ವಿಡಿಯೋ ವಿತರಣೆ ಬದಲಾಯಿಸಿ

ಡಿಸ್ಟ್ರಿಬ್ಯೂಷನ್ ಸೆಟ್ಟಿಂಗ್ ನೊಂದಿಗೆ ನಿಮ್ಮ ವಿಡಿಯೋ ಅನ್ನು ಎಲ್ಲಾ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಾಗಿಸಬೇಕೆ ಅಥವಾ ಮಾನಿಟೈಸ್ ಆಗುವ ಪ್ಲಾಟ್ ಫಾರ್ಮ್ ಗಳಲ್ಲಿ ಮಾತ್ರ ಲಭ್ಯವಾಗಿಸಬೇಕೆ ಎಂಬುದನ್ನು ಆಯ್ಕೆ ಮಾಡಿ. ಮಾನಿಟೈಸ್ ಪಾಲುದಾರರಲ್ಲದ ಬಳಕೆದಾರರಿಗೆ ಡಿಸ್ಟ್ರಿಬ್ಯೂಷನ್ ಸೆಟ್ಟಿಂಗ್ ಗಳನ್ನು ಬದಲಿಸಲು ಸಾಧ್ಯವಾಗುವುದಿಲ್ಲ.

ವಿಡಿಯೋ ಡಿಸ್ಟ್ರಬ್ಯೂಷನ್ ಅನ್ನು ಹೊಂದಿಸಿ.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ವಿಷಯ  ಅನ್ನು ಆಯ್ಕೆ ಮಾಡಿ ನಂತರ ನೀವು ಎಡಿಟ್ ಮಾಡಲು ಬಯಸುವ ವಿಡಿಯೋ ಅನ್ನು ಆಯ್ಕೆ ಮಾಡಿ.
  3. ಮೆನುವಿನ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ. ನಂತರ ಹೆಚ್ಚು ತೋರಿಸಿಕ್ಲಿಕ್ ಮಾಡಿ.
  4. ಡಿಸ್ಟ್ರಿಬ್ಯೂಷನ್ ಬಾಕ್ಸ್ ಅಡಿಯಲ್ಲಿನ “ಪರವಾನಗಿ ಮತ್ತು ಡಿಸ್ಟ್ರಿಬ್ಯೂಷನ್” ಅಡಿಯಲ್ಲಿ, “ಎಲ್ಲಾ ಕಡೆ” ಮತ್ತು “ಈ ವಿಡಿಯೋವನ್ನು ಕೇವಲ ಮಾನಿಟೈಸ್ ಮಾಡಲಾದ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಾಗಿಸಿ” ನಡುವೆ ಆಯ್ಕೆ ಮಾಡಿ
  5. ಉಳಿಸಿ ಅನ್ನು ಆಯ್ಕೆ ಮಾಡಿ.

ಹಕ್ಕು ಸ್ಥಾಪನೆಯೊಂದಿಗಿನ ವಿಡಿಯೋಗಳು

ವಿಡಿಯೋಗೆ ಅನ್ವಯಿಸುವ ಡಿಸ್ಟ್ರಿಬ್ಯೂಷನ್ ಸೆಟ್ಟಿಂಗ್ ಗಳು ವಿಡಿಯೋ ಹಕ್ಕು ಸ್ಥಾಪನೆಯ ವಿಷಯವನ್ನು ಆಧರಿಸಿರುತ್ತದೆ.

  • ವೀಡಿಯೊ ಕ್ಲೇಮ್‌ ಮಾಡಲಾದ ವೀಡಿಯೊ ಆಗಿದ್ದರೆ, ಕ್ಲೇಮುದಾರರ ಡಿಸ್ಟ್ರಿಬ್ಯೂಷನ್ ಸೆಟ್ಟಿಂಗ್ ಅನ್ವಯಿಸುತ್ತದೆ, ಬಳಕೆದಾರರದ್ದಲ್ಲ.
  • ವೀಡಿಯೊವು ಆ ವೀಡಿಯೊದಲ್ಲಿ ಒಳಗೊಂಡಿರುವ ಸಂಗೀತದ ಹಕ್ಕು ಸ್ಥಾಪನೆ ಹೊಂದಿರುವ ವೀಡಿಯೊವಾಗಿದ್ದರೆ, ಕ್ಲೇಮುದಾರರ ಡಿಸ್ಟ್ರಿಬ್ಯೂಷನ್ ಸೆಟ್ಟಿಂಗ್ ವೀಡಿಯೊಗೆ ಅನ್ವಯಿಸುತ್ತದೆ, ರಚನೆಕಾರರಲ್ಲ.

ಮಾನಿಟೈಸ್ ಆಗುವ ಪ್ಲಾಟ್ ಫಾರ್ಮ್ ಗಳು ಮತ್ತು ಎಲ್ಲಾ ಪ್ಲಾಟ್ ಫಾರ್ಮ್ ಗಳ ನಡುವಿನ ವ್ಯತ್ಯಾಸ

ಈ ಕೆಳಗಿನ ಪ್ಲಾಟ್ ಫಾರ್ಮ್ ಗಳು ನಾವು ಮಾನಿಟೈಸ್ ಆಗಿದೆ ಎಂದು ಪರಿಗಣಿಸುವ ಪ್ಲಾಟ್ ಫಾರ್ಮ್ ಗಳಿಗೆ ಉದಾಹರಣೆಯಾಗಿವೆ.

  • www.youtube.com
  • YouTube ಅಪ್ಲಿಕೇಶನ್
  • ಎಕ್ಸ್ ಬಾಕ್ಸ್, Android TV, ಪ್ಲೇಸ್ಟೇಷನ್ ಮತ್ತು ChromeCast ಅನ್ನು ಒಳಗೊಂಡಿರುವ ಟಿವಿಗಳಲ್ಲಿ YouTube ಆ್ಯಪ್
  • ಬಹುತೇಕ ಸ್ಮಾರ್ಟ್ ಫೋನ್ ಗಳಿಂದ ಆ್ಯಕ್ಸೆಸ್ ಹೊಂದಬಹುದಾದ m.youtube.com
  • Apple ಟಿವಿಯಲ್ಲಿ YouTube ಆ್ಯಪ್

ಮೇಲೆ ಉಲ್ಲೇಖಿಸಲಾಗಿರುವ ಮಾನಿಟೈಸ್ ಆಗಿರುವ ಪ್ಲಾಟ್‌ಫಾರ್ಮ್‌‌ಗಳಿಗೆ ಹೆಚ್ಚುವರಿಯಾಗಿ, "ಎಲ್ಲಾ ಪ್ಲಾಟ್‌ಫಾರ್ಮ್‌ಗಳು"ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ, ಆದರೆ ಅವುಗಳಿಗೆ ಸೀಮಿತವಾಗಿಲ್ಲ:

  • iOS 5 ಮತ್ತು ಕೆಳಗಿನವುಗಳಲ್ಲಿ ಪೂರ್ವ ಇನ್ ಸ್ಟಾಲ್ ಆಗಿರುವ YouTube ಆ್ಯಪ್
  • ಫೀಚರ್ ಫೋನ್ ಗಳು ಮತ್ತು ಟಿವಿಗಳಲ್ಲಿ YouTube ಪರಂಪರಾನುಗತ ಆ್ಯಪ್ ಗಳು
  • ಫೀಚರ್ ಫೋನ್ ಗಳಿಂದ ಆ್ಯಕ್ಸೆಸ್ ಮಾಡಬಹುದಾದ m.youtube.com

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1273163523218842770
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false