ಆಡಿಯೋ ಲೈಬ್ರರಿಯಿಂದ ಸಂಗೀತ ಮತ್ತು ಸೌಂಡ್‌ ಎಫೆಕ್ಟ್‌ಗಳನ್ನು ಬಳಸಿ

YouTube Studio ದಲ್ಲಿನ ಆಡಿಯೋ ಲೈಬ್ರರಿಯಲ್ಲಿ, ನಿಮ್ಮ ವೀಡಿಯೊಗಳಲ್ಲಿ ಬಳಸಲು ರಾಯಲ್ಟಿ-ಫ್ರೀ ಸಂಗೀತ ಮತ್ತು ಸೌಂಡ್‌ ಎಫೆಕ್ಟ್‌ಗಳನ್ನು ನೀವು ಕಾಣಬಹುದು. 

YouTube ಆಡಿಯೋ ಲೈಬ್ರರಿಯಿಂದ ಸಂಗೀತ ಮತ್ತು ಧ್ವನಿ ಪರಿಣಾಮಗಳು ಕೃತಿಸ್ವಾಮ್ಯ-ಸುರಕ್ಷಿತವಾಗಿವೆ. ಆಡಿಯೋ ಲೈಬ್ರರಿಯು YouTube Studio ದಲ್ಲಿ ಪ್ರತ್ಯೇಕವಾಗಿ ಕಂಡುಬರುತ್ತದೆ.

ಆಡಿಯೋ ಲೈಬ್ರರಿಯನ್ನು ತೆರೆಯಿರಿ.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಆಡಿಯೋ ಲೈಬ್ರರಿಯನ್ನು ತೆರೆಯಿರಿ.

ನೀವು ನೇರವಾಗಿ youtube.com/audiolibrary ನಲ್ಲಿ ಸಹ ಆಡಿಯೋ ಲೈಬ್ರರಿಯನ್ನು ಆ್ಯಕ್ಸೆಸ್ ಮಾಡಬಹುದು.

ಆಡಿಯೋ ಲೈಬ್ರರಿಯನ್ನು ಹುಡುಕಿ

ಸಂಗೀತವನ್ನು ಹುಡುಕಿ

ಉಚಿತ ಸಂಗೀತ ಟ್ಯಾಬ್‌ನಲ್ಲಿ, ನಿಮ್ಮ ವೀಡಿಯೊಗಳಿಗಾಗಿ ಟ್ರ್ಯಾಕ್‌ಗಳನ್ನು ಹುಡುಕಲು ಫಿಲ್ಟರ್‌ಗಳು  ಮತ್ತು ಹುಡುಕಾಟ ಪಟ್ಟಿಯನ್ನು ಬಳಸಿ. 

ನಿರ್ದಿಷ್ಟ ಟ್ರ್ಯಾಕ್ ಅನ್ನು ಹುಡುಕಲು, ಹುಡುಕಾಟ ಪಟ್ಟಿಯಲ್ಲಿ ಟ್ರ್ಯಾಕ್ ಶೀರ್ಷಿಕೆ, ಕಲಾವಿದ ಅಥವಾ ಕೀವರ್ಡ್ ಅನ್ನು ನಮೂದಿಸಿ. ಟ್ರ್ಯಾಕ್ ಶೀರ್ಷಿಕೆ, ಪ್ರಕಾರ, ಮೂಡ್, ಕಲಾವಿದರ ಹೆಸರು, ಆ್ಯಟ್ರಿಬ್ಯೂಶನ್ ಮತ್ತು ಅವಧಿ (ಸೆಕೆಂಡ್‌ಗಳಲ್ಲಿ ಉದ್ದ) ಮೂಲಕ ಸಂಗೀತವನ್ನು ಹುಡುಕಲು ನೀವು ಫಿಲ್ಟರ್‌ಗಳನ್ನು ಸಹ ಬಳಸಬಹುದು. 

ವೈಯಕ್ತಿಕ ಟ್ರ್ಯಾಕ್‌ಗಳ ಕಲಾವಿದ, ಪ್ರಕಾರ ಅಥವಾ ಮೂಡ್‌ನ ಪಕ್ಕದಲ್ಲಿರುವ ಫಿಲ್ಟರ್  ಅನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಹುಡುಕಾಟ ಫಲಿತಾಂಶಗಳನ್ನು ರಿಫೈನ್ ಮಾಡಿ. ಅವುಗಳ ಕಾಲಮ್ ಹೆಸರುಗಳನ್ನು ಕ್ಲಿಕ್ ಮಾಡುವ ಮೂಲಕ ಟ್ರ್ಯಾಕ್ ಶೀರ್ಷಿಕೆ, ಕಲಾವಿದರ ಹೆಸರು, ಅವಧಿ ಅಥವಾ ದಿನಾಂಕದ ಮೂಲಕ ನಿಮ್ಮ ಹುಡುಕಾಟ ಫಲಿತಾಂಶಗಳನ್ನು ನೀವು ವಿಂಗಡಿಸಬಹುದು.

ಟ್ರ್ಯಾಕ್ ಶೀರ್ಷಿಕೆಯ ಪಕ್ಕದಲ್ಲಿರುವ ನಕ್ಷತ್ರ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಮೆಚ್ಚಿನ ಟ್ರ್ಯಾಕ್‌ಗಳನ್ನು ಸೇವ್ ಮಾಡಿ. ನಿಮ್ಮ ಮೆಚ್ಚಿನ ಟ್ರ್ಯಾಕ್‌ಗಳ ಪಟ್ಟಿಯನ್ನು ನೋಡಲು, ನಕ್ಷತ್ರ ಹಾಕಿರುವ ಟ್ಯಾಬ್ ಅನ್ನು ಕ್ಲಿಕ್ ಮಾಡಿ.

ಹೊಸ ಬಿಡುಗಡೆಗಳನ್ನು ತಿಂಗಳಿಗೆ ಎರಡು ಬಾರಿ ಆಡಿಯೋ ಲೈಬ್ರರಿಗೆ ಸೇರಿಸಲಾಗುತ್ತದೆ.

ಸೌಂಡ್‌ ಎಫೆಕ್ಟ್‌ಗಳನ್ನು ಹುಡುಕಿ

ಸೌಂಡ್‌ ಎಫೆಕ್ಟ್‌ಗಳು ಟ್ಯಾಬ್‌ನಲ್ಲಿ, ನಿಮ್ಮ ವೀಡಿಯೊಗಳಿಗಾಗಿ ಸೌಂಡ್‌ ಎಫೆಕ್ಟ್‌ಗಳನ್ನು ಹುಡುಕಲು ಫಿಲ್ಟರ್‌ಗಳು  ಮತ್ತು ಹುಡುಕಾಟ ಪಟ್ಟಿಯನ್ನು ಬಳಸಿ. 

ನಿರ್ದಿಷ್ಟ ಸೌಂಡ್‌ ಎಫೆಕ್ಟ್‌ ಅನ್ನು ಹುಡುಕಲು, ಹುಡುಕಾಟ ಪಟ್ಟಿಯಲ್ಲಿ ಟ್ರ್ಯಾಕ್ ಶೀರ್ಷಿಕೆ ಅಥವಾ ಕೀವರ್ಡ್ ಅನ್ನು ನಮೂದಿಸಿ. ನೀವು ವರ್ಗ ಮತ್ತು ಅವಧಿಯ ಮೂಲಕ ಸಹ ಸೌಂಡ್‌ ಎಫೆಕ್ಟ್‌ಗಳನ್ನು ಫಿಲ್ಟರ್ ಮಾಡಬಹುದು (ಸೆಕೆಂಡ್‌ಗಳಲ್ಲಿ ಉದ್ದ). 

ಆಡಿಯೋವನ್ನು ಪ್ಲೇ ಮಾಡಿ ಮತ್ತು ಡೌನ್‌ಲೋಡ್ ಮಾಡಿ

ಟ್ರ್ಯಾಕ್ ಅನ್ನು ಸ್ಯಾಂಪಲ್ ಮಾಡಲು, ಪ್ಲೇ ಮಾಡಿ ಅನ್ನು ಕ್ಲಿಕ್ ಮಾಡಿ. ನೀವು ಕೇಳುವುದನ್ನು ನೀವು ಇಷ್ಟಪಟ್ಟರೆ, ದಿನಾಂಕದ ಮೇಲೆ ಹೋವರ್ ಮಾಡಿ ಮತ್ತು MP3 ಫೈಲ್ ಅನ್ನು ಪಡೆಯಲು ಡೌನ್‌ಲೋಡ್ ಅನ್ನು ಕ್ಲಿಕ್ ಮಾಡಿ.

ನೀವು ಆಡಿಯೋ ಲೈಬ್ರರಿಯನ್ನು ಬ್ರೌಸ್ ಮಾಡುವಾಗ ಟ್ರ್ಯಾಕ್ ಪ್ಲೇ ಆಗುತ್ತಲೇ ಇರುತ್ತದೆ. ಆಡಿಯೋ ಪ್ಲೇಯರ್‌ನಲ್ಲಿ ನಿಯಂತ್ರಣಗಳನ್ನು ಬಳಸಿಕೊಂಡು, ನೀವು ಹಿಂದಿನ ಅಥವಾ ಮುಂದಿನ ಟ್ರ್ಯಾಕ್ ಅನ್ನು ವಿರಾಮಗೊಳಿಸಬಹುದು, ಹುಡುಕಬಹುದು ಮತ್ತು ಪ್ಲೇ ಮಾಡಬಹುದು.

ಆ್ಯಟ್ರಿಬ್ಯೂಶನ್ ಅನ್ನು ನೀಡಿ

ನೀವು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯೊಂದಿಗೆ ಟ್ರ್ಯಾಕ್ ಅನ್ನು ಬಳಸುತ್ತಿದ್ದರೆ, ನಿಮ್ಮ ವೀಡಿಯೊದ ವಿವರಣೆಯಲ್ಲಿ ನೀವು ಕಲಾವಿದರಿಗೆ ಕ್ರೆಡಿಟ್ ಮಾಡಬೇಕು. ಆ್ಯಟ್ರಿಬ್ಯೂಶನ್ ಮಾಹಿತಿಯನ್ನು ರಚಿಸಲು ನೀವು ಇದನ್ನು ಬಳಸಬಹುದು:

  1. YouTube Studio ಗೆ ಸೈನ್ ಇನ್ ಮಾಡಿ. 
  2. ಎಡಭಾಗದ ಮೆನುವಿನಿಂದ, ಆಡಿಯೋ ಲೈಬ್ರರಿಯನ್ನು ಆಯ್ಕೆ ಮಾಡಿ.
  3. ನೀವು ಬಳಸಲು ಬಯಸುವ ಟ್ರ್ಯಾಕ್ ಅನ್ನು ಹುಡುಕಿ.
    • ಗಮನಿಸಿ: ಕ್ರಿಯೇಟಿವ್ ಕಾಮನ್ಸ್ ಪರವಾನಗಿಯೊಂದಿಗೆ ಎಲ್ಲಾ ಸಂಗೀತವನ್ನು ಬ್ರೌಸ್ ಮಾಡಲು, ಫಿಲ್ಟರ್ ಬಾರ್ > ಅಗತ್ಯವಿರುವ ಆ್ಯಟ್ರಿಬ್ಯೂಶನ್ ಅನ್ನು ಕ್ಲಿಕ್ ಮಾಡಿ.
  4. ಪರವಾನಗಿ ಪ್ರಕಾರದ ಕಾಲಮ್‌ನಲ್ಲಿ, ಕ್ರಿಯೇಟಿವ್ ಕಾಮನ್ಸ್ ಐಕಾನ್ ಅನ್ನು ಕ್ಲಿಕ್ ಮಾಡಿ. 
  5. ಪಾಪ್-ಅಪ್ ವಿಂಡೋದಲ್ಲಿ, ಆ್ಯಟ್ರಿಬ್ಯೂಶನ್ ಪಠ್ಯವನ್ನು ಕಾಪಿ ಮಾಡಲು ಕಾಪಿ ಮಾಡಿ  ಅನ್ನು ಕ್ಲಿಕ್ ಮಾಡಿ. ನೀವು ಈಗ ಈ ಮಾಹಿತಿಯನ್ನು ನಿಮ್ಮ ವೀಡಿಯೊದ ವಿವರಣೆಯಲ್ಲಿ ಪೇಸ್ಟ್ ಮಾಡಬಹುದು.

ಆ್ಯಟ್ರಿಬ್ಯೂಶನ್‌ನ ಅಗತ್ಯವಿಲ್ಲದ ಪ್ರಮಾಣಿತ YouTube ಆಡಿಯೋ ಲೈಬ್ರರಿ ಪರವಾನಗಿಯನ್ನು ಹೊಂದಿರುವ ಸಂಗೀತವನ್ನು ನೀವು ಹುಡುಕಲು ಬಯಸಿದರೆ, ಫಿಲ್ಟರ್ ಬಾರ್  > ಆ್ಯಟ್ರಿಬ್ಯೂಶನ್‌ ಅಗತ್ಯವಿಲ್ಲ ಅನ್ನು ಕ್ಲಿಕ್ ಮಾಡಿ.

ಗಮನಿಸಿ: ನಿಮ್ಮ ವೀಡಿಯೊ YouTube ಆಡಿಯೋ ಲೈಬ್ರರಿಯಿಂದ ಯಾವುದೇ ಸಂಗೀತವನ್ನು ಬಳಸಿದರೆ, “ಈ ವೀಡಿಯೊದಲ್ಲಿನ ಸಂಗೀತ” ವಿಭಾಗವು ನಿಮ್ಮ ವೀಡಿಯೊದ ವೀಕ್ಷಣಾ ಪುಟದಲ್ಲಿ ತೋರಿಸುತ್ತದೆ. ನಿಮ್ಮ ವೀಡಿಯೊ ಕ್ರಿಯೇಟಿವ್ ಕಾಮನ್ಸ್ ಪರವಾನಗಿಯೊಂದಿಗೆ ಸಂಗೀತವನ್ನು ಬಳಸಿದರೆ, ನಿಮ್ಮ ವೀಡಿಯೊದ ವಿವರಣೆಯಲ್ಲಿ ಆ್ಯಟ್ರಿಬ್ಯೂಶನ್‌ ಮಾಹಿತಿಯು ಇನ್ನೂ ಅಗತ್ಯವಿದೆ ಎಂಬುದನ್ನು ನೆನಪಿನಲ್ಲಿಡಿ.

ನಿಮ್ಮ ವೀಡಿಯೊದಿಂದ ಮಾನಿಟೈಸ್ ಮಾಡಿ

ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿದ್ದರೆ, ಆಡಿಯೋ ಲೈಬ್ರರಿಯಿಂದ ಸಂಗೀತ ಮತ್ತು ಸೌಂಡ್‌ ಎಫೆಕ್ಟ್‌ಗಳೊಂದಿಗೆ ನೀವು ವೀಡಿಯೊಗಳನ್ನು ಮಾನಿಟೈಸ್ ಮಾಡಬಹುದು.

ಆಡಿಯೋ ಲೈಬ್ರರಿಯಿಂದ ಡೌನ್‌ಲೋಡ್ ಮಾಡಲಾದ ಕೃತಿಸ್ವಾಮ್ಯ-ಸುರಕ್ಷಿತ ಸಂಗೀತ ಮತ್ತು ಸೌಂಡ್‌ ಎಫೆಕ್ಟ್‌ಗಳನ್ನು Content ID ಸಿಸ್ಟಮ್ ಮೂಲಕ ಹಕ್ಕುದಾರರು ಕ್ಲೇಮ್ ಮಾಡಲಾಗುವುದಿಲ್ಲ.

ನೆನಪಿನಲ್ಲಿಡಿ:

  • ಆಡಿಯೋ ಲೈಬ್ರರಿಯಲ್ಲಿರುವ ಸಂಗೀತ ಮತ್ತು ಸೌಂಡ್‌ ಎಫೆಕ್ಟ್‌ಗಳು ಮಾತ್ರ YouTube ಗೆ ಕೃತಿಸ್ವಾಮ್ಯ-ಸುರಕ್ಷಿತವೆಂದು ತಿಳಿದಿದೆ.
  • YouTube ಚಾನಲ್‌ಗಳು ಅಥವಾ ಇತರ ಸಂಗೀತ ಲೈಬ್ರರಿಗಳಿಂದ “ರಾಯಲ್ಟಿ-ಫ್ರೀ” ಸಂಗೀತ ಮತ್ತು ಸೌಂಡ್‌ ಎಫೆಕ್ಟ್‌ಗಳಿಂದ ಉಂಟಾಗುವ ಸಮಸ್ಯೆಗಳಿಗೆ YouTube ಜವಾಬ್ದಾರಾಗಿರುವುದಿಲ್ಲ.
  • ಪ್ಲಾಟ್‌ಫಾರ್ಮ್‌ನ ಹೊರಗೆ ಸಂಭವಿಸಬಹುದಾದ ಸಂಗೀತದ ಸಮಸ್ಯೆಗಳ ಕುರಿತು ಮಾರ್ಗದರ್ಶನ ಸೇರಿದಂತೆ ಕಾನೂನು ಮಾರ್ಗದರ್ಶನವನ್ನು ನೀಡಲು YouTube ಗೆ ಸಾಧ್ಯವಿಲ್ಲ.
  • ನಿಮ್ಮ ಸಂಗೀತದ ಬಳಕೆಯ ಬಗ್ಗೆ ನೀವು ಪ್ರಶ್ನೆಗಳನ್ನು ಹೊಂದಿದ್ದರೆ, ನೀವು ಅರ್ಹ ವಕೀಲರನ್ನು ಸಂಪರ್ಕಿಸಲು ಬಯಸಬಹುದು.

 ನೀವು ಯಾವ ತರಹದ ಕಂಟೆಂಟ್ ಅನ್ನು ಮಾನಿಟೈಸ್ ಮಾಡಬಹುದುಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16063784144418468070
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false