ಟ್ರಾನ್ಸ್‌ಕ್ರಿಪ್ಟ್ ಫೈಲ್ ರಚಿಸಲು ಸಲಹೆಗಳು

ಟ್ರಾನ್ಸ್‌ಕ್ರಿಪ್ಟ್‌ಗಳು ಶೀರ್ಷಿಕೆಗಳನ್ನು ರಚಿಸುವ ಸರಳ ಮಾರ್ಗವಾಗಿದೆ. ಅವು ವೀಡಿಯೊದಲ್ಲಿ ಹೇಳಿರುವ ಪಠ್ಯವನ್ನು ಒಳಗೊಂಡಿರುತ್ತವೆ ಜೊತೆಗೆ ವೀಡಿಯೊ ಚಾಪ್ಟರ್‌ಗಳನ್ನೂ ಒಳಗೊಂಡಿರಬಹುದು. ನಿಮ್ಮ ವೀಡಿಯೊದಲ್ಲಿ ನೀವು ನೇರವಾಗಿ ಟ್ರಾನ್ಸ್‌ಕ್ರಿಪ್ಟ್ ಅನ್ನು ನಮೂದಿಸಬಹುದು ಅಥವಾ ಟ್ರಾನ್ಸ್‌ಕ್ರಿಪ್ಟ್‌ ಫೈಲ್ ರಚಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

ಉತ್ತಮ ಧ್ವನಿ ಗುಣಮಟ್ಟ ಮತ್ತು ಸ್ಪಷ್ಟ ಮಾತಿನ ಒಂದು ಗಂಟೆಗಿಂತ ಕಡಿಮೆ ಅವಧಿಯ ವೀಡಿಯೊಗಳಲ್ಲಿ ಟ್ರಾನ್ಸ್‌ಕ್ರಿಪ್ಟ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ವೀಡಿಯೊದಲ್ಲಿನ ಸಂಭಾಷಣೆಯ ಭಾಷೆಯಲ್ಲಿಯೇ ಟ್ರಾನ್ಸ್‌ಕ್ರಿಪ್ಟ್ ಫೈಲ್‌ನ ಭಾಷೆಯೂ ಇರಬೇಕು. ನಿಮ್ಮ ಫೈಲ್‌ ಅನ್ನು ರಚಿಸಿದ ನಂತರ, ಅದನ್ನು ನಿಮ್ಮ ವೀಡಿಯೊಗೆ ಅಪ್‌ಲೋಡ್‌ ಮಾಡುವ ಸೂಚನೆಗಳನ್ನು ಅನುಸರಿಸಿ.

ನಿಮ್ಮ ಟ್ರಾನ್ಸ್‌ಕ್ರಿಪ್ಟ್‌ ಫೈಲ್‌ ಅನ್ನು ಫಾರ್ಮ್ಯಾಟ್ ಮಾಡಿ

ನಿಮ್ಮ ವೀಡಿಯೊದಲ್ಲಿ ಹೇಳಿರುವ ಮಾತನ್ನು ಟೈಪ್ ಮಾಡಿ ಮತ್ತು ಅದನ್ನು ಸರಳ ಪಠ್ಯದ ಫೈಲ್‌ (.txt) ಆಗಿ ಸೇವ್‌ ಮಾಡಿ. ನೀವು ಇತರ ಫಾರ್ಮ್ಯಾಟ್‌ಗಳನ್ನು (Microsoft Word, HTML ನಂತಹ) ಸರಳ ಪಠ್ಯ ಫೈಲ್‌ ಆಗಿ ಪರಿವರ್ತಿಸಬಹುದು ಅಥವಾ ನಿಮ್ಮ ಕಂಪ್ಯೂಟರ್‌ನಲ್ಲಿರುವ Notepad ನಂತಹ ಸ್ಥಳೀಯ ಪ್ರೋಗ್ರಾಂಗಳನ್ನು ಬಳಸಬಹುದು.

ಉತ್ತಮ ಫಲಿತಾಂಶಗಳನ್ನು ಪಡೆಯಲು, ಈ ಫಾರ್ಮ್ಯಾಟಿಂಗ್ ಸಲಹೆಗಳನ್ನು ಬಳಸಿ:

  • ಹೊಸ ಶೀರ್ಷಿಕೆಯ ಪ್ರಾರಂಭಕ್ಕಾಗಿ, ಖಾಲಿ ಲೈನ್‌ ಬಳಸಿ.
  • ಹಿನ್ನೆಲೆ ಶಬ್ದಗಳನ್ನು ಸೂಚಿಸಲು, ಚೌಕ ಆವರಣಗಳನ್ನು ಬಳಸಿ. ಉದಾಹರಣೆಗೆ, [ಸಂಗೀತ] ಅಥವಾ [ನಗು].
  • ಸೇರಿಸಿ >> ಮಾತನಾಡುವವರನ್ನು ಗುರುತಿಸಲು ಅಥವಾ ಮಾತನಾಡುವವರ ಬದಲಾವಣೆ ತಿಳಿಸಲು.

ನಿಮ್ಮ ಟ್ರಾನ್ಸ್‌ಕ್ಟ್ರಿಪ್ಟ್‌ ಫೈಲ್ ಹೇಗಿರಬಹುದು ಎಂಬುದರ ಉದಾಹರಣೆ ಇಲ್ಲಿದೆ:

>> ಆಲಿಸ್: ಹಾಯ್, ನನ್ನ ಹೆಸರು ಆಲಿಸ್ ಮಿಲ್ಲರ್ ಹಾಗೂ ಇವರು ಜಾನ್ ಬ್ರೌನ್

>> ಜಾನ್: ನಾವು ಮಿಲ್ಲರ್ ಬೇಕರಿಯ ಮಾಲೀಕರು.

>> ಆಲಿಸ್‌: ಇಂದು ನಾವು ನಿಮಗೆ ಹೇಗೆಂದು ಹೇಳಿಕೊಡುತ್ತೇವೆ
ನಮ್ಮ ಜನಪ್ರಿಯ ಚಾಕೊಲೇಟ್‌ ಚಿಪ್‌ ಕುಕೀಗಳನ್ನು ಮಾಡುವ ವಿಧಾನ!

[ಪರಿಚಯಾತ್ಮಕ ಸಂಗೀತ]

ಸರಿ, ನಮ್ಮ ಬಳಿ ಈಗ ಎಲ್ಲಾ ಪದಾರ್ಥಗಳೂ ಇವೆ

ಇಂಗ್ಲಿಷ್‌-ಅಲ್ಲದ ಫೈಲ್‌ಗಳನ್ನು ಸೇವ್‌ ಮಾಡಲಾಗುತ್ತಿದೆ

ಇಂಗ್ಲಿಷ್ ಅಲ್ಲದ ಭಾಷೆಯ ಟ್ರಾನ್ಸ್‌ಕ್ರಿಪ್ಟ್‌ ಫೈಲ್‌ಗಳಿಗಾಗಿ, ಪ್ರದರ್ಶನದ ನಿಖರತೆಯನ್ನು ಸುಧಾರಿಸಲು ಫೈಲ್ ಅನ್ನು UTF-8 ಎನ್‌ಕೋಡಿಂಗ್‌ನಲ್ಲಿ ಸೇವ್‌ ಮಾಡಲು ನಾವು ಶಿಫಾರಸು ಮಾಡುತ್ತೇವೆ:

PC ಸೂಚನೆಗಳು
  1. Notepad ತೆರೆಯಿರಿ.
  2. ಫೈಲ್‌ ತೆರೆಯಿರಿ, ಬಳಿಕ ಅದರಂತೆ ಸೇವ್‌ ಮಾಡಿ.
  3. “ಎನ್‌ಕೋಡಿಂಗ್‌” ಅಡಿಯಲ್ಲಿ UTF-8 ಆಯ್ಕೆಮಾಡಿ.
Apple ಕಂಪ್ಯೂಟರ್‌ ಸೂಚನೆಗಳು
  1. TextEdit ತೆರೆಯಿರಿ.
  2. ಫಾರ್ಮ್ಯಾಟ್‌ ಕ್ಲಿಕ್‌ ಮಾಡಿ, ಬಳಿಕ ಸರಳ ಪಠ್ಯ ರೂಪಿಸಿ ಎಂಬುದನ್ನು ಆಯ್ಕೆಮಾಡಿ.
  3. ಫೈಲ್‌ ಕ್ಲಿಕ್‌ ಮಾಡಿ, ಬಳಿಕ ಸೇವ್‌ ಮಾಡಿ.
  4. ಯೂನಿಕೋಡ್‌ (UTF-8) ಆಯ್ಕೆಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2922390305743792940
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false