ನಿಮ್ಮ Aspera ಡ್ರಾಪ್‌ಬಾಕ್ಸ್‌ಗೆ ಕನೆಕ್ಟ್ ಮಾಡಿ

ಈ ಫೀಚರ್‌ಗಳು ತಮ್ಮ ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ನಿರ್ವಹಿಸಲು YouTube ನ ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಲಭ್ಯವಿರುತ್ತವೆ.

ಒಮ್ಮೆ ನೀವು ನಿಮ್ಮ ಡ್ರಾಪ್‌ಬಾಕ್ಸ್ ಅನ್ನು ಕಾನ್ಫಿಗರ್ ಮಾಡಿದ ನಂತರ, ನಿಮ್ಮ Aspera ಕ್ಲೈಂಟ್ ಮತ್ತು ನಿಮ್ಮ ಡ್ರಾಪ್‌ಬಾಕ್ಸ್ ನಡುವೆ ಮರುಬಳಕೆ ಮಾಡಬಹುದಾದ ಕನೆಕ್ಷನ್ ಅನ್ನು ನೀವು ರಚಿಸಬೇಕಾಗಿದೆ.

ಸುಲಭ ಉಲ್ಲೇಖಕ್ಕಾಗಿ ನೀವು ಡ್ರಾಪ್‌ಬಾಕ್ಸ್ ಹೆಸರು ಮತ್ತು IP ವಿಳಾಸವನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ; ನೀವು ಈ ಮಾಹಿತಿಯನ್ನು ಸೆಟ್ಟಿಂಗ್‌ಗಳ ಎಡಭಾಗದ ಮೆನುವಿನಲ್ಲಿ ಅಪ್‌ಲೋಡರ್ ಖಾತೆಗಳ ಅಡಿಯಲ್ಲಿ ಕಾಣಬಹುದು.

Aspera ಕನೆಕ್ಷನ್ ಅನ್ನು ರಚಿಸಲು:

  1. ನಿಮ್ಮ Aspera ಕ್ಲೈಂಟ್ ತೆರೆಯಿರಿ.

  2. ಕನೆಕ್ಷನ್ ಮ್ಯಾನೇಜರ್ ಅನ್ನು ತೆರೆಯಲು ಕನೆಕ್ಷನ್ಸ್ ಐಕಾನ್ ಅನ್ನು ಕ್ಲಿಕ್ ಮಾಡಿ.

  3. ಹೊಸ ಕನೆಕ್ಷನ್ ಅನ್ನು ರಚಿಸಲು + ಕ್ಲಿಕ್ ಮಾಡಿ.

  4. ಹೋಸ್ಟ್ ಟೆಕ್ಸ್ಟ್ ಬಾಕ್ಸ್‌ನಲ್ಲಿ ನಿಮ್ಮ ಡ್ರಾಪ್‌ಬಾಕ್ಸ್‌ಗಾಗಿ ನಿಮ್ಮ ಪಾರ್ಟ್‌ನರ್ ಪ್ರತಿನಿಧಿ ಒದಗಿಸಿದ ಹೋಸ್ಟ್ ಹೆಸರನ್ನು ನಮೂದಿಸಿ. ಹೋಸ್ಟ್ ಹೆಸರು ಈ ಕೆಳಗಿನವುಗಳಲ್ಲಿ ಒಂದಾಗಿರಬೇಕು ಮತ್ತು ನಿಮ್ಮ ಭೌಗೋಳಿಕ ಸ್ಥಳಕ್ಕೆ ಹೊಂದಿಕೆಯಾಗಬೇಕು:

    • us.aspera.googleusercontent.com

    • eu.aspera.googleusercontent.com

    • asia.aspera.googleusercontent.com

  5. ಯೂಸರ್ ಟೆಕ್ಸ್ಟ್ ಬಾಕ್ಸ್‌ನಲ್ಲಿ ಡ್ರಾಪ್‌ಬಾಕ್ಸ್ ಹೆಸರನ್ನು ನಮೂದಿಸಿ. ಇದು "asp-" ನೊಂದಿಗೆ ಪ್ರಾರಂಭವಾಗಬೇಕು

  6. ಪಬ್ಲಿಕ್ ಕೀಯನ್ನು ಅಥೆಂಟಿಕೇಷನ್ ಆಯ್ಕೆಯಾಗಿ ಆಯ್ಕೆಮಾಡಿ, ನಂತರ ಲಭ್ಯವಿರುವ ಕೀಗಳ ಪಟ್ಟಿಯಿಂದ ಈ ಡ್ರಾಪ್‌ಬಾಕ್ಸ್‌ಗಾಗಿ ಕೀಯನ್ನು ಆರಿಸಿ.

  7. ಅಡ್ವಾನ್ಸ್ದ್ ಕನೆಕ್ಷನ್ ಸೆಟ್ಟಿಂಗ್‌ಗಳನ್ನು ಪ್ರದರ್ಶಿಸಲು ಅಡ್ವಾನ್ಸ್ದ್ ಬಟನ್ ಕ್ಲಿಕ್ ಮಾಡಿ.

  8. SSH ಪೋರ್ಟ್ (TCP) ಗಾಗಿ ಮೌಲ್ಯವನ್ನು 33001 ಗೆ ಬದಲಾಯಿಸಿ.

  9. ನಿಮ್ಮ ಬದಲಾವಣೆಗಳನ್ನು ಸೇವ್ ಮಾಡಲು OK ಅನ್ನು ಎರಡು ಬಾರಿ ಕ್ಲಿಕ್ ಮಾಡಿ ಮತ್ತು ಮುಖ್ಯ Aspera ಕ್ಲೈಂಟ್ ಪರದೆಗೆ ಹಿಂತಿರುಗಿ.

    ನಿಮ್ಮ ಹೊಸ ಸಂಪರ್ಕವು ಪರದೆಯ ಬಲಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7236224917843505367
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false