YouTube ನಲ್ಲಿ ನಿಮ್ಮದೇ ವೀಡಿಯೊಗೆ ವಯಸ್ಸಿನ ನಿರ್ಬಂಧ ವಿಧಿಸಿ

ನಿಮ್ಮ ಯಾವುದೇ ವೀಡಿಯೊಗಳು 18 ವರ್ಷದೊಳಗಿನ ವೀಕ್ಷಕರಿಗೆ ಸೂಕ್ತವಾಗಿಲ್ಲದಿದ್ದರೆ, ನೀವು ವಯಸ್ಸಿನ ನಿರ್ಬಂಧವನ್ನು ಸೇರಿಸಬಹುದು. ಈ ಪ್ರಕಾರದ ವಯಸ್ಸಿನ ನಿರ್ಬಂಧವನ್ನು ಸ್ವಯಂ ಹೇರಲಾಗುತ್ತದೆಯೇ ಹೊರತು ಇದು YouTube ನ ವಿಮರ್ಶೆಯ ಫಲಿತಾಂಶವಲ್ಲ.

ವೀಡಿಯೊವೊಂದು ವಯಸ್ಸಿನ ನಿರ್ಬಂಧವನ್ನು ಹೊಂದಿರುವಾಗ, ಅದನ್ನು ವೀಕ್ಷಿಸಲು ವೀಕ್ಷಕರು ಸೈನ್ ಇನ್ ಆಗಿರಬೇಕು ಮತ್ತು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. ಈ ವೀಡಿಯೊಗಳನ್ನು YouTube ನ ಕೆಲವು ವಿಭಾಗಗಳಲ್ಲಿ ತೋರಿಸಲಾಗುವುದಿಲ್ಲ. ವಯಸ್ಸಿನ ನಿರ್ಬಂಧ ಹೊಂದಿರುವ ವೀಡಿಯೊಗಳು ಸೀಮಿತವಾದ ಆ್ಯಡ್‌ಗಳನ್ನು ಹೊಂದಿರಬಹುದು ಅಥವಾ ಹೊಂದಿಲ್ಲದೆಯೂ ಇರಬಹುದು.

ಕಂಟೆಂಟ್‌ಗೆ ವಯಸ್ಸಿನ ನಿರ್ಬಂಧ ವಿಧಿಸಬೇಕೆ ಎಂದು ನಿರ್ಧರಿಸುವಾಗ, ಕಂಟೆಂಟ್ ಈ ಕೆಳಗಿನವುಗಳನ್ನು ತೋರಿಸುತ್ತದೆಯೇ ಎಂಬುದನ್ನು ನೀವು ಪರಿಗಣಿಸಬೇಕು:

  • ಹಿಂಸೆ
  • ಮನಕಲಕುವ ಚಿತ್ರಣ
  • ನಗ್ನತೆ
  • ಲೈಂಗಿಕವಾಗಿ ಅಶ್ಲೀಲವಾಗಿರುವ ಕಂಟೆಂಟ್
  • ಅಪಾಯಕಾರಿ ಚಟುವಟಿಕೆಗಳ ಚಿತ್ರಣ

ವಯೋಮಾನ ನಿರ್ಬಂಧಿತ ಕಂಟೆಂಟ್ ಕುರಿತು ಇನ್ನಷ್ಟು ತಿಳಿಯಿರಿ.

ನೀವು ಪೂರ್ವಭಾವಿಯಾಗಿ ವಯಸ್ಸಿನ ನಿರ್ಬಂಧ ವಿಧಿಸುವ ವೀಡಿಯೊಗಳು ಇನ್ನೂ YouTube ನ ಸಮುದಾಯ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತವೆ. YouTube ವೀಡಿಯೊವೊಂದನ್ನು ವಯೋಮಾನ ನಿರ್ಬಂಧಿತಗೊಳಿಸಬೇಕೆಂದು ನಿರ್ಧರಿಸಿದರೆ, ಶಾಶ್ವತ ವಯಸ್ಸಿನ ನಿರ್ಬಂಧವನ್ನು ಅನ್ವಯಿಸಲಾಗುತ್ತದೆ. ನೀವು ವೀಡಿಯೊಗೆ ವಯಸ್ಸಿನ ನಿರ್ಬಂಧವನ್ನು ಹೊಂದಿದ್ದರೂ ಸಹ ಈ ನಿರ್ಬಂಧವು ಸಂಭವಿಸುತ್ತದೆ.

ವೀಡಿಯೊವು ಆ್ಯಡ್‌ ಅನ್ನು ಉದ್ದೇಶಿಸಿದ್ದರೆ, ಈ ರೀತಿಯ ವಯಸ್ಸಿನ ನಿರ್ಬಂಧವನ್ನು ಬಳಸಬೇಡಿ. ಇದು ಆ್ಯಡ್‌ಗಳನ್ನು ಶಾಶ್ವತವಾಗಿ ನಿರಾಕರಿಸಲು ಕಾರಣವಾಗುತ್ತದೆ.

ವೀಡಿಯೊಗೆ ವಯಸ್ಸಿನ ನಿರ್ಬಂಧ ವಿಧಿಸುವುದು ಹೇಗೆ

ನೀವು ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗ ವಯಸ್ಸಿನ ನಿರ್ಬಂಧವನ್ನು ಸೇರಿಸಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಮೇಲಿನ ಬಲಭಾಗದಲ್ಲಿ, ರಚಿಸಿ  ನಂತರ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ ಅನ್ನು ಕ್ಲಿಕ್ ಮಾಡಿ.
  3. ನಿಮ್ಮ ವೀಡಿಯೊದ ವಿವರಗಳು ಮತ್ತು ಪ್ರೇಕ್ಷಕರ ಸೆಟ್ಟಿಂಗ್ ಅನ್ನು ನಮೂದಿಸಿ.
  4. ವಯಸ್ಸಿನ ನಿರ್ಬಂಧವನ್ನು (ಸುಧಾರಿತ)  ನಂತರ ಹೌದು, 18 ವರ್ಷಕ್ಕಿಂತ ಮೇಲ್ಪಟ್ಟ ವೀಕ್ಷಕರಿಗೆ ನನ್ನ ವೀಡಿಯೊಗಳನ್ನು ನಿರ್ಬಂಧಿಸಿ ಅನ್ನು ಕ್ಲಿಕ್ ಮಾಡಿ.
  5. ಅಪ್‌ಲೋಡ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹಂತಗಳನ್ನು ಅನುಸರಿಸಿ.

ಅಪ್‌ಲೋಡ್ ಮಾಡಿದ ವೀಡಿಯೊಗಳಿಗೆ ವಯಸ್ಸಿನ ನಿರ್ಬಂಧವನ್ನು ಸೇರಿಸಿ

  1. ನಿಮ್ಮ ವೀಡಿಯೊಗಳ ಪುಟಕ್ಕೆ ಹೋಗಿ.
  2. ನೀವು ಎಡಿಟ್ ಮಾಡಲು ಬಯಸುವ ವೀಡಿಯೊದ ಮುಂದೆ, ಬಾಕ್ಸ್ ಅನ್ನು ಕ್ಲಿಕ್ ಮಾಡಿ.
  3. ಎಡಿಟ್ ಮಾಡಿ  ನಂತರ ಪ್ರೇಕ್ಷಕರು ನಂತರ ವಯಸ್ಸಿನ ನಿರ್ಬಂಧ (ಸುಧಾರಿತ) ಅನ್ನು ಕ್ಲಿಕ್ ಮಾಡಿ.
  4. ಹೌದು, 18 ವರ್ಷಕ್ಕಿಂತ ಮೇಲ್ಪಟ್ಟ ವೀಕ್ಷಕರಿಗೆ ನನ್ನ ವೀಡಿಯೊಗಳನ್ನು ನಿರ್ಬಂಧಿಸಿ ಅನ್ನು ಆಯ್ಕೆಮಾಡಿ. 

ಲೈವ್ ಸ್ಟ್ರೀಮ್‌ಗೆ ವಯಸ್ಸಿನ ನಿರ್ಬಂಧವನ್ನು ಸೇರಿಸಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಮೇಲಿನ ಬಲಭಾಗದಲ್ಲಿ, ರಚಿಸಿ   ನಂತರ ಲೈವ್‌ಗೆ ಹೋಗಿ ಅನ್ನು ಕ್ಲಿಕ್ ಮಾಡಿ. 
  3. ನಿಮ್ಮ ಲೈವ್ ಸ್ಟ್ರೀಮ್‌ನ ವಿವರಗಳು ಮತ್ತು ಪ್ರೇಕ್ಷಕರ ಸೆಟ್ಟಿಂಗ್ ಅನ್ನು ನಮೂದಿಸಿ. 
  4. ವಯಸ್ಸಿನ ನಿರ್ಬಂಧವನ್ನು (ಸುಧಾರಿತ)  ನಂತರ ಹೌದು, 18 ವರ್ಷಕ್ಕಿಂತ ಮೇಲ್ಪಟ್ಟ ವೀಕ್ಷಕರಿಗೆ ನನ್ನ ವೀಡಿಯೊಗಳನ್ನು ನಿರ್ಬಂಧಿಸಿ ಅನ್ನು ಕ್ಲಿಕ್ ಮಾಡಿ.
  5. ಲೈವ್ ಸ್ಟ್ರೀಮ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹಂತಗಳನ್ನು ಅನುಸರಿಸಿ.

ಯಾವ ವೀಡಿಯೊಗಳು ವಯಸ್ಸಿನ ನಿರ್ಬಂಧಿತವಾಗಿವೆ ಎಂಬುದನ್ನು ಪರಿಶೀಲಿಸಿ

  1. ನಿಮ್ಮ ವೀಡಿಯೊಗಳ ಪುಟಕ್ಕೆ ಹೋಗಿ.
  2. ಮೇಲ್ಭಾಗದಲ್ಲಿ, ಫಿಲ್ಟರ್  ನಂತರ ವಯಸ್ಸಿನ ನಿರ್ಬಂಧ ನಂತರ 18 ವರ್ಷಕ್ಕಿಂತ ಮೇಲ್ಪಟ್ಟ ವೀಕ್ಷಕರು ನಂತರ ಅನ್ವಯಿಸಿ ಅನ್ನು ಕ್ಲಿಕ್ ಮಾಡಿ. ತೋರಿಸುವ ವೀಡಿಯೊಗಳು ವಯಸ್ಸಿನ ನಿರ್ಬಂಧಿತವಾಗಿವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4574860764016105137
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false