SFTP ಡ್ರಾಪ್‌ಬಾಕ್ಸ್ ಅಪ್‌ಲೋಡ್ ಅತ್ಯುತ್ತಮ ಅಭ್ಯಾಸಗಳು

ಈ ಫೀಚರ್‌ಗಳು ತಮ್ಮ ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ನಿರ್ವಹಿಸಲು YouTube ನ ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಲಭ್ಯವಿರುತ್ತವೆ.

Google ಗೆ ಕಂಟೆಂಟ್ ಅನ್ನು (ಮೆಟಾಡೇಟಾ ಮತ್ತು ಉಲ್ಲೇಖಿತ ಫೈಲ್‌ಗಳು) ಅಪ್‌ಲೋಡ್ ಮಾಡುವುದಕ್ಕಾಗಿ ಈ ಮಾರ್ಗಸೂಚಿಗಳನ್ನು ಅನುಸರಿಸಿ.

ಪ್ರತಿ ಅಪ್‌ಲೋಡ್ ಬ್ಯಾಚ್‌ಗಾಗಿ ಅನನ್ಯ ಫೋಲ್ಡರ್ ಅನ್ನು ರಚಿಸಿ

ನಿಮ್ಮ ಡ್ರಾಪ್‌ಬಾಕ್ಸ್‌ನಲ್ಲಿ ನೀವು ಪೋಸ್ಟ್ ಮಾಡುವ ಎಲ್ಲಾ ಫೈಲ್‌ಗಳು ಫೋಲ್ಡರ್‌ನಲ್ಲಿರಬೇಕು. ಯಾವುದೇ delivery.complete ಫೈಲ್‌ಗಳನ್ನು ಒಳಗೊಂಡಂತೆ, ಡ್ರಾಪ್‌ಬಾಕ್ಸ್‌ನ ರೂಟ್‌ ಫೋಲ್ಡರ್‌ನಲ್ಲಿರುವ ಫೈಲ್‌ಗಳನ್ನು Google ನಿರ್ಲಕ್ಷಿಸುತ್ತದೆ.

ಸಂಭವನೀಯ ಹೆಸರಿಸುವ ಸಂಘರ್ಷಗಳನ್ನು ತಪ್ಪಿಸಲು, ನೀವು ಪ್ರತಿ ಬಾರಿ ಕಂಟೆಂಟ್ ಅನ್ನು ಪೋಸ್ಟ್ ಮಾಡಿದಾಗ ಹೊಸ ಫೋಲ್ಡರ್ ಅನ್ನು ರಚಿಸುವಂತೆ ಮತ್ತು ಪ್ರತಿ ಫೋಲ್ಡರ್‌ನ ಹೆಸರಿನಲ್ಲಿ ನೀವು ಟೈಮ್‌ಸ್ಟ್ಯಾಂಪ್ ಅಥವಾ ಇನ್‌ಕ್ರಿಮೆಂಟಲ್ ID ಯನ್ನು ಸೇರಿಸುವಂತೆ ನಾವು ಶಿಫಾರಸು ಮಾಡುತ್ತೇವೆ. ಟೈಮ್‌ಸ್ಟ್ಯಾಂಪ್ ಅಥವಾ ID, ಅಪ್‌ಲೋಡ್ ಬ್ಯಾಚ್‌ಗಳನ್ನು ಟ್ರ್ಯಾಕ್ ಮಾಡಲು ಉತ್ತಮ ಮಾರ್ಗವನ್ನು ಒದಗಿಸುತ್ತದೆ.

ಸಣ್ಣ ಬ್ಯಾಚ್‌ಗಳನ್ನು ಬಳಸಿ

ಒಂದೇ ದೊಡ್ಡ ಬ್ಯಾಚ್‌ಗಿಂತ ಅನೇಕ ಸಣ್ಣ ಬ್ಯಾಚ್‌ಗಳನ್ನು ರಚಿಸಿ. ನಾವು ಸಾಮಾನ್ಯವಾಗಿ ಒಂದು ಬಾರಿಗೆ ಒಂದೇ ಸ್ವತ್ತಿಗಾಗಿ ಫೈಲ್‌ಗಳನ್ನು ಅಪ್‌ಲೋಡ್ ಮಾಡುವಂತೆ ಶಿಫಾರಸು ಮಾಡುತ್ತೇವೆ. ನೀವು ಡ್ರಾಪ್‌ಬಾಕ್ಸ್ ಅನ್ನು ಬಳಸುತ್ತಿದ್ದರೆ, ಪ್ರತಿ ಸ್ವತ್ತಿಗಾಗಿ ಪ್ರತ್ಯೇಕ ಡೈರೆಕ್ಟರಿ ಮತ್ತು ಪ್ರತ್ಯೇಕ delivery.complete ಫೈಲ್ ಅನ್ನು ರಚಿಸಿ.

10 ಸ್ವತ್ತುಗಳನ್ನು ಹೊಂದಿರುವ ಒಂದು ಬ್ಯಾಚ್‌ಗಿಂತ ಒಂದು ಸ್ವತ್ತನ್ನು ಹೊಂದಿರುವ 10 ಬ್ಯಾಚ್‌ಗಳನ್ನು ಪ್ರಕ್ರಿಯೆಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಪ್ರತಿಯೊಂದು ಬ್ಯಾಚ್‌ನ ಪ್ರಕ್ರಿಯೆಯು ವೇಗವಾಗಿರುತ್ತದೆ ಮತ್ತು ಯಾವುದೇ ವಿಫಲವಾದ ಅಪ್‌ಲೋಡ್‌ಗಳು ಸಮಸ್ಯೆ ಹೊಂದಿರುವ ಸ್ವತ್ತಿನ ಮೇಲೆ ಮಾತ್ರ ಪರಿಣಾಮ ಬೀರುತ್ತವೆ.

ಅಪ್‌ಲೋಡ್ ಬ್ಯಾಚ್‌ಗಾಗಿ ಶಿಫಾರಸು ಮಾಡಲಾದ ಗರಿಷ್ಠ ಗಾತ್ರವು 100 ಸ್ವತ್ತುಗಳು. ಮೆಟಾಡೇಟಾ ಫೈಲ್ (CSV ಅಥವಾ XML) 10MB ಮೀರಬಾರದು.

ಎಲ್ಲಾ ಉಲ್ಲೇಖಿತ ಫೈಲ್‌ಗಳನ್ನು ಸೇರಿಸಿ

ಮೆಟಾಡೇಟಾ CSV ಅಥವಾ XML ಫೈಲ್‌ನಲ್ಲಿ ಉಲ್ಲೇಖಿಸಲಾದ ಫೈಲ್ ಹೆಸರುಗಳು, ಅವುಗಳ ಫೈಲ್ ವಿಸ್ತರಣೆಗಳನ್ನು ಒಳಗೊಂಡಂತೆ ನೀವು ಅಪ್‌ಲೋಡ್ ಮಾಡುವ ನೈಜ ಫೈಲ್‌ಗಳಿಗೆ ಹೊಂದಿಕೆಯಾಗುತ್ತವೆ ಎಂದು ಖಚಿತಪಡಿಸಿಕೊಳ್ಳಿ. ಹೆಸರುಗಳು ಹೊಂದಿಕೆಯಾಗದಿದ್ದರೆ ಅಥವಾ ಉಲ್ಲೇಖಿತ ಫೈಲ್ ಕಾಣೆಯಾಗಿದ್ದರೆ ಅಪ್‌ಲೋಡ್ ವಿಫಲಗೊಳ್ಳುತ್ತದೆ.

ನಿಮ್ಮ ಡ್ರಾಪ್‌ಬಾಕ್ಸ್‌ನಿಂದ ಯಶಸ್ವಿಯಾಗಿ ಅಪ್‌ಲೋಡ್ ಮಾಡಿದ ಬ್ಯಾಚ್‌ಗಳಿಗೆ ಸಂಬಂಧಿಸಿದ ಫೋಲ್ಡರ್‌ಗಳನ್ನು ತೆಗೆದುಹಾಕಿ

ನಿಮ್ಮ ಡ್ರಾಪ್‌ಬಾಕ್ಸ್, ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವುದಕ್ಕಾಗಿ ಇರುವ ತಾತ್ಕಾಲಿಕ ವೇದಿಕೆಯಾಗಿದೆ. ಇದನ್ನು ದೀರ್ಘಕಾಲೀನ ಸಂಗ್ರಹಣೆಗಾಗಿ ಉದ್ದೇಶಿಸಿಲ್ಲ. 45 ದಿನಗಳಿಗಿಂತ ಹೆಚ್ಚು ಕಾಲ ನಿಮ್ಮ ಡ್ರಾಪ್‌ಬಾಕ್ಸ್‌ನಲ್ಲಿರುವ ಫೈಲ್‌ಗಳನ್ನು ನಾವು ಸ್ವಯಂಚಾಲಿತವಾಗಿ ತೆಗೆದುಹಾಕುತ್ತೇವೆ. ಯಶಸ್ವಿಯಾಗಿ ಅಪ್‌ಲೋಡ್ ಮಾಡಿದ ಬ್ಯಾಚ್‌ಗಳಿಗೆ ಸಂಬಂಧಿಸಿದ ಫೋಲ್ಡರ್‌ಗಳು ಮತ್ತು ಸ್ಟೇಟಸ್ ಫೈಲ್‌ಗಳನ್ನು ಅಳಿಸಲು ನಾವು ಶಿಫಾರಸು ಮಾಡುತ್ತೇವೆ.

ಡ್ರಾಪ್‌ಬಾಕ್ಸ್ ಖಾತೆಯ failed_packages ಉಪ ಡೈರೆಕ್ಟರಿಯು ನಮಗೆ ಯಶಸ್ವಿಯಾಗಿ ಅಪ್‌ಲೋಡ್ ಮಾಡಲು ಸಾಧ್ಯವಾಗದ ಫೈಲ್‌ಗಳನ್ನು ಒಳಗೊಂಡಿರುತ್ತದೆ. ಸರಿಯಾಗಿ ಅಪ್‌ಲೋಡ್ ಮಾಡುವುದನ್ನು ತಡೆಯುವ ಸಮಸ್ಯೆಗಳನ್ನು ಸರಿಪಡಿಸಲು ಫೈಲ್‌ಗಳನ್ನು ಪರಿಶೀಲಿಸಿ, ನಂತರ ಅವುಗಳನ್ನು ಹೊಸ ಅಪ್‌ಲೋಡ್ ಬ್ಯಾಚ್‌ಗಾಗಿ ಫೋಲ್ಡರ್‌ಗೆ ಮೂವ್ ಮಾಡಿ. ನೀವು delivery.complete ಫೈಲ್ ಅನ್ನು ಫೋಲ್ಡರ್‌ಗೆ ಸೇರಿಸಿದಾಗ ನಾವು ಫೈಲ್‌ಗಳನ್ನು ಪುನಃ ಪ್ರಕ್ರಿಯೆಗೊಳಿಸುತ್ತೇವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11390184406731061917
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false