ನೀತಿಗಳನ್ನು ಹೇಗೆ ಅನ್ವಯಿಸಲಾಗುತ್ತದೆ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.
ವೀಡಿಯೊವನ್ನು ಹಕ್ಕು ಸ್ಥಾಪನೆ ಮಾಡಿದಾಗ ವೀಡಿಯೊಂದಿಗೆ ನೀತಿಯನ್ನು YouTube ಸಂಯೋಜಿಸುತ್ತದೆ. ಯಾವ ನೀತಿಯನ್ನು ವೀಡಿಯೊಗೆ YouTube ಅನ್ವಯಿಸುತ್ತದೆ ಎಂಬುದು ಇವುಗಳ ಮೇಲೆ ಅವಲಂಬಿತವಾಗಿರುತ್ತದೆ:
  • ಕ್ಲೇಮ್‌ ಅನ್ನು ಹೇಗೆ ಮಾಡಲಾಗುತ್ತದೆ (ನೀವು ಅಥವಾ Content ID ಮೂಲಕ)
  • ಬೇರೆ ಯಾವುದೇ ಪಾಲುದಾರರು ಅದೇ ವೀಡಿಯೊದ ಹಕ್ಕು ಸ್ಥಾಪನೆ ಮಾಡಿದ್ದಾರೆಯೇ

ನೀವು ಮಾಡಿರುವ ಹಕ್ಕು ಸ್ಥಾಪನೆಗಳು

ನಿಮ್ಮ ಮಾಲೀಕತ್ವದ ಚಾನಲ್‌ಗೆ ನೀವು ಅಪ್‌ಲೋಡ್ ಮಾಡಿರುವ ವೀಡಿಯೊದ ಹಕ್ಕು ಸ್ಥಾಪನೆಯನ್ನು ನೀವು ಮಾಡಿದಾಗ, ನಿಮ್ಮ ಡೀಫಾಲ್ಟ್ ಅಪ್‌ಲೋಡ್ ನೀತಿಯಾಗಿ ಹೊಂದಿಸಿದ ನೀತಿಯನ್ನು ಅನ್ವಯಿಸಲಾಗುತ್ತದೆ. ಡೀಫಾಲ್ಟ್ ನೀತಿಗಳ ಕುರಿತು ಇನ್ನಷ್ಟು ತಿಳಿಯಿರಿ.

ವಿವರಣಾತ್ಮಕ ಹುಡುಕಾಟವನ್ನು ಬಳಸಿಕೊಂಡು ವೀಡಿಯೊದ ಹಕ್ಕು ಸ್ಥಾಪನೆಯನ್ನು ನೀವು ಮಾಡಿದಾಗ, ಹಕ್ಕು ಸ್ಥಾಪನೆ ಜೊತೆಗೆ ಯಾವ ನೀತಿಯನ್ನು ಸಂಯೋಜಿಸಬೇಕೆಂದು ನೀವು ಹಸ್ತಚಾಲಿತವಾಗಿ ಆರಿಸಿಕೊಳ್ಳುತ್ತೀರಿ.

Content ID ಪ್ರಕಾರ ಮಾಡಿರುವ ಕ್ಲೇಮ್‌ಗಳು

ಬಳಕೆದಾರರು ಅಪ್‌ಲೋಡ್ ಮಾಡಿರುವ ವೀಡಿಯೊವನ್ನು Content ID ಹಕ್ಕು ಸ್ಥಾಪನೆ ಮಾಡಿದಾಗ, ಅದು ಹಕ್ಕು ಸ್ಥಾಪನೆ ಮಾಡುತ್ತಿರುವ ಸ್ವತ್ತಿಗಾಗಿ ರೆಫರೆನ್ಸ್ ಹೊಂದಿಕೆ ನೀತಿ ಅನ್ನು ಸ್ವಯಂಚಾಲಿತವಾಗಿ ಬಳಸುತ್ತದೆ.

ಒಂದು ವೇಳೆ ಸಂಯೋಜಿಸಿದ ಹೊಂದಿಕೆ ನೀತಿಯನ್ನು ಸ್ವತ್ತು ಹೊಂದಿಲ್ಲದೇ ಇದ್ದರೆ, ನಿಮ್ಮ ಡೀಫಾಲ್ಟ್ ಹೊಂದಿಕೆ ನೀತಿಯಾಗಿ ಹೊಂದಿಸಿರುವ ನೀತಿಯನ್ನು ಅನ್ವಯಿಸಲಾಗುತ್ತದೆ.

ನೀವು ಹಕ್ಕು ಸ್ಥಾಪನೆ ಮಾಡಲಾದ ವೀಡಿಯೊದೊಂದಿಗೆ ಸಂಬಂಧಿಸಿರುವ ನೀತಿಯನ್ನು Studio ಕಂಟೆಂಟ್ ನಿರ್ವಾಹಕನಲ್ಲಿರುವ ಹಕ್ಕು ಸ್ಥಾಪನೆ ಮಾಡಲಾದ ವೀಡಿಯೊಗಳು  ಪುಟದಿಂದ ಬದಲಾಯಿಸಬಹುದು. ಅದನ್ನು ನೀವು ಹಕ್ಕು ಸ್ಥಾಪನೆ ಸಮಸ್ಯೆಗಳನ್ನು ಅವಲೋಕನ ಮಾಡುತ್ತಿರುವಾಗ.ಸಮಸ್ಯೆಗಳು  ಪುಟದಿಂದ ಸಹ ಬದಲಾಯಿಸಬಹುದು.

ಅನೇಕ ಪಾಲುದಾರರು ಮಾಡಲಾದ ಹಕ್ಕು ಸ್ಥಾಪನೆಗಳು

ಒಂದೇ ವೀಡಿಯೊದಲ್ಲಿ

ಒಂದಕ್ಕಿಂತ ಹೆಚ್ಚು ಪಾಲುದಾರರು ಒಂದೇ ಪ್ರದೇಶದಲ್ಲಿ ಒಂದೇ ವೀಡಿಯೊ ಕುರಿತಂತೆ ಮಾನ್ಯವಾದ ಹಕ್ಕು ಸ್ಥಾಪನೆಯನ್ನು ಹೊಂದಿರಬಹುದು. ಉದಾಹರಣೆಗಾಗಿ, ಒಬ್ಬ ಪಾಲುದಾರರು ವಿಷುವಲ್ ಭಾಗದ ಹಕ್ಕು ಸ್ಥಾಪನೆ ಮಾಡಿದರೆ ಮತ್ತೊಬ್ಬ ಪಾಲುದಾರರು ಆಡಿಯೊ ಭಾಗದ ಹಕ್ಕು ಸ್ಥಾಪನೆ ಮಾಡಬಹುದು.

ಅನೇಕ ಪಾಲುದಾರರು ವೀಡಿಯೊದ ಕುರಿತಂತೆ ಮಾನ್ಯವಾದ ಹಕ್ಕು ಸ್ಥಾಪನೆಗಳನ್ನು ಹೊಂದಿರುವಾಗ, ಅನೇಕ ಮಾನ್ಯವಾದ ನೀತಿಗಳನ್ನು, ಅಂದರೆ ಹೆಚ್ಚು ನಿಯಂತ್ರಿತ ಕ್ರಿಯೆಗೆ ಯಾವುದೇ ನೀತಿ ಕಾರಣವಾಗುತ್ತದೆಯೋ ಅದನ್ನು ಅನ್ವಯಿಸಲಾಗುತ್ತದೆ.

ಕನಿಷ್ಠ ನಿರ್ಬಂಧಿತ   ಹೆಚ್ಚು ನಿರ್ಬಂಧಿತ
ಯಾವುದೇ ನೀತಿಯಿಲ್ಲ ಮಾನಿಟೈಸ್ ಟ್ರ್ಯಾಕ್ ನಿರ್ಬಂಧ ತೆಗೆದುಹಾಕುವಿಕೆ
 
ಉದಾಹರಣೆಗೆ, ಒಂದು ನೀತಿಯು ವೀಡಿಯೊವನ್ನು ಮಾನಿಟೈಸ್ ಮಾಡಬೇಕೆಂದು ಹಾಗೂ ಮತ್ತೊಂದು ಅದನ್ನು ನಿರ್ಬಂಧಿಸಬೇಕೆಂದು ಹೇಳಿದರೆ, ವೀಡಿಯೊವನ್ನು ನಿರ್ಬಂಧಿಸಲಾಗುತ್ತದೆ.

ಗಮನಿಸಿ: ವೀಡಿಯೊದ ಹಕ್ಕು ಸ್ಥಾಪನೆ ಮಾಡುತ್ತಿರುವ ಸ್ವತ್ತುಗಳಲ್ಲಿ ಒಂದರಲ್ಲಿ ಮಾಲೀಕತ್ವ ಮಾಹಿತಿ ಇಲ್ಲದಿದ್ದರೆ, ಡೀಫಾಲ್ಟ್ ನೀತಿ ಕ್ರಿಯೆಯು ಟ್ರ್ಯಾಕ್ (ಮಾಲೀಕರು ಕಾಣಿಸುತ್ತಿಲ್ಲ) ಆಗಿರುತ್ತದೆ.

  • ಉದಾಹರಣೆ: ಕೆನಡಾಗಾಗಿ ಸ್ವತ್ತು ಯಾವುದೇ ಮಾಲೀಕತ್ವ ಡೇಟಾ ಹೊಂದಿಲ್ಲದೇ ಇದ್ದರೆ, ಸ್ವತ್ತಿಗೆ ವಿರುದ್ಧವಾಗಿ ಹಕ್ಕು ಸ್ಥಾಪನೆ ಮಾಡಲಾದ ವೀಡಿಯೊಗಳಿಗೆ ಕೆನಡಾದಲ್ಲಿ ಟ್ರ್ಯಾಕ್ (ಮಾಲೀಕರು ಕಾಣಿಸುತ್ತಿಲ್ಲ) ನೀತಿಯನ್ನು ಅನ್ವಯಿಸುತ್ತದೆ.
  • ಹೆಚ್ಚು ನಿಯಂತ್ರಿತ ನೀತಿಯು ಅನ್ವಯಿಸುವ ಕಾರಣದಿಂದ, ವೀಡಿಯೊಗಳ ಮೇಲಿನ ಇತರ ಹಕ್ಕು ಸ್ಥಾಪನೆಗಳಿಂದ ಯಾವುದೇ ಮಾನಿಟೈಸ್ ನೀತಿಗೆ ಹೋಲಿಸಿದರೆ ಈ ಟ್ರ್ಯಾಕ್ ನೀತಿಯು ಪ್ರಾಧಾನ್ಯತೆ ಪಡೆಯುತ್ತದೆ.

ಒಂದೇ ಸ್ವತ್ತಿನ ಕುರಿತಂತೆ

ಒಂದು ವೇಳೆ ವಿಭಿನ್ನ ಪಾಲುದಾರರು ಒಂದೇ ಸ್ವತ್ತಿಗೆ ವಿಭಿನ್ನ ಪ್ರದೇಶಗಳಲ್ಲಿ ಹಕ್ಕುಗಳ ಮಾಲೀಕತ್ವ ಹೊಂದಿದ್ದರೆ, ಆ ದೇಶದಲ್ಲಿ ಸ್ವತ್ತಿನ ಮಾಲೀಕತ್ವವನ್ನು ಹೊಂದಿರುವ ಪಾಲುದಾರರ ನೀತಿಯನ್ನು ಅನ್ವಯಿಸಲಾಗುತ್ತದೆ.

ಒಂದು ವೇಳೆ ವಿಭಿನ್ನ ಪಾಲುದಾರರು ಒಂದೇ ಸ್ವತ್ತಿಗೆ ಒಂದೇ ಪ್ರದೇಶಗಳಲ್ಲಿ ಹಕ್ಕುಗಳ ಮಾಲೀಕತ್ವ ಹೊಂದಿದ್ದರೆ, ಹೆಚ್ಚು ನಿಯಂತ್ರಿತ ಕ್ರಿಯೆಗೆ ಕಾರಣವಾಗುವ ಪಾಲುದಾರರ ನೀತಿಯನ್ನು ಅನ್ವಯಿಸಲಾಗುತ್ತದೆ. ಇಬ್ಬರೂ ಪಾಲುದಾರರು ಒಂದೇ ನೀತಿಯನ್ನು ಹೊಂದಿದ್ದರೆ, ನಂತರ ಅನ್ವಯಿಸುವಿಕೆಯು ಅದು ಸಂಗೀತ ಅಥವಾ ಸಂಗೀತವಲ್ಲದ ಅಸೆಟ್ ಎಂಬುದನ್ನು ಆಧರಿಸಿರುತ್ತದೆ:

  • ಸಂಗೀತದ ಅಸೆಟ್‌ಗಳಿಗಾಗಿ: ಆದಾಯವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲಾಗುತ್ತದೆ ಮತ್ತು ವಿವಾದವನ್ನು ಬಗೆಹರಿಸಿದ ನಂತರ, ಆದಾಯವನ್ನು ಸೂಕ್ತ ಪಾರ್ಟಿಗೆ ಪಾವತಿಸಲಾಗುತ್ತದೆ.
  • ಸಂಗೀತವಲ್ಲದ ಸ್ವತ್ತುಗಳಿಗೆ: ಇಬ್ಬರೂ ಪಾಲುದಾರರಿಗೆ ಟ್ರ್ಯಾಕ್ ನೀತಿಯನ್ನು ಅನ್ವಯಿಸಲಾಗುತ್ತದೆ. ಮಾಲೀಕತ್ವದ ಸಂಘರ್ಷವನ್ನು ಬಗೆಹರಿಸುವ ತನಕ ಮಾನಿಟೈಸ್ ನೀತಿಯನ್ನು ಅನ್ವಯಿಸಲಾಗುವುದಿಲ್ಲ.
ಉದಾಹರಣೆಗಳು

ಹಂಚಿಕೊಂಡ ಮಾಲೀಕತ್ವದೊಂದಿಗೆ ಸ್ವತ್ತಿಗೆ ಹೊಂದಾಣಿಕೆಯಾಗುವ ಬಳಕೆದಾರರು ಅಪ್‌ಲೋಡ್ ಮಾಡಿರುವ ವೀಡಿಯೊಗಳಿಗೆ ನೀತಿಗಳನ್ನು ಹೇಗೆ ಅನ್ವಯಿಸಲಾಗುತ್ತದೆ ಎಂಬ ಕುರಿತಾದ ಕೆಲವು ಸನ್ನಿವೇಶಗಳನ್ನು ಕೆಳಗಿನ ಟೇಬಲ್ ತೋರಿಸುತ್ತದೆ.

ವಿಭಿನ್ನ ಪ್ರದೇಶಗಳಲ್ಲಿ ಮಾಲೀಕತ್ವ + ವಿಭಿನ್ನ ನೀತಿಗಳು:

  ಪಾಲುದಾರ A ಪಾಲುದಾರ B
ಇಲ್ಲಿ ಮಾಲೀಕತ್ವ ಹೊಂದಿದ್ದಾರೆ: ಯುನೈಟೆಡ್ ಸ್ಟೇಟ್ಸ್, ಕೆನಡಾ, ಮೆಕ್ಸಿಕೋ ಯುನೈಟೆಡ್ ಕಿಂಗ್‌ಡಮ್
ಹೊಂದಿಕೆ ನೀತಿಯನ್ನು ಹೀಗೆ ಹೊಂದಿಸಲಾಗಿದೆ: ಕಂಟೆಂಟ್ ಅನ್ನು ನಿರ್ಬಂಧಿಸಿ ಕಂಟೆಂಟ್ ಅನ್ನು ಮಾನಿಟೈಸ್ ಮಾಡಿ
ಯಾವ ನೀತಿಯನ್ನು ಅನ್ವಯಿಸಲಾಗಿದೆ:
  • ಪಾಲುದಾರ A ಇದರ ನೀತಿಯ ಪ್ರಕಾರ, ಈ ಸ್ವತ್ತಿಗೆ ಹೊಂದಾಣಿಕೆಯಾಗುವ ಬಳಕೆದಾರರು ಅಪ್‌ಲೋಡ್ ಮಾಡಿದ ವೀಡಿಯೊಗಳನ್ನು ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಮೆಕ್ಸಿಕೋದಲ್ಲಿ ನಿರ್ಬಂಧಿಸಲಾಗುತ್ತದೆ.
  • ಪಾಲುದಾರ B ಇದರ ನೀತಿಯ ಪ್ರಕಾರ, ಸ್ವತ್ತಿಗೆ ಹೊಂದಾಣಿಕೆಯಾಗುವ ಬಳಕೆದಾರರು ಅಪ್‌ಲೋಡ್ ಮಾಡಿದ ವೀಡಿಯೊಗಳನ್ನು ಯುನೈಟೆಡ್ ಕಿಂಗ್‌ಡಮ್ (UK) ನಲ್ಲಿ ಜಾಹೀರಾತುಗಳೊಂದಿಗೆ ತೋರಿಸಲಾಗುತ್ತದೆ.
  • UK ನಲ್ಲಿ ಪಡೆದ ವೀಕ್ಷಣೆಗಳಿಗೆ ಆದಾಯವನ್ನು ಪಾಲುದಾರ B ಪಡೆಯುತ್ತಾರೆ.
  • ವಿಶ್ವದ ಇತರ ಭಾಗಗಳಲ್ಲಿ ಯಾವುದೇ ನೀತಿ ಅನ್ವಯವಾಗುವುದಿಲ್ಲ.

ವಿಭಿನ್ನ ಪ್ರದೇಶಗಳಲ್ಲಿ ಮಾಲೀಕತ್ವ + ಒಂದೇ ನೀತಿ:

  ಪಾಲುದಾರ A ಪಾಲುದಾರ B
ಇಲ್ಲಿ ಮಾಲೀಕತ್ವ ಹೊಂದಿದ್ದಾರೆ: ಯುನೈಟೆಡ್ ಸ್ಟೇಟ್ಸ್, ಕೆನಡಾ, ಮೆಕ್ಸಿಕೋ ಯುನೈಟೆಡ್ ಕಿಂಗ್‌ಡಮ್
ಹೊಂದಿಕೆ ನೀತಿಯನ್ನು ಹೀಗೆ ಹೊಂದಿಸಲಾಗಿದೆ: ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಂಟೆಂಟ್ ಅನ್ನು ನಿರ್ಬಂಧಿಸುವುದು; ಕೆನಡಾ ಮತ್ತು ಮೆಕ್ಸಿಕೋದಲ್ಲಿ ಕಂಟೆಂಟ್ ಅನ್ನು ಮಾನಿಟೈಸ್ ಮಾಡುವುದು ಕಂಟೆಂಟ್ ಅನ್ನು ಮಾನಿಟೈಸ್ ಮಾಡಿ
ಯಾವ ನೀತಿಯನ್ನು ಅನ್ವಯಿಸಲಾಗಿದೆ:
  • ಪಾಲುದಾರ A ಇದರ ನೀತಿಯ ಪ್ರಕಾರ, ಈ ಸ್ವತ್ತಿಗೆ ಹೊಂದಾಣಿಕೆಯಾಗುವ ಬಳಕೆದಾರರು ಅಪ್‌ಲೋಡ್ ಮಾಡಿದ ವೀಡಿಯೊಗಳನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಿರ್ಬಂಧಿಸಲಾಗುತ್ತದೆ, ಕೆನಡಾ ಮತ್ತು ಮೆಕ್ಸಿಕೋದಲ್ಲಿ ಜಾಹೀರಾತುಗಳೊಂದಿಗೆ ತೋರಿಸಲಾಗುತ್ತದೆ. ಕೆನಡಾ ಮತ್ತು ಮೆಕ್ಸಿಕೋದಲ್ಲಿನ ವೀಕ್ಷಣೆಗಳಿಂದ ಆದಾಯವನ್ನು ಪಾಲುದಾರ A ಪಡೆಯುತ್ತಾರೆ.
  • ಪಾಲುದಾರ B ಇದರ ನೀತಿಯ ಪ್ರಕಾರ, ಈ ಸ್ವತ್ತಿಗೆ ಹೊಂದಾಣಿಕೆಯಾಗುವ ಬಳಕೆದಾರರು ಅಪ್‌ಲೋಡ್ ಮಾಡಿದ ವೀಡಿಯೊಗಳನ್ನು ಯುನೈಟೆಡ್ ಕಿಂಗ್‌ಡಮ್ (UK) ನಲ್ಲಿ ಜಾಹೀರಾತುಗಳೊಂದಿಗೆ ತೋರಿಸಲಾಗುತ್ತದೆ. UK ನಲ್ಲಿ ಪಡೆದ ವೀಕ್ಷಣೆಗಳಿಗೆ ಆದಾಯವನ್ನು ಪಾಲುದಾರ B ಪಡೆಯುತ್ತಾರೆ.
  • ವಿಶ್ವದ ಇತರ ಭಾಗಗಳಲ್ಲಿ ಯಾವುದೇ ನೀತಿ ಅನ್ವಯವಾಗುವುದಿಲ್ಲ.

ಒಂದೇ ಪ್ರದೇಶದಲ್ಲಿ ಮಾಲೀಕತ್ವ + ವಿಭಿನ್ನ ನೀತಿಗಳು:

  ಪಾಲುದಾರ A ಪಾಲುದಾರ B
ಇಲ್ಲಿ ಮಾಲೀಕತ್ವ ಹೊಂದಿದ್ದಾರೆ: ಯುನೈಟೆಡ್ ಸ್ಟೇಟ್ಸ್, ಕೆನಡಾ, ಮೆಕ್ಸಿಕೋ ಯುನೈಟೆಡ್ ಸ್ಟೇಟ್ಸ್
ಹೊಂದಿಕೆ ನೀತಿಯನ್ನು ಹೀಗೆ ಹೊಂದಿಸಲಾಗಿದೆ: ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಂಟೆಂಟ್ ಅನ್ನು ನಿರ್ಬಂಧಿಸುವುದು; ಕೆನಡಾ ಮತ್ತು ಮೆಕ್ಸಿಕೋದಲ್ಲಿ ಕಂಟೆಂಟ್ ಅನ್ನು ಮಾನಿಟೈಸ್ ಮಾಡುವುದು ಕಂಟೆಂಟ್ ಅನ್ನು ಟ್ರ್ಯಾಕ್ ಮಾಡಿ
ಯಾವ ನೀತಿಯನ್ನು ಅನ್ವಯಿಸಲಾಗಿದೆ:
  • ಪಾಲುದಾರ A ಇದರ ನೀತಿಯನ್ನು ಅನ್ವಯಿಸಲಾಗುತ್ತದೆ ಏಕೆಂದರೆ ಅದು ಹೆಚ್ಚು ನಿಯಂತ್ರಿತ ಕ್ರಿಯೆಗೆ (ನಿರ್ಬಂಧ) ಕಾರಣವಾಗುತ್ತದೆ. ಈ ಸ್ವತ್ತಿಗೆ ಹೊಂದಾಣಿಕೆಯಾಗುವ ಬಳಕೆದಾರರು ಅಪ್‌ಲೋಡ್ ಮಾಡಿದ ವೀಡಿಯೊಗಳನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಿರ್ಬಂಧಿಸಲಾಗುತ್ತದೆ.
  • ವಿಶ್ವದ ಇತರ ಭಾಗಗಳಲ್ಲಿ ಯಾವುದೇ ನೀತಿ ಅನ್ವಯವಾಗುವುದಿಲ್ಲ.

ಒಂದೇ ಪ್ರದೇಶದಲ್ಲಿ ಮಾಲೀಕತ್ವ + ಒಂದೇ ನೀತಿ:

  ಪಾಲುದಾರ A ಪಾಲುದಾರ B
ಇಲ್ಲಿ ಮಾಲೀಕತ್ವ ಹೊಂದಿದ್ದಾರೆ: ಯುನೈಟೆಡ್ ಸ್ಟೇಟ್ಸ್ ಯುನೈಟೆಡ್ ಸ್ಟೇಟ್ಸ್
ಹೊಂದಿಕೆ ನೀತಿಯನ್ನು ಹೀಗೆ ಹೊಂದಿಸಲಾಗಿದೆ: ಕಂಟೆಂಟ್ ಅನ್ನು ಮಾನಿಟೈಸ್ ಮಾಡಿ ಕಂಟೆಂಟ್ ಅನ್ನು ಮಾನಿಟೈಸ್ ಮಾಡಿ
ಯಾವ ನೀತಿಯನ್ನು ಅನ್ವಯಿಸಲಾಗಿದೆ:
  • ಸಂಗೀತದ ಅಸೆಟ್‌ಗಳಿಗಾಗಿ: ಆದಾಯವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲಾಗುತ್ತದೆ ಮತ್ತು ವಿವಾದವನ್ನು ಬಗೆಹರಿಸಿದ ನಂತರ, ಆದಾಯವನ್ನು ಸೂಕ್ತ ಪಾರ್ಟಿಗೆ ಪಾವತಿಸಲಾಗುತ್ತದೆ.
  • ಸಂಗೀತವಲ್ಲದ ಸ್ವತ್ತುಗಳಿಗೆ: ಇಬ್ಬರೂ ಪಾಲುದಾರರಿಗೆ ಟ್ರ್ಯಾಕ್ ನೀತಿಯನ್ನು ಅನ್ವಯಿಸಲಾಗುತ್ತದೆ. ಮಾಲೀಕತ್ವದ ಸಂಘರ್ಷವನ್ನು ಬಗೆಹರಿಸುವ ತನಕ ಮಾನಿಟೈಸ್ ನೀತಿಯನ್ನು ಅನ್ವಯಿಸಲಾಗುವುದಿಲ್ಲ.
  • ವಿಶ್ವದ ಇತರ ಭಾಗಗಳಲ್ಲಿ ಯಾವುದೇ ನೀತಿ ಅನ್ವಯವಾಗುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7423018334468181078
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false