YouTube Studio ಡ್ಯಾಶ್‌ಬೋರ್ಡ್ ಬಳಸಿ

ನಿಮ್ಮ ಚಾನಲ್‌ನ ಅನಾಲಿಟಿಕ್ಸ್, ಕಾಮೆಂಟ್‌ಗಳು ಹಾಗೂ ಮುಂತಾದವುಗಳ ಕುರಿತಾದ ಅವಲೋಕನವನ್ನು ಪಡೆಯಲು YouTube Studio ಡ್ಯಾಶ್‌ಬೋರ್ಡ್ ಬಳಸಿ.

ನಿಮ್ಮ ಡ್ಯಾಶ್‌ಬೋರ್ಡ್ ಅನ್ನು ವೀಕ್ಷಿಸಿ

ನಿಮ್ಮ ಡ್ಯಾಶ್‌ಬೋರ್ಡ್ ತೆರೆಯಲು, ಹೀಗೆ ಮಾಡಿ:

  • YouTube Studio ಗೆ ನೇರವಾಗಿ ಹೋಗಿ.
  • YouTube ನಲ್ಲಿ ಎಲ್ಲಿ ಬೇಕಾದರೂ ನಿಮ್ಮ ಪ್ರೊಫೈಲ್ ಚಿತ್ರವನ್ನು ಆಯ್ಕೆಮಾಡಿ ನಂತರ YouTube Studio.

ನಿಮ್ಮ ಡ್ಯಾಶ್‌ಬೋರ್ಡ್‌ಗೆ ನ್ಯಾವಿಗೇಟ್ ಮಾಡಿ

ಡ್ಯಾಶ್‌ಬೋರ್ಡ್‌ನಲ್ಲಿ, ನೀವು ಕೆಲವು ವಿಭಿನ್ನ ಕಾರ್ಡ್‌ಗಳನ್ನು ನೋಡುತ್ತೀರಿ.

  • ಚಾನಲ್ ಉಲ್ಲಂಘನೆಗಳು: ಸಮುದಾಯ ಮಾರ್ಗಸೂಚಿಗಳ ಎಚ್ಚರಿಕೆಗಳು, ಸ್ಟ್ರೈಕ್‌ಗಳು ಮತ್ತು ಮೇಲ್ಮನವಿ ಕುರಿತು ನಿರ್ಧಾರಗಳು.
  • ಇತ್ತೀಚಿನ ಕಂಟೆಂಟ್ ಕಾರ್ಯಕ್ಷಮತೆ: ನಿಮ್ಮ ಇತ್ತೀಚಿನ ವೀಡಿಯೊ ಅಥವಾ ಲೈವ್ ಸ್ಟ್ರೀಮ್ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಸ್ನ್ಯಾಪ್‌ಶಾಟ್. ನಿಮ್ಮ ರ‍್ಯಾಂಕಿಂಗ್ ಡೇಟಾವನ್ನು ಮರೆಮಾಡಲು ಈ ಕಾರ್ಡ್ ಅನ್ನು ನೀವು ಕುಗ್ಗಿಸಬಹುದು. ಕುಗ್ಗಿಸಿದ ಬಳಿಕ, ನೀವು ಅದನ್ನು ವಿಸ್ತೃತಗೊಳಿಸುವವರೆಗೂ ಅದು ಹಾಗೆಯೇ ಇರುತ್ತದೆ.
  • ಪ್ರಕಟಿಸಿದ ವೀಡಿಯೊಗಳು: ನಿಮ್ಮ ಇತ್ತೀಚೆಗೆ ಪ್ರಕಟಿಸಿದ ವೀಡಿಯೊಗಳ ಸ್ನ್ಯಾಪ್‌ಶಾಟ್.
  • ಇತ್ತೀಚಿನ ಪೋಸ್ಟ್: ನಿಮ್ಮ ಇತ್ತೀಚಿನ ಸಮುದಾಯ ಪೋಸ್ಟ್‌ನಲ್ಲಿ ನಿಮ್ಮ ಪ್ರೇಕ್ಷಕರು ಎಷ್ಟು ಚೆನ್ನಾಗಿ ತೊಡಗಿಸಿಕೊಂಡಿದ್ದಾರೆ ಎಂಬುದರ ಸ್ನ್ಯಾಪ್‌ಶಾಟ್. ನೀವು ಸಮುದಾಯ ಟ್ಯಾಬ್‌ಗೆ ಅರ್ಹರಾಗಿದ್ದರೆ ಮಾತ್ರ ನೀವು ಇದನ್ನು ನೋಡುತ್ತೀರಿ.
  • ಪ್ರಮುಖ ನೋಟಿಫಿಕೇಶನ್‌ಗಳು: ನಿಮ್ಮ ಚಾನಲ್ ಮತ್ತು ವೀಡಿಯೊಗಳ ಕುರಿತು ಪ್ರಮುಖ ಸಂದೇಶಗಳು. ಕೆಳಗೆ ಇನ್ನಷ್ಟು ಓದಿ.
  • ಹೊಸ ಸಾಧನೆ: ನಿಮ್ಮ ವೀಕ್ಷಣೆ ಸಮಯ, ಸಬ್‌ಸ್ಕ್ರೈಬರ್‌ಗಳು ಮತ್ತು ವೀಕ್ಷಣೆಗಳ ಮೈಲಿಗಲ್ಲುಗಳ ಕುರಿತಾದ ಸ್ನ್ಯಾಪ್‌ಶಾಟ್.
  • ಚಾನಲ್ ಅನಾಲಿಟಿಕ್ಸ್: ಕಳೆದ 28 ದಿನಗಳಲ್ಲಿ ನಿಮ್ಮ ಚಾನಲ್‌ನ ವೀಕ್ಷಣೆಯ ಸಮಯ, ವೀಕ್ಷಣೆಗಳು ಮತ್ತು ಸಬ್‌ಸ್ಕ್ರೈಬರ್‌ಗಳ ಕುರಿತಾದ ತ್ವರಿತ ಅವಲೋಕನ. ನಿಮ್ಮ ಪ್ರಸ್ತುತ ಸಬ್‌ಸ್ಕ್ರೈಬರ್‌ಗಳು ಮತ್ತು ಟಾಪ್ ವೀಡಿಯೊಗಳನ್ನು ಸಹ ನೀವು ನೋಡಬಹುದು.
  • ಇತ್ತೀಚಿನ ಕಾಮೆಂಟ್‌ಗಳು: ನೀವು ಪ್ರತಿಕ್ರಿಯಿಸದ ಇತ್ತೀಚಿನ ಕಾಮೆಂಟ್‌ಗಳ ಸ್ನ್ಯಾಪ್‌ಶಾಟ್.
  • ಇತ್ತೀಚಿನ ಚಟುವಟಿಕೆ: ನಿಮ್ಮ ಚಾನಲ್‌ನ ಇತ್ತೀಚಿನ ಸಬ್‌ಸ್ಕ್ರೈಬರ್‌ಗಳು ಮತ್ತು ಸದಸ್ಯರ ಪಟ್ಟಿ.
  • ಸುದ್ದಿ: YouTube ನಿಂದ ಇತ್ತೀಚಿನ ಅಪ್‌ಡೇಟ್‌ಗಳು.
  • ಕ್ರಿಯೇಟರ್ ಇನ್‌ಸೈಡರ್: ಕ್ರಿಯೇಟರ್ ಇನ್‌ಸೈಡರ್ ಚಾನಲ್‌ನಿಂದ ಇತ್ತೀಚಿನ ವೀಡಿಯೊಗಳು.
  • Studio ದಲ್ಲಿ ಹೊಸತೇನಿದೆ: ರಚನೆಕಾರರ ಪರಿಕರಗಳು ಮತ್ತು ಫೀಚರ್‌ಗಳಲ್ಲಾಗಿರುವ ಇತ್ತೀಚಿನ ಅಪ್‌ಡೇಟ್‌ಗಳು.
  • ನಿಮಗಾಗಿ ಕೆಲವು ಪರಿಕಲ್ಪನೆಗಳು: ನಿಮ್ಮ ಚಾನಲ್‌ಗಾಗಿ ವೈಯಕ್ತಿಕಗೊಳಿಸಿದ ಸಲಹೆಗಳು ಮತ್ತು ಉತ್ತಮ ಅಭ್ಯಾಸಗಳು.
  • ಇತ್ತೀಚಿನ ಸಬ್‌ಸ್ಕ್ರೈಬರ್‌ಗಳು: ನಿಮ್ಮ ಚಾನಲ್‌ನ ಇತ್ತೀಚಿನ ಸಬ್‌ಸ್ಕ್ರೈಬರ್‌ಗಳ ಪಟ್ಟಿ. ನೀವು ಸಮಯದ ಚೌಕಟ್ಟನ್ನು ಆಯ್ಕೆ ಮಾಡಬಹುದು ಮತ್ತು ಸಬ್‌ಸ್ಕ್ರೈಬರ್ ಸಂಖ್ಯೆಯ ಪ್ರಕಾರವಾಗಿ ಪಟ್ಟಿಯನ್ನು ವಿಂಗಡಿಸಬಹುದು.
  • ಗೊತ್ತಿರುವ ಸಮಸ್ಯೆಗಳು: ಬಹಳಷ್ಟು ಚಾನಲ್‌ಗಳು ಅಥವಾ ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿರುವ ಪ್ರಚಲಿತ YouTube ಘಟನೆಗಳು.
ಗಮನಿಸಿ: ನಿಮ್ಮ ಇತ್ತೀಚಿನ ಚಾನಲ್ ಚಟುವಟಿಕೆಯನ್ನು ಆಧರಿಸಿ ಕೆಲವು ಕಾರ್ಡ್‌ಗಳು ಗೋಚರಿಸದೇ ಇರಬಹುದು.

YouTube Studio (ಡೆಸ್ಕ್‌ಟಾಪ್) ಅನ್ನು‌ ನ್ಯಾವಿಗೇಟ್ ಮಾಡುವುದು ಹೇಗೆಂದು ತಿಳಿದುಕೊಳ್ಳಿ

ಪ್ರಮುಖ ನೋಟಿಫಿಕೇಶನ್‌ಗಳನ್ನು ಅರ್ಥಮಾಡಿಕೊಳ್ಳಿ

ನಿಮ್ಮ ಚಾನಲ್ ಡ್ಯಾಶ್‌ಬೋರ್ಡ್‌ನಲ್ಲಿರುವ ಪ್ರಮುಖ ನೋಟಿಫಿಕೇಶನ್‌ಗಳು ಕಾರ್ಡ್‌ನಲ್ಲಿ ಈ ಕೆಳಗಿನ ಪ್ರಕಾರದ ನೋಟಿಫಿಕೇಶನ್‌ಗಳು ಪ್ರಸ್ತುತವಾಗಿ ಗೋಚರಿಸಬಹುದು. ಭವಿಷ್ಯದಲ್ಲಿ ಈ ಕಾರ್ಡ್‌ಗೆ ಹೆಚ್ಚುವರಿ ಪ್ರಕಾರದ ನೋಟಿಫಿಕೇಶನ್‌ಗಳನ್ನು ಸೇರಿಸಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ.

  • ಮಾನಿಟೈಸೇಶನ್: ನಿಮ್ಮ ಚಾನಲ್ ಅನ್ನು ಅನುಮೋದಿಸಲಾಗಿದ್ದರೂ, ಮಾನಿಟೈಸೇಶನ್‌ಗಾಗಿ ಇನ್ನು ಮುಂದೆ ಅರ್ಹತೆ ಹೊಂದಿರುವುದಿಲ್ಲ ಅಥವಾ ಅನುಮೋದಿಸಲಾಗುವುದಿಲ್ಲ.
  • ಕೃತಿಸ್ವಾಮ್ಯ: ನೀವು ಕೃತಿಸ್ವಾಮ್ಯ ಸ್ಟ್ರೈಕ್ ಅಥವಾ ಕೃತಿಸ್ವಾಮ್ಯ ಕ್ಲೈಮ್ ಅನ್ನು ಸ್ವೀಕರಿಸಿದರೆ.

ಪ್ರಮುಖ ನೋಟಿಫಿಕೇಶನ್‌ಗಳು ಕಾರ್ಡ್‌ನಲ್ಲಿ ಈ ಕೆಳಗಿನ ಪ್ರಕಾರದ ನೋಟಿಫಿಕೇಶನ್‌ಗಳನ್ನು ತೋರಿಸಲಾಗುವುದಿಲ್ಲ. ನಾವು ಭವಿಷ್ಯದಲ್ಲಿ ಕಾರ್ಡ್‌ನಲ್ಲಿ, ಈ ಪ್ರಕಾರದ ನೋಟಿಫಿಕೇಶನ್‌ಗಳನ್ನು ಸೇರಿಸಲು ಕಾರ್ಯನಿರ್ವಹಿಸುತ್ತಿದ್ದೇವೆ ಈ ವಿಚಾರಗಳ ಕುರಿತಾದ ಅಪ್‌ಡೇಟ್‌ಗಳಿಗಾಗಿ ನಿಮ್ಮ ಇಮೇಲ್ ಅನ್ನು ಪರಿಶೀಲಿಸಲು ಮರೆಯದಿರಿ:

  • ನಿಮ್ಮ YouTube ಗಾಗಿ AdSense ಖಾತೆಯ ಕುರಿತು ನೋಟಿಫಿಕೇಶನ್‌ಗಳು.
  • ಜಾಹೀರಾತುದಾರ ಸ್ನೇಹಪರತೆಯ ಹಸ್ತಚಾಲಿತ ವಿಮರ್ಶೆ ಫಲಿತಾಂಶಗಳು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5245062055583567351
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false