ನನ್ನ YouTube ಚಾನಲ್ ಮತ್ತು ವೀಡಿಯೊಗಳಲ್ಲಿ ಆ್ಯಡ್‌ಗಳು ಗೋಚರಿಸದಂತೆ ನಿರ್ಬಂಧಿಸಿ

YouTube ಪಾಲುದಾರರ ಕಾರ್ಯಕ್ರಮದಲ್ಲಿರುವ (MCN ಅಂಗಸಂಸ್ಥೆಗಳನ್ನು ಒಳಗೊಂಡಂತೆ) ರಚನೆಕಾರರಿಗಾಗಿ ಈ ಲೇಖನವನ್ನು ಕಳುಹಿಸಲಾಗಿದೆ, ಯಾರು ತಮ್ಮದೇ ಆದ ಕಂಟೆಂಟ್ ಮೇಲೆ ಕಾಣಿಸಿಕೊಳ್ಳುವ ಆ್ಯಡ್‌ಗಳಿಗೆ ಬದಲಾವಣೆಗಳನ್ನು ಮಾಡಲು ಬಯಸುತ್ತಾರೋ, ಅವರಿಗೆ ಇದು ಸೂಕ್ತ.
 
ನೀವು ವೀಕ್ಷಕರಾಗಿದ್ದರೆ, ವೀಡಿಯೊಗಳಲ್ಲಿ ನೀವು ನೋಡುವ ಆ್ಯಡ್‌ಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ಲೇಖನವನ್ನು ಪರಿಶೀಲಿಸಿ.

YouTube ಪಾಲುದಾರರಾಗಿ, ನಿಮ್ಮ YouTube ವೀಡಿಯೊಗಳು ಮತ್ತು ಚಾನಲ್‌ನ ಪಕ್ಕದಲ್ಲಿ ಗೋಚರಿಸುವ ಆ್ಯಡ್‌ಗಳನ್ನು ನೀವು ಫಿಲ್ಟರ್ ಮಾಡಬಹುದು.

ಸಾಮಾನ್ಯ ಅಥವಾ ನಿರ್ದಿಷ್ಟ ವರ್ಗಗಳಿಂದ ಅಥವಾ ನಿರ್ದಿಷ್ಟ ಜಾಹೀರಾತುದಾರರ ಡೊಮೇನ್‌ಗಳಿಂದ ಆ್ಯಡ್‌ಗಳನ್ನು ಫಿಲ್ಟರ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ:

  1. ನಿಮ್ಮ YouTube ಗಾಗಿ AdSense ಖಾತೆಗೆ ಸೈನ್ ಇನ್ ಮಾಡಿ.
  2. ಮೇಲಿನ ಎಡಭಾಗದಲ್ಲಿ, ಮೆನು  ಎಂಬುದನ್ನು ಕ್ಲಿಕ್ ಮಾಡಿ.
  3. ನಿರ್ಬಂಧಿಸುವ ಕಂಟ್ರೋಲ್‌ಗಳು ನಂತರ YouTube ಹೋಸ್ಟ್ ಅನ್ನು ಕ್ಲಿಕ್ ಮಾಡಿ.
    • ನಿರ್ದಿಷ್ಟ ಜಾಹೀರಾತುದಾರರ URL ಗಳನ್ನು ನಿರ್ಬಂಧಿಸಲು: ಪುಟದ ಮೇಲ್ಭಾಗದಲ್ಲಿ ಅಡ್ಡಲಾಗಿರುವ ಬಾರ್‌ನಲ್ಲಿರುವ ಜಾಹೀರಾತುದಾರರ URL ಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ. ಕೊಟ್ಟಿರುವ ಬಾಕ್ಸ್‌ನಲ್ಲಿ URL ಗಳನ್ನು ನಮೂದಿಸಿ, ನಂತರ URL ಗಳನ್ನು ನಿರ್ಬಂಧಿಸಿ ಅನ್ನು ಕ್ಲಿಕ್ ಮಾಡಿ.
    • ಸಾಮಾನ್ಯ ಅಥವಾ ಸೂಕ್ಷ್ಮ ವರ್ಗಗಳ ಮೂಲಕ ಆ್ಯಡ್‌ಗಳನ್ನು ನಿರ್ಬಂಧಿಸಲು: ಪುಟದ ಮೇಲ್ಭಾಗದಲ್ಲಿ ಅಡ್ಡಲಾಗಿರುವ ಬಾರ್‌ನಲ್ಲಿ ಸೂಕ್ತವಾದ ಟ್ಯಾಬ್ ಅನ್ನು ಕ್ಲಿಕ್ ಮಾಡಿ. ವರ್ಗಗಳನ್ನು ಅನುಮತಿಸಲು ಅಥವಾ ನಿರ್ಬಂಧಿಸಲು ಪುಟದಲ್ಲಿನ ನಿಯಂತ್ರಣಗಳನ್ನು ಬಳಸಿ.

ಬದಲಾವಣೆಗಳನ್ನು ಆಯ್ಕೆಯಲ್ಲಿ ಸ್ವಯಂಚಾಲಿತವಾಗಿ ಸೇವ್ ಮಾಡಲಾಗುತ್ತದೆ ಮತ್ತು 24 ಗಂಟೆಗಳ ಒಳಗೆ ನಿಮ್ಮ ಚಾನಲ್‌ನಲ್ಲಿ ಇವುಗಳು ಕಾಣಿಸಿಕೊಳ್ಳುತ್ತವೆ.

ಬ್ಲಾಕಿಂಗ್ ನಿಯಂತ್ರಣಗಳು ವೀಕ್ಷಣಾ ಪುಟದಲ್ಲಿ ನೀಡಲಾಗುತ್ತಿರುವ ಆ್ಯಡ್‌ಗಳಿಗೆ ಮಾತ್ರ ಅನ್ವಯವಾಗುತ್ತವೆ. ಅವುಗಳು ಫೀಡ್‌ಗಳು ಅಥವಾ Shorts ನಲ್ಲಿ ನೀಡಲಾಗುತ್ತಿರುವ ಆ್ಯಡ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ.

ನಿಮ್ಮ ಫಿಲ್ಟರ್ ಪಟ್ಟಿಯು YouTube ಗಾಗಿ AdSense ಮೂಲಕ ನೀಡಲಾದ ಆ್ಯಡ್‌ಗಳನ್ನು ಮಾತ್ರ ನಿರ್ಬಂಧಿಸುತ್ತದೆ. ನಿರ್ದಿಷ್ಟ ಡೊಮೇನ್‌ಗಳನ್ನು ಫಿಲ್ಟರ್ ಮಾಡುವುದರಿಂದ Google Ad Manager ಮೂಲಕ ಒದಗಿಸಲಾದ ಆ್ಯಡ್‌ಗಳನ್ನು ತಡೆಯುವುದಿಲ್ಲ.

ಆ್ಯಡ್‌‌ಗಳನ್ನು ಅನುಮತಿಸಲಾಗುವ ಹಾಗೂ ನಿರ್ಬಂಧಿಸುವ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3087872798116944206
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false