YouTube ಚಾನಲ್ ರಚಿಸಿ

Google ಖಾತೆ ಮೂಲಕ ನೀವು ವೀಡಿಯೊಗಳನ್ನು ವೀಕ್ಷಿಸಬಹುದು ಮತ್ತು ಲೈಕ್ ಮಾಡಬಹುದು ಮತ್ತು ಚಾನಲ್‌ಗಳಿಗೆ ಸಬ್‌ಸ್ಕ್ರೈಬ್ ಮಾಡಬಹುದು. ಆದರೆ YouTube ಚಾನಲ್ ಇಲ್ಲದೆಯೇ, ನೀವು YouTube ನಲ್ಲಿ ಯಾವುದೇ ಸಾರ್ವಜನಿಕ ಉಪಸ್ಥಿತಿಯನ್ನು ಹೊಂದಿರುವುದಿಲ್ಲ. ನೀವು Google ಖಾತೆ ಹೊಂದಿದ್ದರೂ, ವೀಡಿಯೊಗಳನ್ನು ಅಪ್‌ಲೋಡ್ ಮಾಡಲು, ಕಾಮೆಂಟ್ ಮಾಡಲು ಅಥವಾ ಪ್ಲೇಪಟ್ಟಿಗಳನ್ನು ರಚಿಸಲು ನೀವು YouTube ಚಾನಲ್ ರಚಿಸಬೇಕಾಗುತ್ತದೆ.

YouTube ವೆಬ್‌ಸೈಟ್ ಅಥವಾ YouTube ಮೊಬೈಲ್ ಸೈಟ್‌ನಲ್ಲಿ ನಿಮ್ಮ ಚಾನಲ್ ಅನ್ನು ನೀವು ರಚಿಸಬಹುದು.

ಗಮನಿಸಿ: YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವಗಳೊಂದಿಗೆ ಈ ಫೀಚರ್ ಲಭ್ಯವಿಲ್ಲದಿರಬಹುದು. ಇನ್ನಷ್ಟು ತಿಳಿಯಿರಿ.

YouTube ಚಾನಲ್ ಅನ್ನು ರಚಿಸುವುದು ಹಾಗೂ ಅದನ್ನು ಕಸ್ಟಮೈಸ್ ಮಾಡುವುದು ಹೇಗೆ (ರಚನೆಕಾರರ ಮೂಲ ಸಂಗತಿಗಳು)

ವೈಯಕ್ತಿಕ ಚಾನಲ್ ರಚಿಸಿ

ನಿಮ್ಮ Google ಖಾತೆಯನ್ನು ಬಳಸಿಕೊಂಡು ನೀವು ಮಾತ್ರ ನಿರ್ವಹಿಸಬಹುದಾದ ಚಾನಲ್ ಅನ್ನು ರಚಿಸಲು ಈ ಸೂಚನೆಗಳನ್ನು ಅನುಸರಿಸಿ.

  1. ಕಂಪ್ಯೂಟರ್ ಅಥವಾ ಮೊಬೈಲ್ ಸೈಟ್‌ನಲ್ಲಿ YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಪ್ರೊಫೈಲ್ ಚಿತ್ರ ನಂತರಚಾನಲ್ ರಚಿಸಿ ಎಂಬುದನ್ನು ಕ್ಲಿಕ್ ಮಾಡಿ.
  3. ನಿಮಗೆ ಚಾನಲ್ ಅನ್ನು ರಚಿಸಲು ಹೇಳಲಾಗುತ್ತದೆ.
  4. ವಿವರಗಳನ್ನು ಪರಿಶೀಲಿಸಿ (ನಿಮ್ಮ Google ಖಾತೆ ಹೆಸರು ಮತ್ತು ಫೋಟೋ ಮೂಲಕ) ಮತ್ತು ನಿಮ್ಮ ಚಾನಲ್ ರಚಿಸಲು ದೃಢಪಡಿಸಿ.
ಗಮನಿಸಿ: ಕೆಲವು ನಿದರ್ಶನಗಳಲ್ಲಿ, ಮೊಬೈಲ್‌ನಲ್ಲಿ ಕಾಮೆಂಟ್ ಅನ್ನು ಪೋಸ್ಟ್ ಮಾಡುವಂತಹ ವಿಧಾನಗಳ ಮೂಲಕ ನೀವು ಚಾನಲ್ ಅನ್ನು ರಚಿಸಿದಾಗ, ನೀವು ಆಯ್ಕೆಮಾಡಿದ ಚಾನಲ್ ಹೆಸರನ್ನು ಆಧರಿಸಿ YouTube ಸ್ವಯಂಚಾಲಿತವಾಗಿ ನಿಮಗೆ ಹ್ಯಾಂಡಲ್ ಅನ್ನು ನಿಯೋಜಿಸಬಹುದು. ಆಯ್ಕೆಮಾಡಿದ ಚಾನಲ್ ಹೆಸರನ್ನು ಹ್ಯಾಂಡಲ್‌ಗೆ ಪರಿವರ್ತಿಸಲಾಗದಿದ್ದರೆ, ನಿಮ್ಮ ಹ್ಯಾಂಡಲ್ ಅನ್ನು ಯಾದೃಚ್ಛಿಕವಾಗಿ ನಿಯೋಜಿಸಿದ ಸಂದರ್ಭಗಳು ಇರಬಹುದು. ನೀವು ಯಾವಾಗಲೂ Studio ದಲ್ಲಿ ಅಥವಾ youtube.com/handle ಗೆ ಹೋಗುವ ಮೂಲಕ ಹ್ಯಾಂಡಲ್ ಅನ್ನು ವೀಕ್ಷಿಸಬಹುದು ಮತ್ತು ಎಡಿಟ್ ಮಾಡಬಹುದು.

ವ್ಯಾಪಾರ ಅಥವಾ ಇತರ ಹೆಸರಿನೊಂದಿಗೆ ಚಾನಲ್ ರಚಿಸಿ

ಒಬ್ಬರಿಗಿಂತ ಹೆಚ್ಚು ನಿರ್ವಾಹಕರು ಅಥವಾ ಮಾಲೀಕರನ್ನು ಹೊಂದಿರಬಹುದಾದ ಚಾನಲ್ ರಚಿಸುವುದಕ್ಕಾಗಿ ಈ ಸೂಚನೆಗಳನ್ನು ಅನುಸರಿಸಿ.

ನಿಮ್ಮ Google ಖಾತೆಗಿಂತ ಭಿನ್ನವಾದ ಹೆಸರನ್ನು YouTube ನಲ್ಲಿ ಬಳಸಲು ಬಯಸಿದರೆ ನೀವು ನಿಮ್ಮ ಚಾನಲ್ ಅನ್ನು ಬ್ರ್ಯಾಂಡ್ ಖಾತೆಗೆ ಕನೆಕ್ಟ್‌ ಮಾಡಬಹುದು. ಬ್ರ್ಯಾಂಡ್ ಖಾತೆಗಳ ಕುರಿತು ಇನ್ನಷ್ಟು ತಿಳಿಯಿರಿ.

  1. ಕಂಪ್ಯೂಟರ್ ಅಥವಾ ಮೊಬೈಲ್ ಸೈಟ್‌ನಲ್ಲಿ YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಚಾನಲ್ ಪಟ್ಟಿಗೆ ಹೋಗಿ.
  3. ಹೊಸ ಚಾನಲ್ ರಚಿಸಲು ಆಯ್ಕೆಮಾಡಿ ಅಥವಾ ಅಸ್ತಿತ್ವದಲ್ಲಿರುವ ಬ್ರ್ಯಾಂಡ್ ಖಾತೆಯನ್ನು ಬಳಸಿ:
    • ಹೊಸ ಚಾನಲ್ ರಚಿಸಿ ಕ್ಲಿಕ್ ಮಾಡುವ ಮೂಲಕ ಚಾನಲ್ ರಚಿಸಿ.
    • ಪಟ್ಟಿಯಿಂದ ಬ್ರ್ಯಾಂಡ್ ಖಾತೆಯನ್ನು ಆಯ್ಕೆಮಾಡುವ ಮೂಲಕ ನೀವು ಈಗಾಗಲೇ ನಿರ್ವಹಿಸುವ ಬ್ರ್ಯಾಂಡ್ ಖಾತೆಗಾಗಿ YouTube ಚಾನಲ್ ರಚಿಸಿ. ಈ ಬ್ರ್ಯಾಂಡ್ ಖಾತೆಯು ಈಗಾಗಲೇ ಚಾನಲ್ ಹೊಂದಿದ್ದರೆ, ಹೊಸತೊಂದನ್ನು ರಚಿಸಲು ನಿಮಗೆ ಸಾಧ್ಯವಿಲ್ಲ. ಪಟ್ಟಿಯಿಂದ ಬ್ರ್ಯಾಂಡ್ ಖಾತೆಯನ್ನು ನೀವು ಆಯ್ಕೆಮಾಡಿದಾಗ, ನಿಮ್ಮನ್ನು ಆ ಚಾನಲ್‌ಗೆ ಬದಲಿಸಲಾಗುತ್ತದೆ.
  4. ನಿಮ್ಮ ಹೊಸ ಚಾನಲ್‌ಗೆ ಹೆಸರಿಡಲು ವಿವರಗಳನ್ನು ಭರ್ತಿ ಮಾಡಿ. ನಂತರ, ರಚಿಸಿ ಅನ್ನು ಕ್ಲಿಕ್ ಮಾಡಿ. ಇದು ಹೊಸ ಬ್ರ್ಯಾಂಡ್ ಖಾತೆಯನ್ನು ರಚಿಸುತ್ತದೆ.
  5. ಚಾನಲ್ ನಿರ್ವಾಹಕರನ್ನು ಸೇರಿಸಲು, ಚಾನಲ್ ಮಾಲೀಕರು ಮತ್ತು ನಿರ್ವಾಹಕರನ್ನು ಬದಲಾಯಿಸಲು ಇರುವ ಸೂಚನೆಗಳನ್ನು ಅನುಸರಿಸಿ.

YouTube ನಲ್ಲಿ ವ್ಯಾಪಾರ ಅಥವಾ ಇತರ ಹೆಸರನ್ನು ಹೊಂದಿರುವ ಚಾನಲ್ ಬಳಸುವುದರ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10783062801558088524
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false