ಕೃತಿಸ್ವಾಮ್ಯ ಸ್ಟ್ರೈಕ್‌ನ ಸಾಮಾನ್ಯ ಸಂಗತಿಗಳು

ಇದು ಕೃತಿಸ್ವಾಮ್ಯ ಸ್ಟ್ರೈಕ್‌ಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಕೃತಿಸ್ವಾಮ್ಯ ಸ್ಟ್ರೈಕ್‌ಗಳಿಗಿಂತ ಭಿನ್ನವಾದ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳ ಕುರಿತಾದ ಮಾಹಿತಿಯನ್ನು ನೀವು ಹುಡುಕುತ್ತಿದ್ದರೆ, ನಮ್ಮ ಸಮುದಾಯ ಮಾರ್ಗಸೂಚಿ ಸ್ಟ್ರೈಕ್‌ಗಳ ಸಾಮಾನ್ಯ ಸಂಗತಿಗಳು ಎಂಬಲ್ಲಿಗೆ ಹೋಗಿ.

ನೀವು ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಸ್ವೀಕರಿಸಿದರೆ, ಕೃತಿಸ್ವಾಮ್ಯ ಮಾಲೀಕರು ತಮ್ಮ ಕೃತಿಸ್ವಾಮ್ಯ-ಸಂರಕ್ಷಿತ ಕಂಟೆಂಟ್ ಅನ್ನು ಬಳಸಿದ್ದಕ್ಕಾಗಿ ಕಾನೂನಾತ್ಮಕ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಿದ್ದಾರೆ ಎಂದು ಅರ್ಥ. ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ನಮಗೆ ಸಲ್ಲಿಸಿದಾಗ, ನಾವು ಅದನ್ನು ಪರಿಶೀಲಿಸುತ್ತೇವೆ. ತೆಗೆದುಹಾಕುವ ವಿನಂತಿಯು ಮಾನ್ಯವಾಗಿದ್ದರೆ, ಕೃತಿಸ್ವಾಮ್ಯ ಕಾನೂನನ್ನು ಅನುಸರಿಸಲು ನಾವು YouTube ನಿಂದ ನಿಮ್ಮ ವೀಡಿಯೊವನ್ನು ತೆಗೆದುಹಾಕಬೇಕಾಗುತ್ತದೆ.

ಒಂದು ವೀಡಿಯೊ, ಒಂದು ಸಮಯದಲ್ಲಿ ಒಂದು ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಮಾತ್ರ ಹೊಂದಿರಬಹುದು. ಕೃತಿಸ್ವಾಮ್ಯ ಅಲ್ಲದೆ, ಇತರ ಕಾರಣಗಳಿಗಾಗಿಯೂ ಸೈಟ್‌ನಿಂದ ವೀಡಿಯೊಗಳನ್ನು ತೆಗೆದುಹಾಕಬಹುದು ಎನ್ನುವುದನ್ನು ನೆನಪಿಡಿ. ಜೊತೆಗೆ, Content ID ಕ್ಲೇಮ್‌ಗಳು, ಸ್ಟ್ರೈಕ್‌ಗೆ ಕಾರಣವಾಗುವುದಿಲ್ಲ.

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ.

ನೀವು ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಪಡೆದಾಗ ಏನಾಗುತ್ತದೆ

ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. ನೀವು ಮೊದಲ ಬಾರಿಗೆ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಪಡೆದಾಗ, ನೀವು ಕೃತಿಸ್ವಾಮ್ಯ ಶಾಲೆ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕಾಗುತ್ತದೆ. ಕೃತಿಸ್ವಾಮ್ಯ ಶಾಲೆಯು, ಕೃತಿಸ್ವಾಮ್ಯದ ತತ್ವಗಳನ್ನು ಅರ್ಥಮಾಡಿಕೊಳ್ಳಲು ಮತ್ತು YouTube ನಲ್ಲಿ ಅವುಗಳನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ರಚನೆಕಾರರಿಗೆ ಸಹಾಯ ಮಾಡುತ್ತದೆ. ಕೃತಿಸ್ವಾಮ್ಯ ಶಾಲೆಯು ನಾಲ್ಕು ಸಣ್ಣ, ಬಹು-ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ನಮ್ಮ ಕೃತಿಸ್ವಾಮ್ಯಕ್ಕೆ ಸಂಬಂಧಿಸಿದ ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೊವನ್ನು ವೀಕ್ಷಿಸಿ.

ಸಲಹೆ: ನಮ್ಮ ಕೃತಿಸ್ವಾಮ್ಯಕ್ಕೆ ಸಂಬಂಧಿಸಿದ ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೊವನ್ನು ವೀಕ್ಷಿಸಿ.

ನಿಮ್ಮ ಸಕ್ರಿಯ ಲೈವ್ ಸ್ಟ್ರೀಮ್ ಅನ್ನು ಕೃತಿಸ್ವಾಮ್ಯ ಉಲ್ಲಂಘನೆಯ ಕಾರಣದಿಂದ ತೆಗೆದುಹಾಕಿದರೆ, ಲೈವ್ ಸ್ಟ್ರೀಮಿಂಗ್‌ಗೆ ನಿಮ್ಮ ಆ್ಯಕ್ಸೆಸ್ ಅನ್ನು 7 ದಿನಗಳ ಕಾಲ ನಿರ್ಬಂಧಿಸಲಾಗುತ್ತದೆ.

ನೀವು 3 ಕೃತಿಸ್ವಾಮ್ಯ ಸ್ಟ್ರೈಕ್‌ಗಳನ್ನು ಪಡೆದರೆ:

  • ನಿಮ್ಮ ಖಾತೆ ಹಾಗೂ ಅದಕ್ಕೆ ಸಂಬಂಧಿಸಿದ ಯಾವುದೇ ಚಾನಲ್‌ಗಳು ಕೊನೆಗೊಳಿಸುವಿಕೆಗೆ ಒಳಪಟ್ಟಿರುತ್ತವೆ.
  • ನಿಮ್ಮ ಖಾತೆಯಲ್ಲಿ ಅಪ್‌ಲೋಡ್ ಮಾಡಲಾದ ಎಲ್ಲಾ ವೀಡಿಯೊಗಳನ್ನು ತೆಗೆದುಹಾಕಲಾಗುತ್ತದೆ.
  • ಹೊಸ ಚಾನಲ್‌ಗಳನ್ನು ರಚಿಸಲು ನಿಮಗೆ ಸಾಧ್ಯವಾಗುವುದಿಲ್ಲ.
ಸೌಜನ್ಯದ ಅವಧಿ
ಒಂದು ವೇಳೆ ನಿಮ್ಮ ಚಾನಲ್, YouTube ಪಾಲುದಾರ ಕಾರ್ಯಕ್ರಮದ ಭಾಗವಾಗಿದ್ದರೆ, ನೀವು 7 ದಿನಗಳ ಸೌಜನ್ಯದ ಅವಧಿಗೆ ಅರ್ಹರಾಗಿರುತ್ತೀರಿ. 3 ಕೃತಿಸ್ವಾಮ್ಯ ಸ್ಟ್ರೈಕ್‌ಗಳನ್ನು ಪಡೆದ ನಂತರ, ನಿಮ್ಮ ಚಾನಲ್ ಅನ್ನು ನಿಷ್ಕ್ರಿಯಗೊಳಿಸುವ ಮೊದಲು ಕ್ರಮ ಕೈಗೊಳ್ಳುವುದಕ್ಕಾಗಿ ನಿಮ್ಮ ಬಳಿ ಹೆಚ್ಚುವರಿಯಾಗಿ 7 ದಿನಗಳ ಸಮಯಾವಕಾಶವಿರುತ್ತದೆ. ಈ ಅವಧಿಯಲ್ಲಿ, ನಿಮ್ಮ ಕೃತಿಸ್ವಾಮ್ಯ ಸ್ಟ್ರೈಕ್‌ಗಳ ಅವಧಿ ಮುಕ್ತಾಯವಾಗುವುದಿಲ್ಲ ಮತ್ತು ಹೊಸ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಚಾನಲ್ ಲೈವ್ ಆಗಿರುತ್ತದೆ ಮತ್ತು ನಿಮ್ಮ ಸ್ಟ್ರೈಕ್‌ಗಳನ್ನು ಬಗೆಹರಿಸುವುದಕ್ಕಾಗಿ ನೀವು ಅದನ್ನು ಆ್ಯಕ್ಸೆಸ್ ಮಾಡಬಹುದು.

ನಿಮ್ಮ ಸ್ಟ್ರೈಕ್ ಎಣಿಕೆಯನ್ನು 3 ಕ್ಕಿಂತ ಕೆಳಗೆ ತರುವ ಪ್ರತಿವಾದಿ ನೋಟಿಫಿಕೇಶನ್‌ಗಳನ್ನು ನೀವು ಸಲ್ಲಿಸಿದರೆ, ಪ್ರತಿವಾದಿ ನೋಟಿಫಿಕೇಶನ್‌ಗಳು ಬಗೆಹರಿಯದೆ ಉಳಿದಿರುವಾಗ ನಿಮ್ಮ ಚಾನಲ್ ಅನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ. ಈ ಪ್ರತಿವಾದಿ ನೋಟಿಫಿಕೇಶನ್‌ಗಳನ್ನು ಕೃತಿಸ್ವಾಮ್ಯ ಕ್ಲೇಮುದಾರರಿಗೆ ಫಾರ್ವರ್ಡ್ ಮಾಡಿದರೆ, ಅಪ್‌ಲೋಡ್ ಮಾಡುವ ನಿಮ್ಮ ಸಾಮರ್ಥ್ಯವನ್ನು ಮರುಸ್ಥಾಪಿಸಲಾಗುತ್ತದೆ. ಪ್ರತಿವಾದಿ ನೋಟಿಫಿಕೇಶನ್ ನಿಮ್ಮ ಪರವಾಗಿ ಬಗೆಹರಿದರೆ, ಅಥವಾ ತೆಗೆದುಹಾಕುವಿಕೆಯನ್ನು ಹಿಂಪಡೆದರೆ, ನಿಮ್ಮ ಚಾನಲ್‌ನ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.
ನಿಮ್ಮ ಸ್ಟ್ರೈಕ್‌ನ ಕುರಿತು ಮಾಹಿತಿ ಪಡೆಯುವುದು ಹೇಗೆ
  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಬದಿಯ ಮೆನುವಿನಿಂದ ಕಂಟೆಂಟ್ ಎಂಬುದನ್ನು ಕ್ಲಿಕ್ ಮಾಡಿ.
  3. ಫಿಲ್ಟರ್ ಬಾರ್ ನಂತರ ಕೃತಿಸ್ವಾಮ್ಯ ಎಂಬುದನ್ನು ಕ್ಲಿಕ್ ಮಾಡಿ.
  4. ನಿರ್ಬಂಧಗಳು ಎಂಬ ಕಾಲಮ್‌ನಲ್ಲಿ ಕೃತಿಸ್ವಾಮ್ಯ ಎಂಬುದರ ಮೇಲೆ ಹೋವರ್ ಮಾಡಿ.
  5. ವಿವರಗಳನ್ನು ನೋಡಿ ಎಂಬುದನ್ನು ಕ್ಲಿಕ್ ಮಾಡಿ.
ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಬಗೆಹರಿಸಿ

ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಬಗೆಹರಿಸಲು ಮೂರು ವಿಧಾನಗಳಿವೆ:

  1. ಅದರ ಅವಧಿ ಮುಕ್ತಾಯವಾಗುವವರೆಗೆ ನಿರೀಕ್ಷಿಸಿ: 90 ದಿನಗಳ ಬಳಿಕ ಕೃತಿಸ್ವಾಮ್ಯ ಸ್ಟ್ರೈಕ್‌ಗಳ ಅವಧಿ ಮುಕ್ತಾಯವಾಗುತ್ತದೆ. ಇದು ನಿಮ್ಮ ಮೊದಲ ಸ್ಟ್ರೈಕ್ ಎಂದಾದರೆ, ನೀವು ಕೃತಿಸ್ವಾಮ್ಯ ಶಾಲೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.
  2. ಹಿಂಪಡೆಯಲು ವಿನಂತಿಸಿ: ನಿಮ್ಮ ವೀಡಿಯೊವನ್ನು ಕ್ಲೇಮ್ ಮಾಡಿದ ವ್ಯಕ್ತಿಯನ್ನು ನೀವು ಸಂಪರ್ಕಿಸಬಹುದು ಮತ್ತು ಕೃತಿಸ್ವಾಮ್ಯ ಉಲ್ಲಂಘನೆಯ ಕುರಿತಾದ ತಮ್ಮ ಕ್ಲೇಮ್ ಅನ್ನು ಹಿಂಪಡೆಯಬೇಕೆಂದು ಅವರ ಬಳಿ ಕೇಳಬಹುದು.
  3. ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಿ: ನಿಮ್ಮ ವೀಡಿಯೊವನ್ನು ತಪ್ಪಿನಿಂದಾಗಿ ತೆಗೆದುಹಾಕಲಾಗಿದೆ ಅಥವಾ ಅದು ನ್ಯಾಯಯುತ ಬಳಕೆಗೆ ಅರ್ಹವಾಗಿದೆ ಎಂದು ನೀವು ಭಾವಿಸಿದರೆ, ನೀವು ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು.
ಫಿಶಿಂಗ್ ಪ್ರಯತ್ನಗಳಿಂದ ನಿಮ್ಮ ಖಾತೆಯನ್ನು ರಕ್ಷಿಸಿ. ನಾವು YouTube ಕೃತಿಸ್ವಾಮ್ಯ ಸ್ಟ್ರೈಕ್ ನೋಟಿಫಿಕೇಶನ್‌ಗಳನ್ನು no-reply@youtube.com ನಿಂದ ಮಾತ್ರ ಕಳುಹಿಸುತ್ತೇವೆ. ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸುವುದು ಮತ್ತು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಇನ್ನಷ್ಟು ತಿಳಿದುಕೊಳ್ಳಲು ವೀಕ್ಷಿಸಿ

ಕೃತಿಸ್ವಾಮ್ಯ ಸ್ಟ್ರೈಕ್‌ಗಳ ಸಾಮಾನ್ಯ ಸಂಗತಿಗಳನ್ನು ತಿಳಿದುಕೊಳ್ಳಲು, YouTube Creators ಚಾನಲ್‌ನಿಂದ ಈ ಕೆಳಗಿನ ವೀಡಿಯೊವನ್ನು ನೋಡಿ.

Copyright in YouTube Studio: Addressing Copyright Claims with New Tools, Filters and More

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10621522878337770922
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false