ನಿಮ್ಮ ಡ್ರಾಪ್‍ಬಾಕ್ಸ್ ಅನ್ನು ಕಾನ್ಫಿಗರ್ ಮಾಡಿ

ಈ ಫೀಚರ್‌ಗಳು ತಮ್ಮ ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ನಿರ್ವಹಿಸಲು YouTube ನ ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಲಭ್ಯವಿರುತ್ತವೆ.

ನಿಮ್ಮ ಪಾಲುದಾರ ಪ್ರತಿನಿಧಿಯು ನಿಮ್ಮ ಡ್ರಾಪ್‍ಬಾಕ್ಸ್ ಅನ್ನು ಕಾನ್ಫಿಗರ್ ಮಾಡಿದ ನಂತರ, ನಿಮ್ಮ ಖಾತೆಗಾಗಿ ಡೀಫಾಲ್ಟ್‌ಗಳನ್ನು ನೀವು ಕಾನ್ಫಿಗರ್ ಮಾಡಬೇಕಾಗುತ್ತದೆ.

ನಿಮ್ಮ ಡ್ರಾಪ್‍ಬಾಕ್ಸ್ ಕಾನ್ಫಿಗರ್ ಮಾಡಲು:

  1. YouTube ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ

  2. ಎಡಭಾಗದ ಸೆಟ್ಟಿಂಗ್‍ಗಳು ಮೆನುವಿನಲ್ಲಿ ಅಪ್‍ಲೋಡರ್ ಖಾತೆಗಳು ಕ್ಲಿಕ್ ಮಾಡಿ.

  3. ಡ್ರಾಪ್‍ಬಾಕ್ಸ್ ಹೆಸರು ಮತ್ತು ವಿಳಾಸವನ್ನು ದಾಖಲಿಸಿ.

    ಡ್ರಾಪ್‍ಬಾಕ್ಸ್‌ಗೆ ಸಂಪರ್ಕಿಸಲು ಈ ಮಾಹಿತಿ ನಿಮಗೆ ಬೇಕು.

    Aspera ಡ್ರಾಪ್‌ಬಾಕ್ಸ್‌ಗಳಿಗೆ, ಹೆಸರು asp- ನಿಂದ ಪ್ರಾರಂಭಗೊಳ್ಳುತ್ತದೆ; SFTP ಡ್ರಾಪ್‍ಬಾಕ್ಸ್‌ಗಳಿಗೆ, ಹೆಸರು yt- ನಿಂದ ಪ್ರಾರಂಭಗೊಳ್ಳುತ್ತದೆ. Aspera ಡ್ರಾಪ್‍ಬಾಕ್ಸ್‌ಗಾಗಿ ವಿಳಾಸವನ್ನು ಸರ್ವರ್ ವಿಳಾಸ ಎಂದು ತೋರಿಸಲಾಗುತ್ತದೆ; SFTP ಡ್ರಾಪ್‍ಬಾಕ್ಸ್ ವಿಳಾಸವು partnerupload.google.com ಆಗಿರುತ್ತದೆ.

    ಬಹು ಕಂಟೆಂಟ್ ಮಾಲೀಕರನ್ನು ಹೊಂದಿರುವ ಖಾತೆಗಳು, ಒಂದಕ್ಕಿಂತ ಹೆಚ್ಚಿನ ಡ್ರಾಪ್ ಬಾಕ್ಸ್ ಅನ್ನು ಹೊಂದಬಹುದು. ನಿಮ್ಮ ಡ್ರಾಪ್‍ಬಾಕ್ಸ್‌ಗಾಗಿ ನೀವು ಮಾಹಿತಿಯನ್ನು ರೆಕಾರ್ಡ್ ಮಾಡಿದ್ದೀರೆಂದು ಖಚಿತಪಡಿಸಿಕೊಳ್ಳಿ.
  4. ಡೀಫಾಲ್ಟ್ ಚಾನಲ್ ಮತ್ತು SSH ಪಬ್ಲಿಕ್ ಕೀಗಳು ಸರಿಯಾಗಿವೆ ಎಂಬುದನ್ನು ದೃಢೀಕರಿಸಿ.

    ಕಂಟೆಂಟ್ ಫೀಡ್ ಬೇರೆ ಮಾಲೀಕರನ್ನು ಸೂಚಿಸದಿದ್ದರೆ, ನಿಮ್ಮ ಅಪ್‌ಲೋಡ್ ಮಾಡಿದ ಕಂಟೆಂಟ್‍ಗಳ ಮಾಲೀಕರಾಗಿ ಆಯ್ಕೆಮಾಡಿದ ಖಾತೆಯನ್ನು (ಚಾನಲ್) ಡೀಫಾಲ್ಟ್ YouTube ಬಳಕೆದಾರರೆಂದು ಗುರುತಿಸಲಾಗುತ್ತದೆ.

    ನಿಮ್ಮ ಪಾಲುದಾರ ಪ್ರತಿನಿಧಿಗೆ ಒದಗಿಸಿದ SSH ಪಬ್ಲಿಕ್ ಕೀಗಳ ಬಾಕ್ಸ್ SSH ಕೀ ಅನ್ನು ಒಳಗೊಂಡಿರಬೇಕು. ಕೀ ಕೊನೆಯಲ್ಲಿ ನಿಮ್ಮ ಇಮೇಲ್ ವಿಳಾಸವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಿ.

  5.  ನೋಟಿಫಿಕೇಶನ್ ಇಮೇಲ್‍ಗಳ ಪಠ್ಯ ಪೆಟ್ಟಿಗೆಯಲ್ಲಿ, ನೀವು YouTube ಕಳುಹಿಸಬೇಕೆಂದು ಬಯಸುವ ಸ್ಥಿತಿ ವರದಿಗಳಿಗಾಗಿ ಒಂದು ಅಥವಾ ಹೆಚ್ಚಿನ ಇಮೇಲ್ ವಿಳಾಸಗಳನ್ನು ನಮೂದಿಸಿ.

    ಪ್ರತಿ ಸಾಲಿಗೆ ಒಂದರಂತೆ ಹಲವು ಇಮೇಲ್ ವಿಳಾಸಗಳನ್ನು ನಮೂದಿಸಿ.  ಸೇವ್ ಮಾಡಿ ಕ್ಲಿಕ್ ಮಾಡಿ.

ಡ್ರಾಪ್ ಬಾಕ್ಸ್ ಪ್ರತಿ ಕಂಟೆಂಟ್ ಮಾಲೀಕರಿಗೆ, ಚಾನಲ್‍ಗೆ ಅಲ್ಲ ಎಂಬುದನ್ನು ಗಮನಿಸಿ. ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ಒಂದು ಡ್ರಾಪ್ ಬಾಕ್ಸ್ ಬಳಸಿಕೊಂಡು ಹಲವಾರು ಬೇರೆ ಚಾನಲ್‍ಗಳಿಗೆ ಅಪ್‍ಲೋಡ್ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14578135769633840831
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false