ವೀಡಿಯೊಗಳು ಮತ್ತು ಪ್ಲೇಪಟ್ಟಿಗಳನ್ನು ಎಂಬೆಡ್ ಮಾಡಿ

ವೆಬ್‌ಸೈಟ್ ಅಥವಾ ಬ್ಲಾಗ್‌ಗೆ ಎಂಬೆಡ್ ಮಾಡುವ ಮೂಲಕ, ನೀವು YouTube ವೀಡಿಯೊ ಅಥವಾ ಪ್ಲೇಪಟ್ಟಿಯನ್ನು ಸೇರಿಸಬಹುದು.

ನೀವು ಶಿಕ್ಷಕರಾಗಿದ್ದರೆ, ನಿಮ್ಮ ತರಗತಿಗಳಿಗೆ YouTube ಕಂಟೆಂಟ್ ಅನ್ನು ಎಂಬೆಡ್ ಮಾಡುವುದು ಹೇಗೆ ಎಂಬುದರ ಕುರಿತಾದ ಮಾಹಿತಿ ಪಡೆಯಲು, ನಿಮ್ಮ ಶೈಕ್ಷಣಿಕ ತಂತ್ರಜ್ಞಾನ ಪ್ಲಾಟ್‌ಫಾರ್ಮ್ ಅನ್ನು ಸಂಪರ್ಕಿಸಿ.

YouTube API ಸೇವಾ ನಿಯಮಗಳು ಮತ್ತು ಡೆವಲಪರ್ ನೀತಿಗಳು YouTube ಎಂಬೆಡ್ ಮಾಡಿದ ಪ್ಲೇಯರ್‌ನ ಎಲ್ಲಾ ಆ್ಯಕ್ಸೆಸ್ ಮತ್ತು ಬಳಕೆಗೆ ಅನ್ವಯಿಸುತ್ತದೆ.

ವೀಡಿಯೊ ಅಥವಾ ಪ್ಲೇಪಟ್ಟಿಯನ್ನು ಎಂಬೆಡ್ ಮಾಡಿ

  1. ಕಂಪ್ಯೂಟರ್‌ನಲ್ಲಿ, ನೀವು ಎಂಬೆಡ್ ಮಾಡಲು ಬಯಸುವ YouTube ವೀಡಿಯೊ ಅಥವಾ ಪ್ಲೇಪಟ್ಟಿಗೆ ಹೋಗಿ.
  2. ಹಂಚಿಕೊಳ್ಳಿ ಕ್ಲಿಕ್ ಮಾಡಿ.
  3. ಹಂಚಿಕೊಳ್ಳುವಿಕೆ ಆಯ್ಕೆಗಳಿಂದ, ಎಂಬೆಡ್ ಅನ್ನು ಆಯ್ಕೆ ಮಾಡಿ.
  4. ನಿಮಗೆ ಕಾಣುತ್ತಿರುವ ಬಾಕ್ಸ್‌ನಲ್ಲಿ HTML ಕೋಡ್ ಅನ್ನು ನಕಲು ಮಾಡಿ.
  5. ನಿಮ್ಮ ವೆಬ್‌ಸೈಟ್ HTML ಗೆ ಕೋಡ್ ಅನ್ನು ಅಂಟಿಸಿ.
  6. ನೆಟ್‌ವರ್ಕ್ ನಿರ್ವಾಹಕರಿಗಾಗಿ: ನೀವು youtube.com ಅನ್ನು ಫೈರ್‌ವಾಲ್ ಅನುಮತಿ ಪಟ್ಟಿಗೆ ಸೇರಿಸುವ ಅಗತ್ಯವಿದೆ.
  7. ಪ್ರಮುಖ ಸೂಚನೆ: ನಿಮ್ಮ ವೆಬ್‌ಸೈಟ್ ಅಥವಾ ಆ್ಯಪ್ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಿದ್ದರೆ ಹಾಗೂ ನೀವು YouTube ಕಂಟೆಂಟ್ ಅನ್ನು ಎಂಬೆಡ್ ಮಾಡಿದ್ದರೆ, ಈ ಟೂಲ್‌ಗಳನ್ನು ಬಳಸಿಕೊಂಡು ನಿಮ್ಮ ಸೈಟ್ ಅಥವಾ ಆ್ಯಪ್ ಅನ್ನು ನೀವೇ ಸ್ವಯಂ ಗೊತ್ತುಪಡಿಸಬೇಕು. ಈ ಸ್ವಯಂ ಗೊತ್ತುಪಡಿಸುವಿಕೆಯು, ಈ ಸೈಟ್‌ಗಳು ಅಥವಾ ಆ್ಯಪ್‌ಗಳಲ್ಲಿ ವೈಯಕ್ತೀಕರಿಸಿದ ಆ್ಯಡ್‌ಗಳನ್ನು Google ಒದಗಿಸುವುದಿಲ್ಲ ಎಂದು ಖಚಿತಪಡಿಸುತ್ತದೆ ಮತ್ತು ಎಂಬೆಡ್ ಮಾಡಲಾದ ಪ್ಲೇಯರ್‌ನಲ್ಲಿ ಕೆಲವು ಫೀಚರ್‌ಗಳನ್ನು ಆಫ್ ಮಾಡುತ್ತದೆ.
ಗಮನಿಸಿ: ಬಹುತೇಕ 3ನೇ ಪಾರ್ಟಿಯ ವೆಬ್‌ಸೈಟ್‌ಗಳಲ್ಲಿ ವಯಸ್ಸಿನ ನಿರ್ಬಂಧವಿರುವ ವೀಡಿಯೊಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಈ ವೀಡಿಯೊಗಳನ್ನು ಪ್ಲೇ ಮಾಡಿದಾಗ ವೀಕ್ಷಕರನ್ನು ಮರಳಿ YouTube ಗೆ ಮರುನಿರ್ದೇಶನ ಮಾಡುತ್ತವೆ.

ವೀಡಿಯೊ ಎಂಬೆಡಿಂಗ್ ಆಯ್ಕೆಗಳನ್ನು ನಿರ್ವಹಿಸಿ

ಗೌಪ್ಯತೆ-ವರ್ಧಿತ ಮೋಡ್ ಅನ್ನು ಆನ್ ಮಾಡಿ

YouTube ಎಂಬೆಡ್ ಮಾಡಿದ ಪ್ಲೇಯರ್‌ನ ಗೌಪ್ಯತೆ ವರ್ಧಿತ ಮೋಡ್, YouTube ನಲ್ಲಿ ವೀಕ್ಷಕರ ಬ್ರೌಸಿಂಗ್ ಅನುಭವದ ಮೇಲೆ ಪ್ರಭಾವ ಬೀರದ ಹಾಗೆ, ಎಂಬೆಡ್ ಮಾಡಲಾದ YouTube ಕಂಟೆಂಟ್‌ನ ವೀಕ್ಷಣೆಗಳ ಬಳಕೆಯನ್ನು ತಡೆಯುತ್ತದೆ. ಇದರರ್ಥ ಎಂಬೆಡ್ ಮಾಡಿದ ಪ್ಲೇಯರ್‌ನ ಗೌಪ್ಯತೆ ವರ್ಧಿತ ಮೋಡ್‌ನಲ್ಲಿ ತೋರಿಸಿರುವ ವೀಡಿಯೊದ ವೀಕ್ಷಣೆಯನ್ನು, YouTube ಬ್ರೌಸಿಂಗ್ ಅನುಭವವನ್ನು ವೈಯಕ್ತೀಕರಿಸಲು ಬಳಸಲಾಗುವುದಿಲ್ಲ, ಇದು ನಿಮ್ಮ ಗೌಪ್ಯತೆ ವರ್ಧಿತ ಮೋಡ್‌ನಲ್ಲಿನ ಎಂಬೆಡ್ ಮಾಡಿದ ಪ್ಲೇಯರ್‌ನಲ್ಲಿ ಅಥವಾ ವೀಕ್ಷಕರ ನಂತರದ YouTube ವೀಕ್ಷಣೆಯ ಅನುಭವದಲ್ಲಿ ಎರಡಕ್ಕೂ ಅನ್ವಯಿಸುತ್ತದೆ.

ಎಂಬೆಡ್ ಮಾಡಲಾದ ಪ್ಲೇಯರ್‌ನ ಗೌಪ್ಯತೆ ವರ್ಧಿತ ಮೋಡ್‌ನಲ್ಲಿ ತೋರಿಸಿರುವ ವೀಡಿಯೊದಲ್ಲಿ ಆ್ಯಡ್‌ಗಳನ್ನು ನೀಡಿದರೆ, ಆ ಆ್ಯಡ್‌ಗಳು ವೈಯಕ್ತೀಕರಿಸದವುಗಳಾಗಿರುತ್ತವೆ. ಇದರ ಜೊತೆಗೆ, ಎಂಬೆಡ್ ಮಾಡಲಾದ ಪ್ಲೇಯರ್‌ನ ಗೌಪ್ಯತೆ ವರ್ಧಿತ ಮೋಡ್‌ನಲ್ಲಿ ತೋರಿಸಿರುವ ವೀಡಿಯೊದ ವೀಕ್ಷಣೆಯನ್ನು, ನಿಮ್ಮ ಸೈಟ್ ಅಥವಾ ಆ್ಯಪ್‌ನ ಹೊರಗಿನ ವೀಕ್ಷಕರಿಗೆ ತೋರಿಸಲಾದ ಆ್ಯಡ್‌ ಅನ್ನು ವೈಯಕ್ತೀಕರಿಸಲು ಬಳಸಲಾಗುವುದಿಲ್ಲ.

ನೆನಪಿರಲಿ, YouTube ಎಂಬೆಡ್ ಮಾಡಲಾದ ಪ್ಲೇಯರ್‌ನ ಆ್ಯಕ್ಸೆಸ್ ಮತ್ತು ಬಳಕೆಗೆ YouTube API ಸೇವಾ ನಿಯಮಗಳು ಮತ್ತು ಡೆವಲಪರ್ ನೀತಿಗಳು ಅನ್ವಯಿಸುತ್ತವೆ.

ಗೌಪ್ಯತೆ ವರ್ಧಿತ ಮೋಡ್ ಬಳಸಲು:

  1. ನಿಮ್ಮ HTML ನಲ್ಲಿ ಎಂಬೆಡ್ URL ಗಾಗಿ ಡೊಮೇನ್ ಅನ್ನು https://www.youtube.com ನಿಂದ https://www.youtube-nocookie.com ಗೆ ಬದಲಾಯಿಸಿ.
  2. ನೆಟ್‌ವರ್ಕ್ ನಿರ್ವಾಹಕರಿಗಾಗಿ: ನೀವು youtube-nocookie.com ಅನ್ನು ಫೈರ್‌ವಾಲ್ ಅನುಮತಿ ಪಟ್ಟಿಗೆ ಸೇರಿಸ ಬೇಕಾಗುತ್ತದೆ.
  3. ಅಪ್ಲಿಕೇಶನ್‌ಗಳಲ್ಲಿನ ಬಳಕೆಗಾಗಿ, ಎಂಬೆಡ್ ಮಾಡಿದ ಪ್ಲೇಯರ್‌ನ WebView ನಿದರ್ಶನವನ್ನು ಬಳಸಿ. ವೆಬ್‌ಸೈಟ್‌ಗಳಲ್ಲಿ ಎಂಬೆಡ್ ಮಾಡಿದ ಪ್ಲೇಯರ್‌ಗಳಿಗೆ ಮಾತ್ರ ಗೌಪ್ಯತೆ ವರ್ಧಿತ ಮೋಡ್ ಲಭ್ಯವಿದೆ.
  4. ಪ್ರಮುಖ ಸೂಚನೆ: ನಿಮ್ಮ ವೆಬ್‌ಸೈಟ್ ಅಥವಾ ಆ್ಯಪ್ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಿದ್ದರೆ, ಗೌಪ್ಯತೆ ವರ್ಧಿತ ಮೋಡ್ ಪ್ಲೇಯರ್‌ನೊಂದಿಗೆ ನೀವು YouTube ವೀಡಿಯೊಗಳನ್ನು ಎಂಬೆಡ್ ಮಾಡಿದರೂ ಸಹ, YouTube API ಸೇವಾ ನಿಯಮಗಳು ಮತ್ತು ಡೆವಲಪರ್ ನೀತಿಗಳ ಅಗತ್ಯಕ್ಕೆ ತಕ್ಕಂತೆ ಈ ಟೂಲ್‌ಗಳನ್ನು ಬಳಸಿಕೊಂಡು ನಿಮ್ಮ ಸೈಟ್ ಅಥವಾ ಆ್ಯಪ್ ಅನ್ನು ನೀವೇ ಸ್ವಯಂ ಗೊತ್ತುಪಡಿಸಬೇಕು.

ಉದಾಹರಣೆಗೆ:

ಮೊದಲು

<iframe width="1440" height="762"

src="https://www.youtube.com/embed/7cjVj1ZyzyE"

frameborder="0" allow="autoplay; encrypted-media" allowfullscreen></iframe>

ನಂತರ

<iframe width="1440" height="762" src="https://www.youtube-nocookie.com/embed/7cjVj1ZyzyE"

frameborder="0" allow="autoplay; encrypted-media" allowfullscreen></iframe>

ಗಮನಿಸಿ: ವೀಕ್ಷಕರು ಎಂಬೆಡ್‌ನಿಂದ ಕ್ಲಿಕ್ ಮಾಡಿದರೆ ಅಥವಾ ಟ್ಯಾಪ್ ಮಾಡಿದರೆ ಮತ್ತು ಇನ್ನೊಂದು ವೆಬ್‌ಸೈಟ್ ಅಥವಾ ಆ್ಯಪ್‌ಗೆ ಮರುನಿರ್ದೇಶಿಸಿಲ್ಪಟ್ಟರೆ, ಆ ವೆಬ್‌ಸೈಟ್ ಅಥವಾ ಆ್ಯಪ್‌ನ ನೀತಿಗಳು ಮತ್ತು ನಿಯಮಗಳ ಪ್ರಕಾರ ಆ ವೆಬ್‌ಸೈಟ್ ಅಥವಾ ಆ್ಯಪ್ ವೀಕ್ಷಕರ ನಡವಳಿಕೆಯನ್ನು ಟ್ರ್ಯಾಕ್ ಮಾಡಬಹುದು.

ಎಂಬೆಡ್ ಮಾಡಿದ ವೀಡಿಯೊವನ್ನು ಸ್ವಯಂಚಾಲಿತವಾಗಿ ಪ್ಲೇ ಮಾಡಿ

ಎಂಬೆಡ್ ವೀಡಿಯೊ ಸ್ವಯಂಪ್ಲೇ ಆಗಲು, ವೀಡಿಯೊ ಐಡಿ ("ಎಂಬೆಡ್/" ಅನ್ನು ಫಾಲೋ ಮಾಡುವ ಅಕ್ಷರಗಳ ಸರಣಿ) ನಂತರ ವೀಡಿಯೊದ ಎಂಬೆಡ್ ಕೋಡ್‌ಗೆ "&autoplay=1" ಅನ್ನು ಸೇರಿಸಿ.

ಎಂಬೆಡ್ ಮಾಡಲಾದ ವೀಡಿಯೊಗಳು ಸ್ವಯಂಪ್ಲೇ ಮಾಡಲಾದ ವೀಡಿಯೊಗಳಾಗಿದ್ದು, ಅವು ವೀಕ್ಷಣೆಗಳನ್ನು ಹೆಚ್ಚಿಸುವುದಿಲ್ಲ.

ಉದಾಹರಣೆಗೆ:

<iframe width="560" height="315"
src="https://www.youtube.com/embed/D6Ac5JpCHmI?&autoplay=1"frameborder="0"
allowfullscreen></iframe>
ಒಂದು ನಿರ್ದಿಷ್ಟ ಸಮಯದಲ್ಲಿ ಎಂಬೆಡ್ ಮಾಡಲಾದ ವೀಡಿಯೊವನ್ನು ಪ್ರಾರಂಭಿಸಿ

ನಿರ್ದಿಷ್ಟ ಪಾಯಿಂಟ್‌ನಲ್ಲಿ ವೀಡಿಯೊ ಪ್ಲೇ ಆಗಲು, ವೀಡಿಯೊ ಎಂಬೆಡ್ ಕೋಡ್‌ಗೆ “?start=” ಅನ್ನು ಸೇರಿಸಿ, ನಂತರ ನೀವು ವೀಡಿಯೊ ಯಾವಾಗ ಪ್ಲೇ ಆಗಬೇಕು, ಎಂದು ಬಯಸುತ್ತೀರೋ, ಆ ಸಮಯವನ್ನು ಸೆಕೆಂಡ್‌ಗಳ ಲೆಕ್ಕದಲ್ಲಿ ಸೇರಿಸಿ.

ಉದಾಹರಣೆಗೆ, ವೀಡಿಯೊದಲ್ಲಿ 1 ನಿಮಿಷ ಮತ್ತು 30 ಸೆಕೆಂಡುಗಳಲ್ಲಿ ವೀಡಿಯೊ ಪ್ರಾರಂಭವಾಗಬೇಕೆಂದು ನೀವು ಬಯಸಿದರೆ, ನಿಮ್ಮ ಎಂಬೆಡ್ ಕೋಡ್ ಈ ರೀತಿ ಕಾಣುತ್ತದೆ:

<iframe allowfullscreen="" frameborder="0" height="315" src="http://www.youtube.com/embed/UkWd0azv3fQ?start=90" width="420"></iframe>
ಎಂಬೆಡ್ ಮಾಡಲಾದ ವೀಡಿಯೊಗೆ ಶೀರ್ಷಿಕೆಗಳನ್ನು ಸೇರಿಸಿ

ವೀಡಿಯೊದ ಎಂಬೆಡ್ ಕೋಡ್‌ಗೆ "&cc_load_policy=1" ಅನ್ನು ಸೇರಿಸುವ ಮೂಲಕ ಎಂಬೆಡ್ ಮಾಡಲಾದ ವೀಡಿಯೊದಲ್ಲಿ ಶೀರ್ಷಿಕೆಗಳು ಸ್ವಯಂಚಾಲಿತವಾಗಿ ಗೋಚರಿಸುವಂತೆ ಮಾಡಿ.

ಎಂಬೆಡ್ ಮಾಡಿದ ವೀಡಿಯೊಗಾಗಿ ನೀವು ಶೀರ್ಷಿಕೆ ಭಾಷೆಯನ್ನು ಸಹ ಆಯ್ಕೆ ಮಾಡಬಹುದು. ನೀವು ಎಂಬೆಡ್ ಮಾಡಲು ಬಯಸುವ ವೀಡಿಯೊದ ಶೀರ್ಷಿಕೆ ಭಾಷೆಯನ್ನು ನಿರ್ದಿಷ್ಟಪಡಿಸಲು, ವೀಡಿಯೊದ ಎಂಬೆಡ್ ಕೋಡ್‌ಗೆ "&cc_lang_pref=fr&cc_load_policy=1" ಅನ್ನು ಸೇರಿಸಿ.

  • "cc_lang_pref" ವೀಡಿಯೊದಲ್ಲಿ ತೋರಿಸಿರುವ ಶೀರ್ಷಿಕೆಗಳಿಗೆ ಭಾಷೆಯನ್ನು ಸೆಟ್ ಮಾಡುತ್ತದೆ.
  • "cc_load_policy=1" ಡೀಫಾಲ್ಟ್ ಆಗಿ ಶೀರ್ಷಿಕೆಗಳನ್ನು ಆನ್ ಮಾಡುತ್ತದೆ.
  • "fr" ಎಂಬುದು ಫ್ರೆಂಚ್ ಭಾಷೆಯ ಕೋಡ್ ಅನ್ನು ಪ್ರತಿನಿಧಿಸುತ್ತದೆ. ISO 639-1 ಸ್ಟ್ಯಾಂಡರ್ಡ್ ನಲ್ಲಿ ನೀವು 2-ಅಕ್ಷರದ ಭಾಷಾ ಕೋಡ್‌ಗಳನ್ನು ನೋಡಬಹುದು
ನಿಮ್ಮ ವೀಡಿಯೊಗಳಿಗೆ ಎಂಬೆಡ್ ಮಾಡುವಿಕೆಯನ್ನು ಅನ್ನು ಆಫ್ ಮಾಡಿ
ನೀವು ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದರೆ ಮತ್ತು ನಿಮ್ಮ ವೀಡಿಯೊವನ್ನು ಬಾಹ್ಯ ಸೈಟ್‌ಗಳಲ್ಲಿ ಎಂಬೆಡ್ ಮಾಡಲು ಇತರರಿಗೆ ಅನುಮತಿ ನೀಡಲು ಬಯಸದಿದ್ದರೆ, ಈ ಹಂತಗಳನ್ನು ಅನುಸರಿಸಿ:
  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡ ಮೆನುವಿನಿಂದ ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ನೀವು ನಿರ್ವಹಿಸಲು ಬಯಸುವ ವೀಡಿಯೊದ ಮುಂದೆ ಇರುವ, ವಿವರಗಳನ್ನು ಆಯ್ಕೆಮಾಡಿ .
  4. ಕೆಳಗೆ ನೀಡಲಾಗಿರುವ ಇನ್ನೂ ಹೆಚ್ಚು ತೋರಿಸಿ ಆಯ್ಕೆ ಮಾಡಿ.
  5. "ಎಂಬೆಡ್ ಮಾಡುವಿಕೆಯನ್ನು ಅನುಮತಿಸಿ" ಮತ್ತು ಸೇವ್ ಮಾಡಿ ಪಕ್ಕದಲ್ಲಿರುವ ಬಾಕ್ಸ್ ಅನ್ನು ಅನ್‌ಚೆಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16331287903675134153
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false