ಬೆಂಬಲಿತ ಸಬ್‌ಟೈಟಲ್‌ ಮತ್ತು ಉಪಶೀರ್ಷಿಕೆ ಫೈಲ್‌ಗಳು

ಸಬ್‌ಟೈಟಲ್‌ ಅಥವಾ ಉಪಶೀರ್ಷಿಕೆ ಫೈಲ್‌, ವೀಡಿಯೊದಲ್ಲಿ ಹೇಳಿರುವ ವಿಷಯದ ಕುರಿತ ಪಠ್ಯವನ್ನು ಹೊಂದಿರುತ್ತದೆ. ಈ ಫೈಲ್ ಪಠ್ಯದ ಪ್ರತಿ ಸಾಲು ಯಾವಾಗ ಪ್ರದರ್ಶನವಾಗಬೇಕು ಎಂದು ಹೇಳುವ ಟೈಮ್-ಕೋಡ್‌ಗಳನ್ನು ಸಹ ಹೊಂದಿರುತ್ತದೆ. ಕೆಲವು ಫೈಲ್‌ಗಳು ಸ್ಥಾನ ಮತ್ತು ಶೈಲಿಯ ಮಾಹಿತಿಯನ್ನೂ ಒಳಗೊಂಡಿರುತ್ತವೆ; ಇದು ವಿಶೇಷವಾಗಿ ಕಿವುಡರು ಅಥವಾ ಶ್ರವಣ ದೋಷವಿರುವ ವೀಕ್ಷಕರಿಗೆ ಸಹಾಯ ಮಾಡುತ್ತದೆ. YouTube ಬೆಂಬಲಿಸುವ ಫೈಲ್‌ ಫಾರ್ಮ್ಯಾಟ್‌ಗಳು ಯಾವುವು ಎಂಬುದನ್ನು ಕೆಳಗೆ ನೋಡಿ.

ಈಗ ಪ್ರಾರಂಭಿಸುತ್ತಿದ್ದೀರಾ? ನಮ್ಮ ಕ್ಯಾಪ್ಶನ್ಸ್‌ ಎಡಿಟರ್‌ ಬಳಸಿ ನೇರವಾಗಿ ನಿಮ್ಮ ವೀಡಿಯೊದಲ್ಲಿ ಶೀರ್ಷಿಕೆಗಳನ್ನು ಸೇರಿಸಲು ಪ್ರಯತ್ನಿಸಿ.
ಮೂಲ ಫೈಲ್‌ ಫಾರ್ಮ್ಯಾಟ್‌ಗಳು

ಶೀರ್ಷಿಕೆ ಫೈಲ್‌ಗಳನ್ನು ರಚಿಸುವ ವಿಚಾರದಲ್ಲಿ ನೀವು ಹೊಸಬರಾಗಿದ್ದಲ್ಲಿ, ಕೆಳಗಿರುವ ಮೂಲ ಫೈಲ್‌ ಪ್ರಕಾರಗಳಲ್ಲಿ ಒಂದನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ:

ಫಾರ್ಮ್ಯಾಟ್ ಹೆಸರು ಫೈಲ್ ವಿಸ್ತರಣೆ ಹೆಚ್ಚಿನ ಮಾಹಿತಿ
SubRip .srt ಈ ಫೈಲ್‌ಗಳ ಮೂಲ ಆವೃತ್ತಿಗಳು ಮಾತ್ರವೇ ಬೆಂಬಲಿತವಾಗಿವೆ. ಯಾವುದೇ ಶೈಲಿ ಮಾಹಿತಿ (ಮಾರ್ಕ್‌ಅಪ್‌) ಯನ್ನು ಗುರುತಿಸಲಾಗಿಲ್ಲ. ಫೈಲ್‌ ಸರಳವಾದ UTF-8 ನಲ್ಲಿರಬೇಕು.
SubViewer .sbv ಅಥವಾ .sub ಈ ಫೈಲ್‌ಗಳ ಮೂಲ ಆವೃತ್ತಿಗಳು ಮಾತ್ರವೇ ಬೆಂಬಲಿತವಾಗಿವೆ. ಯಾವುದೇ ಶೈಲಿ ಮಾಹಿತಿ (ಮಾರ್ಕ್‌ಅಪ್‌) ಯನ್ನು ಗುರುತಿಸಲಾಗಿಲ್ಲ. ಫೈಲ್‌ ಸರಳವಾದ UTF-8 ನಲ್ಲಿರಬೇಕು.
MPsub (MPlayer ಸಬ್‌ಟೈಟಲ್‌) .mpsub "FORMAT="ಪ್ಯಾರಾಮೀಟರ್ ಬೆಂಬಲಿತವಾಗಿದೆ.
LRC .lrc ಯಾವುದೇ ಶೈಲಿ ಮಾಹಿತಿ (ಮಾರ್ಕ್‌ಅಪ್‌) ಯನ್ನು ಗುರುತಿಸಲಾಗಿಲ್ಲ, ಆದರೆ ವರ್ಧಿತ ಫಾರ್ಮ್ಯಾಟ್‌ ಬೆಂಬಲಿತವಾಗಿದೆ.
Videotron Lambda .cap ಈ ಫೈಲ್‌ ಪ್ರಕಾರವು ಪ್ರಮುಖವಾಗಿ ಜಪಾನೀಯರ ಸಬ್‌ಟೈಟಲ್‌ಗಳಲ್ಲಿ ಬಳಕೆಯಾಗುತ್ತದೆ.
 

ಶೀರ್ಷಿಕೆ ಫೈಲ್‌ಗಳನ್ನು ರಚಿಸುವ ವಿಚಾರದಲ್ಲಿ ನೀವು ಹೊಸಬರಾಗಿದ್ದಲ್ಲಿ, ನೀವು SubRip (.srt) ಅಥವಾ SubViewer (.sbv) ಬಳಸಲು ಬಯಸಬಹುದು. ಅವುಗಳಿಗೆ ಸಮಯದ ಮೂಲಭೂತ ಮಾಹಿತಿ ಮಾತ್ರ ಬೇಕಾಗುತ್ತದೆ, ಅಲ್ಲದೆ ಯಾವುದೇ ಸರಳವಾದ ಪಠ್ಯ ಎಡಿಟಿಂಗ್‌ ಸಾಫ್ಟ್‌ವೇರ್‌ ಬಳಸಿ ಎಡಿಟ್‌ ಮಾಡಬಹುದು.

SubRip ಮತ್ತು SubViewer ಫೈಲ್‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ, ಶೀರ್ಷಿಕೆಯ ಪ್ರಾರಂಭ ಮತ್ತು ಮುಕ್ತಾಯ ಸಮಯಗಳ ಫಾರ್ಮ್ಯಾಟ್‌. ಎರಡೂ ಫಾರ್ಮ್ಯಾಟ್‌ಗಳಿಗೆ ಉದಾಹರಣೆಗಳು ಇಲ್ಲಿವೆ:

SubRip (.srt) ಉದಾಹರಣೆ
1
00:00:00,599 --> 00:00:04,160
>> ಆಲಿಸ್‌: ಹಾಯ್, ನನ್ನ ಹೆಸರು ಆಲಿಸ್ ಮಿಲ್ಲರ್ ಹಾಗೂ ಇವರು ಜಾನ್ ಬ್ರೋ

2
00:00:04,160 --> 00:00:06,770
>> ಜಾನ್‌: ನಾವು ಮಿಲ್ಲರ್‌ ಬೇಕರಿಯ ಮಾಲೀಕರು.

3
00:00:06,770 --> 00:00:10,880
>> ALICE: ಇಂದು ನಾವು ನಿಮಗೆ ಹೇಳಿಕೊಡುತ್ತೇವೆ
ನಮ್ಮ ಜನಪ್ರಿಯ ಚಾಕೊಲೇಟ್‌ ಚಿಪ್‌ ಕುಕೀಗಳನ್ನು ಮಾಡುವ ವಿಧಾನ!

4
00:00:10,880 --> 00:00:16,700
[ಪರಿಚಯಾತ್ಮಕ ಸಂಗೀತ]

5
00:00:16,700 --> 00:00:21,480
ಸರಿ, ನಮ್ಮ ಬಳಿ ಈಗ ಎಲ್ಲಾ ಪದಾರ್ಥಗಳೂ ಇವೆ
SubViewer (.sbv) ಉದಾಹರಣೆ
0:00:00.599,0:00:04.160
>> ಆಲಿಸ್‌: ಹಾಯ್, ನನ್ನ ಹೆಸರು ಆಲಿಸ್ ಮಿಲ್ಲರ್ ಹಾಗೂ ಇವರು ಜಾನ್ ಬ್ರೋ

0:00:04.160,0:00:06.770
>> ಜಾನ್‌: ನಾವು ಮಿಲ್ಲರ್‌ ಬೇಕರಿಯ ಮಾಲೀಕರು.

0:00:06.770,0:00:10.880
>> ಆಲಿಸ್‌: ಇಂದು ನಾವು ನಿಮಗೆ ಹೇಳಿಕೊಡುತ್ತೇವೆ
ನಮ್ಮ ಜನಪ್ರಿಯ ಚಾಕೊಲೇಟ್‌ ಚಿಪ್‌ ಕುಕೀಗಳನ್ನು ಮಾಡುವ ವಿಧಾನ!

0:00:10.880,0:00:16.700
[ಪರಿಚಯಾತ್ಮಕ ಸಂಗೀತ]

0:00:16.700,0:00:21.480
ಸರಿ, ನಮ್ಮ ಬಳಿ ಈಗ ಎಲ್ಲಾ ಪದಾರ್ಥಗಳೂ ಇವೆ
ಸುಧಾರಿತ ಫೈಲ್‌ ಫಾರ್ಮ್ಯಾಟ್‌ಗಳು

ನಿಮ್ಮ ಶೀರ್ಷಿಕೆಗಳ ಸ್ಟೈಲಿಂಗ್ (ಮಾರ್ಕ್‌ಅಪ್) ಅಥವಾ ಸ್ಥಾನ ನಿರ್ಧಾರದ ಮೇಲೆ ನೀವು ಹೆಚ್ಚಿನ ನಿಯಂತ್ರಣ ಹೊಂದಲು ಬಯಸಿದರೆ ಈ ಫೈಲ್ ಫಾರ್ಮ್ಯಾಟ್‌ಗಳನ್ನು ಬಳಸಿ.

ಫಾರ್ಮ್ಯಾಟ್ ಹೆಸರು ಫೈಲ್ ವಿಸ್ತರಣೆ ಹೆಚ್ಚಿನ ಮಾಹಿತಿ
SAMI (ಸಿಂಕ್ರೊನೈಸ್ಡ್‌ ಆ್ಯಕ್ಸೆಸಿಬಲ್‌ ಮೀಡಿಯಾ ಇಂಟರ್‌ಚೇಂಜ್‌) .smi ಅಥವಾ .sami ಕೇವಲ ಟೈಮ್‌ಕೋಡ್‌ಗಳು, ಪಠ್ಯ, ಮತ್ತು ಸರಳ ಮಾರ್ಕ್‌ಅಪ್‌ (<b>, <i>, <u>, ಮತ್ತು
color= ಒಳಗೆ ಗುಣಲಕ್ಷಣ <font>) ಬೆಂಬಲಿತವಾಗಿವೆ. ಸ್ಥಾನ ನಿರ್ಧಾರ ಬೆಂಬಲಿತವಾಗಿಲ್ಲ.
RealText .rt ಕೇವಲ ಟೈಮ್‌ಕೋಡ್‌ಗಳು, ಪಠ್ಯ, ಮತ್ತು ಸರಳ ಮಾರ್ಕ್‌ಅಪ್‌ (<b>, <i>, <u>, ಮತ್ತು
color= ಒಳಗೆ ಗುಣಲಕ್ಷಣ <font>) ಬೆಂಬಲಿತವಾಗಿವೆ. ಸ್ಥಾನ ನಿರ್ಧಾರ ಬೆಂಬಲಿತವಾಗಿಲ್ಲ.
WebVTT .vtt ಆರಂಭಿಕ ಅನುಷ್ಠಾನದಲ್ಲಿ. ಸ್ಥಾನ ನಿರ್ಧಾರ ಬೆಂಬಲಿತವಾಗಿದೆ, ಆದರೆ <b>, <i>, <u> CSS ವರ್ಗದ ಹೆಸರುಗಳು ಇನ್ನೂ ಪ್ರಮಾಣೀಕರಣಗೊಂಡಿಲ್ಲವಾದ್ದರಿಂದ ಸ್ಟೈಲಿಂಗ್‌ ಇದಕ್ಕೆ ಸೀಮಿತವಾಗಿದೆ.
TTML (ಟೈಮ್ಡ್‌-ಟೆಕ್ಸ್ಟ್‌ ಮಾರ್ಕ್‌ಅಪ್‌ ಲ್ಯಾಂಗ್ವೇಜ್‌) .ttml ಭಾಗಷಃ ಅನಷ್ಠಾನದಲ್ಲಿ. SMPTE-TT ವಿಸ್ತರಣೆಗಳು CEA-608 ಫೀಚರ್‌ಗಳಿಗೆ ಬೆಂಬಲಿತವಾಗಿವೆ. iTunes ಟೈಮ್ಡ್‌ ಟೆಕ್ಸ್ಟ್‌ (iTT) ಫೈಲ್‌ ಫಾರ್ಮ್ಯಾಟ್‌ ಬೆಂಬಲಿತವಾಗಿದೆ; iTT ಎನ್ನುವುದು TTML, ಆವೃತ್ತಿ 1.0ರ ಸಬ್‌ಸೆಟ್‌ ಆಗಿದೆ. ಸ್ಟೈಲಿಂಗ್‌ ಮತ್ತು ಸ್ಥಾನ ನಿರ್ಧಾರಗಳು
ಬೆಂಬಲಿತವಾಗಿವೆ.
DFXP (ಡಿಸ್ಟ್ರಿಬ್ಯೂಶನ್‌ ಫಾರ್ಮ್ಯಾಟ್‌ ಎಕ್ಸ್‌ಚೇಂಜ್‌ ಪ್ರೊಫೈಲ್‌) .ttml ಅಥವಾ .dfxp ಈ ಫೈಲ್ ಪ್ರಕಾರಗಳನ್ನು TTML ಫೈಲ್‌ಗಳೆಂಬುದಾಗಿ ವ್ಯಾಖ್ಯಾನಿಸಲಾಗುತ್ತದೆ. 
ಪ್ರಸಾರದ ಫೈಲ್‌ ಫಾರ್ಮ್ಯಾಟ್‌ಗಳು (ಟಿವಿ ಮತ್ತು ಚಲನಚಿತ್ರಗಳು)

ಈ ಫೈಲ್ ಫಾರ್ಮ್ಯಾಟ್‌ಗಳನ್ನು ಸಾಮಾನ್ಯವಾಗಿ ಪ್ರಸಾರದ ಕಂಟೆಂಟ್‌ಗೆ (ಟಿವಿ ಮತ್ತು ಚಲನಚಿತ್ರಗಳು) ಬಳಸುವ ಉಪಶೀರ್ಷಿಕೆಗಳಲ್ಲಿ ಬಳಸಲಾಗುತ್ತದೆ ಹಾಗೂ CEA-608 ಅಥವಾ EBU-STL ಮಾನದಂಡಗಳನ್ನು ಬೆಂಬಲಿಸುತ್ತವೆ. ಈ ಫೈಲ್‌ನ ಶೀರ್ಷಿಕೆಗಳನ್ನು ಟಿವಿ ಯಲ್ಲಿಯೇ ಇರುವಂತೆ ಪ್ರದರ್ಶಿಸಲು YouTube ಪ್ರಯತ್ನಿಸುತ್ತದೆ — ಅದರಲ್ಲೂ ಅದೇ ಸ್ಟೈಲಿಂಗ್‌, ಬಣ್ಣ, ಮತ್ತು ಸ್ಥಾನ ನಿರ್ಧಾರದ ಸಹಿತ.

ಫಾರ್ಮ್ಯಾಟ್ ಹೆಸರು ಫೈಲ್ ವಿಸ್ತರಣೆ ಹೆಚ್ಚಿನ ಮಾಹಿತಿ
ಸೀನರಿಸ್ಟ್‌ ಕ್ಲೋಸ್ಡ್‌ ಕ್ಯಾಪ್ಶನ್‌ .scc ಈ ಫೈಲ್‌ಗಳು CEA-608 ಡೇಟಾದ ಯಥಾವತ್‌ ಪ್ರಾತಿನಿಧ್ಯವನ್ನು ಹೊಂದಿದ್ದು, CEA-608 ವೈಶಿಷ್ಟ್ಯಗಳನ್ನು ಆಧರಿಸಿದ ಎಲ್ಲಾ ಶೀರ್ಷಿಕೆಗಳಿಗೂ ಇದು ಆದ್ಯತೆಯ ಫಾರ್ಮ್ಯಾಟ್‌ ಆಗಿದೆ.
EBU-STL (ಬೈನರಿ) .stl ಯುರೋಪಿಯನ್ ಬ್ರಾಡ್‌ಕಾಸ್ಟಿಂಗ್ ಯೂನಿಯನ್ ಮಾನದಂಡ.
ಕ್ಯಾಪ್ಶನ್‌ ಸೆಂಟರ್‌ (ಬೈನರಿ) .tds CEA-608 ಫೀಚರ್‌ಗಳನ್ನು ಬೆಂಬಲಿಸುತ್ತದೆ.
ಕ್ಯಾಪ್ಶನ್ಸ್‌ ಇಂಕ್‌. (ಬೈನರಿ) .cin CEA-608 ಫೀಚರ್‌ಗಳನ್ನು ಬೆಂಬಲಿಸುತ್ತದೆ.
ಚೀತಾ (ASCII ಪಠ್ಯ) .asc CEA-608 ಫೀಚರ್‌ಗಳನ್ನು ಬೆಂಬಲಿಸುತ್ತದೆ.
ಚೀತಾ (ಬೈನರಿ) .cap CEA-608 ಫೀಚರ್‌ಗಳನ್ನು ಬೆಂಬಲಿಸುತ್ತದೆ.
NCI (ಬೈನರಿ) .cap CEA-608 ಫೀಚರ್‌ಗಳನ್ನು ಬೆಂಬಲಿಸುತ್ತದೆ.
 
ಸೀನರಿಸ್ಟ್‌ ಕ್ಲೋಸ್ಡ್‌ ಕ್ಯಾಪ್ಶನ್‌ (.scc ಫೈಲ್‌ ವಿಸ್ತರಣೆ) ಫೈಲ್‌ಗಳು ನಮ್ಮ ಆದ್ಯತೆಯ ಫೈಲ್‌ ಫಾರ್ಮ್ಯಾಟ್‌ಗಳಾಗಿವೆ. ಈ ಫೈಲ್‌ಗಳು CEA-608 ಡೇಟಾದ ಯಥಾವತ್‌ ಪ್ರಾತಿನಿಧ್ಯವನ್ನು ಹೊಂದಿದ್ದು, CEA-608 ವೈಶಿಷ್ಟ್ಯಗಳನ್ನು ಆಧರಿಸಿದ ಎಲ್ಲಾ ಶೀರ್ಷಿಕೆಗಳಿಗೂ ಇದು ಆದ್ಯತೆಯ ಫಾರ್ಮ್ಯಾಟ್‌ ಆಗಿದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6133434791906093433
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false