ಲೈವ್ ಸ್ಟ್ರೀಮ್‌ಗಳಿಗೆ ಸಂಬಂಧಿಸಿದಂತೆ ಎದುರಾಗುವ ಕೃತಿಸ್ವಾಮ್ಯ ಸಮಸ್ಯೆಗಳು

ಮತ್ತೊಂದು ಲೈವ್ ಬ್ರಾಡ್‌ಕಾಸ್ಟ್ ರೂಪದಲ್ಲಿರುವ ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಸೇರಿದಂತೆ, ಥರ್ಡ್ ಪಾರ್ಟಿ ಕಂಟೆಂಟ್‌ಗೆ ಹೊಂದಾಣಿಕೆಯಾಗುತ್ತವೆಯೇ ಎಂದು ತಿಳಿಯಲು ಎಲ್ಲಾ ಲೈವ್ ಸ್ಟ್ರೀಮ್‌ಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ.

ಥರ್ಡ್ ಪಾರ್ಟಿಯ ಕಂಟೆಂಟ್ ಅನ್ನು ಗುರುತಿಸಲಾದಾಗ, ನಿಮ್ಮ ಲೈವ್ ಸ್ಟ್ರೀಮ್‌ನ ಬದಲಿಗೆ ಪ್ಲೇಸ್‌ಹೋಲ್ಡರ್ ಚಿತ್ರವು ಕಾಣಿಸಬಹುದು. ಥರ್ಡ್ ಪಾರ್ಟಿ ಕಂಟೆಂಟ್ ಅನ್ನು ಸ್ಟ್ರೀಮಿಂಗ್ ಮಾಡುವುದನ್ನು ನಿಲ್ಲಿಸಲು ನಿಮಗೆ ಎಚ್ಚರಿಕೆ ನೀಡಲಾಗುತ್ತದೆ. ನೀವು ಈ ಎಚ್ಚರಿಕೆಯನ್ನು ಅನುಸರಿಸಿದರೆ ಮತ್ತು ಸಮಸ್ಯೆಗಳನ್ನು ಪರಿಹರಿಸಿದರೆ, ನೀವು ಸ್ಟ್ರೀಮ್ ಮಾಡುವುದನ್ನು ಮುಂದುವರಿಸಬಹುದು.

ನಿಮ್ಮ ಸ್ಟ್ರೀಮ್‌ನಲ್ಲಿ ಥರ್ಡ್ ಪಾರ್ಟಿ ಕಂಟೆಂಟ್ ಉಳಿದರೆ, ನಿಮ್ಮ ಲೈವ್ ಸ್ಟ್ರೀಮ್‌ಗೆ ತಾತ್ಕಾಲಿಕವಾಗಿ ಅಡ್ಡಿಪಡಿಸಲಾಗುತ್ತದೆ ಅಥವಾ ಕೊನೆಗೊಳಿಸಲಾಗುತ್ತದೆ. ನಿಮ್ಮ ಲೈವ್ ಸ್ಟ್ರೀಮ್ ಥರ್ಡ್ ಪಾರ್ಟಿ ಕಂಟೆಂಟ್‌ ಅನ್ನು ಹೊಂದಿರುವ ಕಾರಣಕ್ಕಾಗಿ, ನಿಮ್ಮ ಲೈವ್ ಸ್ಟ್ರೀಮ್ ಸ್ವಯಂಚಾಲಿತವಾಗಿ ನಿಲ್ಲಬಹುದು ಮತ್ತು DMCA ಕೃತಿಸ್ವಾಮ್ಯ ಫಾರ್ಮ್‌ನಂತಹ ರೀತಿಯಿಂದ ಅದನ್ನು ತೆಗೆದುಹಾಕಲಾಗಬಹುದು. ಹಾಗಿದ್ದಲ್ಲಿ, ಥರ್ಡ್ ಪಾರ್ಟಿ ಕಂಟೆಂಟ್‌ನ ಜೊತೆಗೆ ಸ್ಟ್ರೀಮ್ ಅನ್ನು ಮುಂದುವರಿಸಲು ಯಾವುದೇ ಅವಕಾಶವಿರುವುದಿಲ್ಲ, ಹಾಗಾಗಿ ಅದು ಸ್ವಯಂಚಾಲಿತವಾಗಿ ಸ್ಥಗಿತವಾಗುತ್ತದೆ. ನೀವು ಕೃತಿಸ್ವಾಮ್ಯ ಅಥವಾ ಸಮುದಾಯ ಮಾರ್ಗಸೂಚಿಗಳ ಕುರಿತಂತೆ ಸ್ಟ್ರೈಕ್ ಅನ್ನು ಪಡೆದರೆ ಸಹ ನಿಮ್ಮ ಸ್ಟ್ರೀಮ್ ಅನ್ನು ಕೊನೆಗೊಳಿಸಲಾಗಬಹುದು.

ಲೈವ್ ಸ್ಟ್ರೀಮಿಂಗ್ ಆ್ಯಕ್ಸೆಸ್ ಅನ್ನು ಮರುಸ್ಥಾಪಿಸಿ

ನಿಮ್ಮ ಲೈವ್ ಸ್ಟ್ರೀಮ್ ಅನ್ನು ನಿಲ್ಲಿಸಲಾದರೆ, ಸ್ಟ್ರೈಕ್‌ಗಳಿವೆಯೇ ಎಂದು ತಿಳಿಯಲು ನಿಮ್ಮ YouTube Studio ಡ್ಯಾಶ್‌ಬೋರ್ಡ್ ಅನ್ನು ಪರಿಶೀಲಿಸಿ. ಪಟ್ಟಿ ಮಾಡಲಾದ ಸಮಸ್ಯೆಗಳನ್ನು ನೀವು ಸರಿಪಡಿಸಿದರೆ, ಲೈವ್ ಸ್ಟ್ರೀಮಿಂಗ್‌ಗೆ ನಿಮ್ಮ ಆ್ಯಕ್ಸೆಸ್ ಅನ್ನು ಮರುಸ್ಥಾಪಿಸಲಾಗಬಹುದು. ಲೈವ್ ಸ್ಟ್ರೀಮಿಂಗ್ ಮೇಲಿನ ನಿರ್ಬಂಧಗಳನ್ನು ಪರಿಹರಿಸುವ ಕುರಿತು ಇನ್ನಷ್ಟು ತಿಳಿಯಿರಿ.

ಪರವಾನಗಿ ಪಡೆದ ಥರ್ಡ್ ಪಾರ್ಟಿ ಕಂಟೆಂಟ್ ಅನ್ನು ಲೈವ್ ಸ್ಟ್ರೀಮ್ ಮಾಡಿ

ನಿಮ್ಮ ಸ್ಟ್ರೀಮ್‌ನಲ್ಲಿ ಥರ್ಡ್ ಪಾರ್ಟಿ ಕಂಟೆಂಟ್ ಅನ್ನು ಬಳಸಲು ನೀವು ಪರವಾನಗಿ ಪಡೆದಿದ್ದರೆ, Content ID ಮೂಲಕ ನಿಮ್ಮ ಚಾನಲ್ ಅನ್ನು ಅವರ ಅನುಮತಿ ಪಟ್ಟಿಗೆ ಸೇರಿಸಲು ಕಂಟೆಂಟ್‌ನ ಮಾಲೀಕರನ್ನು ಕೇಳಿ.

ನಿಮ್ಮ ಚಾನಲ್ ಅನ್ನು ಅವರ ಅನುಮತಿ ಪಟ್ಟಿಗೆ ಸೇರಿಸದಿದ್ದರೆ, ನೀವು ಥರ್ಡ್ ಪಾರ್ಟಿ ಕಂಟೆಂಟ್‌ಗೆ ಸಂಬಂಧಿಸಿದಂತೆ ಪರವಾನಗಿ ಹೊಂದಿದ್ದರೂ ಸಹ ನಿಮ್ಮ ಲೈವ್ ಸ್ಟ್ರೀಮ್‌ಗೆ ಅಡಚಣೆ ಉಂಟಾಗಬಹುದು. ನಿಮ್ಮ ಚಾನಲ್‌ ಅನ್ನು ಕಂಟೆಂಟ್ ಮಾಲೀಕರ ಅನುಮತಿ ಪಟ್ಟಿಗೆ ಸೇರಿಸದೇ ಇದ್ದರೆ, ಕಂಟೆಂಟ್‌ಗೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲಾ ಹಕ್ಕುಗಳನ್ನು ನೀವು ಹೊಂದಿರುವ ಪ್ರದೇಶಗಳಿಗೆ ನಿಮ್ಮ ಲೈವ್ ಸ್ಟ್ರೀಮ್‌ ಅನ್ನು ನಿರ್ಬಂಧಿಸಿದ್ದರೂ ಸಹ, ನಿಮ್ಮ ಲೈವ್ ಸ್ಟ್ರೀಮ್‌ಗೆ ಅಡಚಣೆ ಉಂಟಾಗಬಹುದು.

ಆರ್ಕೈವ್ ಮಾಡಿದ ಲೈವ್ ಸ್ಟ್ರೀಮ್‌ಗಳಲ್ಲಿ Content ID ಕ್ಲೇಮ್‌ಗಳು

ನೀವು ನಿಮ್ಮ ಲೈವ್ ಸ್ಟ್ರೀಮ್‌ಗಳನ್ನು ಪೂರ್ಣಗೊಳಿಸಿದ ನಂತರ, ವೀಡಿಯೊವನ್ನು ಆರ್ಕೈವ್ ಮಾಡಬೇಕೆಂದು ನಿರ್ಧರಿಸಿದಾಗ ಮಾತ್ರ Content ID ಕ್ಲೇಮ್‌ಗಳನ್ನು ಮಾಡಲಾಗುತ್ತದೆ. Content ID ಕ್ಲೇಮ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6377841311440858705
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false