ಲೈವ್ ಎನ್‌ಕೋಡರ್ ಸೆಟ್ಟಿಂಗ್‌ಗಳು, ಬಿಟ್ ಪ್ರಮಾಣಗಳು ಮತ್ತು ರೆಸಲ್ಯೂಶನ್‌ಗಳನ್ನು ಆಯ್ಕೆಮಾಡಿ

ನಿಮ್ಮ ಲೈವ್ ಸ್ಟ್ರೀಮ್ ಉತ್ತಮ ಗುಣಮಟ್ಟದ್ದಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಆಧರಿಸಿ ವಿಶ್ವಾಸಾರ್ಹ ಸ್ಟ್ರೀಮ್‌ಗೆ ಕಾರಣವಾಗುವ ಗುಣಮಟ್ಟವನ್ನು ನೀವು ಆರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಅಪ್‌ಲೋಡ್ ಬಿಟ್ ಪ್ರಮಾಣವನ್ನು ಪರೀಕ್ಷಿಸಲು ಸ್ಪೀಡ್‌ ಟೆಸ್ಟ್ ಅನ್ನು ನಡೆಸಲು ನಾವು ಶಿಫಾರಸು ಮಾಡುತ್ತೇವೆ.
 

ನೀವು ಲೈವ್ ನಿಯಂತ್ರಣ ಕೊಠಡಿಯಲ್ಲಿ ಸ್ಟ್ರೀಮಿಂಗ್ ಮಾಡುತ್ತಿದ್ದರೆ, ನಿಮ್ಮ ಎನ್‌ಕೋಡರ್‌ನಲ್ಲಿ ನಿಮ್ಮ ರೆಸಲ್ಯೂಶನ್, ಫ್ರೇಮ್ ರೇಟ್ ಮತ್ತು ಬಿಟ್ ಪ್ರಮಾಣವನ್ನು ಮಾತ್ರ ನೀವು ನಿರ್ದಿಷ್ಟಪಡಿಸಬೇಕು. ನೀವು ಯಾವ ಎನ್‌ಕೋಡರ್ ಸೆಟ್ಟಿಂಗ್‌ಗಳನ್ನು ಆರಿಸಿದ್ದೀರಿ ಎಂಬುದನ್ನು YouTube ಸ್ವಯಂಚಾಲಿತವಾಗಿ ಪತ್ತೆ ಮಾಡುತ್ತದೆ.

 

ಹಲವು ವಿಭಿನ್ನ ಔಟ್‌ಪುಟ್ ಫಾರ್ಮ್ಯಾಟ್‌ಗಳನ್ನು ರಚಿಸಲು YouTube ನಿಮ್ಮ ಲೈವ್ ಸ್ಟ್ರೀಮ್ ಅನ್ನು ಸ್ವಯಂಚಾಲಿತವಾಗಿ ಟ್ರಾನ್ಸ್‌ಕೋಡ್ ಮಾಡುತ್ತದೆ, ಇದರಿಂದಾಗಿ ಅನೇಕ ಸಾಧನಗಳು ಮತ್ತು ನೆಟ್‌ವರ್ಕ್‌ಗಳೆಲ್ಲೆಡೆಯ ನಿಮ್ಮ ಎಲ್ಲಾ ವೀಕ್ಷಕರು ವೀಕ್ಷಿಸಬಹುದು.

 

ನಿಮ್ಮ ಲೈವ್ ಸ್ಟ್ರೀಮ್ ಅನ್ನು ಪ್ರಾರಂಭಿಸುವ ಮೊದಲು ಪರೀಕ್ಷಿಸುವುದನ್ನು ಮರೆಯಬೇಡಿ. ನೀವು ಸ್ಟ್ರೀಮ್‌ನಲ್ಲಿ ಏನು ಮಾಡುತ್ತಿರುವಿರೋ ಅದೇ ರೀತಿಯಲ್ಲಿ ವೀಡಿಯೊದಲ್ಲಿ ಆಡಿಯೊ ಮತ್ತು ಚಲನೆಯನ್ನು ಪರೀಕ್ಷೆಗಳು ಒಳಗೊಂಡಿರಬೇಕು.ಈವೆಂಟ್ ಸಮಯದಲ್ಲಿ, ಸ್ಟ್ರೀಮ್ ಹೇಲ್ತ್ ಅನ್ನು ಮೇಲ್ವಿಚಾರಣೆ ಮಾಡಿ ಮತ್ತು ಸಂದೇಶಗಳನ್ನು ಪರಿಶೀಲಿಸಿ.

ಗಮನಿಸಿ: 4K / 2160 ಗಾಗಿ, ಕಡಿಮೆ ವಿಳಂಬಕ್ಕಾಗಿ ಸುಧಾರಿಸುವ ಆಯ್ಕೆಯು ಲಭ್ಯವಿಲ್ಲ. ಗುಣಮಟ್ಟವನ್ನು ಸುಧಾರಿಸುವುದಕ್ಕಾಗಿ ಎಲ್ಲಾ ಸ್ಟ್ರೀಮ್‌ಗಳನ್ನು ಆಪ್ಟಿಮೈಸ್ ಮಾಡಲಾಗುತ್ತದೆ ಮತ್ತು ಸಾಮಾನ್ಯ ವಿಳಂಬಕ್ಕೆ ಸೆಟ್ ಮಾಡಲಾಗುತ್ತದೆ.

ಎನ್‌ಕೋಡರ್ ಲೈವ್ ಸ್ಟ್ರೀಮಿಂಗ್: ಎನ್‌ಕೋಡರ್ ಅನ್ನು ಸೆಟಪ್ ಮಾಡುವುದು ಮತ್ತು ಬಳಸುವುದು ಹೇಗೆ ಎಂಬುದರ ಕುರಿತು ಬೇಸಿಕ್‌ಗಳು

ಲೈವ್ ನಿಯಂತ್ರಣ ಕೊಠಡಿಯಲ್ಲಿ ಕಸ್ಟಮ್ ಸ್ಟ್ರೀಮ್ ಕೀಗಳ ಜೊತೆ ಸ್ಟ್ರೀಮ್ ರೆಸಲ್ಯೂಶನ್ ಪತ್ತೆ ಮಾಡುವಿಕೆ

ಡೀಫಾಲ್ಟ್ ಆಗಿ (ಶಿಫಾರಸು ಮಾಡಿರುವುದು), YouTube ನಿಮ್ಮ ರೆಸಲ್ಯೂಶನ್ ಮತ್ತು ಫ್ರೇಮ್ ರೇಟ್ ಅನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡುತ್ತದೆ. ನೀವು ರೆಸಲ್ಯೂಶನ್ ಒಂದನ್ನು ಹಸ್ತಚಾಲಿತವಾಗಿ ಆಯ್ಕೆಮಾಡಲು ಬಯಸಿದರೆ, ಕಸ್ಟಮ್ ಕೀ ರಚಿಸಿ ಹಾಗೂ "ಸ್ಟ್ರೀಮ್ ರೆಸಲ್ಯೂಷನ್" ಅಡಿಯಲ್ಲಿ "ಹಸ್ತಚಾಲಿತ ಸೆಟ್ಟಿಂಗ್‌ಗಳನ್ನು ಆನ್ ಮಾಡಿ" ಎಂಬುದನ್ನು ಆಯ್ಕೆಮಾಡಿ.

ಶಿಫಾರಸು ಮಾಡಲಾಗುವ ಬಿಟ್ ಪ್ರಮಾಣ ಸೆಟ್ಟಿಂಗ್ ಶ್ರೇಣಿಗಳು, ವೀಡಿಯೊ ಇಂಜೆಷನ್ ಕೋಡೆಕ್, ವೀಡಿಯೊ ಇಂಜೆಷನ್ ರೆಸಲ್ಯೂಶನ್ ಮತ್ತು ಫ್ರೇಮ್ ರೇಟ್ ಅನ್ನು ಆಧರಿಸಿವೆ. 

ಇಂಜೆಷನ್ ರೆಸಲ್ಯೂಷನ್ / ಫ್ರೇಮ್ ರೇಟ್

ಕನಿಷ್ಠ ಬಿಟ್ ಪ್ರಮಾಣ ಸೆಟ್ಟಿಂಗ್ (Mbps) AV1 ಮತ್ತು H.265

ಗರಿಷ್ಠ ಬಿಟ್ ಪ್ರಮಾಣ ಸೆಟ್ಟಿಂಗ್ (Mbps) AV1 ಮತ್ತು H.265

ಶಿಫಾರಸು ಮಾಡಿರುವ ಬಿಟ್ ಪ್ರಮಾಣ ಸೆಟ್ಟಿಂಗ್ (Mbps) H.264

4K / 2160p @60fps

10 Mbps

40 Mbps

35 Mbps

4K / 2160p @30fps

8 Mbps

35 Mbps

30 Mbps

1440p @60fps

6 Mbps

30 Mbps

24 Mbps

1440p @30fps

5 Mbps

25 Mbps

15 Mbps

1080p @60fps

4 Mbps

10 Mbps

12 Mbps

1080p @30fps

3 Mbps

8 Mbps

10 Mbps

720p @60fps

3 Mbps

8 Mbps

6 Mbps

240p - 720p @30fps

3 Mbps

8 Mbps

4 Mbps

ಎನ್‌ಕೋಡರ್ ಸೆಟ್ಟಿಂಗ್‌ಗಳು

ಪ್ರೊಟೊಕಾಲ್: RTMP/RTMPS ಸ್ಟ್ರೀಮಿಂಗ್
ವೀಡಿಯೊ ಕೋಡೆಕ್: H.264
H.265 (HEVC)
AV1
ಫ್ರೇಮ್ ರೇಟ್: 60 fps ವರೆಗೆ
ಕೀಫ್ರೇಮ್ ಫ್ರೀಕ್ವೆನ್ಸಿ:

2 ಸೆಕೆಂಡುಗಳನ್ನು ಶಿಫಾರಸು ಮಾಡಲಾಗಿದೆ

4 ಸೆಕೆಂಡುಗಳನ್ನು ಮೀರಬಾರದು

ಆಡಿಯೋ ಕೊಡೆಕ್:

AAC ಅಥವಾ MP3

(RTMP/RTMPS ನಲ್ಲಿರುವ AAC ಗೆ ಮಾತ್ರ 5.1 ಸರೌಂಡ್ ಸೌಂಡ್ ಆಡಿಯೋ ಅನ್ನು ಬೆಂಬಲಿಸಲಾಗುತ್ತದೆ)

ಬಿಟ್ ಪ್ರಮಾಣ ಎನ್‌ಕೋಡಿಂಗ್: CBR

ಶಿಫಾರಸು ಮಾಡಲಾದ ಸುಧಾರಿತ ಸೆಟ್ಟಿಂಗ್‌ಗಳು

Pixel ದೃಶ್ಯಾನುಪಾತ: ಚೌಕ
ಫ್ರೇಮ್ ಪ್ರಕಾರಗಳು: ಪ್ರೋಗ್ರೆಸ್ಸಿವ್ ಸ್ಕ್ಯಾನ್, 2 ಬಿ-ಫ್ರೇಮ್‌ಗಳು, 1 ರೆಫರೆನ್ಸ್ ಫ್ರೇಮ್
ಎಂಟ್ರೋಪಿ ಕೋಡಿಂಗ್: CABAC
ಆಡಿಯೊ ಸ್ಯಾಂಪಲ್ ಏಟ್: 44.1 KHz ಸ್ಟಿರಿಯೊ ಆಡಿಯೊಗಾಗಿ, 5.1 ಸರೌಂಡ್ ಸೌಂಡ್‌ಗಾಗಿ 48 KHz
ಆಡಿಯೋ ಬಿಟ್ ಪ್ರಮಾಣ: ಸ್ಟೀರಿಯೊಗಾಗಿ 128-Kbps ಅಥವಾ 5.1 ಸರೌಂಡ್ ಸೌಂಡ್‌ಗಾಗಿ 384 Kbps
ಕಲರ್ ಸ್ಪೇಸ್: SDR ಗಾಗಿ Rec. 709
HDR ವೀಡಿಯೊ ಕೋಡೆಕ್: H.265 (HEVC)
HDR ಅನ್ನು AV1 ಬೆಂಬಲಿಸುವುದಿಲ್ಲ
ಬಿಟ್ ಡೆಪ್ತ್: SDR ಗಾಗಿ 8-ಬಿಟ್
HDR ಗಾಗಿ 10-ಬಿಟ್
ಟೈಲಿಂಗ್ 3840x2160 ಹಾಗೂ ಅದಕ್ಕಿಂತ ಹೆಚ್ಚಿನ ರೆಸಲ್ಯೂಶನ್‌ಗಳಲ್ಲಿನ AV1-ಎನ್‌ಕೋಡ್ ಮಾಡಿದ ಸ್ಟ್ರೀಮ್‌ಗಳಿಗೆ ಕನಿಷ್ಠ 2 ಟೈಲ್ ಕಾಲಮ್‌ಗಳು
ಟಿಪ್ಪಣಿಗಳು:
  • ಜನಪ್ರಿಯ RTMP ಸ್ಟ್ರೀಮಿಂಗ್ ವೀಡಿಯೊ ಪ್ರೋಟೋಕಾಲ್‌ನ ಸುರಕ್ಷಿತ ಎಕ್ಸ್‌ಟೆನ್ಶನ್ ಆಗಿರುವ RTMPS ಅನ್ನು ಬಳಸಿಕೊಂಡು ನೀವು YouTube ಲೈವ್‌ಗೆ ಸ್ಟ್ರೀಮಿಂಗ್ ಮಾಡಲು ನಾವು ಶಿಫಾರಸು ಮಾಡುತ್ತೇವೆ. ನಿಮ್ಮ ಡೇಟಾವನ್ನು Google ನ ಸರ್ವರ್‌ಗಳ ಮೂಲಕ ಮತ್ತು ಎಲ್ಲಾ ರೀತಿಯಲ್ಲಿ ಎನ್‌ಕ್ರಿಪ್ಟ್ ಮಾಡಲಾಗುತ್ತದೆ, ಹಾಗಾಗಿ ಸೇವೆಯೊಂದಿಗಿನ ನಿಮ್ಮ ಸಂವಹನವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇನ್ನಷ್ಟು ತಿಳಿಯಿರಿ.
  • ನೀವು HDR ನಲ್ಲಿ ಸ್ಟ್ರೀಮ್ ಮಾಡಲು ಬಯಸಿದರೆ, RTMP(S) ಮೂಲಕ H.265 ಅನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ. ನಿಮ್ಮ ಎನ್‌ಕೋಡರ್ RTMP ಮೂಲಕ ಈ ಸಾಮರ್ಥ್ಯಗಳನ್ನು ಇನ್ನೂ ಬೆಂಬಲಿಸದಿದ್ದರೆ, ನೀವು HLS (HTTP ಲೈವ್ ಸ್ಟ್ರೀಮಿಂಗ್) ಅನ್ನು ಬಳಸುವುದನ್ನು ಪರಿಗಣಿಸಬಹುದು. ಇನ್ನಷ್ಟು ತಿಳಿಯಿರಿ.
  • YouTube ಆ್ಯಪ್ ಮತ್ತು m.youtube.com ಮೂಲಕ ಗೇಮ್ ಕನ್ಸೋಲ್‌ಗಳು ಮತ್ತು ಮೊಬೈಲ್ ಸಾಧನಗಳಲ್ಲಿ ಲೈವ್ ಸ್ಟ್ರೀಮ್‌ಗಳು ಸ್ವಯಂಚಾಲಿತವಾಗಿ ಲಭ್ಯವಿರುತ್ತವೆ.
  • 360 ಲೈವ್ ಸ್ಟ್ರೀಮಿಂಗ್ ವಿಶೇಷತೆಯ ಬಗ್ಗೆ ಹುಡುಕುತ್ತಿರುವಿರಾ? ಇಲ್ಲಿ ಪರಿಶೀಲಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
689991109911155873
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false