ಡೀಫಾಲ್ಟ್ ನೀತಿಗಳನ್ನು ಸೆಟ್ ಮಾಡಿ

ಈ ಲೇಖನದಲ್ಲಿ ವಿವರಿಸಲಾದ ಫೀಚರ್‌ಗಳು YouTube Studio ಕಂಟೆಂಟ್ ಮ್ಯಾನೇಜರ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತವೆ. ಸಾಮಾನ್ಯ YouTube ನೀತಿಗಳ ಮಾಹಿತಿಗಾಗಿ, ಇಲ್ಲಿ ಇನ್ನಷ್ಟು ತಿಳಿಯಿರಿ.

ಕಸ್ಟಮ್ ನೀತಿಯಲ್ಲಿ ತಿಳಿಸಲಾಗಿರುವ ಷರತ್ತುಗಳನ್ನು ಸನ್ನಿವೇಶವು ಪೂರೈಸದೇ ಇದ್ದಾಗ ಡೀಫಾಲ್ಟ್ ನೀತಿಗಳನ್ನು ಅನ್ವಯಿಸಲಾಗುತ್ತದೆ.

ಉದಾಹರಣೆಗೆ, ನೀವು ನಿಮ್ಮ ಚಾನಲ್‌ಗಳಿಗೆ ಅಪ್‌ಲೋಡ್ ಮಾಡುವ ವೀಡಿಯೊಗಳಿಗೆ YouTube ನಿಮ್ಮ ಡೀಫಾಲ್ಟ್ ಅಪ್‌ಲೋಡ್ ನೀತಿಯನ್ನು ಅನ್ವಯಿಸುತ್ತದೆ. Content ID ಕಸ್ಟಮ್ ಹೊಂದಿಕೆ ನೀತಿಯನ್ನು ಹೊಂದಿಲ್ಲದೇ ಇರುವ ಅಸೆಟ್‌ಗಾಗಿ ವೀಡಿಯೊಗಳನ್ನು ಕ್ಲೇಮ್ ಮಾಡಿದಾಗ, ಅದು ನಿಮ್ಮ ಡೀಫಾಲ್ಟ್ ಹೊಂದಿಕೆ ನೀತಿಯನ್ನು ಅನ್ವಯಿಸುತ್ತದೆ.

ಡೀಫಾಲ್ಟ್ ನೀತಿಗಳನ್ನು ಸೆಟ್ ಮಾಡುವುದು ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವ ಮತ್ತು ಕ್ಲೇಮ್‌ ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ. ನೀವು ಡೀಫಾಲ್ಟ್ ಅಪ್‌ಲೋಡ್ ಮತ್ತು ಡೀಫಾಲ್ಟ್ ಹೊಂದಿಕೆ ನೀತಿಗಳೆರಡನ್ನೂ ಸೆಟ್ ಮಾಡಬಹುದು.

ನೀವು ಡೀಫಾಲ್ಟ್ ಅಪ್‌ಲೋಡ್ ಅಥವಾ ಹೊಂದಿಕೆ ನೀತಿಯನ್ನು ಆಯ್ಕೆಮಾಡದೇ ಇದ್ದರೆ, ಪೂರ್ವವ್ಯಾಖ್ಯಾನಿತ ನೀತಿಯಾದ ಎಲ್ಲಾ ದೇಶಗಳಲ್ಲಿ ಮಾನಿಟೈಸ್ ಮಾಡಿ ಎಂಬ ನೀತಿಯು ಅನ್ವಯಿಸಲ್ಪಡುತ್ತದೆ.

ಡೀಫಾಲ್ಟ್ ನೀತಿಯನ್ನು ಸೆಟ್ ಮಾಡುವುದು

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ನೀತಿಗಳು  ಅನ್ನು ಆಯ್ಕೆಮಾಡಿ.
  3. ನೀವು ಡೀಫಾಲ್ಟ್ ನೀತಿಯಾಗಿ ಸೆಟ್ ಮಾಡಲು ಬಯಸುವ ನೀತಿಯನ್ನು ಹುಡುಕಿ.
    • ನೀವು ನೀತಿ ಹೆಸರುಗಳ ಪಕ್ಕದಲ್ಲಿ ಇರುವ ಡೀಫಾಲ್ಟ್ ಅಪ್‌ಲೋಡ್ ಲೇಬಲ್ 
       ಮತ್ತು ಡೀಫಾಲ್ಟ್ ಹೊಂದಿಕೆ ಲೇಬಲ್  ಮೂಲಕ ಪ್ರಸ್ತುತ ಇರುವ ಡೀಫಾಲ್ಟ್ ನೀತಿಗಳನ್ನು ಗುರುತಿಸಬಹುದು.
  4. ಬಲ ಭಾಗದಲ್ಲಿರುವ ಕಾಲಮ್‌ನಲ್ಲಿ, ಕ್ರಿಯೆ ಆಯ್ಕೆಮಾಡಿ  ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ.
  5. ಡೀಫಾಲ್ಟ್ ಅಪ್‌ಲೋಡ್ ಆಗಿ ಸೆಟ್ ಮಾಡಿ ಅಥವಾ ಡೀಫಾಲ್ಟ್ ಹೊಂದಿಕೆಯಾಗಿ ಸೆಟ್ ಮಾಡಿ ಎಂಬುದನ್ನು ಆಯ್ಕೆಮಾಡಿ.
    • ಹೊಸ ಡೀಫಾಲ್ಟ್ ನೀತಿಗಳನ್ನು ಇದೀಗ ಡೀಫಾಲ್ಟ್ ಅಪ್‌ಲೋಡ್  ಅಥವಾ ಡೀಫಾಲ್ಟ್ ಹೊಂದಿಕೆ  ಮೂಲಕ ನೀತಿ ಹೆಸರುಗಳ ಪಕ್ಕದಲ್ಲಿ ಲೇಬಲ್ ಮಾಡಲಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9049886010684072687
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false