YouTube ನಲ್ಲಿ Shopping ಸಂಗ್ರಹಣೆಗಳನ್ನು ರಚಿಸಿ ಮತ್ತು ನಿರ್ವಹಿಸಿ

ನಿಮ್ಮ ಮೆಚ್ಚಿನ ಉತ್ಪನ್ನಗಳ ಸಂಗ್ರಹಣೆಯನ್ನು ಕ್ಯೂರೇಟ್ ಮಾಡುವ ಮೂಲಕ ಒಂದು ಥೀಮ್‌ಗಾಗಿ ಶಿಫಾರಸು ಮಾಡಲಾದ ನಿಮ್ಮ ಉತ್ಪನ್ನಗಳನ್ನು ಸುಲಭವಾಗಿ ಶಾಪಿಂಗ್ ಮಾಡಲು ವೀಕ್ಷಕರಿಗೆ ಸಹಾಯ ಮಾಡಿ. ನಿಮ್ಮ ಸ್ಟೋರ್‌ನಿಂದ ಶಿಫಾರಸು ಮಾಡಲಾದ ಉತ್ಪನ್ನಗಳ ಸಂಗ್ರಹಣೆ, ಮತ್ತು ನೀವು ಅಫಿಲಿಯೇಟ್ ಪ್ರೋಗ್ರಾಂನಲ್ಲಿದ್ದರೆ ಇತರ ಬ್ರ್ಯಾಂಡ್‌ಗಳಿಂದ ನಿಮಗೆ ಇಷ್ಟವಾದ ಉತ್ಪನ್ನಗಳನ್ನು ಹಂಚಿಕೊಳ್ಳುವ ಮೂಲಕ ವೀಕ್ಷಕರಿಗೆ ಬುಟೀಕ್ ಶಾಪಿಂಗ್ ಅನುಭವವನ್ನು ಒದಗಿಸಿ.

✨NEW✨Create Custom Shopping Collections

ವೀಕ್ಷಕರಿಗೆ ಸಂಗ್ರಹಣೆಗಳು ನಿಮ್ಮ ಚಾನಲ್ ಸ್ಟೋರ್, ಉತ್ಪನ್ನ ಪಟ್ಟಿಗಳು ಮತ್ತು ವೀಡಿಯೊ ವಿವರಣೆಗಳಲ್ಲಿ ಕಾಣಿಸಿಕೊಳ್ಳಬಹುದು. ನಿಮ್ಮ ತೀರಾ ಇತ್ತೀಚಿನ ಸಂಗ್ರಹಣೆಯನ್ನು ನಿಮ್ಮ ಚಾನಲ್ ಸ್ಟೋರ್‌ನಲ್ಲಿ ತೋರಿಸುತ್ತೇವೆ ಮತ್ತು ಒಬ್ಬ ವೀಕ್ಷಕರಿಗೆ ಅತ್ಯಂತ ಸೂಕ್ತವಾದ ಸಂಗ್ರಹಣೆಯನ್ನು ಉತ್ಪನ್ನ ಪಟ್ಟಿಗಳಲ್ಲಿ ಮತ್ತು ವೀಡಿಯೊ ವಿವರಣೆಗಳಲ್ಲಿ ತೋರಿಸುತ್ತೇವೆ.

ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುವ ಸಂಗ್ರಹಣೆಗಳನ್ನು ಮಾತ್ರ ನೀವು ರಚಿಸುವುದನ್ನು ಖಚಿತಪಡಿಸಿಕೊಳ್ಳಿ.

ಸಂಗ್ರಹಣೆಯೊಂದನ್ನು ರಚಿಸಿ

ಸಂಗ್ರಹಣೆಯನ್ನು ರಚಿಸಲು, YouTube Studio ಮೊಬೈಲ್ ಆ್ಯಪ್  ಅನ್ನು ಬಳಸಿ:

  1. ಕೆಳಭಾಗದ ಮೆನುವಿನಲ್ಲಿ, ಗಳಿಸಿ ಎಂಬುದನ್ನು ಟ್ಯಾಪ್ ಮಾಡಿ.
  2. Shopping ಅನ್ನು ಟ್ಯಾಪ್ ಮಾಡಿ.
  3. “ಸಂಗ್ರಹಣೆಗಳು” ಎಂಬುದರ ಅಡಿಯಲ್ಲಿ, ಸಂಗ್ರಹಣೆಯನ್ನು ರಚಿಸಿ ಎಂಬುದನ್ನು ಟ್ಯಾಪ್ ಮಾಡಿ.
  4. ನಿಮ್ಮ ಸಂಗ್ರಹಣೆಗಾಗಿ ಒಂದು ಕವರ್ ಚಿತ್ರವನ್ನು ಆಯ್ಕೆ ಮಾಡಿ ಮತ್ತು ಅಪ್‌ಲೋಡ್ ಮಾಡಿ.
  5. ನಿಮ್ಮ ಸಂಗ್ರಹಣೆಗಾಗಿ ಒಂದು “ಶೀರ್ಷಿಕೆಯನ್ನು” ನಮೂದಿಸಿ ಮತ್ತು ವಿವರಣೆಯನ್ನು ಸೇರಿಸಿ.
  6. ನಿಮ್ಮ ಸಂಗ್ರಹಣೆಯಲ್ಲಿ ಸೇರಿಸುವುದಕ್ಕಾಗಿ ಉತ್ಪನ್ನಗಳನ್ನು ಹುಡುಕಲು  ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.
    1. ಒಂದು ಸಂಗ್ರಹಣೆಯನ್ನು ರಚಿಸುವುದಕ್ಕಾಗಿ ನೀವು ಕನಿಷ್ಠ 3 ಉತ್ಪನ್ನಗಳನ್ನು ಆಯ್ಕೆ ಮಾಡಬೇಕು.
    2. ನಿಮ್ಮ ಸಂಗ್ರಹಣೆಯಲ್ಲಿ ನೀವು ಗರಿಷ್ಠ 30 ಉತ್ಪನ್ನಗಳನ್ನು ಸೇರಿಸಬಹುದು.
    3. ಒಂದು ಉತ್ಪನ್ನವನ್ನು ನಿಮ್ಮ ಸಂಗ್ರಹಣೆಯಲ್ಲಿ ಸೇರಿಸಲು, ಅದರ ಪಕ್ಕದಲ್ಲಿರುವ  ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.
    4. ಒಂದು ಉತ್ಪನ್ನವನ್ನು ಪಟ್ಟಿಯಲ್ಲಿ ಮೇಲೆ ಅಥವಾ ಕೆಳಗೆ ಸರಿಸಲು, ಅದರ ಪಕ್ಕದಲ್ಲಿರುವ  ಸರಿಸಿ ಎಂಬುದನ್ನು ಟ್ಯಾಪ್ ಮಾಡಿ ಮತ್ತು ಒತ್ತಿಹಿಡಿದುಕೊಳ್ಳಿ. ಆಯ್ಕೆಯ ಟೂಲ್‌ನಲ್ಲಿ ತೋರಿಸಲಾಗುವ ಉತ್ಪನ್ನಗಳ ಕ್ರಮದಲ್ಲೇ ನಿಮ್ಮ ಉತ್ಪನ್ನಗಳನ್ನು ವೀಕ್ಷಕರಿಗೆ ತೋರಿಸಲಾಗುತ್ತದೆ.
    5. ಒಂದು ಉತ್ಪನ್ನವನ್ನು ತೆಗೆದುಹಾಕಲು ಅದರ ಪಕ್ಕದಲ್ಲಿರುವ  ಅಳಿಸಿ ಎಂಬುದನ್ನು ಟ್ಯಾಪ್ ಮಾಡಿ.
  7. ನಿಮ್ಮ ಉತ್ಪನ್ನಗಳನ್ನು ಸೇರಿಸುವುದು, ತೆಗೆದುಹಾಕುವುದು ಮತ್ತು ಮರುವ್ಯವಸ್ಥಿತಗೊಳಿಸುವುದು ಮುಗಿದ ನಂತರ, ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.
  8. ಕವರ್ ಚಿತ್ರ, ಶೀರ್ಷಿಕೆ, ವಿವರಣೆ ಮತ್ತು ಉತ್ಪನ್ನಗಳು ಸೇರಿದ ಹಾಗೆ ನಿಮ್ಮ ಸಂಗ್ರಹಣೆಯ ವಿವರಗಳನ್ನು ಪರಿಶೀಲಿಸಿ.
  9. ಪ್ರಕಟಿಸಿ ಎಂಬುದನ್ನು ಟ್ಯಾಪ್ ಮಾಡಿ.

ಒಂದು ಸಂಗ್ರಹಣೆಯನ್ನು ನಿರ್ವಹಿಸಿ

YouTube Studio ಮೊಬೈಲ್ ಆ್ಯಪ್‌ನ ಮೂಲಕ ನಿಮ್ಮ ಸಂಗ್ರಹಣೆಯನ್ನು ನೀವು ಯಾವಾಗ ಬೇಕಾದರೂ ಬದಲಾಯಿಸಬಹುದು. ನಿಮ್ಮ ಸಂಗ್ರಹಣೆಯನ್ನು ಎಡಿಟ್ ಮಾಡಲು:

  1. ಕೆಳಭಾಗದ ಮೆನುವಿನಲ್ಲಿ, ಗಳಿಸಿ ಎಂಬುದನ್ನು ಟ್ಯಾಪ್ ಮಾಡಿ.
  2. Shopping ಅನ್ನು ಟ್ಯಾಪ್ ಮಾಡಿ.
  3. “ಸಂಗ್ರಹಣೆಗಳು” ಎಂಬುದರ ಪಕ್ಕದಲ್ಲಿ, ನಂತರ ಅನ್ನು ಟ್ಯಾಪ್ ಮಾಡಿ.
  4. ನೀವು ಬದಲಾಯಿಸಲು ಬಯಸುವ ಸಂಗ್ರಹಣೆಯ ಕವರ್ ಚಿತ್ರವನ್ನು ಟ್ಯಾಪ್ ಮಾಡಿ.
  5. ನಿಮ್ಮ ಸಂಗ್ರಹಣೆಯಲ್ಲಿ ಬದಲಾವಣೆಗಳನ್ನು ಮಾಡಿ.
    1. ನಿಮ್ಮ ಸಂಗ್ರಹಣೆಯಲ್ಲಿ ಸೇರಿಸುವುದಕ್ಕಾಗಿ ಉತ್ಪನ್ನಗಳನ್ನು ಹುಡುಕಲು,  ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.
    2. ಒಂದು ಉತ್ಪನ್ನವನ್ನು ಪಟ್ಟಿಯಲ್ಲಿ ಮೇಲೆ ಅಥವಾ ಕೆಳಗೆ ಸರಿಸಲು, ಅದರ ಪಕ್ಕದಲ್ಲಿರುವ  ಸರಿಸಿ ಎಂಬುದನ್ನು ಟ್ಯಾಪ್ ಮಾಡಿ ಮತ್ತು ಒತ್ತಿಹಿಡಿದುಕೊಳ್ಳಿ. ಆಯ್ಕೆಯ ಟೂಲ್‌ನಲ್ಲಿ ತೋರಿಸಲಾಗುವ ಉತ್ಪನ್ನಗಳ ಕ್ರಮದಲ್ಲೇ ನಿಮ್ಮ ಉತ್ಪನ್ನಗಳನ್ನು ವೀಕ್ಷಕರಿಗೆ ತೋರಿಸಲಾಗುತ್ತದೆ.
    3. ಒಂದು ಉತ್ಪನ್ನವನ್ನು ತೆಗೆದುಹಾಕಲು ಅದರ ಪಕ್ಕದಲ್ಲಿರುವ  ಅಳಿಸಿ ಎಂಬುದನ್ನು ಟ್ಯಾಪ್ ಮಾಡಿ.
    4. ನಿಮ್ಮ ಸಂಗ್ರಹಣೆಯ ಚಿತ್ರವನ್ನು ಬದಲಾಯಿಸಲು, ನಿಮ್ಮ ಕವರ್ ಚಿತ್ರವನ್ನು ಟ್ಯಾಪ್ ಮಾಡಿ.
    5. ನಿಮ್ಮ ಸಂಗ್ರಹಣೆಯ ಹೆಸರು ಅಥವಾ ವಿವರಣೆಯನ್ನು ಎಡಿಟ್ ಮಾಡಲು, “ಶೀರ್ಷಿಕೆ” ಅಥವಾ “ವಿವರಣೆ” ಬಾಕ್ಸ್‌ಗಳನ್ನು ಟ್ಯಾಪ್ ಮಾಡಿ.
  6. ಪ್ರಕಟಿಸಿ ಎಂಬುದನ್ನು ಟ್ಯಾಪ್ ಮಾಡಿ.

ಥಂಬ್‌ನೇಲ್, ಶೀರ್ಷಿಕೆ, ಲಿಂಕ್, ವಿವರಣೆ ಮತ್ತು ಸಂಗ್ರಹಣೆಯಲ್ಲಿ ಒಳಗೊಂಡ ಉತ್ಪನ್ನಗಳು ಸೇರಿದಂತೆ, ನಿಮ್ಮ ಶಾಪಿಂಗ್ ಸಂಗ್ರಹಣೆಯು YouTube ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕು.

ನಿಮ್ಮ ಸಂಗ್ರಹಣೆಯ ಯಾವುದೇ ಭಾಗವು YouTube ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ನಿಮ್ಮ ಸಂಪೂರ್ಣ ಸಂಗ್ರಹಣೆಯನ್ನು ತೆಗೆದುಹಾಕಲಾಗುವುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6990317289404463834
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false