ಈವೆಂಟ್ ಅನ್ನು ಪ್ರಚಾರ ಮಾಡುವುದರಿಂದ ನಿಮಗೆ ದೊಡ್ಡ ಮಟ್ಟದ ಪ್ರೇಕ್ಷಕರನ್ನು ಆಕರ್ಷಿಸಲು ಸಹಾಯವಾಗಬಹುದು. ಪ್ರಾರಂಭಿಸುವುದಕ್ಕಾಗಿ ನಿಮಗೆ ಸಹಾಯ ಮಾಡಲು ಕೆಲವು ತ್ವರಿತ ಟಿಪ್ಸ್ ಇಲ್ಲಿದೆ.
ಈವೆಂಟ್ಗೂ ಮೊದಲು
- ಚಾನಲ್ ಟ್ರೇಲರ್ ಅಥವಾ ಟೀಸರ್ ವೀಡಿಯೊ ರಚಿಸಿ ಮತ್ತು ಈವೆಂಟ್ ಅನ್ನು ಪ್ರಚಾರ ಮಾಡಲು ಸಹಾಯ ಮಾಡಿ.
- ನೀವು ನೇರ ಪ್ರಸಾರಕ್ಕೆ ಹೋಗುವುದಕ್ಕೂ ಕನಿಷ್ಠ 48 ಗಂಟೆಗಳ ಮೊದಲು ನಿಮ್ಮ ಸ್ಟ್ರೀಮಿಂಗ್ ಲಿಂಕ್ ಅನ್ನು ಹಂಚಿಕೊಳ್ಳಿ.
- ಸುಲಭವಾಗಿ ಹಂಚಿಕೊಳ್ಳುವುದಕ್ಕಾಗಿ ನಿಮ್ಮ ಚಾನಲ್ ಅನ್ನು ನಿಮ್ಮ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಕನೆಕ್ಟ್ ಮಾಡಿ.
- ನಿಮ್ಮ ವೆಬ್ಸೈಟ್ನಲ್ಲಿ URL ಅನ್ನು ಎಂಬೆಟ್ ಮಾಡಿ ಮತ್ತು ನಿಮ್ಮ ಕಂಟೆಂಟ್ ಅನ್ನು ಪ್ರದರ್ಶಿಸಲು ಬಯಸಬಹುದಾದ ಬ್ಲಾಗ್ಗಳಿಗೆ ಲಿಂಕ್ಗಳನ್ನು ಕಳುಹಿಸಿ.
- ನಿಮ್ಮ ಚಾನಲ್ನಲ್ಲಿ ಮುಂಬರುವ ಮತ್ತು ಲೈವ್ ಈವೆಂಟ್ಗಳನ್ನು ಪ್ರದರ್ಶಿಸುವುದಕ್ಕಾಗಿ ನೇರ ಪ್ರಸಾರದ ವಿಭಾಗ ರಚಿಸಿ.
- ಸಂಯೋಜಿತ ವೆಬ್ಸೈಟ್ ಸೇರಿಸಿ. ಹುಡುಕಾಟ ಫಲಿತಾಂಶಗಳ ಗುಣಮಟ್ಟವನ್ನು ಸುಧಾರಿಸಲು ಈ ವೆಬ್ಸೈಟ್ ನಮಗೆ ಸಹಾಯ ಮಾಡುತ್ತದೆ ಮತ್ತು YouTube ನಲ್ಲಿ ನಿಮ್ಮ ಬ್ರ್ಯಾಂಡ್ನ ಅಧಿಕೃತ ಪ್ರಾತಿನಿಧ್ಯವಾಗಿ ನಿಮ್ಮ ಚಾನಲ್ ಅನ್ನು ಪರಿಶೀಲಿಸುತ್ತದೆ.
- ನಿಮ್ಮ ಚಾನಲ್ ಮತ್ತು ವೀಡಿಯೊಗಳಿಗೆ ಆಪ್ಟಿಮೈಸೇಶನ್ ಕೌಶಲ್ಯಗಳನ್ನು ಅನ್ವಯಿಸಿ.
ಈವೆಂಟ್ ಸಂದರ್ಭದಲ್ಲಿ
- ಈವೆಂಟ್ ಇನ್ನೂ ನೇರ ಪ್ರಸಾರದಲ್ಲಿರುವಾಗ ಅದರ ಹೈಲೈಟ್ ಕ್ಲಿಪ್ಗಳನ್ನು ರಚಿಸಿ.
- ಗಮನಿಸಿ: ಸಬ್ಸ್ಕ್ರೈಬರ್ಗಳು ತಮ್ಮ ಹೋಮ್ ಪೇಜ್ ಫೀಡ್ನಲ್ಲಿ ನಿಮ್ಮ ಸಾರ್ವಜನಿಕ ಈವೆಂಟ್ಗಳ ನೋಟಿಫಿಕೇಶನ್ ಅನ್ನು ಪಡೆಯಬಹುದು.
- ಗಮನಿಸಿ: ಸಬ್ಸ್ಕ್ರೈಬರ್ಗಳು ನೇರ ಪ್ರಸಾರದ ಸ್ಟ್ರೀಮ್ ಅನ್ನು ಮುಂದೆ ಯಾವುದನ್ನು ನೋಡಬಹುದು ಪ್ರದೇಶದಲ್ಲಿ ಕಾಣುತ್ತಾರೆ.
- ಈವೆಂಟ್ ಹೆಸರು, ದಿನಾಂಕ ಮತ್ತು ಸಮಯವನ್ನು ಸೇರಿಸಿಕೊಳ್ಳುವುದಕ್ಕಾಗಿ ನಿಮ್ಮ ಬ್ಯಾನರ್ ಚಿತ್ರವನ್ನು ಸಹ ನೀವು ಅಪ್ಡೇಟ್ ಮಾಡಬಹುದು.
ಈವೆಂಟ್ ನಂತರ
- ಪೂರ್ಣಗೊಂಡ ನಂತರ ತಕ್ಷಣವೇ ನೇರ ಪ್ರಸಾರದ ಈವೆಂಟ್ನ ಆರ್ಕೈವ್ ಅನ್ನು ಪೋಸ್ಟ್ ಮಾಡಿ.
- ಆರ್ಕೈವ್ ಮತ್ತು ಹೈಲೈಟ್ ಕ್ಲಿಪ್ಗಳನ್ನು ಪ್ಲೇಪಟ್ಟಿಗಳಾಗಿ ಆಯೋಜಿಸಿ.