ಸ್ಕ್ರೀನ್ ರೀಡರ್ ಜೊತೆಗೆ YouTube ಬಳಸಿ

ಈ ಪುಟದಲ್ಲಿರುವ ಸಲಹೆಗಳನ್ನು ಬಳಸಿಕೊಂಡು ಕಂಪ್ಯೂಟರ್ ಸ್ಕ್ರೀನ್ ಜೊತೆಗೆ YouTube ನ ಅತ್ಯುತ್ತಮ ಅನುಭವವನ್ನು ಪಡೆಯಿರಿ. ನೀವು YouTube ಬಳಸುವಾಗ ಕೀಬೋರ್ಡ್ ಶಾರ್ಟ್‌ಕಟ್‌ಗಳು ಸ್ವಯಂಚಾಲಿತವಾಗಿ ಆನ್ ಆಗಿರುತ್ತವೆ.

YouTube ಹುಡುಕಾಟ ಮತ್ತು ಹುಡುಕಾಟದ ಫಲಿತಾಂಶಗಳು

YouTube ವೀಡಿಯೊಗಳಿಗಾಗಿ ಹುಡುಕಿ

  1. YouTube ಗೆ ಹೋಗಿ.
  2. / ಕೀಬೋರ್ಡ್ ಕೀ ಬಳಸಿಕೊಂಡು ಪುಟದ ಮೇಲ್ಭಾಗದಲ್ಲಿರುವ ಹುಡುಕಾಟ ಪೆಟ್ಟಿಗೆ ಎಂಬಲ್ಲಿಗೆ ಹೋಗಿ. 
  3. ಹುಡುಕಾಟ ಪದವನ್ನು ನಮೂದಿಸಿ ಮತ್ತು Enter ಒತ್ತಿರಿ.

ಹುಡುಕಾಟ ಫಲಿತಾಂಶಗಳು

ಹುಡುಕಾಟ ಫಲಿತಾಂಶಗಳು ಪುಟದಲ್ಲಿ "ನಿಮ್ಮ ಮಾತಿನ ಅರ್ಥ" ವಿಭಾಗವನ್ನು ಕಾಣಬಹುದಾಗಿದ್ದು, ನೀವು ಯಾವುದೇ ಪದಗಳನ್ನು ತಪ್ಪಾಗಿ ಟೈಪ್ ಮಾಡಿದರೆ ಅದು ಸರಿಯಾದ ಪದಗಳನ್ನು ಸೂಚಿಸುತ್ತದೆ. ಪ್ರತಿಯೊಂದು ಹುಡುಕಾಟ ಪದಗಳು ಈ ಕೆಳಗಿನ ಮಾಹಿತಿಯನ್ನು ಹೊಂದಿವೆ:

  • ವೀಡಿಯೊದ ಶೀರ್ಷಿಕೆ  -- ಆಯ್ಕೆ ಮಾಡಿದರೆ ವೀಡಿಯೊ ಪ್ಲೇ ಆಗುತ್ತದೆ. 
  • ವೀಡಿಯೊವನ್ನು ಪೋಸ್ಟ್ ಮಾಡಿರುವ ಚಾನಲ್‌ನ ಹೆಸರು.
  • ವೀಡಿಯೊವನ್ನು ಯಾವಾಗ ಅಪ್‌ಲೋಡ್ ಮಾಡಲಾಗಿದೆ ಮತ್ತು ಅದನ್ನು ಎಷ್ಟು ಬಾರಿ ನೋಡಲಾಗಿದೆ.
  • ವೀಡಿಯೊ ವಿವರಣೆಯ ಒಂದು ತುಣುಕು.

YouTube ಪ್ಲೇಯರ್

ನೀವು ವೀಡಿಯೊವನ್ನು ಕ್ಲಿಕ್ ಮಾಡಿದಾಗ, YouTube ವೀಡಿಯೊ ಪ್ಲೇಯರ್‌ಗೆ ಪ್ರವೇಶಿಸುತ್ತೀರಿ. ನೀವು ಪ್ಲೇಯರ್‌ನಲ್ಲಿ ನೋಡುವ ವಿಭಾಗಗಳು ಹೀಗಿವೆ:

ವಿಭಾಗದ ಶಿರೋನಾಮೆಗಳು

ವೀಡಿಯೊ ಶೀರ್ಷಿಕೆಗಾಗಿ H1

ಪ್ಲೇಯರ್‌ನಲ್ಲಿ

  • ಸೀಕ್ ಸ್ಲೈಡರ್: ವೀಡಿಯೊವನ್ನು ಫಾಸ್ಟ್ ಫಾರ್ವರ್ಡ್ ಮಾಡಲು ಅಥವಾ ರಿವೈಂಡ್ ಮಾಡಲು ಸೀಕ್ ಸ್ಲೈಡರ್ ಅನ್ನು ಬಳಸಲಾಗುತ್ತದೆ. ಸೀಕ್ ಸ್ಲೈಡರ್ ಅನ್ನು ಬಳಸಲು, ಮೊದಲು ವರ್ಚುವಲ್ ಕರ್ಸರ್ ಅನ್ನು ಆಫ್ ಮಾಡಿ, ತದನಂತರ ಸ್ಲೈಡರ್‌ನ ಟ್ಯಾಬ್ ಮೇಲೆ ಟ್ಯಾಬ್ ಮಾಡಿ. ವೀಡಿಯೊವನ್ನು ಫಾಸ್ಟ್ ಫಾರ್ವರ್ಡ್/ರಿವೈಂಡ್ ಮಾಡಲು ಎಡ/ಬಲ ಅಥವಾ ಮೇಲೆ /ಕೆಳಗೆ ಬಾಣದ ಗುರುತಿನ ಕೀಲಿಗಳನ್ನು ಬಳಸಿ.
  • ಪ್ಲೇ/ವಿರಾಮ:ವೀಡಿಯೊದ ಸ್ಥಿತಿಯನ್ನು ಆಧರಿಸಿ ಬಟನ್ ಪಠ್ಯವು ಬದಲಾಗುತ್ತದೆ. ವೀಡಿಯೊವನ್ನು ಮರುಪ್ಲೇ ಮಾಡಲು, ವೀಡಿಯೊ ಪ್ಲೇ ನಿಲ್ಲಿಸಿದ ನಂತರ ಪ್ಲೇ ಅಥವಾ K ಬಟನ್ ಅನ್ನು ಆಯ್ಕೆಮಾಡಿ.
  • ಮುಂದಿನದು: ಈ ಬಟನ್, ಮುಂದಿನ ವೀಡಿಯೊವನ್ನು ಸ್ಕಿಪ್ ಮಾಡಲು ನಿಮಗೆ ಅನುಮತಿಸುತ್ತದೆ. ನೀವು ಮೀಡಿಯಾ ಬಟನ್‌ಗಳನ್ನು ಹೊಂದಿಲ್ಲದಿದ್ದರೆ, ನೀವು Shift+N ಬಳಸಿಕೊಂಡು ಮುಂದಿನ ವೀಡಿಯೊವನ್ನು ಸಹ ಸ್ಕಿಪ್ ಮಾಡಬಹುದು. 
  • ಮ್ಯೂಟ್/ಅನ್‌ಮ್ಯೂಟ್: ವೀಡಿಯೊ ಮ್ಯೂಟ್ ಆಗಿದೆಯೇ ಅಥವಾ ಆಗಿಲ್ಲವೇ ಎಂಬುದನ್ನು ಆಧರಿಸಿ ಈ ಬಟನ್ ಬದಲಾಗುತ್ತದೆ.
  • ವಾಲ್ಯೂಮ್ ಸ್ಲೈಡರ್: ವಾಲ್ಯೂಮ್ ಅನ್ನು ಹೆಚ್ಚಿಸಲು/ಕಡಿಮೆ ಮಾಡಲು ಎಡ/ಬಲ ಅಥವಾ ಮೇಲೆ/ಕೆಳಗೆ ಬಾಣದ ಗುರುತಿನ ಕೀಗಳನ್ನು ಬಳಸಿ.
  • ಪ್ಲೇ ಆದ ಅವಧಿ/ಒಟ್ಟು ಅವಧಿ: ಈ ವಿಭಾಗವು ವೀಡಿಯೊದ ಒಟ್ಟು ಅವಧಿಯಲ್ಲಿ ಪ್ಲೇ ಆದ ಅವಧಿಯನ್ನು ತೋರಿಸುತ್ತದೆ. ವೀಡಿಯೊ ಈಗಾಗಲೇ ಎಷ್ಟು ಸಮಯ ಪ್ಲೇ ಆಗಿದೆ ಮತ್ತು ಇನ್ನೂ ಎಷ್ಟು ಸಮಯ ಪ್ಲೇ ಆಗಲು ಬಾಕಿ ಉಳಿದಿದೆ ಎಂಬುದನ್ನು ತೋರಿಸುತ್ತದೆ. 
  • CC (ಉಪಶೀರ್ಷಿಕೆಗಳು): ವೀಡಿಯೊದಲ್ಲಿ ಉಪಶೀರ್ಷಿಕೆಗಳಿದ್ದರೆ, C ಶಾರ್ಟ್‌ಕಟ್ ಮೂಲಕ ನೀವು ಅವುಗಳನ್ನು ಸಕ್ರಿಯಗೊಳಿಸಬಹುದು. ಉಪಶೀರ್ಷಿಕೆಗಳನ್ನು ವೀಡಿಯೊದ ಕೆಳಭಾಗದಲ್ಲಿ ಕಾಣಬಹುದಾಗಿದೆ. ಉಪಶೀರ್ಷಿಕೆಗಳನ್ನು ಆಫ್ ಮಾಡಲು, C ಶಾರ್ಟ್‌ಕಟ್ ಅನ್ನು ಮತ್ತೆ ಬಳಸಿ.

ಸೆಟ್ಟಿಂಗ್‌ಗಳು 

ಈ ಸೆಟ್ಟಿಂಗ್‌ಗಳು ಬಟನ್ ಒಂದು ಮೆನುವನ್ನು ತೆರೆಯಲಿದ್ದು, ಅದು ಈ ಕೆಳಗಿನ ಬದಲಾವಣೆಗಳನ್ನು ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತದೆ:

  • ಟಿಪ್ಪಣಿಗಳು: ಟಿಪ್ಪಣಿಗಳನ್ನು ಆನ್ ಅಥವಾ ಆಫ್ ಮಾಡಿ.
  • ಪ್ಲೇಬ್ಯಾಕ್ ವೇಗ: ವೀಡಿಯೊದ ವೇಗವನ್ನು ಸಾಮಾನ್ಯ, ವೇಗಭರಿತ ಅಥವಾ ನಿಧಾನಗತಿ ಎಂಬುದಾಗಿ ಆಯ್ಕೆಮಾಡಿ.
  • ಉಪಶೀರ್ಷಿಕೆಗಳು/CC: ಉಪಶೀರ್ಷಿಕೆಗಳನ್ನು ಆನ್ ಅಥವಾ ಆಫ್ ಮಾಡಿ. ನೀವು ಇಲ್ಲಿ ಉಪಶೀರ್ಷಿಕೆಗಳ ಭಾಷೆಯನ್ನು ಸಹ ಆಯ್ಕೆ ಮಾಡಬಹುದು ಅಥವಾ ಸ್ವಯಂ-ಅನುವಾದವನ್ನು ಆಯ್ಕೆ ಮಾಡಬಹುದು.
  • ಗುಣಮಟ್ಟ: ನೀವು ಪ್ರಸ್ತುತವಾಗಿ ವೀಕ್ಷಿಸುತ್ತಿರುವ ವೀಡಿಯೊದ ಪಿಕ್ಸೆಲ್ ಗುಣಮಟ್ಟವನ್ನು ಆಯ್ಕೆಮಾಡಿ. ಲಭ್ಯ ರೆಸಲ್ಯೂಷನ್‌ಗಳು ವೀಡಿಯೊವನ್ನು ಹೇಗೆ ಅಪ್‌ಲೋಡ್ ಮಾಡಲಾಗಿದೆ ಮತ್ತು ನಿಮ್ಮ ಇಂಟರ್ನೆಟ್ ವೇಗದ ಮೇಲೆ ಅವಂಬಿತವಾಗಿರುತ್ತದೆ. ಈ ಆಯ್ಕೆಯನ್ನು ಸ್ವಯಂ ಎಂದು ಸೆಟ್ ಮಾಡುವಂತೆ ಶಿಫಾರಸು ಮಾಡುತ್ತೇವೆ, ಇದರಿಂದಾಗಿ ನಿಮ್ಮ ಇಂಟರ್ನೆಟ್ ವೇಗವನ್ನು ಆಧರಿಸಿ ವೀಡಿಯೊ ಗುಣಮಟ್ಟವನ್ನು ಆಯ್ಕೆ ಮಾಡಬಹುದು.

ಥಿಯೇಟರ್ ಮೋಡ್

ಪ್ಲೇಯರ್ ಅನ್ನು ವಿಸ್ತರಿಸಲು, ಥಿಯೇಟರ್ ಮೋಡ್  ಆಯ್ಕೆಮಾಡಿ. ಮೂಲ ಪ್ಲೇಯರ್ ಗಾತ್ರಕ್ಕೆ ಹಿಂತಿರುಗಲು, ಅದನ್ನು ಪುನಃ ಆಯ್ಕೆಮಾಡಿ.

ಪೂರ್ಣ ಸ್ಕ್ರೀನ್

ಪೂರ್ಣ ಸ್ಕ್ರೀನ್  ಆಯ್ಕೆ ಮಾಡುವುದರಿಂದ, ನಿಮ್ಮ ಸ್ಕ್ರೀನ್‌ನ ಗಾತ್ರಕ್ಕೆ ಪ್ಲೇಯರ್ ಅನ್ನು ಹೆಚ್ಚಿಸುತ್ತದೆ ಮತ್ತು ಪ್ಲೇಯರ್‌ನಿಂದ ಹೊರಗಿನ ಎಲ್ಲವನ್ನೂ ತೆಗೆದುಹಾಕುತ್ತದೆ. ಪೂರ್ಣ ಸ್ಕ್ರೀನ್ ಮೋಡ್‌ನಿಂದ ನಿರ್ಗಮಿಸಲು, ಎಸ್ಕೇಪ್ ಆಯ್ಕೆಮಾಡಿ.

ಪ್ಲೇಯರ್‌ನಲ್ಲಿ ಕಾಣಸಿಗುವ HTML ಪುಟದಲ್ಲಿ ಹೆಚ್ಚುವರಿ ಎಲಿಮೆಂಟ್‌ಗಳನ್ನು ತೊಡೆದುಹಾಕಲು ನೀವು ಬಯಸಿದರೆ ಪೂರ್ಣ ಪರದೆ ಮೋಡ್ ತುಂಬಾ ಉಪಯುಕ್ತವಾಗಿದೆ. ಇದು ಪ್ಲೇಯರ್ ಅನ್ನು ಹೇಗಿದೆಯೋ ಹಾಗೆಯೇ ಬಿಡುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6258719162230390
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false