ವೀಡಿಯೊ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು

ನಿಮ್ಮ ವೀಡಿಯೊ ಎಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಅದನ್ನು ಯಾರು ವೀಕ್ಷಿಸಬಹುದು ಎಂಬುದನ್ನು ನಿಯಂತ್ರಿಸಲು ನಿಮ್ಮ ವೀಡಿಯೊದ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಅಪ್‌ಡೇಟ್ ಮಾಡಿ.

YouTube iPhone & iPad ಆ್ಯಪ್

  1. ​YouTube ಆ್ಯಪ್ ಅನ್ನು ತೆರೆಯಿರಿ .
  2. ನಿಮ್ಮ ಪ್ರೊಫೈಲ್ ಚಿತ್ರ  ನಂತರ ನಿಮ್ಮ ವೀಡಿಯೊಗಳು ಎಂಬುದನ್ನು ಟ್ಯಾಪ್ ಮಾಡಿ.
  3. ನೀವು ಬದಲಾಯಿಸಲು ಬಯಸುವ ವೀಡಿಯೊ ಪಕ್ಕದಲ್ಲಿರುವ, ಇನ್ನಷ್ಟು ಇನ್ನಷ್ಟು ನಂತರ ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  4. ಗೋಚರತೆ ಟ್ಯಾಪ್ ಮಾಡಿ ಮತ್ತು ಸಾರ್ವಜನಿಕ, ಖಾಸಗಿ ಮತ್ತು ಪಟ್ಟಿ ಮಾಡದಿರುವುದು ಇವುಗಳ ನಡುವೆ ಆಯ್ಕೆಮಾಡಿ.
  5. ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

iPhone ಹಾಗೂ iPad ಗಾಗಿ YouTube Studio ಆ್ಯಪ್

  1. YouTube Studio ಆ್ಯಪ್ ತೆರೆಯಿರಿ.
  2. ಕೆಳಗಿನ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಟ್ಯಾಪ್ ಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊವನ್ನು ಆಯ್ಕೆಮಾಡಿ. 
  4. ಎಡಿಟ್ ಮಾಡಿ Edit icon ಎಂಬುದನ್ನು ಟ್ಯಾಪ್ ಮಾಡಿ.
  5. ಗೋಚರತೆ  ಎಂಬುದನ್ನು ಟ್ಯಾಪ್ ಮಾಡಿ ಮತ್ತು choose ಸಾರ್ವಜನಿಕ, ಪಟ್ಟಿ ಮಾಡದಿರುವುದು ಅಥವಾ ಖಾಸಗಿ ಎಂಬುದನ್ನು ಆಯ್ಕೆಮಾಡಿ.
    1. ಸಾರ್ವಜನಿಕ: YouTube ನಲ್ಲಿರುವ ಯಾರು ಬೇಕಾದರೂ ಸಾರ್ವಜನಿಕ ವೀಡಿಯೊಗಳನ್ನು ವೀಕ್ಷಿಸಬಹುದು. ಅವುಗಳನ್ನು YouTube ಬಳಸುತ್ತಿರುವ ಯಾರೊಂದಿಗಾದರೂ ಸಹ ಹಂಚಿಕೊಳ್ಳಬಹುದು.
    2. ಪಟ್ಟಿ ಮಾಡದಿರುವುದು: ಪಟ್ಟಿ ಮಾಡದಿರುವ ವೀಡಿಯೊಗಳು ಮತ್ತು ಪ್ಲೇಪಟ್ಟಿಗಳನ್ನು ಲಿಂಕ್ ಹೊಂದಿರುವ ಯಾರು ಬೇಕಾದರೂ ವೀಕ್ಷಿಸಬಹುದು ಮತ್ತು ಹಂಚಿಕೊಳ್ಳಬಹುದು.
    3. ಖಾಸಗಿ: ಖಾಸಗಿ ವೀಡಿಯೊಗಳು ಮತ್ತು ಪ್ಲೇಪಟ್ಟಿಗಳನ್ನು ನೀವು ಮತ್ತು ನೀವು ಆಯ್ಕೆ ಮಾಡುವ ಯಾರಾದರೂ ನೋಡಬಹುದು.
  6. ಹಿಂದಕ್ಕೆ ನಂತರ ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: 13–17 ವರ್ಷ ವಯಸ್ಸಿನ ರಚನೆಕಾರರಿಗೆ ಡೀಫಾಲ್ಟ್ ವೀಡಿಯೊ ಗೌಪ್ಯತೆ ಸೆಟ್ಟಿಂಗ್ ಖಾಸಗಿ ಆಗಿರುತ್ತದೆ. ನಿಮಗೆ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ, ನಿಮ್ಮ ಡೀಫಾಲ್ಟ್ ವೀಡಿಯೊ ಗೌಪ್ಯತೆ ಸೆಟ್ಟಿಂಗ್ ಅನ್ನು ಸಾರ್ವಜನಿಕ ಎಂಬುದಾಗಿ ಸೆಟ್ ಮಾಡಲಾಗಿರುತ್ತದೆ. ತಮ್ಮ ವೀಡಿಯೊವನ್ನು ಸಾರ್ವಜನಿಕ, ಖಾಸಗಿ ಅಥವಾ ಪಟ್ಟಿ ಮಾಡದಿರುವುದು ಎಂದು ಸೆಟ್ ಮಾಡುವುದಕ್ಕಾಗಿ ಪ್ರತಿಯೊಬ್ಬರೂ ಈ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು. 

ಗೌಪ್ಯತೆ ಸೆಟ್ಟಿಂಗ್‌ಗಳ ಕುರಿತು

ಸಾರ್ವಜನಿಕ ವೀಡಿಯೊಗಳು
YouTube ನಲ್ಲಿರುವ ಯಾರು ಬೇಕಾದರೂ ಸಾರ್ವಜನಿಕ ವೀಡಿಯೊಗಳನ್ನು ನೋಡಬಹುದು. ಅವುಗಳನ್ನು YouTube ಬಳಸುತ್ತಿರುವ ಯಾರೊಂದಿಗಾದರೂ ಸಹ ಹಂಚಿಕೊಳ್ಳಬಹುದು. ಅವುಗಳನ್ನು ನೀವು ಅಪ್‌ಲೋಡ್ ಮಾಡಿದಾಗ ನಿಮ್ಮ ಚಾನಲ್‌ನಲ್ಲಿ ಅವುಗಳನ್ನು ಪೋಸ್ಟ್ ಮಾಡಲಾಗುತ್ತದೆ ಮತ್ತು ಅವುಗಳು ಹುಡುಕಾಟ ಫಲಿತಾಂಶಗಳು ಮತ್ತು ಸಂಬಂಧಿತ ವೀಡಿಯೊ ಪಟ್ಟಿಗಳಲ್ಲಿ ಕಾಣಿಸಿಕೊಳ್ಳಬಹುದು.
ಖಾಸಗಿ ವೀಡಿಯೊಗಳು

ಖಾಸಗಿ ವೀಡಿಯೊಗಳು ಮತ್ತು ಪ್ಲೇಪಟ್ಟಿಗಳನ್ನು ನೀವು ಮತ್ತು ನೀವು ಆಯ್ಕೆ ಮಾಡಿದ ಜನರು ಮಾತ್ರ ವೀಕ್ಷಿಸಬಹುದು. ನಿಮ್ಮ ಖಾಸಗಿ ವೀಡಿಯೊಗಳು ನಿಮ್ಮ ಚಾನಲ್ ಹೋಮ್ ಪೇಜ್‌ನ ವೀಡಿಯೊಗಳು ಟ್ಯಾಬ್‌ನಲ್ಲಿ ಗೋಚರಿಸುವುದಿಲ್ಲ. ಅವುಗಳು YouTube ನ ಹುಡುಕಾಟ ಫಲಿತಾಂಶಗಳಲ್ಲಿ ಸಹ ಕಾಣಿಸುವುದಿಲ್ಲ. YouTube ಸಿಸ್ಟಂಗಳು ಮತ್ತು ಮಾನವ ವಿಮರ್ಶಕರು ಜಾಹೀರಾತಿಗಾಗಿ ಸೂಕ್ತತೆ, ಕೃತಿಸ್ವಾಮ್ಯ ಮತ್ತು ಇತರ ದುರುಪಯೋಗ ತಡೆಗಟ್ಟುವ ಕಾರ್ಯವಿಧಾನಗಳಿಗಾಗಿ ಖಾಸಗಿ ವೀಡಿಯೊಗಳನ್ನು ಪರಿಶೀಲಿಸಬಹುದು.

ಖಾಸಗಿ ವೀಡಿಯೊವನ್ನು ಹಂಚಿಕೊಳ್ಳಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡ ಮೆನುವಿನಿಂದ, ಕಂಟೆಂಟ್ ಅನ್ನು ಆಯ್ಕೆ ಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊವನ್ನು ಕ್ಲಿಕ್ ಮಾಡಿ.
  4. ಗೋಚರತೆ ಬಾಕ್ಸ್ ಕ್ಲಿಕ್ ಮಾಡಿ ಮತ್ತು ಖಾಸಗಿಯಾಗಿ ಹಂಚಿಕೊಳ್ಳಿ ಅನ್ನು ಆಯ್ಕೆಮಾಡಿ.
  5. ನಿಮ್ಮ ವೀಡಿಯೊವನ್ನು ಹಂಚಿಕೊಳ್ಳಲು ಬಯಸುವ ಇಮೇಲ್‍ ವಿಳಾಸಗಳನ್ನು ನಮೂದಿಸಿ, ನಂತರ ಸೇವ್ ಮಾಡಿ ಎಂಬುದನ್ನು ಆಯ್ಕೆಮಾಡಿ.

ಖಾಸಗಿ ವೀಡಿಯೊಗಳಲ್ಲಿ ಕಾಮೆಂಟ್‌ಗಳು ಲಭ್ಯವಿರುವುದಿಲ್ಲ. ಸಾರ್ವಜನಿಕವಾಗಿ ಲಭ್ಯವಿಲ್ಲದಿರುವ ವೀಡಿಯೊದಲ್ಲಿ ಕಾಮೆಂಟ್‌ಗಳನ್ನು ಅನುಮತಿಸಲು ನೀವು ಬಯಸಿದರೆ, ಗೌಪ್ಯತೆ ಸೆಟ್ಟಿಂಗ್ ಅನ್ನು ಪಟ್ಟಿ ಮಾಡದಿರುವುದು ಎಂಬುದಕ್ಕೆ ಬದಲಾಯಿಸಿ.

ಪಟ್ಟಿ ಮಾಡದಿರುವ ವೀಡಿಯೊಗಳು

ಪಟ್ಟಿ ಮಾಡದಿರುವ ವೀಡಿಯೊಗಳು ಮತ್ತು ಪ್ಲೇಪಟ್ಟಿಗಳನ್ನು ಲಿಂಕ್ ಹೊಂದಿರುವ ಯಾರು ಬೇಕಾದರೂ ನೋಡಬಹುದು ಮತ್ತು ಹಂಚಿಕೊಳ್ಳಬಹುದು. ನಿಮ್ಮ ಪಟ್ಟಿ ಮಾಡದಿರುವ ವೀಡಿಯೊಗಳು ನಿಮ್ಮ ಚಾನಲ್ ಹೋಮ್ ಪೇಜ್‌ನ ವೀಡಿಯೊಗಳು ಟ್ಯಾಬ್‌ನಲ್ಲಿ ಗೋಚರಿಸುವುದಿಲ್ಲ. ಯಾರಾದರೂ ನಿಮ್ಮ ಪಟ್ಟಿ ಮಾಡದಿರುವ ವೀಡಿಯೊವನ್ನು ಸಾರ್ವಜನಿಕ ಪ್ಲೇಪಟ್ಟಿಗೆ ಸೇರಿಸದ ಹೊರತು ಅವುಗಳು YouTube ನ ಹುಡುಕಾಟ ಫಲಿತಾಂಶಗಳಲ್ಲಿ ಕಾಣಿಸುವುದಿಲ್ಲ.

ನೀವು ಪಟ್ಟಿ ಮಾಡದಿರುವ ವೀಡಿಯೊದ URL ಅನ್ನು ಹಂಚಿಕೊಳ್ಳಬಹುದು. ನೀವು ಯಾರೊಂದಿಗೆ ವೀಡಿಯೊ ಹಂಚಿಕೊಳ್ಳುತ್ತೀರೋ ಅವರಿಗೆ ವೀಡಿಯೊ ನೋಡುವುದಕ್ಕಾಗಿ Google ಖಾತೆಯ ಅಗತ್ಯತೆ ಇರುವುದಿಲ್ಲ. ಲಿಂಕ್ ಹೊಂದಿರುವ ಯಾರಾದರೂ ಸಹ ಅದನ್ನು ಮರುಹಂಚಿಕೊಳ್ಳಬಹುದು.

ಫೀಚರ್ ಖಾಸಗಿ ಪಟ್ಟಿ ಮಾಡದಿರುವುದು ಸಾರ್ವಜನಿಕ
URL ಹಂಚಿಕೊಳ್ಳಬಹುದು ಇಲ್ಲ ಹೌದು ಹೌದು
ಚಾನಲ್ ವಿಭಾಗಕ್ಕೆ ಸೇರಿಸಬಹುದು ಇಲ್ಲ ಹೌದು ಹೌದು
ಹುಡುಕಾಟ, ಸಂಬಂಧಿತ ವೀಡಿಯೊಗಳು ಮತ್ತು ಶಿಫಾರಸುಗಳಲ್ಲಿ ಕಾಣಿಸಿಕೊಳ್ಳಬಹುದು ಇಲ್ಲ ಇಲ್ಲ ಹೌದು
ನಿಮ್ಮ ಚಾನಲ್‌ನಲ್ಲಿ ಪೋಸ್ಟ್ ಮಾಡಲಾಗಿರುತ್ತದೆ ಇಲ್ಲ ಇಲ್ಲ ಹೌದು
ಸಬ್‌ಸ್ಕ್ರೈಬರ್ ಫೀಡ್‌ನಲ್ಲಿ ಕಾಣಿಸುತ್ತದೆ ಇಲ್ಲ ಇಲ್ಲ ಹೌದು
ಅವುಗಳ ಕುರಿತು ಕಾಮೆಂಟ್ ಮಾಡಬಹುದು ಇಲ್ಲ ಹೌದು ಹೌದು
ಸಾರ್ವಜನಿಕ ಪ್ಲೇಪಟ್ಟಿಯಲ್ಲಿ ಕಾಣಿಸಬಹುದು ಇಲ್ಲ ಹೌದು ಹೌದು

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2555697922699542110
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false