ನನ್ನ ವೀಡಿಯೊಗಳನ್ನು YouTube ಖಾಸಗಿ ಎಂಬುದಕ್ಕೆ ಏಕೆ ಬದಲಾಯಿಸಿತು?

ಕೆಲವು ಸಂದರ್ಭಗಳಲ್ಲಿ, ನಿಮ್ಮ ಚಾನಲ್‌ನಲ್ಲಿ ನಾವು ಸಂಶಯಾಸ್ಪದ ಚಟುವಟಿಕೆಯನ್ನು ಪತ್ತೆಹಚ್ಚಿದಾಗ, ವೀಡಿಯೊಗಳನ್ನು ಹ್ಯಾಕರ್ ಅಪ್‌ಲೋಡ್ ಮಾಡಿದ್ದಾರೆ ಎಂದು ನಮಗನಿಸಿದರೆ ಅವುಗಳನ್ನು ಖಾಸಗಿ ಎಂಬುದಕ್ಕೆ ಸೆಟ್ ಮಾಡಲು ನಾವು ಕ್ರಮವನ್ನು ಕೈಗೊಳ್ಳಬಹುದು. ನಿಮ್ಮ ಚಾನಲ್ ಮತ್ತು ಸಮುದಾಯಕ್ಕೆ ಉತ್ತಮ ಸುರಕ್ಷತೆ ಒದಗಿಸಲು ನಾವು ಈ ಕ್ರಮಗಳನ್ನು ಕೈಗೊಳ್ಳುತ್ತೇವೆ.

ನಿಮ್ಮ ಯಾವುದೇ ವೀಡಿಯೊಗಳನ್ನು ನಾವು ಖಾಸಗಿ ಎಂಬುದಕ್ಕೆ ಸೆಟ್ ಮಾಡಿದರೆ, ನಾವು ಇಮೇಲ್ ಮೂಲಕ ನಿಮಗೆ ಸೂಚಿಸುತ್ತೇವೆ. ಹೆಚ್ಚುವರಿಯಾಗಿ, ನೀವು ಮತ್ತು ನಮ್ಮ YouTube ಸಮುದಾಯ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿಮ್ಮ ಖಾತೆಯಿಂದ ನಿಮ್ಮನ್ನು ಸೈನ್ ಔಟ್ ಮಾಡುತ್ತೇವೆ.

ನಾನೇನು ಮಾಡಬೇಕು?

ನೀವು ವೀಡಿಯೊಗಳನ್ನು ಪ್ರಕಟಿಸಿದ್ದರೆ

ನಿಮ್ಮ ಖಾಸಗಿ ವೀಡಿಯೊಗಳನ್ನು ಮತ್ತೊಮ್ಮೆ ಸಾರ್ವಜನಿಕವಾಗಿಸಬೇಕೇ ಬೇಡವೇ ಎಂದು ನಿರ್ಧಸಿರುವ ಮುನ್ನ ಅವುಗಳತ್ತ ಒಮ್ಮೆ ಕಣ್ಣು ಹಾಯಿಸಿ. ಅವುಗಳು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುತ್ತಿವೆ ಎಂದು ನಿಮಗನಿಸಿದರೆ, ನೀವು ವೀಡಿಯೊಗಳನ್ನು ಸಾರ್ವಜನಿಕ ಎಂಬುದಕ್ಕೆ ಬದಲಾಯಿಸಬಹುದು.

ಗಮನಿಸಿ: ನಿಮ್ಮ ವೀಡಿಯೊಗಳನ್ನು ಸಾರ್ವಜನಿಕ ಎಂಬುದಾಗಿ ಬದಲಾಯಿಸಲು ನಿಮಗೆ ಸಾಧ್ಯವಾಗದಿದ್ದರೆ, ಇನ್ನೊಂದು ಕಾರಣಕ್ಕಾಗಿ ನಿಮ್ಮ ವೀಡಿಯೊವನ್ನು ಖಾಸಗಿ ಎಂದು ಗುರುತಿಸಿರಬಹುದು. ಸಂಬಂಧವಿಲ್ಲದ ಅಥವಾ ತಪ್ಪುದಾರಿಗೆಳೆಯುವ ಟ್ಯಾಗ್‌ಗಳ ಬಳಕೆಯಿಂದಾಗಿ ಖಾಸಗಿಯಾಗಿರುವ ವೀಡಿಯೊಗಳ ಕುರಿತು ಇನ್ನಷ್ಟು ತಿಳಿಯಿರಿ.

ನೀವು ವೀಡಿಯೊಗಳನ್ನು ಪ್ರಕಟಿಸಿರದಿದ್ದರೆ

  1. studio.youtube.com ಗೆ ಭೇಟಿ ನೀಡಿ ಮತ್ತು ನೀವು ಅಪ್‌ಲೋಡ್ ಮಾಡದಿರುವ ಯಾವುದೇ ವೀಡಿಯೊಗಳನ್ನು ಅಳಿಸಿ. ಖಾಸಗಿ ವೀಡಿಯೊಗಳು ಸಹ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕು ಮತ್ತು ನೀವು ಪೋಸ್ಟ್ ಮಾಡಿರದ ಕಂಟೆಂಟ್‌ಗೆ ಸಂಬಂಧಿಸಿದಂತೆ ನಿಮಗೆ ದಂಡ ವಿಧಿಸಲು ನಾವು ಬಯಸುವುದಿಲ್ಲ.
  2. ನಿಮ್ಮ Google ಖಾತೆಯಲ್ಲಿ ಸುರಕ್ಷತೆಯ ಚೆಕ್ ಅನ್ನು ಕೈಗೊಳ್ಳಿ ಮತ್ತು ಯಾವುದೇ ಶಿಫಾರಸು ಮಾಡಲಾದ ಕ್ರಮಗಳನ್ನು ತೆಗೆದುಕೊಳ್ಳಿ. ಸಲಹೆ ಮಾಡಿರುವ ಕ್ರಿಯೆಗಳು ನಿಮ್ಮ ಪಾಸ್‌ವರ್ಡ್ ಬದಲಾಯಿಸುವುದು ಅಥವಾ ಹಳೆಯ ಸಾಧನಗಳನ್ನು ತೆಗೆದುಹಾಕುವುದನ್ನು ಒಳಗೊಂಡಿರಬಹುದು.
  3. ನಿಮ್ಮ ಚಾನಲ್‌ಗೆ ಯಾರು ಆ್ಯಕ್ಸೆಸ್ ಹೊಂದಿದ್ದಾರೆ ಎಂಬುದನ್ನು ಪರಿಶೀಲಿಸಿ. ನಿಮ್ಮ ಖಾತೆಗೆ ಸಂಬಂಧಿಸಿದಂತೆ ಯಾವುದೇ ಅನಗತ್ಯ ಬಳಕೆದಾರರಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಚಾನಲ್ ಅನುಮತಿಗಳನ್ನು ಪರಿಶೀಲಿಸಿ.
  4. ಹ್ಯಾಕರ್ ನಿಮ್ಮ ಚಾನಲ್‌ನಲ್ಲಿ ಬೇರೆ ಏನನ್ನಾದರೂ ಬದಲಾಯಿಸಿದ್ದಾರೆಯೇ ಎಂದು ಪರಿಶೀಲಿಸಿ, ಉದಾಹರಣೆಗೆ ಬ್ಯಾನರ್, ವೀಡಿಯೊ ವಿವರಣೆಯಲ್ಲಿನ ಲಿಂಕ್‌ಗಳು ಅಥವಾ ಪಿನ್ ಮಾಡಲಾದ ಕಾಮೆಂಟ್‌ಗಳು.

ನಮ್ಮ ರಚನೆಕಾರರ ಸುರಕ್ಷತಾ ಕೇಂದ್ರದಲ್ಲಿ ಅಥವಾ ನಿಮ್ಮ YouTube ಖಾತೆಯನ್ನು ಭದ್ರಪಡಿಸಿ ಎಂಬಲ್ಲಿಗೆ ಭೇಟಿ ನೀಡುವ ಮೂಲಕ ನಿಮ್ಮ ಖಾತೆಯನ್ನು ಹ್ಯಾಕರ್‌ಗಳಿಂದ ಸುರಕ್ಷಿತವಾಗಿಡುವುದು ಹೇಗೆ ಎಂಬುದರ ಕುರಿತು ನೀವು ಇನ್ನಷ್ಟು ತಿಳಿಯಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4186801846918319659
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false