತ್ತವೆ. YouTube ನ AudioSwap ಪ್ರೋಗ್ರಾಂನಲ್ಲಿ ಆ ಟ್ರ್ಯಾಕ್ ಅನ್ನು ಸೇರಿಸಲು ನೀವು ಆಯ್ಕೆಮಾಡಿದರೆ ಮಾತ್ರ YouTube ನಲ್ಲಿ ಆಡಿಯೊ ಟ್ರ್ಯಾಕ್ ಅನ್ನು ಪ್ಲೇ ಮಾಡಲಾಗುವುದು ಎಂಬುದನ್ನು ಗಮನಿಸಿ. ಸಾಮಾನ್ಯವಾಗಿ, ನೀವು ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಆಡಿಯೊವನ್ನು ಅಪ್‌ಲೋಡ್ ಮಾಡಲು ನಾವು ಶಿಫಾರಸು ಮಾಡುತ್ತೇವೆ.

  • ಬೆಂಬಲಿತ ಫೈಲ್ ಫಾರ್ಮ್ಯಾಟ್‌ಗಳು:
    • MP3/WAV ಕಂಟೇನರ್‌ನಲ್ಲಿ MP3 ಆಡಿಯೋ
    • WAV ಕಂಟೇನರ್‌ನಲ್ಲಿ PCM ಆಡಿಯೋ
    • MOV ಕಂಟೇನರ್‌ನಲ್ಲಿ AAC ಆಡಿಯೋ
    • FLAC ಆಡಿಯೋ
  • ನಷ್ಟವಾಗುವ ಫಾರ್ಮ್ಯಾಟ್‌ಗಳಿಗಾಗಿ ಕನಿಷ್ಠ ಆಡಿಯೋ ಬಿಟ್ ಪ್ರಮಾಣ: 64 kbps
  • ಕನಿಷ್ಠ ಕೇಳಿಸುವ ಅವಧಿ: 33 ಸೆಕೆಂಡ್‌ಗಳು (ನಿಶ್ಯಬ್ದ ಮತ್ತು ಹಿನ್ನೆಲೆ ಗದ್ದಲವನ್ನು ಹೊರತುಪಡಿಸಿ)
  • ಗರಿಷ್ಠ ಅವಧಿ: ಇಲ್ಲ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13595214259763992482
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false