YouTube ಶಿಫಾರಸು ಮಾಡಿದ ಅಪ್‌ಲೋಡ್ ಎನ್‌ಕೋಡಿಂಗ್ ಸೆಟ್ಟಿಂಗ್‌ಗಳು

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

YouTube ನಲ್ಲಿ ನಿಮ್ಮ ವೀಡಿಯೊಗಳಿಗಾಗಿ ಶಿಫಾರಸು ಮಾಡಲಾದ ಅಪ್‌ಲೋಡ್ ಎನ್‌ಕೋಡಿಂಗ್ ಸೆಟ್ಟಿಂಗ್‌ಗಳು ಈ ಕೆಳಗಿನಂತಿವೆ. 

ಕಂಟೇನರ್: MP4
  • ಎಡಿಟ್ ಮಾಡಿರದ ಪಟ್ಟಿಗಳು (ಅಥವಾ ವೀಡಿಯೊವನ್ನು ಸರಿಯಾಗಿ ಪ್ರಕ್ರಿಯೆಗೊಳಿಸಲು ಸಾಧ್ಯವಾಗದಿರಬಹುದು)
  • ಫೈಲ್‌ನ ಮುಂಭಾಗದಲ್ಲಿ moov atom (ತ್ವರಿತ ಪ್ರಾರಂಭ)
ಆಡಿಯೋ ಕೋಡೆಕ್: AAC-LC
  • ಚಾನಲ್‌ಗಳು: ಸ್ಟೀರಿಯೊ ಅಥವಾ ಸ್ಟೀರಿಯೊ + 5.1
  • ಸ್ಯಾಂಪಲ್ ರೇಟ್ 96khz ಅಥವಾ 48khz
ವೀಡಿಯೊ ಕೋಡೆಕ್: H.264
  • ಪ್ರೋಗ್ರೆಸ್ಸಿವ್ ಸ್ಕ್ಯಾನ್ (ಇಂಟರ್ಲೇಸಿಂಗ್ ಇಲ್ಲ)
  • ಹೈ ಪ್ರೊಫೈಲ್
  • 2 ಸತತ B ಫ್ರೇಮ್‌ಗಳು
  • ಮುಚ್ಚಿದ GOP. ಫ್ರೇಮ್ ರೇಟ್‌ನ ಅರ್ಧದಷ್ಟು GOP.
  • CABAC
  • ವೇರಿಯೇಬಲ್ ಬಿಟ್ ರೇಟ್. ಯಾವುದೇ ಬಿಟ್ ರೇಟ್ ಮಿತಿಯ ಅಗತ್ಯವಿಲ್ಲ, ಆದರೂ ನಾವು ಶಿಫಾರಸು ಮಾಡಲಾದ ಬಿಟ್ ರೇಟ್‌ಗಳನ್ನು ಉಲ್ಲೇಖಕ್ಕಾಗಿ ಕೆಳಗೆ ನೀಡುತ್ತೇವೆ
  • ಕ್ರೋಮಾ ಸಬ್‌ಸ್ಯಾಂಪ್ಲಿಂಗ್: 4:2:0
ಫ್ರೇಮ್ ರೇಟ್

ಕಂಟೆಂಟ್ ಅನ್ನು ಎಷ್ಟು ಫ್ರೇಮ್ ರೇಟ್‌ನಲ್ಲಿ ರೆಕಾರ್ಡ್ ಮಾಡಲಾಗಿತ್ತೋ ಅಷ್ಟೇ ಫ್ರೇಮ್ ರೇಟ್‌ನಲ್ಲಿ ಎನ್‌ಕೋಡ್ ಮಾಡಬೇಕು ಮತ್ತು ಅಪ್‌ಲೋಡ್ ಮಾಡಬೇಕು.

ಸಾಮಾನ್ಯ ಫ್ರೇಮ್ ರೇಟ್‌ಗಳೆಂದರೆ: ಪ್ರತಿ ಸೆಕೆಂಡ್‌ಗೆ 24, 25, 30, 48, 50, 60 ಫ್ರೇಮ್‌ಗಳು (ಇತರ ಫ್ರೇಮ್ ರೇಟ್‌ಗಳು ಸಹ ಸ್ವೀಕಾರಾರ್ಹವಾಗಿರುತ್ತವೆ).

ಇಂಟರ್ಲೇಸ್ ಮಾಡಿದ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವ ಮೊದಲು ಡಿಇಂಟರ್ಲೇಸ್ ಮಾಡಬೇಕು. ಉದಾಹರಣೆಗೆ, 1080i60 ಕಂಟೆಂಟ್ ಅನ್ನು 1080p30 ಗೆ ಡಿಇಂಟರ್ಲೇಸ್ ಮಾಡಬೇಕು. ಪ್ರತಿ ಸೆಕೆಂಡ್‌ಗೆ 60 ಇಂಟರ್ಲೇಸ್ ಮಾಡಿದ ಫೀಲ್ಡ್‌ಗಳನ್ನು ಪ್ರತಿ ಸೆಕೆಂಡ್‌ಗೆ 30 ಪ್ರೋಗ್ರೆಸ್ಸಿವ್ ಫ್ರೇಮ್‌ಗಳಿಗೆ ಡಿಇಂಟರ್ಲೇಸ್ ಮಾಡಬೇಕು.

ಬಿಟ್ ರೇಟ್

ಅಪ್‌ಲೋಡ್‌ಗಳಿಗಾಗಿ ಕೆಳಗಿನ ಬಿಟ್ ರೇಟ್‌ಗಳನ್ನು ಶಿಫಾರಸು ಮಾಡಲಾಗಿದೆ. ಆಡಿಯೋ ಪ್ಲೇಬ್ಯಾಕ್ ಬಿಟ್ ರೇಟ್, ವೀಡಿಯೊ ರೆಸಲ್ಯೂಷನ್‌ಗೆ ಸಂಬಂಧಿಸಿರುವುದಿಲ್ಲ.

SDR ಅಪ್‌ಲೋಡ್‌ಗಳಿಗಾಗಿ ಶಿಫಾರಸು ಮಾಡಲಾದ ವೀಡಿಯೊ ಬಿಟ್ ರೇಟ್‌ಗಳು

ಹೊಸ 4K ಅಪ್‌ಲೋಡ್‌ಗಳನ್ನು 4K ಗುಣಮಟ್ಟದಲ್ಲಿ ನೋಡಲು, VP9 ಅನ್ನು ಬೆಂಬಲಿಸುವ ಬ್ರೌಸರ್ ಅಥವಾ ಸಾಧನವನ್ನು ಬಳಸಿ.

ಪ್ರಕಾರ ವೀಡಿಯೊ ಬಿಟ್ ರೇಟ್, ಸ್ಟ್ಯಾಂಡರ್ಡ್ ಫ್ರೇಮ್ ರೇಟ್
(24, 25, 30)
ವೀಡಿಯೊ ಬಿಟ್ ರೇಟ್, ಹೈ ಫ್ರೇಮ್ ರೇಟ್
(48, 50, 60)
8K 80 - 160 Mbps 120 ಇಂದ 240 Mbps ವರೆಗೆ
2160p (4K) 35–45 Mbps 53–68 Mbps
1440p (2K) 16 Mbps 24 Mbps
1080p 8 Mbps 12 Mbps
720p 5 Mbps 7.5 Mbps
480p 2.5 Mbps 4 Mbps
360p 1 Mbps 1.5 Mbps

HDR ಅಪ್‌ಲೋಡ್‌ಗಳಿಗಾಗಿ ಶಿಫಾರಸು ಮಾಡಲಾದ ವೀಡಿಯೊ ಬಿಟ್ ರೇಟ್‌ಗಳು

ಪ್ರಕಾರ ವೀಡಿಯೊ ಬಿಟ್ ರೇಟ್, ಸ್ಟ್ಯಾಂಡರ್ಡ್ ಫ್ರೇಮ್ ರೇಟ್
(24, 25, 30)
ವೀಡಿಯೊ ಬಿಟ್ ರೇಟ್, ಹೈ ಫ್ರೇಮ್ ರೇಟ್
(48, 50, 60)
8K 100 - 200 Mbps 150 ನಿಂದ 300 Mbps ವರೆಗೆ
2160p (4K) 44–56 Mbps 66–85 Mbps
1440p (2K) 20 Mbps 30 Mbps
1080p 10 Mbps 15 Mbps
720p 6.5 Mbps 9.5 Mbps
480p

ಬೆಂಬಲಿಸುವುದಿಲ್ಲ

ಬೆಂಬಲಿಸುವುದಿಲ್ಲ
360p ಬೆಂಬಲಿಸುವುದಿಲ್ಲ ಬೆಂಬಲಿಸುವುದಿಲ್ಲ

ಅಪ್‌ಲೋಡ್‌ಗಳಿಗಾಗಿ ಶಿಫಾರಸು ಮಾಡಲಾದ ಆಡಿಯೋ ಬಿಟ್ ರೇಟ್‌ಗಳು

ಪ್ರಕಾರ ಆಡಿಯೋ ಬಿಟ್ ರೇಟ್
ಮೊನೊ 128 kbps
ಸ್ಟೀರಿಯೊ 384 kbps
5.1 512 kbps
ವೀಡಿಯೊ ರೆಸಲ್ಯೂಷನ್ ಮತ್ತು ದೃಶ್ಯಾನುಪಾತ

ಕಂಪ್ಯೂಟರ್‌ನಲ್ಲಿ YouTube ಗಾಗಿ ಪ್ರಮಾಣಿತ ದೃಶ್ಯಾನುಪಾತವು 16:9 ಆಗಿದೆ. ವರ್ಟಿಕಲ್ ಅಥವಾ ಸ್ಕ್ವೇರ್ ರೀತಿಯ ಇತರ ದೃಶ್ಯಾನುಪಾತಗಳನ್ನು ಅಪ್‌ಲೋಡ್ ಮಾಡುತ್ತಿರುವಾಗ, ಪ್ಲೇಯರ್ ವೀಡಿಯೊದ ಗಾತ್ರಕ್ಕೆ ಸ್ವಯಂಚಾಲಿತವಾಗಿ ತಾನಾಗಿಯೇ ಅಳವಡಿಸಿಕೊಳ್ಳುತ್ತದೆ. ಈ ಸೆಟ್ಟಿಂಗ್, ದೃಶ್ಯಾನುಪಾತ ಮತ್ತು ವೀಡಿಯೊವನ್ನು ಆಧರಿಸಿ ಉತ್ತಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ.

ವೀಡಿಯೊ ರೆಸಲ್ಯೂಷನ್ ಮತ್ತು ದೃಶ್ಯಾನುಪಾತಗಳನ್ನು ಸಮರ್ಪಕವಾಗಿ ಹೇಗೆ ಬಳಸುವುದು ಎಂಬುದರ ಕುರಿತು ತಿಳಿಯಿರಿ.

ಕಲರ್ ಸ್ಪೇಸ್

SDR ಅಪ್‌ಲೋಡ್‌ಗಳಿಗಾಗಿ ಶಿಫಾರಸು ಮಾಡಲಾದ ಕಲರ್ ಸ್ಪೇಸ್

SDR ಅಪ್‌ಲೋಡ್‌ಗಳಿಗಾಗಿ BT.709 ಅನ್ನು ಪ್ರಮಾಣಿತ ಕಲರ್ ಸ್ಪೇಸ್ ಆಗಿ ಬಳಸುವಂತೆ YouTube ಶಿಫಾರಸು ಮಾಡುತ್ತದೆ:
ಕಲರ್ ಸ್ಪೇಸ್ ಕಲರ್ ಟ್ರಾನ್ಸ್‌ಫರ್ ಗುಣಲಕ್ಷಣಗಳು (TRC) ಕಲರ್ ಪ್ರೈಮರಿಗಳು ಕಲರ್ ಮ್ಯಾಟ್ರಿಕ್ಸ್ ಅಪವರ್ತನಗಳು
BT.709 BT.709 (H.273 ಮೌಲ್ಯ: 1) BT.709 (H.273 ಮೌಲ್ಯ 1) BT.709 (H.273 ಮೌಲ್ಯ 1)


ವೀಡಿಯೊವನ್ನು ಪ್ರಕ್ರಿಯೆಗೊಳಿಸುವ ಮೊದಲು ಕಾರ್ಯಾತ್ಮಕವಾಗಿ ಒಂದೇ ರೀತಿಯ ಕಲರ್ ಮ್ಯಾಟ್ರಿಕ್ಸ್ ಮತ್ತು ಪ್ರೈಮರಿಗಳನ್ನು YouTube ಪ್ರಮಾಣೀಕರಿಸುತ್ತದೆ. ಉದಾಹರಣೆಗೆ, BT.601 ಮತ್ತು BT.709 TRC ಒಂದೇ ಆಗಿರುತ್ತವೆ ಮತ್ತು YouTube ಅವುಗಳನ್ನು BT.709 ಗೆ ಒಗ್ಗೂಡಿಸುತ್ತದೆ. ಅಥವಾ BT.601 NTSC ಮತ್ತು PAL ಕಾರ್ಯತ್ಮಕವಾಗಿ ಒಂದೇ ರೀತಿಯ ಕಲರ್ ಮ್ಯಾಟ್ರಿಕ್ಸ್‌ಗಳನ್ನು ಹೊಂದಿರುತ್ತವೆ ಮತ್ತು YouTube ಅವುಗಳನ್ನು BT.601 NTSC ಗೆ ಒಗ್ಗೂಡಿಸುತ್ತದೆ. ಜೊತೆಗೆ, ಕಲರ್ ಸ್ಪೇಸ್ ಮೌಲ್ಯಗಳನ್ನು ಅರ್ಥೈಸಲು YouTube ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬಹುದು:

ಯಾವಾಗ YouTube ಕ್ರಮ ಕೈಗೊಳ್ಳುತ್ತದೆ
ಅಪ್‌ಲೋಡ್ ಕಲರ್ ಸ್ಪೇಸ್, ನಿರ್ದಿಷ್ಟಪಡಿಸದಿರುವ TRC ಅನ್ನು ಹೊಂದಿದ್ದರೆ. BT.709 TRC ಎಂದು ಊಹಿಸಿದರೆ.
ತಿಳಿದಿಲ್ಲದ ಅಥವಾ ನಿರ್ದಿಷ್ಟಪಡಿಸದಿರುವ ಕಲರ್ ಮ್ಯಾಟ್ರಿಕ್ಸ್ ಮತ್ತು ಪ್ರೈಮರಿ‌ಗಳನ್ನು ಅಪ್‌ಲೋಡ್ ಕಲರ್ ಸ್ಪೇಸ್ ಹೊಂದಿದ್ದರೆ. BT.709 ಕಲರ್ ಮ್ಯಾಟ್ರಿಕ್ಸ್ ಮತ್ತು ಪ್ರೈಮರಿಗಳನ್ನು ಊಹಿಸಿದರೆ.
ಅಪ್‌ಲೋಡ್ ಕಲರ್ ಸ್ಪೇಸ್, BT.601 ಮತ್ತು BT.709 ಕಲರ್ ಪ್ರೈಮರಿಗಳು ಮತ್ತು ಮ್ಯಾಟ್ರಿಕ್ಸ್ ಅನ್ನು ನಿರ್ದಿಷ್ಟಪಡಿಸಿದ ಮೌಲ್ಯಗಳ ಜೊತೆಗೆ ಮಿಶ್ರಣ ಮಾಡಿದರೆ. ಕಲರ್ ಪ್ರೈಮರಿಗಳನ್ನು ಅತಿಕ್ರಮಿಸಲು ಮತ್ತು ಅವುಗಳನ್ನು ಸ್ಥಿರಗೊಳಿಸಲು ಕಲರ್ ಮ್ಯಾಟ್ರಿಕ್ಸ್ ಅನ್ನು ಬಳಸಿದರೆ.
ಅಪ್‌ಲೋಡ್ ಕಲರ್ ಸ್ಪೇಸ್, BT.601 ಮತ್ತು BT.709 ಕಲರ್ ಪ್ರೈಮರಿಗಳು ಮತ್ತು ಮ್ಯಾಟ್ರಿಕ್ಸ್ ಅನ್ನು ಮಿಶ್ರಣ ಮಾಡಿದರೆ ಮತ್ತು ಪ್ರೈಮರಿಗಳು ಅಥವಾ ಮ್ಯಾಟ್ರಿಕ್ಸ್ ಅನ್ನು ನಿರ್ದಿಷ್ಟಪಡಿಸಿಲ್ಲದಿದ್ದರೆ. ನಿರ್ದಿಷ್ಟಪಡಿಸಿಲ್ಲದ ಮೌಲ್ಯವನ್ನು ಹೊಂದಿಸಲು ಮತ್ತು ಅತಿಕ್ರಮಿಸಲು, ಕಲರ್ ಪ್ರೈಮರಿ‌ಗಳು/ಮ್ಯಾಟ್ರಿಕ್ಸ್‌ನ ನಿರ್ದಿಷ್ಟಪಡಿಸಿದ ಮೌಲ್ಯವನ್ನು ಬಳಸಿದರೆ.


ಅಪ್‌ಲೋಡ್ ಕಲರ್ ಸ್ಪೇಸ್ ಸ್ಟ್ಯಾಂಡರ್ಡೈಸೇಶನ್ ನಂತರ, BT.709 ಅಥವಾ BT.601 ಹೊಂದಾಣಿಕೆಯಾಗುತ್ತದೆಯೇ ಮತ್ತು ಕಲರ್ ಸ್ಪೇಸ್ ಮೂಲಕ ಹಾದುಹೋಗುತ್ತದೆಯೇ ಎಂಬುದನ್ನು YouTube ಪರಿಶೀಲಿಸುತ್ತದೆ. ಇಲ್ಲದಿದ್ದರೆ, YouTube ಪಿಕ್ಸೆಲ್ ಮೌಲ್ಯಗಳನ್ನು ಮ್ಯಾಪ್ ಮಾಡುವ ಮೂಲಕ ಬೆಂಬಲಿಸದಿರುವ ಕಲರ್ ಸ್ಪೇಸ್‌ಗಳನ್ನು BT.709 ಗೆ ಪರಿವರ್ತಿಸುತ್ತದೆ.

ಗಮನಿಸಿ: BT.2020 ನಂತಹ ಬ್ಯಾಂಡಿಂಗ್ ಅನ್ನು ತಪ್ಪಿಸಲು ಬೆಂಬಲಿತ HDR ಟ್ರಾನ್ಸ್‌ಫರ್ ಫಂಕ್ಷನ್ ಇಲ್ಲದೆಯೇ ಹೈ ಬಿಟ್ ಡೆಪ್ತ್‌ನ ಅಗತ್ಯವಿರುವ ಕಲರ್ ಪ್ರೈಮರಿಗಳನ್ನು BT.709 (8-ಬಿಟ್) ಗೆ YouTube ಪರಿವರ್ತಿಸುತ್ತದೆ. YouTube ಇಡೀ ಬಣ್ಣದ ಶ್ರೇಣಿಯನ್ನು ಸೀಮಿತ ಬಣ್ಣದ ಶ್ರೇಣಿಗೆ ಪರಿವರ್ತಿಸುತ್ತದೆ.
ಎಚ್ಚರಿಕೆ: ಅಪ್‌ಲೋಡ್‌ಗಳಲ್ಲಿ RGB ಕಲರ್ ಮ್ಯಾಟ್ರಿಕ್ಸ್ ಅನ್ನು ಬಳಸಲು YouTube ಶಿಫಾರಸು ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ, YouTube ಆರಂಭದಲ್ಲಿ ಕಲರ್ ಮ್ಯಾಟ್ರಿಕ್ಸ್ ಅನ್ನು ಸ್ಟ್ಯಾಂಡರ್ಡೈಸೇಶನ್‌ಗೆ ಮೊದಲು ನಿರ್ದಿಷ್ಟಪಡಿಸಲಾಗಿಲ್ಲ ಎಂಬುದಾಗಿ ಸೆಟ್ ಮಾಡುತ್ತದೆ. ಇದು ಸ್ಟ್ಯಾಂಡರ್ಡೈಸೇಶನ್ ಸಮಯದಲ್ಲಿ ಕಲರ್ ಪ್ರೈಮರಿಗಳನ್ನು ಬಳಸಿಕೊಂಡು ಕಲರ್ ಮ್ಯಾಟ್ರಿಕ್ಸ್ ಅನ್ನು ಊಹಿಸುತ್ತದೆ. sRGB TRC ಅನ್ನು BT.709 TRC ಗೆ ಪರಿವರ್ತಿಸಲಾಗುತ್ತದೆ ಎಂಬುದು ಗಮನದಲ್ಲಿರಲಿ. FFmpeg ಕಲರ್‌ಸ್ಪೇಸ್ ಪರಿವರ್ತನೆ ಫಿಲ್ಟರ್ ಮೂಲಕ ಬೆಂಬಲವಿಲ್ಲದಿದ್ದಾಗ, ಕಲರ್ ಪ್ರೈಮರಿಗಳು/ಮ್ಯಾಟ್ರಿಕ್ಸ್/TRC ಅನ್ನು BT.709 ಗೆ YouTube ರೀ-ಟ್ಯಾಗ್ ಮಾಡುತ್ತದೆ.

HDR ಅಪ್‌ಲೋಡ್‌ಗಳಿಗಾಗಿ ಶಿಫಾರಸು ಮಾಡಲಾದ ಕಲರ್ ಸ್ಪೇಸ್

HDR ವೀಡಿಯೊಗಳನ್ನು ಅಪ್‌ಲೋಡ್ ಮಾಡಿ ಲೇಖನದ ಮೇಲೆ ಕಣ್ಣಾಡಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5274944308389549402
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false