ಸಬ್‌ಟೈಟಲ್‌ಗಳು ಮತ್ತು ಶೀರ್ಷಿಕೆಗಳನ್ನು ಸೇರಿಸಿ

ನೀವು ನಿಮ್ಮ ವೀಡಿಯೊಗಳನ್ನು ಕಿವುಡರು ಮತ್ತು ಶ್ರವಣ ದೋಷವಿರುವ ವೀಕ್ಷಕರು ಹಾಗೂ ಇತರೆ ಭಾಷೆ ಮಾತನಾಡುವ ವೀಕ್ಷಕರೂ ಸೇರಿದಂತೆ ಹೆಚ್ಚಿನ ಪ್ರೇಕ್ಷಕರಿಗೆ ತಲುಪಿಸಲು ಸಬ್‌ಟೈಟಲ್‌ಗಳು ಮತ್ತು ಶೀರ್ಷಿಕೆಗಳು ಅವಕಾಶ ನೀಡುತ್ತವೆ. ಪ್ರಸ್ತುತ ಶೀರ್ಷಿಕೆಗಳನ್ನು ಎಡಿಟ್‌ ಮಾಡುವ ಅಥವಾ ತೆಗೆದುಹಾಕುವ ಕುರಿತು ಇನ್ನಷ್ಟು ತಿಳಿಯಿರಿ.

ಸಬ್‌ಟೈಟಲ್‌ಗಳು & ಶೀರ್ಷಿಕೆಗಳನ್ನು ರಚಿಸಿ

  1. YouTube Studioಗೆ ಸೈನ್‌ ಇನ್‌ ಮಾಡಿ.
  2. ಎಡಭಾಗದ ಮೆನುವಿನಿಂದ, ಸಬ್‌ಟೈಟಲ್‌ಗಳು ಎನ್ನುವುದನ್ನು ಆಯ್ಕೆಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊವನ್ನು ಕ್ಲಿಕ್ ಮಾಡಿ.
  4. ಭಾಷೆ ಸೇರಿಸಿ ಎನ್ನುವುದನ್ನು ಕ್ಲಿಕ್‌ ಮಾಡಿ ಹಾಗೂ ನಿಮ್ಮ ಭಾಷೆಯನ್ನು ಆಯ್ಕೆಮಾಡಿ.
  5. ಸಬ್‌ಟೈಟಲ್‌ಗಳು ವಿಭಾಗದ ಕೆಳಗೆ, ಸೇರಿಸಿ ಎನ್ನುವುದನ್ನು ಕ್ಲಿಕ್‌ ಮಾಡಿ.
ಗಮನಿಸಿ: ನೀವು ಅಪ್‌ಲೋಡ್ ಮಾಡುವ ಪ್ರಕ್ರಿಯೆಯ ಸಂದರ್ಭದಲ್ಲೂ ಸಬ್‌ಟೈಟಲ್‌ಗಳು ಮತ್ತು ಶೀರ್ಷಿಕೆಗಳನ್ನು ಸೇರಿಸಬಹುದು.
ಫೈಲ್ ಅಪ್‌ಲೋಡ್ ಮಾಡಿ

ಸಬ್‌ಟೈಟಲ್‌ ಮತ್ತು ಶೀರ್ಷಿಕೆ ಫೈಲ್‌ಗಳು ವೀಡಿಯೊದಲ್ಲಿ ಹೇಳಿರುವ ವಿಷಯದ ಪಠ್ಯವನ್ನು ಹೊಂದಿರುತ್ತವೆ. ಪಠ್ಯದ ಪ್ರತಿ ಸಾಲನ್ನು ಯಾವಾಗ ಪ್ರದರ್ಶಿಸಬೇಕು ಎಂಬ ಕುರಿತ ಟೈಮ್-ಕೋಡ್‌ಗಳನ್ನೂ ಇದು ಹೊಂದಿರುತ್ತದೆ. ಕೆಲವು ಫೈಲ್‌ಗಳಲ್ಲಿ ಸ್ಥಾನ ಮತ್ತು ಶೈಲಿಯ ಮಾಹಿತಿಯೂ ಇರುತ್ತದೆ; ಕಿವುಡ ಅಥವಾ ಶ್ರವಣ ದೋಷವಿರುವ ವೀಕ್ಷಕರಿಗೆ ಇದು ವಿಶೇಷವಾಗಿ ಸಹಾಯ ಮಾಡುತ್ತದೆ.

ನೀವು ಪ್ರಾರಂಭಿಸುವ ಮೊದಲು, ಫೈಲ್‌ ಪ್ರಕಾರವು YouTube ನಲ್ಲಿ ಬೆಂಬಲಿತವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

  1. ಅಪ್‌ಲೋಡ್‌ ಫೈಲ್‌ ಅನ್ನು ಆಯ್ಕೆಮಾಡಿ.
  2. ಟೈಮಿಂಗ್‌ ಸಹಿತಿಅಥವಾ ಟೈಮಿಂಗ್‌ ರಹಿತ ಎನ್ನುವುದರ ನಡುವೆ ಆರಿಸಿ, ಬಳಿಕ ಮುಂದುವರಿಯಿರಿ ಅನ್ನು ಆಯ್ಕೆಮಾಡಿ.
  3. ಅಪ್‌ಲೋಡ್ ಮಾಡಲು ಫೈಲ್ ಆಯ್ಕೆಮಾಡಿ
  4. ಸೇವ್‌ ಅನ್ನು ಆರಿಸಿ.
ಸ್ವಯಂ ಸಿಂಕ್

ನೀವು ವೀಡಿಯೊವನ್ನು ನೋಡುತ್ತಾ ಇರುವಾಗಲೇ ಸಬ್‌ಟೈಟಲ್‌ಗಳು ಮತ್ತು ಶೀರ್ಷಿಕೆಗಳನ್ನು ನಮೂದಿಸುವ ಮೂಲಕ ಅವುಗಳನ್ನು ರಚಿಸಬಹುದು. ಈ ಆಯ್ಕೆಯ ಜೊತೆಗೆ ನಿಮ್ಮ ವೀಡಿಯೊದೊಂದಿಗೆ ಸಿಂಕ್ ಮಾಡಲು ನೀವು ಟೈಮಿಂಗ್ ಅನ್ನು ಸೆಟ್ ಮಾಡಬೇಕಾಗುತ್ತದೆ.

ಗಮನಿಸಿ: ಟ್ರಾನ್ಸ್‌ಸ್ಕ್ರಿಪ್ಟ್‌ ಪಠ್ಯವನ್ನು ಸ್ವಯಂಚಾಲಿತವಾಗಿ ನಿಮ್ಮ ವೀಡಿಯೊಗೆ ಸಿಂಕ್ರೊನೈಸ್ ಮಾಡಲಾಗುತ್ತದೆ. ನಮ್ಮ ಧ್ವನಿ ಗುರುತಿಸುವಿಕೆ ತಂತ್ರಜ್ಞಾನವು ಬೆಂಬಲಿಸುವ ಭಾಷೆಯಲ್ಲಿ ಟ್ರಾನ್ಸ್‌ಕ್ರಿಪ್ಟ್‌ ಇರಬೇಕು. ವೀಡಿಯೊದಲ್ಲಿ ಮಾತನಾಡಿರುವ ಭಾಷೆಯಲ್ಲಿಯೇ ಟ್ರಾನ್ಸ್‌ಕ್ರಿಪ್ಟ್‌ ಕೂಡ ಇರಬೇಕು. ಒಂದು ಗಂಟೆಗಿಂತ ಹೆಚ್ಚು ಉದ್ದದ ಅಥವಾ ಕಳಪೆ ಆಡಿಯೊ ಗುಣಮಟ್ಟ ಹೊಂದಿರುವ ವೀಡಿಯೊಗಳಿಗೆ ಟ್ರಾನ್ಸ್‌ಕ್ರಿಪ್ಟ್‌ಗಳನ್ನು ಶಿಫಾರಸು ಮಾಡಲಾಗುವುದಿಲ್ಲ.
  1. ಸ್ವಯಂ ಸಿಂಕ್‌ ಆಯ್ಕೆಮಾಡಿ.
  2. ವೀಡಿಯೊದಲ್ಲಿ ಪದಗಳನ್ನು ನಮೂದಿಸಿ ಅಥವಾ ಟ್ರಾನ್ಸ್‌ಕ್ರಿಪ್ಟ್ ಫೈಲ್‌ ಅಪ್‌ಲೋಡ್‌ ಮಾಡಿ. 
  3. ಎಡಿಟ್‌ ಆಯ್ಕೆಮಾಡಿ, ಬಳಿಕ ಸೇವ್‌ ಮತ್ತು ಮುಚ್ಚಿ ಎನ್ನುವುದನ್ನು ಕ್ಲಿಕ್‌ ಮಾಡಿ.

ಟೈಮಿಂಗ್‌ ಸೆಟ್‌ ಮಾಡಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು. ನೀವು ಕಾಯುತ್ತಿರುವಾಗ, ನಿಮ್ಮನ್ನು ವೀಡಿಯೊ ಟ್ರ್ಯಾಕ್‌ಲಿಸ್ಟ್‌ಗೆ ಮರಳಿ ತರಲಾಗುತ್ತದೆ. ಇದು ಸಿದ್ಧವಾದ  ನಂತರ, ನಿಮ್ಮ ಪ್ರತಿಲೇಖನವು ಸ್ವಯಂಚಾಲಿತವಾಗಿ ನಿಮ್ಮ ವೀಡಿಯೊದಲ್ಲಿ ಪ್ರಕಟಗೊಳ್ಳುತ್ತದೆ.

ಹಸ್ತಚಾಲಿತವಾಗಿ ಟೈಪ್ ಮಾಡಿ

'Type manually' can be found under the 'Add subtitles' section of a language.

ನೀವು ಟೈಪ್‌ ಮಾಡಬಹುದು ಅಥವಾ ಶೀರ್ಷಿಕೆಗಳು ಮತ್ತು ಸಬ್‌ಟೈಟಲ್‌ಗಳ ಟ್ರಾನ್ಸ್‌ಕ್ರಿಪ್ಟ್ ಅನ್ನು ಅಂಟಿಸಬಹುದು. ಈ ಆಯ್ಕೆಯ ಮೂಲಕ, ನಿಮ್ಮ ಸಬ್‌ಟೈಟಲ್‌ ಮತ್ತು ಶೀರ್ಷಿಕೆ ಟೈಮಿಂಗ್‌ಗಳು ಸ್ವಯಂಚಾಲಿತವಾಗಿ ಸೆಟ್‌ ಆಗುತ್ತವೆ.

  1. ಹಸ್ತಚಾಲಿತವಾಗಿ  ಟೈಪ್‌ ಮಾಡಿ ಎನ್ನುವುದನ್ನು ಆಯ್ಕೆಮಾಡಿ. 
  2. ವೀಡಿಯೊ ಪ್ಲೇ ಮಾಡಿ ಮತ್ತು ನಿಮ್ಮ ಶೀರ್ಷಿಕೆಗಳು ಅಥವಾ ಸಬ್‌ಟೈಟಲ್‌ಗಳನ್ನು ನಮೂದಿಸಿ. [ಚಪ್ಪಾಳೆ] ಅಥವಾ [ಗುಡುಗು] ನಂತಹ ಪಠ್ಯವನ್ನು ಸೇರಿಸಲು ಮರೆಯಬೇಡಿ, ಇದರಿಂದ ವೀಡಿಯೊದಲ್ಲಿ ಏನು ನಡೆಯುತ್ತಿದೆ ಎಂದು ವೀಕ್ಷಕರಿಗೆ ತಿಳಿಯುತ್ತದೆ. ನೀವು ಟೈಪ್‌ ಮಾಡುವ ವಿರಾಮ ಮಾಡಬಹುದು. 
  3. ಪ್ರಕಟಿಸು ಎಂಬುದನ್ನು ಆಯ್ಕೆಮಾಡಿ.

ನಿಮ್ಮ ಕೆಲಸವನ್ನು ವೇಗಗೊಳಿಸಲು, ನೀವು ಈ ಕೀಬೋರ್ಡ್‌ ಶಾರ್ಟ್‌ಕಟ್‌ಗಳನ್ನು ಸಹ ಬಳಸಬಹುದು:

  • Windows/ಕಮ್ಯಾಂಡ್‌+ ಲೆಫ್ಟ್ ಆ್ಯರೋ: 1 ಸೆಕೆಂಡ್‌ ಹಿಂದಕ್ಕೆ ಹೋಗಿ. 
  • Windows/ಕಮ್ಯಾಂಡ್‌+ ರೈಟ್‌ ಆ್ಯರೋ: 1 ಸೆಕೆಂಡ್‌ ಮುಂದಕ್ಕೆ ಹೋಗಿ. 
  • Windows/ಕಮ್ಯಾಂಡ್‌ + ಸ್ಪೇಸ್‌: ವಿರಾಮ ಅಥವಾ ವೀಡಿಯೊ ಪ್ಲೇ ಮಾಡಿ.
  • Windows/ಕಮ್ಯಾಂಡ್‌ + enter: ಹೊಸದೊಂದು ಲೈನ್‌ ಸೇರಿಸಿ.
  • Windows/ಕಮ್ಯಾಂಡ್‌ + ಡೌನ್ ಆ್ಯರೋ: ಮುಂದಿನ ಸಬ್‌ಟೈಟಲ್‌ ಎಡಿಟ್‌ ಮಾಡಿ.
  • Windows/ಕಮ್ಯಾಂಡ್‌ + ಅಪ್ ಆ್ಯರೋ: ಹಿಂದಿನ ಸಬ್‌ಟೈಟಲ್‌ ಎಡಿಟ್‌ ಮಾಡಿ.
  • Enter: ಹಿಂದಿನ ಸಬ್‌ಟೈಟಲ್‌ ಎಡಿಟ್‌ ಮಾಡಿ.

ಸ್ವಯಂಚಾಲಿತ ಅನುವಾದ

ನಿಮ್ಮ ವೀಡಿಯೊಗಳಿಗೆ ಶೀರ್ಷಿಕೆಗಳನ್ನು ಸ್ವಯಂಚಾಲಿತವಾಗಿ ರಚಿಸಲು YouTube ಧ್ವನಿ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಬಹುದು. ಸ್ವಯಂಚಾಲಿತ ಶೀರ್ಷಿಕೆಗಳು ಲಭ್ಯವಿದ್ದರೆ, ಅವುಗಳು ಸ್ವಯಂಚಾಲಿತವಾಗಿ ವೀಡಿಯೊದಲ್ಲಿ ಪ್ರಕಟಗೊಳ್ಳುತ್ತವೆ. ಸ್ವಯಂಚಾಲಿತ ಶೀರ್ಷಿಕೆಗಳನ್ನು ಬಳಸುವುದು ಹೇಗೆಂದು ತಿಳಿಯಿರಿ.
ಗಮನಿಸಿ: ಸ್ವಯಂಚಾಲಿತ ಶೀರ್ಷಿಕೆಗಳು ವೀಡಿಯೊದ ಡೀಫಾಲ್ಟ್‌ ಭಾಷೆಯಲ್ಲಿಯೇ ಇರುತ್ತವೆ.

ಸಬ್‌ಟೈಟಲ್‌ಗಳು& ಶೀರ್ಷಿಕೆಗಳನ್ನು ಸೇರಿಸುವುದು ಹೇಗೆ ಎಂಬುದನ್ನು ವೀಕ್ಷಿಸಿ

ಸಬ್‌ಟೈಟಲ್‌ಗಳು ಮತ್ತು ಶೀರ್ಷಿಕೆಗಳನ್ನು ಸೇರಿಸುವುದು ಹೇಗೆ ಎಂಬುದರ ಕುರಿತು YouTube Creators ಚಾನಲ್‌ನಿಂದ ಈ ಕೆಳಗಿನ ವೀಡಿಯೊವನ್ನು ಪರಿಶೀಲಿಸಿ.

How to Add Captions While Uploading & Editing Your Videos

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2360124241723884639
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false