ಪ್ಲೇಪಟ್ಟಿ ಗೌಪ್ಯತೆ ಸೆಟ್ಟಿಂಗ್ ಬದಲಾಯಿಸಿ

ನೀವು ಪ್ಲೇಪಟ್ಟಿಯ ಮಾಲೀಕರಾಗಿದ್ದರೆ, ನೀವು ಪ್ರತ್ಯೇಕ ವೀಡಿಯೊಗಳಿಗಾಗಿ ಮಾಡುವಂತೆ, ನಿಮ್ಮ ಪ್ಲೇಪಟ್ಟಿಯನ್ನು ಸಾರ್ವಜನಿಕ, ಖಾಸಗಿ ಅಥವಾ ಪಟ್ಟಿ ಮಾಡದಿರುವುದು ಎಂದು ಸೆಟ್ ಮಾಡಬಹುದು.

ಗಮನಿಸಿ: YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವಗಳೊಂದಿಗೆ ಈ ಫೀಚರ್ ಲಭ್ಯವಿಲ್ಲದಿರಬಹುದು. ಇನ್ನಷ್ಟು ತಿಳಿಯಿರಿ.

YouTube Studio ಮೂಲಕ ಪ್ಲೇಪಟ್ಟಿ ಗೌಪ್ಯತೆಯನ್ನು ಸೆಟ್ ಮಾಡಿ

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಪ್ಲೇಪಟ್ಟಿಗಳು  ಎಂಬುದನ್ನು ಆಯ್ಕೆಮಾಡಿ.
  3. ನೀವು ಅಪ್‌ಡೇಟ್ ಮಾಡಲು ಬಯಸುವ ಪ್ಲೇಪಟ್ಟಿಯ ಮುಂದೆ, YouTube ನಲ್ಲಿ ಎಡಿಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  4. ಪ್ಲೇಪಟ್ಟಿಯ ಶೀರ್ಷಿಕೆಯ ಕೆಳಗೆ, ಪ್ಲೇಪಟ್ಟಿ ಗೌಪ್ಯತೆ ಡ್ರಾಪ್-ಡೌನ್ ಮೆನು ಕ್ಲಿಕ್ ಮಾಡಿ.
  5. ಹೊಸ ಗೌಪ್ಯತೆ ಸೆಟ್ಟಿಂಗ್ ಅನ್ನು ಆಯ್ಕೆಮಾಡಿ.  
  6. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

YouTube ಮೂಲಕ ಪ್ಲೇಪಟ್ಟಿ ಗೌಪ್ಯತೆಯನ್ನು ಸೆಟ್ ಮಾಡಿ

  1. ನಿಮ್ಮ ಎಲ್ಲಾ ಪ್ಲೇಪಟ್ಟಿಗಳನ್ನು ವೀಕ್ಷಿಸಲು, ಖಾತೆ ಟ್ಯಾಬ್‌ಗೆ ಹೋಗಿ.
  2. ನೀವು ಎಡಿಟ್ ಮಾಡಲು ಬಯಸುವ ಪ್ಲೇಪಟ್ಟಿ‌ಯನ್ನು ಆಯ್ಕೆಮಾಡಿ.
  3. ಪ್ಲೇಪಟ್ಟಿಯ ಶೀರ್ಷಿಕೆಯ ಕೆಳಗೆ, ಪ್ಲೇಪಟ್ಟಿ ಗೌಪ್ಯತೆ ಡ್ರಾಪ್-ಡೌನ್ ಮೆನು ಕ್ಲಿಕ್ ಮಾಡಿ.

ಗೌಪ್ಯತೆ ಸೆಟ್ಟಿಂಗ್‌ಗಳು

  • ಸಾರ್ವಜನಿಕ ವೀಡಿಯೊಗಳು ಮತ್ತು ಪ್ಲೇಪಟ್ಟಿಗಳನ್ನು ಯಾರಾದರೂ ವೀಕ್ಷಿಸಬಹುದು ಮತ್ತು ಹಂಚಿಕೊಳ್ಳಬಹುದು.
  • ವೀಡಿಯೊ ಲಿಂಕ್ ಹೊಂದಿರುವ ಯಾರಾದರೂ ಪಟ್ಟಿ ಮಾಡದಿರುವ ವೀಡಿಯೊಗಳು ಮತ್ತು ಪ್ಲೇಪಟ್ಟಿಗಳನ್ನು ವೀಕ್ಷಿಸಬಹುದು ಮತ್ತು ಹಂಚಿಕೊಳ್ಳಬಹುದು.
  • YouTube ಸಿಸ್ಟಂಗಳು ಮತ್ತು ಮಾನವ ವಿಮರ್ಶಕರು ಆ್ಯಡ್ ಸೂಕ್ತತೆ, ಕೃತಿಸ್ವಾಮ್ಯ ಮತ್ತು ಇತರ ದುರುಪಯೋಗ ತಡೆಗಟ್ಟುವ ಕಾರ್ಯವಿಧಾನಗಳಿಗಾಗಿ ಖಾಸಗಿ ವೀಡಿಯೊಗಳು ಮತ್ತು ಪ್ಲೇಪಟ್ಟಿಗಳನ್ನು ಪರಿಶೀಲಿಸಬಹುದು.
ಫೀಚರ್ ಪಟ್ಟಿ ಮಾಡದಿರುವುದು ಖಾಸಗಿ ಸಾರ್ವಜನಿಕ
URL ಅನ್ನು ಹಂಚಿಕೊಳ್ಳಬಹುದು ಹೌದು ಇಲ್ಲ ಹೌದು
ಚಾನಲ್ ವಿಭಾಗಕ್ಕೆ ಸೇರಿಸಬಹುದು ಹೌದು ಇಲ್ಲ ಹೌದು
ಹುಡುಕಾಟ, ಸಂಬಂಧಿತ ವೀಡಿಯೊಗಳು ಮತ್ತು ರೆಕ್‌ಗಳಲ್ಲಿ ತೋರಿಸುತ್ತದೆ ಇಲ್ಲ ಇಲ್ಲ ಹೌದು
ನಿಮ್ಮ ಚಾನಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಇಲ್ಲ ಇಲ್ಲ ಹೌದು
ಸಬ್‌ಸ್ಕ್ರೈಬರ್ ಫೀಡ್‌ನಲ್ಲಿ ತೋರಿಸುತ್ತದೆ ಇಲ್ಲ ಇಲ್ಲ ಹೌದು

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5295746032988372380
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false