ಶೀರ್ಷಿಕೆಗಳನ್ನು ಎಡಿಟ್‌ ಮಾಡಿ ಅಥವಾ ತೆಗೆದುಹಾಕಿ

ಶೀರ್ಷಿಕೆಗಳನ್ನು ಎಡಿಟ್ ಮಾಡಿ

ನಿಮ್ಮ ಶೀರ್ಷಿಕೆಗಳ ಪಠ್ಯ ಮತ್ತು ಸಮಯಸ್ಟ್ಯಾಂಪ್‌ಗಳನ್ನು ಬದಲಾಯಿಸಬಹುದು. ನೀವು ಶೀರ್ಷಿಕೆ ಎಡಿಟ್‌ ಮಾಡುವ ಸಾಫ್ಟ್‌ವೇರ್‌ ಅಥವಾ ಸೇವೆಗಳನ್ನು ಬೇಕಾದರೂ ಬಳಸಬಹುದು.

ಶೀರ್ಷಿಕೆ ಪಠ್ಯ ಎಡಿಟ್‌ ಮಾಡಿ

ಗಮನಿಸಿ:ನೀವು ಸ್ವಯಂಚಾಲಿತವಾಗಿ ರಚನೆಯಾದ ಶೀರ್ಷಿಕೆಗಳನ್ನು ಎಡಿಟ್‌ ಮಾಡುತ್ತಿದ್ದರೆ, ನಿಮ್ಮ ಪರಿಷ್ಕರಣೆಗಳನ್ನೂ ಒಳಗೊಂಡ ಹೊಸ ಶೀರ್ಷಿಕೆ ಟ್ರ್ಯಾಕ್ ರಚನೆಯಾಗುತ್ತದೆ.

  1. YouTube Studioಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಸಬ್‌ಟೈಟಲ್‌ಗಳು ಎನ್ನುವುದನ್ನು ಆಯ್ಕೆಮಾಡಿ.
  3. ನೀವು ಎಡಿಟ್‌ ಮಾಡಲು ಬಯಸುವ ವೀಡಿಯೊ ಕ್ಲಿಕ್‌ ಮಾಡಿ.
  4. ನೀವು ಎಡಿಟ್‌ ಮಾಡಲು ಬಯಸುವ ಭಾಷೆಗೆ, “ಸಬ್‌ಟೈಟಲ್‌ಗಳು” ಎಂಬ ಕಾಲಮ್‌ನಲ್ಲಿ ಎಡಿಟ್‌ ಎನ್ನುವುದನ್ನು ಆಯ್ಕೆಮಾಡಿ.
  5. ಸ್ವಯಂಚಾಲಿತ ಶೀರ್ಷಿಕೆಗಳಿಗೆ, ನಿಮ್ಮ ಈಗಿನ ಡ್ರಾಫ್ಟ್‌ ಓವರ್‌ರೈಟ್‌ ಮಾಡಲುನಕಲಿಸಿ ಮತ್ತು ಎಡಿಟ್‌ ಮಾಡಿ ನಂತರ ಮುಂದುವರಿಯಿರಿ
  6. ಶೀರ್ಷಿಕೆ ಟ್ರ್ಯಾಕ್ ಫಲಕದಲ್ಲಿ ಯಾವುದಾದರೂ ಸಾಲಿನಲ್ಲಿ ಕ್ಲಿಕ್‌ ಆಡಿ, ಪಠ್ಯವನ್ನು ಎಡಿಟ್‌ ಮಾಡಿ.
  7. ಬದಲಾವಣೆ ಮಾಡುವುದು ಮುಗಿದಾಗ, ಪ್ರಕಟಿಸು ಎನ್ನುವುದನ್ನು ಕ್ಲಿಕ್‌ ಮಾಡಿ.
ಶೀರ್ಷಿಕೆ ಟೈಮಿಂಗ್‌ ಎಡಿಟ್‌ ಮಾಡಿ

YouTube ಕ್ಯಾಪ್ಶನ್ಸ್ ಎಡಿಟರ್ or ನಿಮ್ಮ ಶೀರ್ಷಿಕೆ ಫೈಲ್‌ಗಳನ್ನು ಡೌನ್‌ಲೋಡ್‌ ಮಾಡುವ ಮೂಲಕ ನಿಮ್ಮ ಶೀರ್ಷಿಕೆ ಟ್ರ್ಯಾಕ್‌ಗಳಲ್ಲಿ ಟೈಮಿಂಗ್‌ ಅನ್ನು ನೇರವಾಗಿ ಎಡಿಟ್‌ ಮಾಡಬಹುದು.

YouTube ಕ್ಯಾಪ್ಶನ್ಸ್ ಎಡಿಟರ್‌ ಬಳಸಿ

  1. YouTube Studioಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಸಬ್‌ಟೈಟಲ್‌ಗಳು ಎನ್ನುವುದನ್ನು ಆಯ್ಕೆಮಾಡಿ.
  3. ನೀವು ಎಡಿಟ್‌ ಮಾಡಲು ಬಯಸುವ ವೀಡಿಯೊ ಕ್ಲಿಕ್‌ ಮಾಡಿ.
  4. ನೀವು ಎಡಿಟ್‌ ಮಾಡಲು ಬಯಸುವ ಭಾಷೆಗೆ, “ಸಬ್‌ಟೈಟಲ್‌ಗಳು” ಎಂಬ ಕಾಲಮ್‌ನಲ್ಲಿ  ಎಡಿಟ್‌ ಅನ್ನು ಆಯ್ಕೆಮಾಡಿ.
  5. ಶೀರ್ಷಿಕೆ ಟ್ರ್ಯಾಕ್ ಪ್ಯಾನೆಲ್‌ನಲ್ಲಿ ನಿರ್ದಿಷ್ಟ ಲೈನ್ ಆಯ್ಕೆಮಾಡಿ:
    1. ಶೀರ್ಷಿಕೆ ಟ್ರ್ಯಾಕ್ ಪಕ್ಕದಲ್ಲಿರುವ ಎರಡು ಸಮಯಸ್ಟ್ಯಾಂಪ್‌ ಬಾಕ್ಸ್‌ಗಳನ್ನು ಎಡಿಟ್‌ ಮಾಡುವ ಮೂಲಕ ನೀವು ಟೈಮಿಂಗ್‌ ಅನ್ನು ಸರಿಹೊಂದಿಸಬಹುದು.
  6. ಬದಲಾವಣೆ ಮಾಡುವುದು ಮುಗಿದಾಗ, ಪ್ರಕಟಿಸು ಎನ್ನುವುದನ್ನು ಕ್ಲಿಕ್‌ ಮಾಡಿ.

ಶೀರ್ಷಿಕೆ ಫೈಲ್‌ಗಳನ್ನು ಡೌನ್‌ಲೋಡ್‌ & ಎಡಿಟ್‌ ಮಾಡಿ

ಶೀರ್ಷಿಕೆ ಫೈಲ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಹಾಗೂ TextEdit ಅಥವಾ Notepad ನಂತಹ ಸರಳ ಪಠ್ಯ(.txt) ಎಡಿಟ್ ಮಾಡುವ ಪ್ರೋಗ್ರಾಂಗಳನ್ನು ಬಳಸಿ ನೀವು ಸಮಯಸ್ಟಾಂಪ್‌ಗಳನ್ನು ಎಡಿಟ್‌ ಮಾಡಬಹುದು. 

  1. YouTube Studioಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಸಬ್‌ಟೈಟಲ್‌ಗಳು ಎನ್ನುವುದನ್ನು ಆಯ್ಕೆಮಾಡಿ.
  3. ನೀವು ಎಡಿಟ್‌ ಮಾಡಲು ಬಯಸುವ ವೀಡಿಯೊ ಕ್ಲಿಕ್‌ ಮಾಡಿ.
  4. ಸಬ್‌ಟೈಟಲ್‌ಗಳು ಎಂಬಲ್ಲಿ, ನೀವು ಎಡಿಟ್‌ ಮಾಡಲು ಬಯಸುವ ಭಾಷೆಯ ಮುಂದೆ ಎಡಿಟ್‌ ಅನ್ನು ಕ್ಲಿಕ್‌ ಮಾಡಿ.
  5. ಆಯ್ಕೆಗಳು ಎಂಬುದನ್ನು ಕ್ಲಿಕ್ ಮಾಡಿ ಬಳಿಕ '' ಡೌನ್‌ಲೋಡ್‌ ಸಬ್‌ಟೈಟಲ್‌ಗಳು ಎಂಬುದನ್ನು ಆಯ್ಕೆಮಾಡಿ. ಶೀರ್ಷಿಕೆ ಫೈಲ್‌ ಫಾರ್ಮ್ಯಾಟ್‌ಗಳು ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ. 
  6. ನಿಮ್ಮ ಬ್ರೌಸರ್‌ ಶೀರ್ಷಿಕೆ ಟ್ರ್ಯಾಕ್‌ಗಳಿರುವ ಫೈಲ್‌ ಅನ್ನು ಡೌನ್‌ಲೋಡ್‌ ಮಾಡುತ್ತದೆ. ಫೈಲ್‌ ಎಡಿಟ್‌ ಮಾಡಿ ಬಳಿಕ ಅದನ್ನು ಸೇವ್‌ ಮಾಡಿ.
  7. ನಿಮ್ಮ ವೀಡಿಯೊಗಳಿಗೆ ಮತ್ತೆ ಶೀರ್ಷಿಕೆಗಳನ್ನು ಅಪ್‌ಲೋಡ್‌ ಮಾಡುವ ಸೂಚನೆಗಳು ಎಂಬುದನ್ನು ಅನುಸರಿಸಿ.

ಶೀರ್ಷಿಕೆಗಳನ್ನು ತೆಗೆದುಹಾಕಿ

ನಿಮ್ಮ ವೀಡಿಯೊದಲ್ಲಿ ಶೀರ್ಷಿಕೆಗಳನ್ನು ತೋರಿಸುವುದನ್ನು ನಿಲ್ಲಿಸಲು, ಅವುಗಳನ್ನು ನಿಮ್ಮ ವೀಡಿಯೊ ಮತ್ತು Google ಖಾತೆಯಿಂದ ಸಂಪೂರ್ಣವಾಗಿ ಅಳಿಸಬಹುದು.

  1. YouTube Studioಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಸಬ್‌ಟೈಟಲ್‌ಗಳು ಎನ್ನುವುದನ್ನು ಆಯ್ಕೆಮಾಡಿ.
  3. ನೀವು ಅಳಿಸಲು ಬಯಸುವ ಭಾಷೆಗಾಗಿ,  “ಸಬ್‌ಟೈಟಲ್‌ಗಳು” ಕಾಲಮ್‌ನಲ್ಲಿ,  ಆಯ್ಕೆಗಳು ಅನ್ನು ಆರಿಸಿ '' ನಂತರ ಅಳಿಸಿ .
  4. ನೀವು ಶೀರ್ಷಿಕೆಗಳನ್ನು ಅಳಿಸಲು ಬಯಸುವುದನ್ನು ದೃಢೀಕರಿಸಲು ಕೇಳಲಾಗುವುದು. ಶೀರ್ಷಿಕೆಗಳನ್ನು ಅಳಿಸಿ ಎಂಬುದನ್ನು ಕ್ಲಿಕ್ fಮಾಡಿ.

ಗಮನಿಸಿ: ಆ ವೀಡಿಯೊಗೆ ಸಂಬಂಧಿಸಿದ ಸ್ವಯಂಚಾಲಿತ ಶೀರ್ಷಿಕೆಗಳನ್ನು ಅಳಿಸಿದ ನಂತರ, ನೀವು ಅವುಗಳನ್ನು ಮತ್ತೆ ಆನ್ ಮಾಡಲು ಸಾಧ್ಯವಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16557460168372724914
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false