ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಿ

ನಿಮ್ಮ ದೃಢೀಕರಣವಿಲ್ಲದೆ, YouTube ನಲ್ಲಿ ನಿಮ್ಮಕೃತಿಸ್ವಾಮ್ಯ ಸಂರಕ್ಷಿತ ಕೃತಿಯನ್ನು ಪೋಸ್ಟ್ ಮಾಡಲಾಗಿದ್ದರೆ, ನೀವು ಆ ಕಂಟೆಂಟ್ ಅನ್ನು ತೆಗೆದುಹಾಕುವಂತೆ ವಿನಂತಿಸಲು ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಬಹುದು. ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸುವುದು ಒಂದು ಕಾನೂನು ಪ್ರಕ್ರಿಯೆಯಾಗಿದೆ.

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಿದ್ಧಪಡಿಸಿ

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸುವ ಮುನ್ನ, ನೀವು ಈ ಕೆಳಗಿನ ವಿಷಯಗಳ ಕುರಿತು ಆಲೋಚಿಸಬೇಕು:

  1. ಕೃತಿಸ್ವಾಮ್ಯ ವಿನಾಯಿತಿಗಳು: ನ್ಯಾಯಯುತ ಬಳಕೆ, ನ್ಯಾಯಯುತ ವ್ಯವಹಾರ ಅಥವಾ ಅದೇ ರೀತಿಯ ಕೃತಿಸ್ವಾಮ್ಯ ವಿನಾಯಿತಿಅನ್ವಯವಾಗುತ್ತದೆಯೇ ಎಂದು ಆಲೋಚಿಸಿ. ನೀವು ಇದರ ಕುರಿತು ಆಲೋಚಿಸಿದ್ದೀರಿ ಎಂಬುದನ್ನು ದೃಢೀಕರಿಸುವಂತೆ ನಾವು ನಿಮಗೆ ಹೇಳಬಹುದು. ನೀವು ಸೂಕ್ತವಾಗಿ ಪ್ರತಿಕ್ರಿಯಿಸದಿದ್ದರೆ ಅಥವಾ ಕೃತಿಸ್ವಾಮ್ಯ ವಿನಾಯಿತಿಯು ಅನ್ವಯವಾದರೆ ನಿಮ್ಮ ತೆಗೆದುಹಾಕುವಿಕೆ ವಿನಂತಿಯನ್ನು ಗುರುತಿಸಲಾಗಿರುವ ಕಂಟೆಂಟ್ ಅನ್ನು ತೆಗೆದುಹಾಕಲಾಗುವುದಿಲ್ಲ.
  2. ವೈಯಕ್ತಿಕ ಮಾಹಿತಿ: ನೀವು ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಿದ ನಂತರ ನಿಮ್ಮ ಸಂಪರ್ಕದ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ ಎಂಬುದು ನಿಮಗೆ ಅರ್ಥವಾಗಿದೆ ಎಂದು ಖಚಿತಪಡಿಸಿಕೊಳ್ಳಿ.
  • ಕೃತಿಸ್ವಾಮ್ಯದ ಮಾಲೀಕರು ಅಥವಾ ಮಾಲೀಕರ ಪರವಾಗಿ ಕಾರ್ಯನಿರ್ವಹಿಸಲು ಅನುಮತಿ ಪಡೆದಿರುವ ಏಜೆಂಟ್ ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಬೇಕು ಎಂಬುದನ್ನು ನೆನಪಿಟ್ಟುಕೊಳ್ಳಿ.

ನಿಗದಿತ ತೆಗೆದುಹಾಕುವಿಕೆ ವಿನಂತಿಗಳು: 7 ದಿನಗಳಲ್ಲಿ ಕಾರ್ಯಗತಗೊಳ್ಳುವಂತೆ ನಿಮ್ಮ ತೆಗೆದುಹಾಕುವಿಕೆಯ ವಿನಂತಿಯನ್ನು ನಿಗದಿಪಡಿಸುವ ಕುರಿತು ಆಲೋಚಿಸಿ. ಇದರಿಂದಾಗಿ ತಮ್ಮ ಚಾನಲ್‌ನಲ್ಲಿ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ತಪ್ಪಿಸಲು ಕಂಟೆಂಟ್ ಅನ್ನು ಅಳಿಸಲು ಅಪ್‌ಲೋಡ್ ಮಾಡಿದವರಿಗೆ 7 ದಿನಗಳ ಕಾಲಾವಕಾಶ ದೊರೆಯುತ್ತದೆ.

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಿ

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸುವ ತ್ವರಿತ ಮತ್ತು ಸರಳ ವಿಧಾನವೆಂದರೆ ಕಂಪ್ಯೂಟರ್‌ನಲ್ಲಿನ ನಮ್ಮ ವೆಬ್ ಫಾರ್ಮ್ ಭರ್ತಿ ಮಾಡುವಿಕೆ. ನಾವು ಇಮೇಲ್, ಫ್ಯಾಕ್ಸ್ ಮತ್ತು ಮೇಲ್ ಮೂಲಕ ಕೂಡ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸ್ವೀಕರಿಸಬಹುದು.

ತಪ್ಪು ಕ್ಲೇಮ್‌ಗಳನ್ನು ಮಾಡಬೇಡಿ. ತಪ್ಪು ಮಾಹಿತಿ ಸಲ್ಲಿಸುವುದು ಮೊದಲಾದ ರೀತಿಯಲ್ಲಿ ತೆಗೆದುಹಾಕುವಿಕೆ ವಿನಂತಿ ವೆಬ್ ಫಾರ್ಮ್ ಅನ್ನು ದುರ್ಬಳಕೆ ಮಾಡಿದರೆ ಅದು ನಿಮ್ಮ ಖಾತೆಯ ಅಮಾನತುಗೊಳಿಸುವಿಕೆ ಅಥವಾ ಇತರ ಕಾನೂನಾತ್ಮಕ ಪರಿಣಾಮಗಳಿಗೆ ಕಾರಣವಾಗಬಹುದು.

ವೆಬ್ ಫಾರ್ಮ್‌ಗೆ ಹೋಗಲು ಈ ಬಟನ್ ಅನ್ನು ಕ್ಲಿಕ್ ಮಾಡಿ.

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಿ

ನೀವು YouTube Studio ದಿಂದ ಸಹ ನೇರವಾಗಿ ವೆಬ್‌ಫಾರ್ಮ್‌ಗೆ ಹೋಗಬಹುದು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡ ಮೆನುವಿನಿಂದ, ಕೃತಿಸ್ವಾಮ್ಯ ಅನ್ನು ಆಯ್ಕೆ ಮಾಡಿ.
  3. ಹೊಸ ತೆಗೆದುಹಾಕುವಿಕೆ ವಿನಂತಿಅನ್ನು ಕ್ಲಿಕ್ ಮಾಡಿ.

 

ವೀಡಿಯೊ ಅಲ್ಲದ ಕಂಟೆಂಟ್: ಚಾನಲ್ ಬ್ಯಾನರ್ ಚಿತ್ರಗಳಂತಹ ವೀಡಿಯೊ-ಅಲ್ಲದ ಕಂಟೆಂಟ್‌ಗಾಗಿ ತೆಗೆದುಹಾಕುವಿಕೆ ವಿನಂತಿಗಳನ್ನು ಸಲ್ಲಿಸಲು ನಮ್ಮ ವೆಬ್‌ಫಾರ್ಮ್ ಅನ್ನು ಬಳಸಲು ಸಾಧ್ಯವಿಲ್ಲ. ವೀಡಿಯೊ-ಅಲ್ಲದ ಕಂಟೆಂಟ್‌ಗಾಗಿ ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸುವುದು ಹೇಗೆಂದು ತಿಳಿಯಿರಿ.

ಮರುಅಪ್‌ಲೋಡ್‌ಗಳನ್ನು ತಡೆಗಟ್ಟಿ

ವೆಬ್‌ಫಾರ್ಮ್‌ನಲ್ಲಿ, ನೀವು ವರದಿಮಾಡುತ್ತಿರುವ ವೀಡಿಯೊಗಳ ಪ್ರತಿಗಳು ಪುನಃ YouTube ಗೆ ಅಪ್‌ಲೋಡ್ ಆಗುವುದನ್ನು ತಡೆಗಟ್ಟುವ ಆಯ್ಕೆಯೊಂದನ್ನು ನೀವು ಆರಿಸಬಹುದು. ನೀವು ಈ ಆಯ್ಕೆಯನ್ನು ಆರಿಸಿದರೆ, ನಿಮ್ಮ ಇಮೇಲ್ ವಿಳಾಸ ಮತ್ತು ಕೃತಿಸ್ವಾಮ್ಯದ ಮಾಲೀಕರ ಹೆಸರನ್ನು ಮರುಅಪ್‌ಲೋಡ್ ಆಗದಂತೆ ತಡೆಗಟ್ಟಲಾದ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದವರ ಜೊತೆ ಹಂಚಿಕೊಳ್ಳಲಾಗುತ್ತದೆ. ತೆಗೆದುಹಾಕಲಾದ ವೀಡಿಯೊಗಳ ಮರುಅಪ್‌ಲೋಡ್‌ಗಳನ್ನು ತಡೆಗಟ್ಟುವ ಕುರಿತು ಇನ್ನಷ್ಟು ತಿಳಿಯಿರಿ.

ನಿಮ್ಮ ತೆಗೆದುಹಾಕುವಿಕೆ ವಿನಂತಿಗಳನ್ನು ನಿರ್ವಹಿಸಿ

ನೀವು ಈ ಹಿಂದೆ YouTube ಗೆ ಸಲ್ಲಿಸಿದ ಕೃತಿಸ್ವಾಮ್ಯ ತೆಗೆದುಹಾಕುವಿಕೆಯ ವಿನಂತಿಗಳನ್ನು ವೀಕ್ಷಿಸಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡ ಮೆನುವಿನಿಂದ, ಕೃತಿಸ್ವಾಮ್ಯ ಅನ್ನು ಕ್ಲಿಕ್ ಮಾಡಿ.
  3. ತೆಗೆದುಹಾಕುವಿಕೆ ವಿನಂತಿಗಳು ಅನ್ನು ಕ್ಲಿಕ್ ಮಾಡಿ.

ನೀವು ಅನೇಕ ಕೃತಿಸ್ವಾಮ್ಯ-ಸುರಕ್ಷಿತ ಕೃತಿಗಳನ್ನು ನಿರ್ವಹಿಸಿದರೆ ಮತ್ತು ಆಗಾಗ್ಗೆ ತೆಗೆದುಹಾಕುವ ವಿನಂತಿಗಳನ್ನು ಸಲ್ಲಿಸಬೇಕಾದರೆ, ನೀವು ಹೆಚ್ಚು ಸುಧಾರಿತ ಕೃತಿಸ್ವಾಮ್ಯ ನಿರ್ವಹಣೆಯ ಟೂಲ್‌ಗಳಿಗೆ ಅರ್ಹರಾಗಬಹುದು. YouTube ನ ಕೃತಿಸ್ವಾಮ್ಯ ನಿರ್ವಹಣೆಯ ಟೂಲ್‌ಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನೀವು ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಿದ ನಂತರ ಏನಾಗುತ್ತದೆ ಎಂಬುದು ಸೇರಿದಂತೆ ತೆಗೆದುಹಾಕುವಿಕೆ ವಿನಂತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯ ಪ್ರಕ್ರಿಯೆಯ ನಮ್ಮ ಅವಲೋಕನಕ್ಕೆ ಹೋಗಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11897783038216106311
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false